Author: editor.udayarashmi@gmail.com

ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೈನುದ್ದೀನ್ ಬೀಳಗಿ ಆರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪರಮಾಪ್ತರಿಗೆ ಅನುಕೂಲವಾಗಲು ಪಾಲಿಕೆಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಜಮೀನು ಸರಿಸುಮಾರು ೨೬ ಗುಂಟೆ (ಸರ್ವೆ ನಂ. ೩೮೧//೧೦೬ ಗಂಗನಹಳ್ಳಿ ಲೇಔಟ್‌ನಲ್ಲಿರುವ ಬಯಲು ಜಾಗೆಯನ್ನು ನಿರ್ವಹಣೆಗೆ ಸಂಬಂಧಿಸಿದಂತೆ ಶ್ರೀ ಅಮೋಘಸಿದ್ದೇಶ್ವರ ವಿವಿಧೋದ್ದೇಶ ಕ್ಷೇಮಾಭಿವೃದ್ಧಿ ಸಂಸ್ಥೆಗೆ ನೀಡಲು ಠರಾವು ಪಾಸು ಮಾಡಿರುವುದು ಖಂಡನೀಯ, ಇದು ಶಾಸಕರ ಲ್ಯಾಂಡ್ ಮಾಫಿಯಾಕ್ಕೆ ಒಂದು ಉದಾಹರಣೆ ಎಂದು ಪಾಲಿಕೆ ಮಾಜಿ ಸದಸ್ಯ ಮೈನುದ್ದೀನ್ ಬೀಳಗಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಶಾಸಕರಿಗೆ ಪರಮಾಪ್ತರಿಗೆ ಅನುಕೂಲವಾಗಲು ಕೋಟ್ಯಂತರ ರೂ. ಮೌಲ್ಯದ ಬಯಲು ಜಾಗೆಯನ್ನು ನಿರ್ವಹಣೆಗೆ ನೀಡುತ್ತಿರುವುದು ಕಾನೂನು ಬಾಹಿರ, ಉದ್ಯಾನವನ, ಬಯಲು ಜಾಗೆ, ಕ್ರೀಡಾಂಗಣವನ್ನು ಯಾವ ಕಾರಣಕ್ಕೂ ಯಾರಿಗೂ ಪರಭಾರೆ ಮಾಡಬಾರದು ಎಂಬ ನಿಯಮವಿದೆ, ಈ ಬಗ್ಗೆ ಮೇಯರ್ ಹಾಗೂ ಆಯುಕ್ತರಿಗೂ ಸಹ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರೂ ಸಹ ಅವರು ನಮಗೆ…

Read More

ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಲು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಿಯಮಾವಳಿಗಳನ್ನು ಗಾಳಿಗೆ ತೂರಿ ಅಲ್ಪ ಸಂಖ್ಯಾತರನ್ನು ಓಲೈಸಲು ಕೋಗಿಲು ಸಂತ್ರಸ್ತರಿಗೆ ಅಕ್ರಮವಾಗಿ ಮನೆ ಹಂಚಿಕೆ ಮಾಡುತ್ತಿರುವುದು ಖಂಡನೀಯ ಹಾಗೂ ಈ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.ಕಾಂಗ್ರೆಸ್ ಹೈ ಕಮಾಂಡ್ ಒತ್ತಡಕ್ಕೆ ಮಣಿದು ಬೆಂಗಳೂರಿನ ಯಲಹಂಕದ ಕೋಗಿಲುವಿನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಕುಟುಂಬಗಳನ್ನು ತೆರವು ಮಾಡಿದ ನಂತರ ಅವರಿಗೆ ರಾಜ್ಯ ಸರ್ಕಾರದ ವಸತಿ ಇಲಾಖೆಯ ಮೂಲಕ ಮನೆಗಳನ್ನು ಜನವರಿ 1, 2026 ರಂದು ಹಸ್ತಾಂತರ ಮಾಡಲಾಗುವುದು ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿದವರು ರಾಜ್ಯದ ವಸತಿ ಯೋಜನೆಗೆ ಅರ್ಹರೋ? ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಬಂದು ಕಷ್ಟಪಟ್ಟು ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ವಸತಿ ಯೋಜನೆಗೆ ಅರ್ಹರೋ?ಸರ್ಕಾರಕ್ಕೆ, ನಿಜಕ್ಕೂ ಕಾಳಜಿಯಿದ್ದಲ್ಲಿ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಗುಳೆ ಬಂದು ಕೂಲಿ…

Read More

ಪ್ರಕರಣ ಎನ್‌ಐಎ ತನಿಖೆಗೆ ವಹಿಸಲು ವಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ ಬೆಂಗಳೂರು: ಕೋಗಿಲು ಕ್ರಾಸ್‌ನ ಫಕೀರ್‌ ಬಡಾವಣೆ ಕ್ರಮೇಣ ಸ್ಲೀಪರ್‌ ಸೆಲ್‌ಗಳ ಕೇಂದ್ರವಾಗುವ ಅಪಾಯವಿದೆ. ಆದ್ದರಿಂದ ಅಕ್ರಮ ನಿವಾಸಿಗಳ ಪೌರತ್ವವನ್ನು ಸರ್ಕಾರ ಪರಿಶೀಲಿಸಬೇಕು. ಹೀಗಾಗಿ ಇದನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿ ತೆರವು ಮಾಡಿದ ವಿವಾದಿತ ಸ್ಥಳಕ್ಕೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಅವರು ಇಂದು ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದರು. ಸ್ಥಳದಲ್ಲೇ ಇದ್ದ ನಿವಾಸಿಗಳ ಜೊತೆ ಮಾತನಾಡಿದ ಅವರು, ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ಕೇಳಿ ಪರಿಶೀಲಿಸಿದರು.ಭೇಟಿ ವೇಳೆ ಸ್ಥಳೀಯ ಮಹಿಳೆಯೊಂದಿಗೆ ಮಾತುಕತೆ ನಡೆಸಿದ ಅವರು, ಇಲ್ಲಿ ಎಷ್ಟು ವರ್ಷಗಳಿಂದ ವಾಸಿಸುತ್ತಿದ್ದೀರಿ, ಕರೆತಂದವರು ಯಾರು, ನಿವೇಶನ ಮಂಜೂರು ಮಾಡಲಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ಕಳೆದ 25 ವರ್ಷಗಳಿಂದ ಇಲ್ಲಿ ವಾಸವಿದ್ದೇವೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ, ಗೂಗಲ್‌ ನಕ್ಷೆಯಲ್ಲಿ 1 ವರ್ಷದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಯಾಳವಾರದ ಚಿತ್ರಕಲಾ ಶಿಕ್ಷಕ, ಸಾಹಿತಿ ಗುಂಡಪ್ಪ ರಾ ಕುಂಬಾರ ಇವರಿಗೆ ರಂಗಮಿತ್ರ ನಾಟ್ಯ ಸಂಘ ( ರೀ ) ಕಲಬುರಗಿ, ಹಾಗೂ ಕರ್ನಾಟಕ ನಾಟಕ ಬರಹಗಾರರ (ಕವಿಗಳ) ಸಂಘ ಬೆಂಗಳೂರು ಅವರು “ಕನ್ನಡ ಕವಿರತ್ನ” ರಾಜ್ಯ ಪ್ರಶಸ್ತಿಗೆ ಆಯ್ಕೆಮಾಡಿ ಗೌರವಿಸಿದೆ.ಗುಂಡಪ್ಪ ಇವರು ರಂಗಭೂಮಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ರಂಗಮಿತ್ರ ನಾಟ್ಯ ಸಂಘ ( ರೀ ) ಕಲಬುರಗಿ, ಹಾಗೂ ಕರ್ನಾಟಕ ನಾಟಕ ಬರಹಗಾರರ (ಕವಿಗಳ) ಸಂಘ ಬೆಂಗಳೂರು ಅವರು ದಿನಾಂಕ 4 -1-2025 ರಂದು ಡಾ ಎಸ್ ಎಂ ಪಂಡಿತ್ ರಂಗಮಂದಿರ ಕಲಬುರ್ಗಿಯಲ್ಲಿ ನಡೆಯುವ ಕವಿಸಂಗಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ರಾಜ್ಯಾಧ್ಯಕ್ಷ ಶಂಕರ್ಜಿ ಹೂವಿನ ಹಿಪ್ಪರಗಿ ಅವರು ತಿಳಿಸಿದ್ದಾರೆ.ಅವರ ಕಲೆ, ಸಾಹಿತ್ಯ ಕೃಷಿ, ನಾಟಕ ಅಭಿನಯ ಸೇರಿದಂತೆ, ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿವೆ, ಇವರ ಸರಳ ಸ್ವಭಾವ ಹಾಗೂ ಉತ್ತಮ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದೆ,.

Read More

ಲೇಖನ- ಶಿಲ್ಪಾ ಮೃತ್ಯುಂಜಯ ಮಿಣಜಿಗಿಶಿಕ್ಷಕರುಕೆ.ಇ.ಬೋರ್ಡ್ ಸೆಂಟ್ರಲ್ ಸ್ಕೂಲ್ಧಾರವಾಡ ಉದಯರಶ್ಮಿ ದಿನಪತ್ರಿಕೆ ಏಕೆಂದರೆ ಪತ್ರಿಕಾ ರಂಗದಲ್ಲಿ ಪ್ರಸಿದ್ದಿ ಹೊಂದುವುದೆಂದರೆ ಮುದ್ರಣವಾಗುವ ಪ್ರತಿಯೊಂದು ಅಕ್ಷರಗಳು ಓದುಗರ ಮನಸ್ಸೆಂಬ ಸ್ಪರ್ಧೆಯಲ್ಲಿ ವಿಜಯಶಾಲಿಯಾದಾಗ ಮಾತ್ರ ಅಭಿವೃದ್ಧಿಯ ಹಂತವನ್ನು ತಲುಪಲು ಸಾಧ್ಯ. “ಛಲವಿಲ್ಲದವರನೊಲ್ಲ ನಮ್ಮ ಕೂಡಲಸಂಗಮದೇವ” ಎಂಬ ಶರಣರ ವಾಣಿಯಂತೆ ಇಂದುಶೇಖರ ಅವರು ತಮ್ಮ ಸಂಪಾದಕತ್ವದ “ಉದಯರಶ್ಮಿ” ಕನ್ನಡ ದಿನಪತ್ರಿಕೆಯಲ್ಲಿ ಯುವ ಸಾಹಿತಿಗಳು, ಮತ್ತು ಬರಹಗಾರರಿಗೆ, ಪ್ರೋತ್ಸಾಹ ನೀಡುತ್ತ ಅವರ ಲೇಖನಕ್ಕೆ ತಮ್ಮ ಪತ್ರಿಕೆ ಮೂಲಕ ಒಂದು ವೇದಿಕೆಯನ್ನು ಸಿದ್ಧಪಡಿಸುತ್ತಾರೆ. ಯಾವುದೇ ಫಲಾಪೇಕ್ಷೆ ಬಯಸದೆ ಎಲೆಮರೆಯ ಕಾಯಿಯಂತಿರುವ ನನ್ನಂತಹ ಅನೇಕ ಯುವ ಬರಹಗಾರರಿಗೆ ಅವಕಾಶ ಕಲ್ಪಿಸಿಕೊಡುವ ಮೂಲಕ ನಮ್ಮ ಸಾಹಿತ್ಯ ಕೃಷಿಗೆ ನೀರೆರೆದು ಪೋಷಿಸುತ್ತಾರೆ. ಇವರ ಪತ್ರಿಕೆಯನ್ನು ಗಮನಿಸಿದಾಗ ನನಗೆ ಅನುಭವವಾದ ಮಾತು ಇದು. ಗದುಗಿನ ಲಿಂ. ಡಾ.ಸಿದ್ದಲಿಂಗ ಮಹಾಸ್ವಾಮಿಗಳ ಅಪ್ಪಟ ಪ್ರೀತಿಯ ಖಾಸ ಭಕ್ತರೆಂದು ಇಂದುಶೇಖರ ಅವರು ಬಹಳ ಪ್ರೀತಿಯಿಂದ, ಹೆಮ್ಮೆಯಿಂದ ನುಡಿಯುತ್ತಾರೆ. ಅನೇಕ ಬಾರಿ ಶ್ರೀಗಳ ದರ್ಶನಕ್ಕೆ ಗದುಗಿಗೆ ತೆರಳಿ ಅವರ ಶಿಷ್ಯಪ್ರೀತಿಯ ಆತಿಥ್ಯ ಸವಿದಿದ್ದಾರೆ.ಗದುಗಿನ…

Read More

ಲೇಖನ- ಬಿ.ವಿ.ಹಿರೇಮಠಶಿಕ್ಷಕರು, ಸಿಂದಗಿವಿಜಯಪುರ ಜಿಲ್ಲೆಮೊ: 9972658355 ಉದಯರಶ್ಮಿ ದಿನಪತ್ರಿಕೆ ​ಕಾಲಚಕ್ರ ಉರುಳಿದಂತೆ ಹಳೆಯ ವರ್ಷದ ನೆನಪುಗಳನ್ನು ಬೆನ್ನಿಗಿಟ್ಟು, ಹೊಸ ನಿರೀಕ್ಷೆಗಳೊಂದಿಗೆ ನಾವು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತೇವೆ. ಪ್ರತಿ ಹೊಸ ವರ್ಷವು ನಮಗೆ ಹೊಸ ಶಕ್ತಿ, ಹೊಸ ಚೈತನ್ಯ ಮತ್ತು ಮುಖ್ಯವಾಗಿ ಹೊಸ ಭರವಸೆಗಳನ್ನು ಹೊತ್ತು ತರುತ್ತದೆ. ಕಳೆದ ಸಾಲಿನಲ್ಲಿ ಅನುಭವಿಸಿದ ಸೋಲು, ಕಹಿ ಘಟನೆಗಳು ಮತ್ತು ನಿರಾಸೆಗಳನ್ನು ಮರೆತು, ಧನಾತ್ಮಕ ಚಿಂತನೆಯೊಂದಿಗೆ ಮುನ್ನಡೆಯುವುದೇ ಈ ಸಂಕ್ರಮಣ ಕಾಲದ ವಿಶೇಷತೆ.ಹಳೆಯದನ್ನು ಕಳೆದು ಹೊಸದನ್ನು ಅಪ್ಪಿಕೊಳ್ಳಿ​ಹೊಸ ವರ್ಷದ ಆರಂಭವೆಂದರೆ ನಮ್ಮನ್ನು ನಾವು ವಿಮರ್ಶಿಸಿಕೊಳ್ಳುವ ಸಮಯ. ಕಳೆದ ವರ್ಷದಲ್ಲಿ ನಾವು ಮಾಡಿದ ತಪ್ಪುಗಳು ನಮಗೆ ಪಾಠವಾಗಲಿ. ಆ ತಪ್ಪುಗಳನ್ನು ತಿದ್ದಿಕೊಂಡು, ಹೊಸ ಉತ್ಸಾಹದಿಂದ ಕೆಲಸ ಮಾಡಲು ಈ ಸಮಯ ಪ್ರಶಸ್ತವಾಗಿದೆ. “ಹೋದುದಕ್ಕೆ ಹಲುಬಬೇಡ” ಎಂಬ ಮಾತಿನಂತೆ, ಗತಕಾಲದ ನೋವುಗಳನ್ನು ಮರೆತು ಭವಿಷ್ಯದ ಕನಸುಗಳಿಗೆ ನೀರೆರೆಯಬೇಕು. ಗುರಿಗಳ ನಿರ್ಧಾರ ಮತ್ತು ಸಂಕಲ್ಪ (Resolutions)​ಹೊಸ ವರ್ಷಕ್ಕೆ ಭರವಸೆ ಮೂಡಲು ಒಂದು ಸ್ಪಷ್ಟವಾದ ಗುರಿ ಇರಬೇಕು.​ಆರೋಗ್ಯ: ದೈಹಿಕ ಮತ್ತು ಮಾನಸಿಕ…

Read More

ಲೇಖನ- ಜಯಶ್ರೀ.ಜೆ.ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಕಿಟಕಿಯಿಂದ ತೂರಿದ ಹೊಸ ಮುಂಜಾವಿನ ಕಿರಣಗಳು ನಮ್ಮನ್ನು ಹೊಸ ದಿನಕ್ಕೆ ಸ್ವಾಗತಿಸುತ್ತವೆ. ಆದರೆ ನಮಗೆಲ್ಲಿಯ ನವೋತ್ಸಾಹ? ಅಯ್ಯೋ! ಆಗಲೇ ಸೂರ್ಯ ಮತ್ತೆ ಬಂದನೇ? ಇವನು ತಾನು ನಿದ್ದೆ ಮಾಡುವುದಿಲ್ಲ. ನಮಗೂ ನಿದ್ದೆ ಮಾಡಲು ಬಿಡುವುದಿಲ್ಲ ಎಂದು ಲೊಚಗುಡುವುದರಿಂದಲೇ ದಿನಾರಂಭ. ನಾಳೆ ಬೇಗ ಏಳಬೇಕೆಂದು ಇಟ್ಟ ಅಲಾರಾಂ ಸದ್ದು ಮಾಡಿದಾಗ ಅದರ ತಲೆಗೊಂದು ಹೊಡೆದು ಮತ್ತೆ ಮುಸುಕೆಳೆದು ಮಲಗುವುದು ಸಾಮಾನ್ಯ. ಮನೆಯಲ್ಲಿನ ಹಿರಿಯರು ಹೊದ್ದ ರಗ್ಗು ಜಗ್ಗಿದಾಗ ವಟವಟ ಅನ್ನುತ್ತ ಒಲ್ಲದ ಮನಸ್ಸಿನಿಂದ ಹಾಸಿಗೆಯಿಂದ ಹೊರಬೀಳುವುದು ರೂಢಿ. ಹೀಗಿರುವಾಗ ಗೆಲುವು ಸಿಗುವುದಾದರೂ ಹೇಗೆ ಹೇಳಿ? ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರ ಬಾಯಲ್ಲಿ ಅಯ್ಯೋ ಬೇಜಾರು ಎನ್ನುವ ಪದಗಳನ್ನು ಕೇಳುತ್ತಲೇ ಇರುತ್ತೇವೆ. ಉದ್ಯೋಗ ಕ್ಷೇತ್ರ ಯಾವುದೇ ಇರಲಿ ವಯಸ್ಸು ಎಷ್ಟೇ ಇರಲಿ ಗಂಡಿರಲಿ ಹೆಣ್ಣಿರಲಿ ಅದು ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಅಂದರೆ ಬೇಜಾರು ಅನ್ನುವುದು ತುಂಬಾ ಸಹಜ. ಎಲ್ಲರದರಲ್ಲೂ ಬೇಜಾರು!ಬೆಳಿಗ್ಗೆ ಬೇಗ ಎದ್ದು ಮಾಡಲು ಸಾಕಷ್ಟು…

Read More

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೂ 7.5 ವರ್ಷ ಅಧಿಕಾರದಲ್ಲಿರುತ್ತದೆ | ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿಶ್ವಾಸ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ 2026 ರಲ್ಲಿ ಮಾತನಾಡುವುದಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೂ 7.5 ವರ್ಷ ಅಧಿಕಾರದಲ್ಲಿರುತ್ತದೆ ಎಂದು ಪ್ರತಿಪಾದಿಸಿದ ಡಿಸಿಎಂ, ತಮ್ಮ ಹೊಸ ವರ್ಷದ ಸಂಕಲ್ಪದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ನಿಮ್ಮೆಲ್ಲರನ್ನೂ ಸಂತೋಷವಾಗಿಡುವುದೇ ನಮ್ಮ ಸಂಕಲ್ಪ. ರಾಜ್ಯದ ಜನರನ್ನು ಸಂತೋಷವಾಗಿಡುವುದು. ಹೊಸ ಚಿಂತನೆಯೊಂದಿಗೆ ರಾಜ್ಯಕ್ಕೆ ಸಮೃದ್ಧ ಆಡಳಿತ ನೀಡುವುದು. ಈ ವರ್ಷ ಉತ್ತಮ ಮಳೆ ಮತ್ತು ಫಸಲು ಬರಲಿ ಎಂದು ಬಯಸುತ್ತೇವೆ” ಎಂದರು.”ಎಲ್ಲಾ ನದಿಗಳು ಮತ್ತು ಕೆರೆಗಳಿಗೆ ಹೇರಳವಾದ ನೀರು ಸಿಗಲಿ. ರೈತರು ಹೊಸ ವರ್ಷದಲ್ಲಿ ಸಂತೋಷವಾಗಿರಲಿ ಎಂದು ನಾವು ಬಯಸುತ್ತೇವೆ” ಎಂದು ಡಿಕೆಶಿ ಹೇಳಿದರು.2026 ರಲ್ಲಿ ರಾಜ್ಯದ ಆಡಳಿತ ನಿಮ್ಮ ನೇತೃತ್ವದಲ್ಲಿ ನಡೆಯುತ್ತದೆಯೇ ಎಂದು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಕೆಲವರು ಬಡತನಕ್ಕಾಗಿ ಮನೆಯಲ್ಲಿ ದೊಡ್ಡವರ ಜೊತೆ ಚಿಕ್ಕವರ ಮದುವೆ ಮಾಡುತ್ತಿದ್ದರು. ಮತ್ತು ಮನೆಯಲ್ಲಿರುವ ಸಂಬಂಧಿಗಳ ಜೊತೆ ಚಿಕ್ಕವಯಸ್ಸಿನಲ್ಲಿಯೇ ಮದುವೆ ಮಾಡುವದು ಬೇಡ, ಬಾಲ್ಯ ವಿವಾಹ ಸಮಾಜಕ್ಕೆ ಒಂದು ಪಿಡುಗು ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ನಗರದ ಶ್ರೀ ಶಾಂತೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ಸರಕಾರದ ಕೇಂದ್ರ ಸಂವಹನ ಇಲಾಖೆ ವಿಜಯಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶ್ರೀ ಶಾಂತೇಶ್ವರ ಪದವಿ ಪುರ್ವ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಬಾಲ ವಿವಾಹ ಮುಕ್ತ ಭಾರತ ಅಭಿಯಾನ ಮತ್ತು ವಂದೇ ಮಾತರಂ ೧೫೦ ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಾಲ್ಯ ವಿವಾಹ ತಡೆಗೆ ಗ್ರಾಮೀಣ ಮಟ್ಟದಲ್ಲಿ ೧೨ ಜನ ಮತ್ತು ನಗರ ಮಟ್ಟದಲ್ಲಿ ೯ ಜನ ಅಧಿಕಾರಿ ಇದ್ದಾರೆ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.ವಂದೇ ಮಾತರಂ ಸಂದೇಶ ಸಾರಾಂಶ ಈಗಿನ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇದೆ, ಹಾಡು ಬಂಕಿಮ ಚಂದ್ರ ಬರೆದಿದ್ದು ತ್ಯಾಗ ಬಲಿದಾನದ ಸಂಕೇತ ಎಂದರು.ಮಹಿಳಾ…

Read More

ಇಟಗಿಯಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದಯರಶ್ಮಿ ದಿನಪತ್ರಿಕೆ ನಿಡಗುಂದಿ: ಸಮಾಜವನ್ನು ನಿರ್ಮಾಣ ಮಾಡುವುದು ಮತ್ತು ಸಮಾದಲ್ಲಿ ಬದುಕಬೇಕು ಅಂದ್ರೆ ಶಿಕ್ಷಣ ಜೋತೆ ಸಂಸ್ಕಾರ ಅತ್ಯಮೂಲ್ಯ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ್ ಹೇಳಿದರು.ನಿಡಗುಂದಿ ತಾಲೂಕಿನ ಇಟಗಿ ಗುರು ನಾಗಲಿಂಗ ಗಿಡ್ಡಯ್ಯ ಅಜ್ಜಾ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಮಕ್ಕಳ ಪುರಸ್ಕಾರ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ನಿವೃತ್ತ ಸಿಬ್ಬಂದಿಯ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.೨೦೨೫ ನೇ ಎಸ್ ಎಸ್ ಎಲ್ ಸಿ ಪರಿಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಇಟಗಿ ಪ್ರೌಡ ಶಾಲೆ ಮೂರು ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಪರವಾಗಿ ಹಾಗೂ ಶಾಸಕರಿಂದ ಸನ್ಮಾನಿಸಲಾಯಿತು. ಗುರು ನಾಗಲಿಂಗ ಗಿಡ್ಡಯ್ಯ ಅಜ್ಜಾ ಶಾಲೆಯಲ್ಲಿ ಸುಮಾರು ೬೦ ವರ್ಷ ಸೇವೆ ಸಲ್ಲಿಸಿದ ನಿವೃತ್ತಿ ಹೊಂದಿದ ,ರಾಮಪ್ಪ ಹೂ ಹುಗ್ಗಿ , ಅಟೆಂಡರ್ ಮತ್ತು ಮರಿಯಪ್ಪ ಯ ಚಲವಾದಿ,…

Read More