ಪೌರಕಾರ್ಮಿಕರ ದಿನಾಚರಣೆಯಲ್ಲಿ ಪ.ಪಂ. ಮುಖ್ಯಾಧಿಕಾರಿ ಬಿ.ಕೆ.ತಾವಸೆ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಕನ್ನಡ ಶಾಲೆಯಲ್ಲಿ ಪೌರಕಾರ್ಮಿಕರ ದಿನಾಚರಣೆ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಚಡಚಣ ಪ.ಪಂ. ಮುಖ್ಯಾಧಿಕಾರಿ ಬಿ.ಕೆ.ತಾವಸೆ ಅವರು ಗ್ರಾಮ, ಪಟ್ಟಣ ಹಾಗೂ ನಗರವನ್ನು ಸ್ವಚ್ಛವಾಗಿರಿಸಿ ಸುಂದರವಾಗಿರಿಸುವಲ್ಲಿ ಪೌರಕಾರ್ಮಿಕರ ಕಾರ್ಯ ಮಹತ್ವದ್ದಾಗಿದೆ, ಮತ್ತು ಕರೋನಾದಂತಹ ಮಹಾಮಾರಿ ರೋಗಗಳನ್ನು ತಡೆಗಟ್ಟುವಲ್ಲಿ ಪೌರಕಾರ್ಮಿಕರ ಪಾತ್ರ ಹಿರಿದು ಎಂದರು.
ಪಟ್ಟಣದ ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡಲು ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ. ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪೌರ ಕಾರ್ಮಿಕರು ತಮ್ಮ ದಿನನಿತ್ಯದ ಕಾಯಕದೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ತಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಉತ್ತಮ ಶಿಕ್ಷಣ ನೀಡುವಂತೆ ಹೇಳಿದರು.
ಸರಕಾರ ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿದೆ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ಸುಂದರ ಜೀವನ ರೂಪಿಸಿಕೊಳ್ಳುವಂತೆ ತಿಳಿಸಿದರು. ಈಗಾಗಲೇ ಪಟ್ಟಣ ಪಂಚಾಯತ ವತಿಯಿಂದ ಖಾಯಂಹೊಂದಿದ ಪೌರ ಕಾರ್ಮಿಕರಿಗೆ ಮನೆಯ ಹಕ್ಕು ಪತ್ರ ಹಂಚಿಕೆ ಮಾಡಲಾಗಿದೆ ಮತ್ತು ಹೊಸದಾಗಿ ಇತ್ತಿಚೆಗೆ ಖಾಯಂ ನೋಕರಿ ಪಡೆದ ಪೌರ ಕಾರ್ಮಿಕರಿಗೂ ಸರಕಾರದ ಆದೇಶದಂತೆ ಮುಂದಿನ ದಿನಗಳಲ್ಲಿ ಮನೆಯ ಹಕ್ಕು ಪತ್ರ ಹಂಚಿಕೆ ಮಾಡಲಾಗುವದು, ಆರೋಗ್ಯ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಅದರ ಸದುಪಯೋಗ ಎಲ್ಲ ಪೌರ ಕಾರ್ಮಿಕರು ಹಾಗೂ ಕುಟುಂಬಸ್ಥರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ ಹಾಗೂ ಉಪಾಧ್ಯಕ್ಷ ಇಲಾಹಿ ನದಾಫ ಅವರು ಪ.ಪಂ.ವತಿಯಿಂದ ಎಲ್ಲ ಪೌರಕಾರ್ಮಿಕರಿಗೆ ರೂ.೭೦೦೦ ವಿಶೇಷ ಗೌರವ ಧನ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪ.ಪಂ.ಸದಸ್ಯರಾದ ರಾಜು ಕೋಳಿ, ಗೌಸಪಾಕ ಟಪಾಲ, ಶ್ರೀಕಾಂತ ಗಂಟಗಲ್ಲಿ, ಬಾಲಾಜಿ ಗಾಡಿವಡ್ಡರ, ಪ್ರಕಾಶ ಪಾಟೀಲ, ಚೈತನ್ಯಕುಮಾರ ನಿರಾಳೆ, ಚಂದ್ರಕಾಂತ ಕಲಮನಿ, ಇಬ್ರಾಹಿಂ ಸೌದಾಗಾರ, ಶ್ರೀಮತಿ ಸೂನಬಾಯಿ ಗಂಟಗಲ್ಲಿ, ಸುರೇಖಾ ಬನಸೋಡೆ, ಅರುಣಾಕ್ಷಿ ಗಡ್ಡೆದೇವರಮಠ, ಸಾವಿತ್ರಿ ಮಠ,ಸಾವಿತ್ರಿ ಡೊಳ್ಳಿ, ಸಂಗಪ್ಪ ಭಂಡರಕವಠೆ, ಶಿವಾಜಿ ಬಾಮಣಿ, ವಾಸಿಮ್ ಮುಲ್ಲಾ, ಸಿಬ್ಬಂಧಿಗಳಾದ ವಿನುತಾ ಸಂಕದ, ಅನಸುಯಾ ಕಂಟಿಕರ, ರಾಜೇಂದ್ರ ಸುಗಂದಿ, ಶಿವಾನಂದ ಜಂಗಲಗಿ ಸೇರಿದಂತೆ ಹಲವರು ಇದ್ದರು.

