ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರಕೃತಿ ಕಾಲನಿಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆ- ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ವಿಕಲಚೇತನ ಮಕ್ಕಳಿಗಾಗಿ ಸಮನ್ವಯ ಶಿಕ್ಷಣ ಒದಗಿಸಲು ಪ್ರಾರಂಭಿಸಲಾದ ಬಿ.ಎಲ್.ಡಿ.ಇ ರಘುಕುಲ ಸಮನ್ವಯ ಶಾಲೆ ಶೈಕ್ಷಣಿಕ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮತ್ತು ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಅಭಿನವ ರುಣವಾಲ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ರಜಿಸ್ಟ್ರಾರ ಡಾ. ಆರ್. ವಿ. ಕುಲಕರ್ಣಿ, ಜಿಲ್ಲಾ ಜಿಲ್ಲಾ ವಿಕಲಚೇನತರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಡಾ. ಈಶ್ವರ ಬಾಗೋಜಿ, ಡಾ.
ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಮುಖಂಡರಾದ ನರೇಂದ್ರ ಓಸ್ವಾಲ, ನಿರ್ಮಲ ರುಣವಾಲ, ಅಕ್ಷತ ರುಣವಾಲ, ಶ್ರೇಯಾ ರುಣವಾಲ, ಲತಾ ರುಣವಾಲ, ಅನುಷಾ ರುಣವಾಲ, ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್. ಎನ್. ಬೆಂತೂರ, ವೈದ್ಯರಾದ ಡಾ. ಆರ್. ಎನ್. ಕರಡಿ, ಡಾ. ರಾಜಕುಮಾರ ಬಾಗೇವಾಡಿ, ಮನಃಶಾಸ್ತ್ರಜ್ಞೆ ನಿವೇದಿತಾ, ಶ್ರವಣಶಾಸ್ತ್ರಜ್ಞೆ ರಕ್ಷಿತಾ, ತಂತ್ರಜ್ಞರಾದ ಕೆ. ಸಿ. ಮೊಹಾಂತಿ, ಡಿ. ಡಿ. ಸ್ವೈನ್, ಭೌತಚಿಕಿತ್ಸಕ (Physiotherapist) ಎಂ. ಎ. ಕುಡಚಿ,
ಎಸ್. ಎಸ್. ಕ್ಯಾಂಪಸ್ ಆಡಳಿತಾಧಿಕಾರಿ ಐ.ಎಸ್. ಕಾಳಪ್ಪನವರ, ಸಮನ್ವರ ಶಾಲೆಯ ಮುಖ್ಯೋಪಾಧ್ಯಾಯ ಸಿದ್ದನಗೌಡ ಬಿರಾದಾರ, ಸಾಮಾಜಿಕ ಕಾರ್ಯಕರ್ತೆ ದಾನಮ್ಮ ಮಜ್ಜಿಗಿ, ಬಿ.ಎಲ್.ಡಿ.ಇ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಏಕನಾಥ ಜಾಧವ, ನರ್ಸಿಂಗ್ ಸುಪರವೈಜರ್ ಜಯಂತಿ ಮುಂತಾದವರು ಉಪಸ್ಥಿತರಿದ್ದರು.

