ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ರಾಮನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮನಹಳ್ಳಿ ಗ್ರಾಮದ ಧರ್ಮರಾಯಗೌಡ ಪಾಟೀಲ, ಉಪಾಧ್ಯಕ್ಷರಾಗಿ ವಿಭೂತಿಹಳ್ಳಿ ಗ್ರಾಮದ ಅಂಬರೀಷ ಸಾಲಕ್ಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಭೀಮರಾಯ ನಂದರಗಿ, ಸೋಮನಾಥ ಮೇಲಿನಮನಿ, ಬಸವರಾಜ ತೆಲ್ಲೂರ, ಅಮರೇಶ ಅಷ್ಟಗಿ, ಮಾಂತು ಮಾಡ್ಯಾಳ, ವಿಠ್ಠಲ ಸಿಂಧನಕೇರಿ, ಪ್ರಭು ವಾಲಿಕಾರ, ರಮೇಶ ಹಳೆಮನೆ, ಲಕ್ಷ್ಮಣ ಬತಗುಣಕಿ, ನವಾಬ ಸುಂಬಡ, ಗೊಲ್ಲಾಳಪ್ಪ ಗೌಡ ಪಾಟೀಲ, ಬಂದೇನವಾಜ್ ಖಾನ ಗೌಡ, ಶಂಕರಗೌಡ ಭೈರುಣಗಿ ಹಾಗೂ ರಾಮನಹಳ್ಳಿ ,ಗುಡ್ಡಳ್ಳಿ, ವಿಭೂತಿಹಳ್ಳಿ ,ನಾಗರಹಳ್ಳಿ ಗ್ರಾಮಗಳ ಮುಖಂಡರು ಇದ್ದರು.

