Author: editor.udayarashmi@gmail.com

ಪರೀಕ್ಷೆಗಳ ನಿಗದಿ ಅವಾಂತರ, ಖಾಲಿ ಹುದ್ದೆಗಳ ಭರ್ತಿ, ಪರೀಕ್ಷೆ ಮುಂದೂಡಿಕೆ ಕುರಿತು ಪರಿಹಾರಕ್ಕೆ ಯತ್ನಾಳ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿ ಮಾಡುವಾಗ ಆಗುತ್ತಿರುವ ಅವಾಂತರಗಳು, ನೇಮಕಾತಿ ವಿಳಂಬ, ಅತಿಥಿ ಉಪನ್ಯಾಸಕರ ನೇಮಕಾತಿ ಸಮಸ್ಯೆಗಳು, ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಕುರಿತಂತೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಬುಧವಾರ ತಡರಾತ್ರಿ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನಸೆಳೆದು, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿದರು.ಕ್ರೀಡಾ ಕೋಟಾ ಸಮಸ್ಯೆಯಿಂದ ಪರೀಕ್ಷೆಗೆ ತರಲಾಗಿದ್ದ ತಡಯಾಜ್ಞೆ ತೆರವಾಗಿದ್ದರಿಂದ, ಏಕಾಏಕಿ ಹೈದ್ರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ದಿನಾಂಕ ನಿಗದಿಗೊಳಿಸಿದ್ದರಿಂದ, ಬೇರೆ ಪರೀಕ್ಷೆಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ತೊಂದರೆ ಆಗಲಿದ್ದು, ಈ ಸಮಸ್ಯೆ ತಪ್ಪಿಸಲು ತಕ್ಷಣ ಸದರಿ ಪರೀಕ್ಷೆ ಮುಂದೂಡಬೇಕು.ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಆಕಾಂಕ್ಷಿಗಳು ಈಗಾಗಲೇ ಕಷ್ಟ ಪಟ್ಟು ತಯಾರಿ ನಡೆಸಿದ್ದಾರೆ. ಕರೋನ ಕಾರಣಕ್ಕಾಗಿ ನೇಮಕಾತಿ ಮುಂದೂಡಲ್ಪಟ್ಟಿದ್ದರಿಂದ ಪೊಲೀಸ್ ಇಲಾಖೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ, ಪರೀಕ್ಷಾರ್ಥಿಗಳಿಗೆ ವಯೋಮಿತಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಬಸವನಬಾಗೇವಾಡಿ ಬ್ಲಾಕ್ ಅಧ್ಯಕ್ಷರಾಗಿ ಶಂಕರಗೌಡ ಬಿರಾದಾರ ಅವರನ್ನು ನೇಮಕ ಮಾಡಿ ಆದೇಶ ಪತ್ರವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯದ್ಯಕ್ಷ ವಿನಯಕುಮಾರ ಸೊರಕೆ ಅವರು ನೀಡಿದರು.ವಿಜಯಪುರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪ್ರಚಾರ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಆದೇಶ ಪತ್ರವನ್ನು ನೀಡಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಸರ್ಪರಾಜ ಮಿರ್ದೆ, ಬಸವನಬಾಗೇವಾಡಿ ನಗರ ಘಟಕದ ಬ್ಲಾಕ್ ಅಧ್ಯಕ್ಷ ಸುರೇಶಗೌಡ ಪಾಟೀಲ, ಫಾರುಖ್ ಹೊಕ್ರಾಣಿ ಸೇರಿದಂತೆ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಮಾದಕ ವಸ್ತುಗಳ ಹಾವಳಿಯಿಂದಾಗಿ ಯುವಕರಾದಿಯಾಗಿ ಇಡೀ ಸಮಾಜವು ಅಪರಾಧಿಯಾಗುತ್ತಿದೆ. ಮಾದಕವಸ್ತುಗಳ ಸುಳಿಯಿಂದ ಯುವಜನಾಂಗವನ್ನು ತಪ್ಪಿಸಬೇಕಾದ ಅಗತ್ಯವಿದೆ ಎಂದು ಎಂಜಿವ್ಹಿಸಿಯ ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಸುನೀತ ಜಾಧವ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್ಎಸ್ಎಸ್, ಯುಥ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಸುಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾದಕ ವಸ್ತು ಸೇವನೆ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಚಿಕ್ಕವಯಸ್ಸಿನ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದಕರ ಸಂಗತಿ. ಮಾದಕ ವಸ್ತುಸೇವನೆ ಎಂಬುವದು ಸಮಾಜಕ್ಕೆ ಅಂಟಿದ ಒಂದು ಅಂಟುರೋಗವಾಗಿದೆ. ಈ ಅಂಟುರೋಗವು ಹೀಗೆಯೇ ಮುಂದುವರಿದರೆ ಇಡೀ ಬದುಕನ್ನು ಕಳೆದುಕೊಳ್ಳಬೇಕಾಗುತ್ತದೆ.ಅಫೀಮು, ಗಾಂಜಾ, ತಂಬಾಕು, ಸಿಗರೇಟ್, ಸಾರಾಯಿ ಕೆಲವು ಪಾನೀಯಗಳಿಂದ ಮುಕ್ತರಾಗುವದು ಅವಶ್ಯವಾಗಿದೆ. ಪ್ರeವಂತರಾದ ಪ್ರತಿಯೊಬ್ಬರೂ ಸಮಾಜದಲ್ಲಿ ಮಾದಕ ವಸ್ತುಗಳಿಂದ ಆಗುವ ಪರಿಣಾಮದ ಕುರಿತು ಜಾಗೃತಿ ಮೂಡಿಸುವದು ತುಂಬಾ ಅಗತ್ಯವಿದೆ. ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಪ್ರಾತ್ಯಕ್ಷಿಕೆ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಬರುವ ಗಣೇಶ ಹಬ್ಬವನ್ನು ಅತೀ ವಿಜೃಂಭಣೆಯಿಂದ ಆಚರಣೆ ಮಾಡಿ ಮತ್ತು ಹಬ್ಬವನ್ನು ಭಕ್ತಿಗೋಸ್ಕರ ಮಾಡಿ ಭಕ್ತಿ ಹೆಸರಲ್ಲಿ ಬೇರೆ ಬೇರೆ ಕಾರ್ಯಗಳನ್ನು ಮಾಡುವುದಾಗಲಿ ಮತ್ತು ದಾಂಧಲೆ ಮಾಡುವುದಾಗಲಿ ಮಾಡಿದರೆ ಅಂತವರ ವಿರುದ್ಧ ರೌಡಿ ಶೀಟರ್ ಪ್ರಕರಣ ದಾಖಲು ಮಾಡಲಾಗುವುದು ಎಂದು ಡಿವೈಎಸ್‌ಪಿ ಸಯ್ಯದ ರೋಶನ್ ಜಮೀರ ಎಚ್ಚರಿಸಿದರು.ನಗರದ ಎಸ್‌ಆರ್‌ಎ ಕ್ಲಬ್‌ನಲ್ಲಿ ಬುಧವಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಜಮಖಂಡಿ ಉಪವಿಭಾಗದ ಪೋಲಿಸರು ಏರ್ಪಡಿಸಿದ್ದ ಶಾಂತಿ ಪಾಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗೌರಿಗಣೇಶ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಬೇಕು, ಕಿಡಿಗೇಡಿಗಳಿಗೆ ಅವಕಾಶ ನೀಡಬಾರದು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಕೆ ನೀಡಿದರು.ಕಡಪಟ್ಟಿ ಬಸವಣ್ಣನ ಜಾತ್ರೆ, ಈದ್ ಮಿಲಾದ್ ಹಾಗೂ ಗಣೇಶ ಹಬ್ಬಗಳು ಒಂದೇ ಸಮಯದಲ್ಲಿ ಬಂದಿವೆ ಆದ್ದರಿಂದ ಎಲ್ಲರೂ ಸಹಕಾರ, ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ತಿಳಿಸಿದರು. ಗಣೇಶ ಪೆಂಡಾಲಗಳ ಕಾವಲು, ಪೊಲೀಸ್ ಮಿತ್ರರ ಪಡೆ ರಚನೆ, ಎಲ್ಲ ಪದಾಧಿಕಾರಿಗಳ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವಿಜಯಪುರ ಇವರ ಸಹಯೋಗದಲ್ಲಿ ಒಂದು ದಿನದ ಯುವನಿಧಿ ಯೋಜನೆಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಜಿಲ್ಲಾ ಉದ್ಯೋಗ ವಿನಿಮಯ ಉದ್ಯೋಗಧಿಕಾರಿ ಮಹೇಶ ಮಾಳವಾಡೇಕರ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳ ಯೋಜನೆಯಲ್ಲಿ ಒಂದಾದ ಯುವ ನಿಧಿ ಯೋಜನೆಯು ನಿರುದ್ಯೋಗ ಪದವೀಧರರು ಮತ್ತು ಡಿಪ್ಲೋಮಾ ಹೊಂದಿದವರಿಗೆ ನಿರುದ್ಯೋಗ ಭತ್ಯೆ ಒದಗಿಸುತ್ತಿದ್ದು ಪದವಿದರರಿಗೆ ೩೦೦೦ ರೂಪಾಯಿ ಮತ್ತು ಡಿಪ್ಲೋಮಾ ಹೊಂದಿದವರಿಗೆ ೧೫೦೦ ನಿರುದ್ಯೋಗ ಭತ್ಯೆಯನ್ನು ಕೊಡುತ್ತಿದ್ದು, ಕಾರಣ ನಿರುದ್ಯೋಗ ಯುವಕ ಮಿತ್ರರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಂಜಯ ಖಡಗೇಕರ ಮಾತನಾಡಿ, ಚಡಚಣ ತಾಲ್ಲೂಕಿನ ಯುವಕರು ಜಿಲ್ಲೆಯಲ್ಲೇ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಯುವನಿಧಿಗೆ ಹೆಸರು ನೋಂದಾಯಿಸಿಕೊಂಡಿದ್ದು, ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮದ ಯುವಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಯುವನಿಧಿಗೆ ನೊಂದಾಯಿಸಿ ಕೊಳ್ಳಬೇಕು ಎಂದರು.ಚಡಚಣ ತಾಲ್ಲೂಕು ಪಂಚ ಗ್ಯಾರಂಟಿಗಳ ಅಧ್ಯಕ್ಷ ರವಿದಾಸ ಜಾಧವ ಮಾತನಾಡಿ, ವಿದ್ಯಾರ್ಥಿಗಳು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಿಕೋಟಾ ತಾಲೂಕಿನ ಅಧ್ಯಕ್ಷರನ್ನಾಗಿ ಎನ್‌ಪಿಎಸ್ ಸಂಘಟನೆ ನೇತಾರ, ಶಿಕ್ಷಕ ಚನ್ನಯ್ಯ ಈ. ಮಠಪತಿ ಇವರನ್ನು ನೇಮಿಸಲಾಗಿದೆ.ನೂತನ ಅಧ್ಯಕ್ಷ ಚನ್ನಯ್ಯ ಮಠಪತಿ ಹಲವಾರು ವರ್ಷಗಳಿಂದ ನೌಕರರ ಸಂಘದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಂಘದ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಕ್ರೀಯಾಶೀಲ ಸಂಘಟನೆ ಗುರುತಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯಮನುಸಾರ ೨೦೨೪-೨೦೨೯ನೇ ಸಾಲಿನ ಅವಧಿಗೆ ಸತತ ಎರಡನೇ ಬಾರಿ ತಿಕೋಟಾ ತಾಲೂಕಿನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಸುರೇಶ ಶೆಢಶ್ಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಕೋರವಾರ ಗ್ರಾಮದಲ್ಲಿ ವಿವಿಧ ಬೇಡಿಕೆಗಳು, ಹಾಗೂ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮುಖಂಡರು ಮಾತನಾಡಿ, ಕೋರವಾರ ಗ್ರಾಮವನ್ನು ಹೋಬಳಿ ಮಾಡುವುದು, ಕೋರವಾರ ಗ್ರಾಮದ ಶ್ರೀ ಬಸವೇಶ್ವರ ವೃತ್ತದಿಂದ ಕೆ,ಇ,ಬಿ,ಯವರೆಗೆ ಸರಕಾರಿ ರಸ್ತೆ ಅಗಲಿಕರಣ ಮಾಡುವುದು, ಕೋರವಾರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲೆ ಮತ್ತು ಪದವಿಪೂರ್ವ ಕಾಲೇಜು ಮಂಜೂರು ಮಾಡುವುದು, ಕೋರವಾರ ಗ್ರಾಮದ ಪೋಲಿನ ಸ್ಟೇಷನ್ ಎದುರಿಗೆ ಶ್ರೀ ಮಹೇಶ್ವರಿ ಲಿಕ್ಕರ್, ಮದ್ಯದ ಅಂಗಡಿಯನ್ನು ಬೇರೆಕಡೆ ಸ್ಥಳಾಂತರಿಸುವುದು, ಕೋರವಾರ ಗ್ರಾಮದಲ್ಲಿ ಇರುವ ಸಾರ್ವಜನಿಕ ಗ್ರಂಥಾಲಯ ಸ್ಥಳ ೧೦೦/೬೦, ಜಾಗ ಅತೀಕ್ರಮಣ ಮಾಡಿರುತ್ತಾರೆ, ಗ್ರಾಮದಲ್ಲಿ ಬರುವ ವಿವಿಧ ರಸ್ತೆಗಳು, ಮತ್ತು ಚರಂಡಿಗಳು ಸಾರ್ವಜನಿಕರು, ಅತಿಕ್ರಮಣ ಮಾಡಿರುವ ಬಗ್ಗೆ, ಗ್ರಾಮದ ಎಲ್ಲಾ ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇದ್ದು ಅದು ಸರಿಯಾಗಿ ಪೂರೈಕೆ ಆಗುತ್ತಿಲ್ಲ.ಈ ಮೇಲಿನ ಎಲ್ಲಾ ಸಮಸ್ಯೆಗಳ ಬಗ್ಗೆ ಸಂಬಂದಿಸಿದಂತೆ ಹಲವು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಕಿಲ್ಲಾಗಲ್ಲಿಯಲ್ಲಿರುವ ಶ್ರೀ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರರ ಜಾತ್ರಾ ಮಹೋತ್ಸವ ವೈಭವದಿಂದ ಜರುಗಿತು.ಮಂಗಳವಾರ ಶ್ರೀ ವೀರಭದ್ರೇಶ್ವರರ ಪಲ್ಲಕ್ಕಿ ಹಾಗೂ ಕಳಸವು ತಂಗಡಗಿಯ ಕೃಷ್ಣಾ ನದಿಯ ಗಂಗಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು, ಇತ್ತ ದೇವಸ್ಥಾನದಲ್ಲಿ ಮೂಲ ಮೂರ್ತಿಗಳಿಗೆ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಬಳಿಕ ಪಟ್ಟಣದ ಪಿಲೇಕಮ್ಮದೇವಿ ದೇವಸ್ಥಾನದಿಂದ ಸಕಲ ವಾದ್ಯ ವೈಭವಗಳೊಂದಿಗೆ ಹಾಗೂ ಪುರವಂತರ ಸೇವೆಯೊಂದಿಗೆ ಬಸವೇಶ್ವರ ವೃತ್ತ, ಮುಖ್ಯ ಬಜಾರ, ದ್ಯಾಮವ್ವದೇವಿ ದೇವಸ್ಥಾನ, ಸರಾಫ್ ಬಜಾರ್ ಮಾರ್ಗವಾಗಿ ವೀರಭದ್ರೇಶ್ವರರ ಪಲ್ಲಕ್ಕಿ ಹಾಗೂ ಕಳಷಗಳನ್ನು ದೇವಸ್ಥಾನಕ್ಕೆ ಕರೆತರಲಾಯಿತು. ಬಳಿಕ ಮಹಾ ಮಂಗಳಾರುತಿ, ಮಾಹಾ ನೈವೇದ್ಯ ಹಾಗೂ ಮಹಾಪ್ರಸಾದ ಸೇವೆ ಜರುಗಿತು.ಈ ವೇಳೆ ಪ್ರಮುಖರಾದ ಉದಯ ರಾಯಚೂರ, ರಾಜೇಂದ್ರಗೌಡ ರಾಯಗೊಂಡ, ನಿವೃತ್ತ ಶಿಕ್ಷಕ ಎಸ್.ಬಿ.ಕನ್ನೂರ ಮಾತನಾಡಿ ಜಾತ್ರೆಯ ವಿಶೇಶತೆಯನ್ನು ಬಣ್ಣಿಸಿದರು. ಅಪ್ಪಣ್ಣ ಸಿದ್ದಾಪೂರ, ಗುರಯ್ಯ ಮುದ್ನೂರಮಠ, ಚಂದ್ರಶೇಖರ ಪ್ಯಾಟಿಗೌಡರ, ಶಶಿ ಮುತ್ತಗಿ, ರುದ್ರಯ್ಯ ಹಿರೇಮಠ, ನಾಗಭೂಷಣ ಸಿದ್ದಾಪೂರ, ರಾಮಚಂದ್ರ ಕುಪ್ಪಸ್ತ, ಶಾಂತಪ್ಪ ಚಟ್ಟಿ, ವಿರೇಶ ಅಂಗಡಿ, ವಿರೇಶ ಕುಂಬಾರ ಪರವಂತರ…

Read More

ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಭಾರತೀಯ ಸಂಸ್ಕೃತಿಯು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ವಿಶ್ವದ ಅತ್ಯಂತ ಹಳೆಯ ನಿರಂತರ ಸಂಸ್ಕೃತಿಗಳಲ್ಲಿ ಒಂದಾಗಿದೆ. ಇದು ಸಿಂಧೂ ಕಣಿವೆ ನಾಗರೀಕತೆಯಿಂದ ಪ್ರಾರಂಭವಾಗಿ, ಹಲವಾರು ಪ್ರಭಾವಗಳು ಮತ್ತು ವಿಕಸನಗಳ ಮೂಲಕ ಹಾದುಹೋಗಿದೆ. ಭಾರತೀಯ ಸಂಸ್ಕೃತಿಯು ಭಾಷೆಗಳು, ಧರ್ಮಗಳು, ನೃತ್ಯ, ಸಂಗೀತ, ವಾಸ್ತುಶಿಲ್ಪ, ಆಹಾರ ಮತ್ತು ಆಚರಣೆಗಳಲ್ಲಿ ವೈವಿಧ್ಯತೆಯನ್ನು ಹೊಂದಿದೆ. ಭಾರತೀಯ ಸಂಸ್ಕೃತಿಯು ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿದೆ ಮತ್ತು ಪ್ರಪಂಚದಾದ್ಯಂತ ಅದರ ಪ್ರಭಾವವನ್ನು ಬೀರಿದೆ.ಇಂತಹ ಸೂಕ್ಷ್ಮತೆಗಳನ್ನು ಅರಿತು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸ ಸಂಶೋಧನಾ ಕ್ಷೇತ್ರಕ್ಕೆ ಕಾಲಿಟ್ಟವರು ನಮ್ಮ ಡಾ. ತಾರಾ ಬಿ.ಎನ್ ಅವರು.ಇತಿಹಾಸ,ಸಾಹಿತ್ಯ, ಸಂಸ್ಕೃತಿ, ಸೇತುವೆಯಾಗಿ ಕಾರ್ಯ ಮಾಡುತ್ತ ಬದುಕಿನ ಹೊಸ ಸವಾಲುಗಳನ್ನು ಸ್ವೀಕರಿಸಿ ನಿರಂತರ ಅಧ್ಯಯನ ಮಾಡುವ ಸಂಘರ್ಷ ಸಮರಸದ ಜ್ಯೋತಿ ಡಾ. ತಾರಾ. ಬಿ. ಎನ್ ಅವರದು ಅಪರೂಪದ ಪ್ರಬುದ್ಧ ವ್ಯಕ್ತಿತ್ವ.ಡಾ. ತಾರಾ. ಬಿ. ಎನ್. ಅವರು ನಮ್ಮ ಬಸವ ತಿಳುವಳಿಕೆ ಮತ್ತು…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 28 ನೆಯ ದಿನದ ಶರಣ ಮಾಲಿಕೆಯಲ್ಲಿ ಡಾ. ಸರಸ್ವತಿ ಪಾಟೀಲ್ ಅವರು ಸೊಪ್ಪಿನ ಬಸವಣ್ಣ ಶರಣರ ಬಗೆಗೆ ಅತ್ಯಂತ ವೈಚಾರಿಕತೆ ಮತ್ತು ಸಂಶೋಧನಾತ್ಮಕ ನಿಲುವಿನಿಂದ ಮಾತನಾಡಿದರು.ಸಿದ್ದನoಜೇಶ ಕವಿ ತಮ್ಮ ಶ್ರೀ ಗುರುರಾಜ ಚರಿತ್ರೆಯಲ್ಲಿ ಶಿವಶರಣರ ಕಥೆಗಳನ್ನು ಬರೆಯುವಾಗ ಸೊಪ್ಪಿನ ಬಸವಣ್ಣನವರ ಬಗೆಗೆ ಹರ ಭಕ್ತ,ಸುಜ್ಞಾನಿ, ಸುಗುಣಿ, ಭಕ್ತಿ ಪ್ರೇಮಿ, ಷಡ್ವರ್ಗ ಜಯಿಸಿದವರು, ಪರಮ ಪಾವನ, ಘನಮಹಿಮ, ಸರ್ವಜ್ಞ, ಶರಣ ಸಂತಾನ, ಮಹಾಮಹಿಮ ಎಂದು ಬರೆದದ್ದನ್ನು ಹಂಚಿಕೊಡರುಸೊಪ್ಪಿನ ಬಸವಣ್ಣನವರು ಒಕ್ಕಲುತನವೇ ಆಧಾರವಾದ ಕುಟುಂಬದಿಂದ ಬಂದವರು, ಅವರ ತಂದೆ-ತಾಯಿ ನಂದಿ ಬಸವಣ್ಣನವರನ್ನು ಪೂಜಿಸುತ್ತಿದ್ದುದರ ಫಲದಿಂದ ಹುಟ್ಟಿದ ಮಗನಿಗೆ ಬಸವಣ್ಣ ಎಂದು ನಾಮಕರಣ ಮಾಡಿದ್ದು, ಸೊಪ್ಪಿನ ಬಸವಣ್ಣನವರಿಗೆ ಪಶುಪಾಲನೆಯೇ ಇಷ್ಟವಾದ ಕಾಯಕವಾಗಿತ್ತು. ದನಕರುಗಳ ಮೇಲೆ ಅವರಿಗೆ ವಿಶೇಷ ಪ್ರೀತಿ, ಕಾಡು ಮೇಡು ಅಲೆದು ಹಸಿರುಮೇವು ತಂದು ಯಾವ ಭೇದ ಭಾವವಿಲ್ಲದೆ ಎಲ್ಲ ಪಶುಗಳಿಗೆ ಹುಲ್ಲನ್ನು ನೀಡುತ್ತಿದ್ದರು. ನೀರನ್ನು ಒದಗಿಸುತ್ತಿದ್ದರು ಎಂದು ಹೇಳುತ್ತಾ, ಹೀಗಾಗಿ…

Read More