ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 2024-25 ನೇ ಸಾಲಿನಲ್ಲಿ ರೂ. 26.49 ಲಕ್ಷ ಲಾಭವಾಗಿದೆ. ರೈತರು ಎಫ್.ಡಿ.ಜಾಸ್ತಿ ಆಗಿದ್ದರಿಂದ ಬಡ್ಡಿ ಅನುವು ಮಾಡಿಸಲಾಗಿದೆ. ಇದರಿಂದಾಗಿ ಲಾಭಾಂಶವು ರೂ. 15.49 ಲಕ್ಷ ಲಾಭವಾಗಿದೆ. ಸದಸ್ಯರಿಗೆ ಶೇ.8 ರಷ್ಟು ಲಾಭಾಂಶ ಹಂಚಿಕೆ ಮಾಡಲಾಗಿದೆ ಎಂದು ಹೂವಿನಹಿಪ್ಪರಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಪಿ.ಜಿ.ಗೋಠೆದ ಹೇಳಿದರು.
ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸನ್ 2024-25 ನೇ ಸಾಲಿನ 78 ನೇ ವರ್ಷದ ವಾರ್ಷಿಕ ವಾರ್ಷಿಕ ವರದಿ, ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸನ್ 2024-25ನೇ ಕಳೆದ ಸಾಲಿನ ಕೊನೆಯಲ್ಲಿ ರೂ.95.59 ಲಕ್ಷ ಇದ್ದು. ವರದಿ ವರ್ಷದಲ್ಲಿ 11.81 ಸಾವಿರ ರೂ.ಶೇರು ಹಣ ಸಂಗ್ರಹಿಸಿದೆ. 2.11 ಸಾವಿರ ರೂ.ಮರಳಿ ಪಡೆದಿರುತ್ತಾರೆ. ಒಟ್ಟು ಪ್ರಸಕ್ತ ಸಾಲಿನ ಶೇರು ಹಣ ರೂ.105.29 ಲಕ್ಷ ಆಗಿದೆ. ಇದು ನಮ್ಮ ಬ್ಯಾಂಕಿನ ಭದ್ರತೆಗೆ ಬುನಾದಿಯಾಗಿದೆ. ಕಳೆದ ಸಾಲಿನ ಕೊನೆಗೆ ಸಂಘದ ಸದಸ್ಯರ ಠೇವು 317.25 ಲಕ್ಷ ಇದೆ.ವರದಿ ವರ್ಷದಲ್ಲಿ ಕೊನೆಯಲ್ಲಿ 404.71 ಲಕ್ಷ ರೂ.ಆಗಿದೆ. ಸಾರ್ವಜನಿಕರ ವಿಶಾಲ ಬಲದಿಂದ ಒಟ್ಟು ಠೇವು ಹೆಚ್ಚಳವಾಗಿದೆ. ಇದು ನಮ್ಮ ಸಂಘದ ಮೇಲೆ ಇಟ್ಟಿರುವ ಅಪಾರ ವಿಶ್ವಾಸದ ದ್ಯೋತಕವಾಗಿದೆ ಎಂದರು.
ನ್ಯಾಯವಾದಿ ಜಿ.ಬಿ.ಬಾಗೇವಾಡಿ ಮಾತನಾಡಿ, ಸಂಘದ ಜಾಗೆಯಲ್ಲಿ ಬಾಡಿಗೆ ಇದ್ದ ಅಂಗಡಿಕಾರರು ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ ಸಂಘದ ಜಾಗೆ ತಮ್ಮದೆಂದು ನ್ಯಾಯಾಲಯಕ್ಕೆ ಹೋಗಿರುವದು ಸರಿಯಲ್ಲ. ಈ ಜಾಗೆಯು ಸಂಘಕ್ಕೆ ಸೇರಿದ ದಾಖಲಾತಿಗಳು ಇವೆ. ಸಂಘವು ಈ ಜಾಗೆಯಲ್ಲಿ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ಜೀವಿಗಳಾಗಬೇಕಿದೆ ಎಂದ ಅವರು ಸಂಘವು ಬೆಳೆದ ಬಂದ ಬಗೆಯನ್ನು ತಿಳಿಸಿದರು.
ವ್ಹಿಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಮಲ್ಲಣ್ಣ ಕನ್ನೂರ ಮಾತನಾಡಿದರು.
ಸಂಘದ ಮುಖ್ಯಕಾರ್ಯನಿರ್ವಾಹಕ ಎಸ್.ಜಿ.ಹಾದಿಮನಿ ಅವರು ಸನ್ 2024-25 ಸಾಲಿನ ಜಮಾ-ಖರ್ಚು, ಲಾಭ-ಹಾನಿ, ಅಂದಾಜು ಆಯ-ವ್ಯಯ ಕುರಿತು ವರದಿ ವಾಚಿಸಿದರು.
ಸಂಘದ ಮಾಜಿ ಅಧ್ಯಕ್ಷ ಎಸ್.ಎಸ್.ಬ್ಯಾಕೋಡ, ನಿರ್ದೇಶಕರಾದ ಪ್ರಕಾಶ ಪಾಟೀಲ, ಬಿ.ಎನ್.ನಾಡಗೌಡ, ನಿವೃತ್ತ ಉಪನ್ಯಾಸಕ ಎಂ.ಪಿ.ಬಶೆಟ್ಟಿ ಇತರರು ಮಾತನಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಲ್.ಪಿ.ಚೌದ್ರಿ, ನಿರ್ದೇಶಕರಾದ ಬಿ.ಎನ್.ನಾಡಗೌಡ, ಎ.ಎಸ್.ಬ್ಯಾಕೋಡ, ಜಿ.ಎಸ್.ಶಿವಯೋಗಿ, ಆರ್.ಎಂ.ಮಕಾಶಿ, ಕೆ.ಆರ್.ಶಂಕ್ರೆಪ್ಪಗೋಳ, ಜಿ.ಉ.ಬ್ಯಾಕೋಡ, ಎಂ.ಎ.ಪೂಜಾರಿ, ಪಿ.ಆರ್.ಪಾಟೀಲ,ಎಂ.ಬಿ.ಮಾದರ, ಕ್ಷೇತ್ರಾಧಿಕಾರಿ ಎಲ್.ಎಂ.ನದಾಫ, ಮುಖಂಡರಾದ ಅಶೋಕ ಬ್ಯಾಕೋಡ, ರಮೇಶ ಕೋರಿ, ಸುಭಾಸ ನಾಡಗೌಡ, ಬಸನಗೌಡ ಪಾಟೀಲ, ಅಂಬರೀಶ ನಾಡಗೌಡ, ಸಂಗಣ್ಣ ಹುನಗುಂದ,ಈರಯ್ಯ ಹಿರೇಮಠ, ಸಿಬ್ಬಂದಿಗಳಾದ ಎಸ್.ಬಿ.ನಾಡಗೌಡ, ಬಿ.ಎಚ್.ಯಲಗಾರ, ಎಸ್.ಎಂ.ಗೊಠೇದ, ಗೀತಾ ಪಾಟೀಲ ಇತರರು ಇದ್ದರು.
ಮಲ್ಲು ತೋಟದ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು.

