ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರದ ಭೂತನಾಳ ಕೆರೆ ಹತ್ತಿರದ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ಸೆಪ್ಟೆಂಬರ್ ೨೬ ರಂದು ರೋಹು ಮತ್ತು ಸಾಮಾನ್ಯ ಗೆಂಡೆ (ಗೌರಿ) ಮೀನುಮರಿಗಳನ್ನು ತಲಾ ೧.ರೂ ನಂತೆ ಮಾರಾಟ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: ೯೯೪೫೯೫೯೭೦೪, ೯೯೦೦೭೭೬೨೦೫, ೦೮೩೫೨-೨೬೪೫೧೬ ಹಾಗೂ ೯೪೮೦೫೧೮೬೭೯ ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
