ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಹಳೆ ತಾರಾಪುರ ಗ್ರಾಮದಲ್ಲಿ ಭೂಮಿ ಕುಸಿದು ವ್ಯಕ್ತಿ ಅದರಲ್ಲಿ ಬಿದ್ದಿದ್ದಾರೆ ಅವರಿಗೆ ತೀವ್ರ ತರಹದ ಪೆಟ್ಟುಗಳಾಗಿವೆ.
ತಾರಾಪುರ ಗ್ರಾಮದ ಆನಂದ ಮಲ್ಲಪ್ಪ ಕಂಟಿಕೋರ ಎಂಬ ವ್ಯಕ್ತಿಯು ಗ್ರಾಮದ ಕಿರಾಣಿ ಅಂಗಡಿಯ ಮುಂದೆ ನಿಂತಿರುವ ಸಂದರ್ಭದಲ್ಲಿ ಭೂಮಿ ಕುಸಿದು ಸುಮಾರು 20 ಆಳವಾದ ಗುಂಡಿ ಬಿದ್ದಿದೆ ತಕ್ಷಣ ಸ್ಥಳದಲ್ಲಿದ್ದ ಗ್ರಾಮಸ್ಥರು ಅವರನ್ನು ಆಗುಂಡಿಯಿಂದ ಮೇಲಕ್ಕೆತ್ತಿದ್ದಾರೆ ವ್ಯಕ್ತಿಗೆ ಬೆನ್ನು ಮುಂಗೈ ಸೊಂಟ ಮುಂತಾದ ಕಡೆಗಳಲ್ಲಿ ತೀವ್ರತೆಗಳಾಗಿವೆ ತಕ್ಷಣ ಅವರನ್ನು ಸಿಂದಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸ್ಥಳೀಯ ಜನರ ಪ್ರಕಾರ ಇದು ಹಿಂದಿನ ಕಾಲದ ಧಾನ್ಯ ಸಂಗ್ರಹದ ಹಗೆವು( ಭೂಮಿ ಒಳಗೆ ಧಾನ್ಯ ಸಂಗ್ರಹದ ಸ್ಥಳ) ಅದು ಮಳೆಯ ಪ್ರಮಾಣ ಹೆಚ್ಚಾಗಿ ಹಾಗೂ ಭೀಮಾನದಿಯಲ್ಲಿ ನೀರಿನ ಪ್ರಮಾಣವೂ ಕೂಡ ತುಂಬಿರುವುದರಿಂದ ಇದು ತೆರೆದುಕೊಂಡಿದೆ ಎಂದು ಹಿರಿಯರು ವಿವರಿಸಿದ್ದಾರೆ.
ನದಿಯ ನೀರು ಗ್ರಾಮವನ್ನು ಸುತ್ತುವರಿದಿದ್ದು, ಸಿಂದಗಿ ಪಟ್ಟಣದಲ್ಲಿ ಪದೇ ಪದೇ ಭೂಮಿ ಒಳಗಿಂದ ಸದ್ದು ಬರುತ್ತಿರುವುದು ಇವುಗಳ ಮಧ್ಯೆ ಗ್ರಾಮದಲ್ಲಿ ಭೂಮಿ ಕುಸಿದಿರುವುದು ಕಂಡು ಜನ ಆತಂಕಕ್ಕೆ ಒಳಗಾಗಿದ್ದಾರೆ.

