ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ ಪ್ರಬಂಧ ಸ್ಪರ್ಧೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾತ್ಮ ಗಾಂಧೀಜಿಯವರ ೧೫೬ನೇ ಜಯಂತಿ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮಾಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪಶೃತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ-ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಒಟ್ಟು ೫೭೯ ಶಾಲೆಗಳಿಂದ ೮೧೯೮ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರೌಢಶಾಲಾ ವಿಭಾಗದಲ್ಲಿ ವಿಜಯಪುರ ನಗರದ ಜಲನಗರ ಸರ್ಕಾರಿ ಪ್ರೌಢಶಾಲೆ ೧೦ನೇ ತರಗತಿ ವಿದ್ಯಾರ್ಥಿನಿ ಅನ್ನಪೂರ್ಣ ಬ.ಪೂಜಾರಿ ಪ್ರಥಮ, ಇಂಡಿ ತಾಲೂಕಿನ ನಾದ ಕೆ.ಡಿ.ಯ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸೃಷ್ಟಿ ಹಳೇಮನಿ ದ್ವೀತಿಯ ಸ್ಥಾನ ಹಾಗೂ ಸಿಂದಗಿ ತಾಲೂಕಿನ ಕೆರೂಟರಗಿ ಆರ್.ಎಂ.ಎಸ್.ಎ. ಪ್ರೌಢಶಾಲೆ ವಿದ್ಯಾರ್ಥಿನಿ ಶ್ರೇಯಾ ಮ.ಪಾಟೀಲ ತೃತೀಯ ಸ್ಥಾನ ಪಡೆದಿದ್ದಾರೆ.
ಪದವಿಪೂರ್ವ ವಿಭಾಗದಲ್ಲಿ ಕೊಲ್ಹಾರ ತಾಲೂಕಿನ ಕೂಡಗಿ ಸರಕಾರಿ ಪದವಿಪೂರ್ವ ಕಾಲೇಜ್‌ನ ಗೌರಿ ಮ.ತೆಲಗಿ ಪ್ರಥಮ, ವಿಜಯಪುರ ನಗರದ ಬಾಲಕಿಯರ ಸರಕಾರಿ ಪೂರ್ವ ಕಾಲೇಜ್‌ನ ಲಕ್ಷ್ಮಿ ಎಂ.ಮಾಳೆ ದ್ವೀತಿಯ ಹಾಗೂ ವಿಜಯಪುರ ಸಿಕ್ಯಾಬ ಮಹಿಳಾ ಪದವಿಪೂರ್ವ ಕಾಲೇಜ್‌ನ ಚೇತನಾ ಬಿ.ಬಗಲಿ ಮತ್ತು ಬಬಲೇಶ್ವರ ತಾಲೂಕಿನ ಅರ್ಜುಣಗಿ ಸರಕಾರಿ ಪದವಿಪೂರ್ವ ಕಾಲೇಜ್‌ನ ಮೇಘಾ ಕೊಟ್ಯಾಳ ತೃತೀಯ ಸ್ಥಾನ ಪಡೆದಿದ್ದಾರೆ.
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ವಿಜಯಪುರ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ವಿದ್ಯಾರ್ಥಿನಿ ಐಶ್ವರ್ಯ ರಜಪೂತ ಪ್ರಥಮ, ಝಳಕಿ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ಸೌಮ್ಯ ಎಸ್.ಬಿರಾದಾರ ದ್ವೀತಿಯ ಹಾಗೂ ದೇವರಹಿಪ್ಪರಗಿ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ರಾಧಿಕಾ ಧರ್ಮಸೆಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

