ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ಸಂಸದ ಖೇಲ್ ಅಬಿಯಾನದ ಅಂಗವಾಗಿ ಏರ್ಪಡಿಸಿದ್ದ ಹಗ್ಗ ಜಗ್ಗಾಟ ಮತ್ತು ರಂಗೋಲಿ ಬಿಡಿಸುವ ಪಂದ್ಯಾವಳಿಯ ಅಂತಿಮ ಪಂದ್ಯಗಳು ಶುಕ್ರವಾರ ಕೊಲ್ಹಾರ ಪಟ್ಟಣದಲ್ಲಿ ನಡೆಯುತ್ತವೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದಲ್ಲಿ ಸಾಯಂಕಾಲ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದ ಒಂಬತ್ತು ಜಿಲ್ಹಾ ಪಂಚಾಯತ ಮತ್ತು ಪಟ್ಟಣ ಪಂಚಾಯತ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಪಂದ್ಯಾವಳಿಗಳು ಜರುಗಿದ್ದು ಮಹಿಳೆಯರಿಗಾಗಿ ನಡೆದ ರಂಗೋಲಿ ಸ್ಪರ್ಧೇಯಲ್ಲಿ ಅಂತಿಮ ಹಂತಕ್ಕೆ 27 ಜನರು ಆಯ್ಕೆಯಾಗಿದ್ದು ಹಗ್ಗ ಜಗ್ಗಾಟದಲ್ಲಿ 18 ತಂಡಗಳು ಆಯ್ಕೆಯಾಗಿವೆ ಎಂದು ತಿಳಿಸಿದ ಅವರು ಅಂತಿಮ ಪಂದ್ಯಗಳಲ್ಲಿ ವಿಜೇತರಾದವರಿಗೆ ಸೂಕ್ತ ಬಹುಮಾನ ಕೊಡಲಾಗುವದು ಎಂದರು.
ಪ್ರತಿ ವರುಷದಂತೆ ಈ ವರುಷವೂ ಕೂಡಾ ಬನ್ನಿ ವಿನಿಮಯ ಕಾರ್ಯಕ್ರಮ ಪಟ್ಟಣದ ಸ್ವಗ್ರಹದಲ್ಲಿ ನಡೆಸಲಾಗುವದು ಅವಳಿ ಜಿಲ್ಹೆಯಿಂದ ಆಗಮಿಸುವ ಅಭಿಮಾನಿಗಳು ಹಾಗೂ ಕ್ಷೇತ್ರದ ಸಾರ್ವಜನಿಕ ಬಂದುಗಳೊಂದಿಗೆ ಪರಸ್ಪರ ಬನ್ನಿ ವಿನಿಮಯದ ಸ್ನೇಹ ಮೀಲನ ಹಮ್ಮಿಕೊಳ್ಳಲಾಗಿದೆ ಎಂದರು.

