ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಭೀಮಾ ನದಿ ಪ್ರವಾಹಕ್ಕೆ ಒಳಗಾಗಿರುವ ಗ್ರಾಮಗಳಿಗೆ ಮಾಜಿ ಶಾಸಕ ರಮೇಶ ಭೂಸನೂರ ಭೇಟಿ ನೀಡಿ ನಿರಾಶ್ರಿತರ ತೊಂದರೆಗಳನ್ನು ಆಲಿಸಿದರು.
ಭೀಮಾ ನದಿಯ ಪ್ರವಾಹ ಸಂಕಷ್ಟಕ್ಕೆ ಒಳಗಾಗಿರುವ ಕುಮಸಗಿ ಗ್ರಾಮದ ನದಿ ಅಂಚಿನಲ್ಲಿರುವ ಮನೆಗಳಲ್ಲಿ ನೀರು ತುಂಬಿಕೊಂಡಿದ್ದು ಒಟ್ಟು 40 ಕುಟುಂಬಗಳು ತೊಂದರೆಗೆ ಸಿಲುಕಿದ್ದವು ಅಂತ ಜನರ ಸಮಸ್ಯೆ ಆಲಿಸಿ ನಿರಾಶ್ರಿತರ ಜೊತೆಗೆ ನಾನಿರುತ್ತೇನೆ ಸರ್ಕಾರದ ಮೇಲೆ ಒತ್ತಡ ಹೇರಿ ತಮಗೆ ಶಾಶ್ವತ ಪರಿಹಾರ ಕಲ್ಪಿಸಲು ಅಧಿಕಾರಿಗಳ ಜೊತೆ ಮಾತನಾಡಿ ಸಾಧ್ಯವಾದರೆ ತಮ್ಮೊಂದಿಗೆ ಹೋರಾಟ ಮಾಡುವ ಮೂಲಕ ನಿಮಗೆ ಶಾಶ್ವತ ಸೂರು ಕಲ್ಪಿಸಿ ಕೊಡುತ್ತೇನೆ, 2-3 ಎಕರೆ ಜಮೀನು ದೊರೆತರೆ ನೆರೆಪೀಡಿತ ಕುಟುಂಬಗಳನ್ನು ಸ್ಥಳಾಂತರ ಮಾಡಬಹುದು ನನ್ನ ಅವಧಿಯಲ್ಲಿ ಏಳು ಹಳ್ಳಿಗಳನ್ನು ಸ್ಥಳಾಂತರ ಮಾಡಿದ್ದೇನೆ ಕುಮಸಗಿ ಮಾತ್ರ ಉಳಿದಿದೆ ಇಲ್ಲಿ ಕೂಡ ಜಮೀನು ಪಡೆದು ಸರ್ಕಾರ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದರು.
ನಂತರ ಇಂಡಿ ಎಸಿ ಅನುರಾಧ ವಸ್ತ್ರದ ಅವರ ಜೊತೆಗೆ ಮಾತನಾಡಿ ಆಲಮೇಲ ತಾಲೂಕಿನ ಕುಮಸಿಗಿ ಗ್ರಾಮದ ಹಲವು ಕುಟುಂಬಗಳು ಪ್ರವಾಹ ಬಂದಾಗ ತೊಂದರೆ ಅನುಭವಿಸುತ್ತಿದ್ದು ಅವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಸ್ಪಂದಿಸಿದ ಎಸಿ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ ಎಂದು ಜನರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಗರೀಬ ಸಾಬ ನದಾಫ, ಪ್ರದೀಪ ದೊಡ್ಡಮನಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ರಾಜೇಂದ್ರ ತಳವಾರ, ಚೆನ್ನಯ್ಯ ಹಿರೇಮಠ, ಮುತ್ತು ಗಾಯಕವಾಡ, ಅನಿಲ ದೊಡಮನಿ, ಶ್ರೀಮಂತ ಮಾದರ, ಪರಶುರಾಮ ಮಾದರ, ಆನಂದ ಹೇರ, ಹನುಮಂತ ತಳವಾರ, ಸಿದ್ರಾಮ ಆನಗೊಂಡ, ಹುಸೇನಿ ಆಡಾಡಿ ಇದ್ದರು.

