Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಜನತೆಗೆ ಉದ್ಯೋಗ ಹುಡುಕಾಟಕ್ಕೆ ನೆರವಾಗುವ ನಿಟ್ಟಿನಲ್ಲಿ ಸಿಕ್ಯಾಬ್ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಹಾಗೂ ಜಿಲ್ಲಾ ಉದ್ಯೋಗ ಕಚೇರಿ ವಿಜಯಪುರ ಮತ್ತು ನಿರ್ಮಾನ್ ಎನ್ ಜಿ ಓ ಕಲಬುರ್ಗಿ ಇವರ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಗಳ 500 ಕ್ಕೂ ಅಧಿಕ ಯುವಕ– ಯುವತಿಯರ ಪೈಕಿ ಐಟಿ, ಬಿಟಿ ಸೇರಿದಂತೆ ಒಟ್ಟು 16 ಕಂಪನಿಗಳು ಭಾಗವಹಿಸಿದ್ದು 45 ಯುವಕ- ಯುವತಿಯರಿಗೆ ಸ್ಥಳದಲ್ಲೇ ಉದ್ಯೋಗದ ಆದೇಶ ನೀಡಿದವು.81 ಅಭ್ಯರ್ಥಿಗಳನ್ನು ಅಂತಿಮ ಹಂತಕ್ಕೆ ಆಯ್ಕೆಯನ್ನು ಮಾಡಲಾಯ್ತು 431 ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಿದ್ದರು.ಈ ಬೃಹತ್ ಮೇಳಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಪದವೀಧರರು ಹಾಗೂ ವಿದ್ಯಾರ್ಥಿಗಳ ದಂಡು ಹರಿದುಬಂತು. ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲಾಯಿತು. ಪಿಯುಸಿ, ಐಟಿಐ, ಡಿಪ್ಲೊಮಾ ತೇರ್ಗಡೆಯಾದವರು ಮತ್ತು ಪದವೀಧರರು ಸೇರಿದಂತೆ ನೂರ ಕ್ಕೂ ಹೆಚ್ಚು ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿ, ವಿವಿಧ ಕಂಪನಿಗಳಲ್ಲಿ ಉದ್ಯೋಗವಕಾಶ ಗಿಟ್ಟಿಸಿಕೊಳ್ಳುವಲ್ಲಿ ಸಫಲವಾದರು.ಆಯಾ ಕಂಪನಿಗಳ ಮುಖ್ಯಸ್ಥರು ಮತ್ತು…
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 32 ನೆಯ ದಿವಸದ ಶರಣಮಾಸದ ಮಾಲಿಕೆಯಲ್ಲಿ ಡಾ. ಸುಮಂಗಲಾ ಮೇಟಿ ಅವರು ಶರಣೆ ಅಕ್ಕಮ್ಮ ಅವರ ಬಗೆಗೆ ಅತ್ಯಂತ ಪ್ರಬುದ್ಧವಾಗಿ ತಮ್ಮ ಅನುಭಾವವನ್ನು ನೀಡಿದರು.ಡಾ. ಸುಮಂಗಲಾ ಅವರು ಶರಣು ಶರಣೆಯರು ಭೌತಿಕದ ಮೂಲಕ ಆಧ್ಯಾತ್ಮಿಕ ಅನುಸಂಧಾನ ನಡೆಸಿದ್ದಾರೆ ಎಂದು ಹೇಳುತ್ತಾ, ಅಕ್ಕಮ್ಮ ವೃತಕ್ಕೆ ಮಹತ್ವದ ಸ್ಥಾನವನ್ನು ಕೊಟ್ಟಿದ್ದಳು, 64 ವ್ರತಗಳನ್ನು, 56 ಶೀಲಗಳನ್ನು, 32 ನಿಯಮಗಳನ್ನು ಕುರಿತು ಚರ್ಚಿಸಿದ್ದಾಳೆನ್ನುವುದು, ಶರಣೆ ಅಕ್ಕಮ್ಮನ ಅಂಕಿತ “ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ. ಈ ಅಂಕಿತ ಅವಳ ವ್ಯಕ್ತಿತ್ವದ ಅಸ್ಮಿತೆ.ಅದು ವಿಚಾರ ಪ್ರಾಣವಲ್ಲ, ಆಚಾರಪ್ರಾಣ. ಅಕ್ಕಮ್ಮ ಬಸವಾದಿ ಶರಣರ ಕಾಲದಲ್ಲಿದ್ದು, ಸನ್ನಡತೆಯ ಜೀವನ ನಡೆಸಿ ಜೀವನಾನು ಭವದಿಂದ ಕಂಡುoಡ ವಸ್ತು ವೈವಿಧ್ಯಗಳ ಕುರಿತು ಚರ್ಚಿಸಿದ್ದಾಳೆ. ಅಂತರಂಗದಲ್ಲಿ ವೃತ, ಬಹಿರಂಗದಲ್ಲಿ ಆಚಾರ, ಉಭಯ ಸಿದ್ಧರಾಗಿ ನಡೆಯುವುದೇ ವೃತಾಚಾರ ಎಂಬ ಧೋರಣೆ ಹೊಂದಿದ್ದಳು.ನೇಮ ಆಚಾರ ಶೀಲ ಇವು ಅಕ್ಕಮ್ಮನ ವಚನಗಳ ಮೂಲ ದ್ರವ್ಯ ಅವುಗಳಿಗೆ ಪೂರಕವಾಗಿ…
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 31 ನೆಯ ದಿನದ ಶರಣ ಮಾಲಿಕೆಯಲ್ಲಿ ಶರಣೆ ಅಂಜಲೀನಾ ಗ್ರೇಗರಿ ಅವರುಶಿವಯೋಗ ಸಾಧಕ ಶ್ರೀ ತಪೋವನ ಕುಮಾರಸ್ವಾಮಿಗಳು ಅವರ ಬಗೆಗೆ ಅತ್ಯಂತ ಭಕ್ತಿ- ಭಾವದಿಂದ ಮಾತನಾಡಿದರು.ಬೈಲಹೊಂಗಲದ ಹುಣಸಿಕಟ್ಟಿಯಲ್ಲಿ ಪುಣ್ಯ ಪುರುಷರ ಉದಯ, ಬಾಲ್ಯ,ಚಿಕ್ಕ ವಯಸ್ಸಿನಲ್ಲಿಯೇ ಬಾಲಯೋಗಿಯ ವಿದ್ಯೆ ಮತ್ತು ಬುದ್ಧಿಯನ್ನು ನೋಡಿ ಶೂರ್ಪಾಲ ಮಾಸ್ತರರು” ಈ ದಿವ್ಯಜ್ಯೋತಿ ಬೆಳಗಲಿದೆ ” ಎಂದು ಹೇಳಿದ್ದು, ಹನುಮಂತ ದೇವರ ಗುಡಿಯಲ್ಲಿ ಧ್ಯಾನ ಮಾಡುತ್ತಿದ್ದುದು, ಶಾಲೆಯಲ್ಲಿ ನಡೆಯುವ ಸರಸ್ವತಿ ಪೂಜೆಯನ್ನು ನೋಡಿ ಅಚಲ ಭಕ್ತಿಯ ನಿಷ್ಠಾವಂತರಾಗಿ, ಮಧುರ ಗಾನದ ಕಲೆ, ವಾಕ್ ಸಿದ್ಧಿ, ಕ್ಲಿಷ್ಟಮಯ ಶಾಸ್ತ್ರಗಳ ವಿದ್ವತ್ತು ಪಡೆದು ಪ್ರವಚನ ಮಾಡುತ್ತಾ ಅವರು ನುಡಿದುದೆಲ್ಲವೂ ಸತ್ಯವಾಗಿ ಪರಿಣಮಿಸುತ್ತವೆನ್ನುವುದು, 14 ವರ್ಷದಲ್ಲಿರುವಾಗಲೇ ನಿಜಗುಣರ ಶಾಸ್ತ್ರವನ್ನು ಓದು ತ್ತಿದ್ದುದು, ಅವರ ಅನುಭವದ ಜಿಜ್ಞಾಸುಗಳನ್ನು ಪ್ರವಚನಗಳ ಮೂಲಕ ತಿಳುವಳಿಕೆ ನೀಡಲು ಪ್ರಾರಂಭಿಸಿದ್ದು, ಹದಿನಾಲ್ಕು ವರ್ಷದವರಿದ್ದಾಗ ಶಾಲೆಯಲ್ಲಿ ಕಲೆಕ್ಟರ್ ಬಂದಾಗ ಇಂಗ್ಲಿಷ್ನಲ್ಲಿ ಭಾಷಣ ಮಾಡಿದ್ದು, ದೊಡ್ಡವರಾದ ಮೇಲೆ ದೇವಿ…
ಜಮಖಂಡಿಯಲ್ಲಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ರಸ್ತೆ ತಡೆದು ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ರಾಜ್ಯ ಸರ್ಕಾರ ಉಪನ್ಯಾಸಕರ ನೇಮಕಾತಿಯಲ್ಲಿ ದೃಢವಾದ ನಿರ್ಧಾರ ತೆಗೆದುಕೊಳ್ಳದೆ, ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಮೊಟಕು ಗೊಳಿಸುತ್ತಿರುವುದನ್ನು ಖಂಡಿಸಿ ಪದವಿ ಹಂತದಲ್ಲಿ ಕಾಯಂ ಅಥವಾ ಅತಿಥಿ ಉಪನ್ಯಾಸಕರ ನೇಮಕಾತಿಗೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದ ದೇಸಾಯಿ ವೃತ್ತದಲ್ಲಿ ಶುಕ್ರವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರಾಜ್ಯದ 432 ಪದವಿ ಕಾಲೇಜುಗಳಲ್ಲಿ 6 ಸಾವಿರ ಕಾಯಂ ಉಪನ್ಯಾಸಕರ ಪೈಕಿ 3 ಸಾವಿರಕ್ಕೂ ಹೆಚ್ಚು ಜನರು ನಿವೃತ್ತರಾಗಿದ್ದಾರೆ. ಪದವಿ ಹಂತದಲ್ಲಿ ಉಪನ್ಯಾಸಕರ ಕೊರತೆ ಉಂಟಾಗಿದ್ದು, ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. 2025-26ನೇ ಸಾಲಿನಲ್ಲಿ ಖಾಲಿ ಇರುವ 12,000 ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು 55 ಸಾವಿರ ಅರ್ಜಿಗಳ ಸಲ್ಲಿಕೆಯಾಗಿದೆ. ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಉಪನ್ಯಾಸಕರಕೊರತೆಯಿಂದಾಗಿ ತರಗತಿಗಳು ನಡೆಯುತ್ತಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರನ್ನಾದರೂ ನೇಮಕ ಗೊಳಿಸಿ ತೊಂದರೆಯನ್ನು…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲ್ಲೂಕಿನ ಮುತ್ತೂರು ಗ್ರಾಮದ ನಡುಗಡ್ಡೆ ಪ್ರದೇಶ ಹಾಗೂ ತುಬಚಿ ಗ್ರಾಮದ ಮುಳುಗಡೆ ಪ್ರದೇಶಗಳಿಗೆ ತಹಸೀಲ್ದಾರ ಅನೀಲ ಬಡಿಗೇರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನದಿ ತೀರದ ಗ್ರಾಮಗಳು ಹಾಗೂ ನಡುಗಡ್ಡೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಡುಗಡ್ಡೆ ಪ್ರದೇಶದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ತುಬಚಿ ಗ್ರಾಮದಲ್ಲೂ ಸಹ ಕೆಲ ಕುಟುಂಬಗಳು ಹಾಗೂ ಜಾನುವಾರುಗಳನ್ನು ಸ್ಥಳಾಂತರಿಸಲಾಯಿತು.ತಾಲೂಕಿನ ನದಿ ತೀರದ 23 ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದ್ದು, ಪ್ರವಾಹ ಸ್ಥಿತಿ ಎದುರಾದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ, ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳ ಮೂಲಕ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಗರದಲ್ಲಿ ವಿವಿಧ ಕಡೆ ಮಾರಾಟ ಮಾಡುತಿದ್ದ ಗಣೇಶ ಮೂರ್ತಿಗಳನ್ನು ನಗರಸಭೆ ಅಧಿಕಾರಿಗಳು ಪರಿಶಿಲಿಸಿ ಪಿಓಪಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದುಕೊಂಡರು.ಪರಿಸರಕ್ಕೆ ಹಾನಿ ಉಂಟು ಮಾಡುವ ಕಾರಣಕ್ಕೆ ಪಿಓಪಿ ಗಣಪತಿ ಮೂರ್ತಿಗಳ ಮಾರಾಟ, ಸಾಗಾಟ, ಬಳಕೆಗೆ ಸರ್ಕಾರ ನಿಷೇಧ ಹೇರಿದೆ,ಲಾಭಕ್ಕೊಸ್ಕರ ಪಿಓಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪರಿಸರ ಸಹಾಯಕ ಅಭಿಯಂತರಾದ ಕುಸುಮಾ ಸೋಪಡ್ಲ ಹೇಳಿದರು.ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ವಿನಾಯಕ ನಡೋನಿ, ಸಚಿನ ಹಿರೇಮಠ, ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಹಡಪದ, ರಾಜಕುಮಾರ ಹೊಸೂರ ಇತರರು ಇದ್ದರು.
ಚಡಚಣ ತಾಲೂಕಿನ ಭೀಮಾನದಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ ಉದಯರಶ್ಮಿ ದಿನಪತ್ರಿಕೆ ಚಡಚಣ: ಚಡಚಣ ತಾಲೂಕಿನ ಭೀಮಾನದಿಯ ನದಿಯ ದಡದಲ್ಲಿ ಬರುವ ಪ್ರವಾಹ ಪೀಡಿತ ಪ್ರದೇಶಗಳಾದ ದಸೂರ, ಉಮರಜ, ಗೋವಿಂದಪೂರ, ನಿವರಗಿ, ಹೊಳಿಸಂಖ ಹಾಗೂ ಉಮರಾಣಿ ಗ್ರಾಮಗಳಿಗೆ ಬೇಟಿ ನೀಡಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.ಮಹಾರಾಷ್ಟ್ರದ ಉಜನಿ ಮತ್ತು ನೀರಾ ಜಲಾಶಯ ಮತ್ತು ಭೀಮಾ ಕಣಿವೆ ಪ್ರದೇಶದಲ್ಲಿ ಕೆಲವು ದಿನಗಳಿಂದ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಜಲಾಶಯಕ್ಕೆ ಅಪಾರ ನೀರು ಹರಿದು ಬಂದು ಉಜನಿ ಮತ್ತು ನೀರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಹೆಚ್ಚಿನ ನೀರು ಭೀಮಾನದಿಗೆ ಹರಿ ಬಿಡಲಾಗುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ.ಶುಕ್ರವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿನೀಡಿ ಮಾತನಾಡಿದ ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಭೀಮಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ನದಿ ತೀರದಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ತಾಣಗಳತ್ತ ತೆರಳಲು ಈಗಾಗಲೇ ಸೂಚಿಸಲಾಗಿದೆ. ನದಿ ತೀರದ ಗ್ರಾಮಗಳಲ್ಲಿ ಡಂಗುರವನ್ನೂ ಸಾರಲಾಗಿದೆ. ಜನತೆ ತಮ್ಮ ಸಾಮಾನು…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಕಾಂಗ್ರೆಸ್ ಯುವ ಧುರೀಣ ಸಲೀಮ ಸರಕಾವಸರನ್ನು ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖಾತರ ವಿಭಾಗದ ಸಾಮಾಜಿಕ ಜಾಲತಾಣದ ಸಂಚಾಲಕರನ್ನಾಗಿ ನೇಮಕಗೊಂಡುಇದ್ದಾರೆ.ಕಾAಗ್ರೆಸ್ ಧುರೀಣ ಸಿದ್ದು ಕೊಣ್ಣೂರ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀಯವರ ಸಿಫಾರಸ್ಸಿನ ಮೇರೆಗೆ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯಾದ್ಯಕ್ಷ ಎಂಎಲ್‌ಸಿ ಕೆ. ಅಬ್ದುಲ್ ಜಬ್ಬಾರ್ ರವರ ಅನುಮೋದನೆಯೊಂದಿಗೆ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಶಫೀಕ ಬೇಪಾರಿ ನೇಮಕಗೊಳಿಸಿ ಆದೇಶಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನೇಮಕಗೊಂಡಿರುವ ಸಲೀಮ ಸರಕಾವಸ್‌ರನ್ನು ಸ್ಥಳಿಯ ಅಂಜುಮನ್ ಇಸ್ಲಾಂ ಸಮೀತಿ ಹಾಗೂ ಸ್ಥಳಿಯ ಕಾಂಗ್ರೆಸ್ ಮುಖಂಡರಿಂದ ಶುಕ್ರವಾರದಂದು ಸನ್ಮಾನಿಸಿ ಗೌರವಿಸಲಾಯಿತು.ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಶಫೀಕ ಬೇಪಾರಿ, ಪ್ರಮುಖರಾದ ಅಶೋಕ ಮೋಟಗಿ, ಶಿವಾನಂದ ಪಾಟೀಲ, ಪಿರಸಾಬ ನದಾಫ, ಮುತ್ತು ಮೇತ್ರಿ, ರುಸ್ತುಂ ಮಾಲದಾರ, ಮಲೀಕ ಸರಕಾವಸ, ಶೌಕತ ಮಿರ್ಜಿ, ರವಿ ದೊಡವಾಡ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
ಭಕ್ತರು ಸುರಕ್ಷಿತವಾಗಿ ಮರಳಿ ಸ್ವಗ್ರಾಮಕ್ಕೆ ತೆರಳಲು ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಎಚ್ಚರಿಕೆಯ ಸೂಚನೆ ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಶುಕ್ರವಾರ ರಾತ್ರಿ ೨.೨೦ ಲಕ್ಷ ಕಿಂತಲೂ ಅಧಿಕ ಕ್ಯುಸೆಕ್ಸ್ ನೀರು ಹರಿಬಿಟ್ಟಿದ್ದರಿಂದ ಭೀಮೆಯ ವಡಿಲು ತುಂಬಿ ತುಳುಕುತ್ತಿದೆ ಸಾರ್ವಜನಿಕರು ನದಿಯ ಅಕ್ಕಪಕ್ಕ ಸಂಚರಿಸಬಾರದು ಮೈಮರೆತರೆ ಪ್ರಾಣಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ದೇವಿಯ ದರ್ಶನಕ್ಕೆ ಬಂದಂತ ಭಕ್ತರು ಸುರಕ್ಷಿತವಾಗಿ ಸ್ವಗ್ರಾಮಕ್ಕೆ ತೆರಳಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಎಚ್ಚರಿಕೆ ನೀಡಿದರು.ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಸಮೀಪದ ಬಗಲೂರ ಹಾಗೂ ಘತ್ತರಗಿ ಮದ್ಯದಲ್ಲಿ ನಿರ್ಮಿಸಲಾದ ಬ್ಯಾರೇಜ ಕಂ ಬ್ರಿಡ್ಜಗೆ ಬೇಟಿನೀಡಿ ನೀರಿನ ಪ್ರಮಾಣ ಪರಿಶೀಲಿಸಿ ಅವರು ಮಾತನಾಡಿದರು.ಕಳೆದ ಒಂದು ವಾರದಿಂದ ನಮ್ಮ ರಾಜ್ಯ ಸೇರಿದಂತೆ ಮಹರಾಷ್ಟç ರಾಜ್ಯದಲ್ಲಿ ಅಧಿಕ ಮಳೆಯಾದ್ದರಿಂದ ಶುಕ್ರವಾರ ರಾತ್ರಿ ಉಜನಿ ಜಲಾಶಯದಿಂದ ಎರಡು ಲಕ್ಷದ ಇಪ್ಪತ್ತು ಸಾವಿರ ಕ್ಯೂಸೆಸ್ ನೀರನ್ನು ಹರಿಬಿಟ್ಟಿದ್ದಾರೆ ನದಿಯ ದಡದ ಗ್ರಾಮಗಳಾದ ಶಿರಸಗಿ, ಹಾವಳಗಿ, ಬಗಲೂರ ಗ್ರಾಮದ ಸಾರ್ವಜನಿಕರು ಸಣ್ಣಪುಟ್ಟ ಮಕ್ಕಳು, ದನಕರಗಳು, ನದಿಯ…
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ೨೯ ಅಂಶ ಕಾರ್ಯಕ್ರಮ | ಡಿಡಿಪಿಐ ವ್ಹಿ.ವ್ಹಿ.ಸಾಲಿಮಠ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸುತ್ತಿರುವ ಶಿಕ್ಷಣ ಇಲಾಖೆಯು, ಅದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಶಾಲೆಗಳಲ್ಲಿ ಈಗಾಗಲೇ ೨೯ ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ಇಲಾಖೆ, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಮತ್ತು ಒತ್ತಡ ನಿವಾರಣೆಗೆ ವಿಶೇಷ ಒತ್ತುಕೊಟ್ಟಿದೆ.ಕಟ್ಟು ನಿಟ್ಟಿನ ಜಾರಿ: ‘ಈ ಸಾಲಿನ ಫಲಿತಾಂಶದಲ್ಲಿ ಜಿಲ್ಲೆಯನ್ನು ಅಗ್ರ ೫ ಸ್ಥಾನದೊಳಗೆ ತರುವಗುರಿ ಹೊಂದಿದ್ದೇವೆ. ಅದಕ್ಕಾಗಿ ೨೯ ಅಂಶಗಳ ಕಾರ್ಯಕ್ರಮಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವ್ಹಿ.ವ್ಹಿ.ಸಾಲಿಮಠರವರು ಹೇಳಿದರು.ಬಿಜಿಬಂವ್ಹಿ ಸಂಘದ ದಿ.ಪ್ರಭಾಕರ ಮೆಮೋರಿಯಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತು ವಿಜಯಪುರ ನಗರ ವಲಯದ ಮುಖ್ಯ ಗುರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು.‘ಜಿಲ್ಲೆಯಲ್ಲಿ ನಾಲ್ಕು ಬ್ಲಾಕ್‌ಗಳ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಈ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು.…
