Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ‌ ಬಹಾದ್ದೂರ್ ಶಾಸ್ತ್ರೀ ಅವರ ಜಯಂತಿಯಂಗವಾಗಿ ಗುರುವಾರ ಬಸವನಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೊಲೀಸ್ ಠಾಣೆ ಆವರಣದಲ್ಲಿರುವ ಮಹಾತ್ಮ ಗಾಂಧೀಜಿಯವರ ಮೂರ್ತಿಗೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ ಅವರು ಮಾಲಾರ್ಪಣೆ ಮಾಡಿ, ಪೂಜೆ ನೆರವೇರಿಸಿದರು.ಈ‌ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ನಗರ ಘಟಕ ಅಧ್ಯಕ್ಷ ಸುರೇಶಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಮುಖಂಡರಾದ ಎಂ.ಜಿ.ಆದಿಗೊಂಡ, ಸಂಕನಗೌಡ ಪಾಟೀಲ, ಮುತ್ತು ಗುಂಡಳ್ಳಿ, ಸಂಗಮೇಶ ಓಲೇಕಾರ, ಅಜೀಜ್ ಬಾಗವಾನ, ಪರಶುರಾಮ ಜಮಖಂಡಿ ಇತರರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ ಅಹಿಂಸಾ ತತ್ವದಿಂದ ಇಂದಿನ ಯುವಜನಾಂಗ ವಿಮುಖವಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್. ಎಸ್ ಕೋಶ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧಿಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತಿçಯವರ ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಅಡಿಪಾಯ ಹಾಕಿದ ಗಾಂಧೀಜಿ ಅವರು ಆ ಮೂಲಕ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ರೂಪಿಸಿದರು. ಇವತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಗಾಂಧೀಜಿ ಅವರು ಹಾಕಿಕೊಟ್ಟ ಗ್ರಾಮ ಸ್ವರಾಜ್ಯ ಕಲ್ಪನೆಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿವೆ ಎಂದು ಹೇಳಿದರು.ಅದೇ ರೀತಿಯಾಗಿ ಲಾಲ್ ಬಹಾದ್ದೂರ ಶಾಸ್ತ್ರೀಜಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಒಬ್ಬ ಧೀಮಂತ ವ್ಯಕ್ತಿ. ಅವರು ತಮ್ಮ ಬಾಲ್ಯದಲ್ಲಿ ಅನೇಕ ಕಷ್ಟಗಳು ಇದ್ದರೂ ಶಿಕ್ಷಣ ಪಡೆದುಕೊಂಡು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದವರು.…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣ ಪಂಚಾಯತ ಸದಸ್ಯರು ಊರಿನ ಅಭಿವೃದ್ದಿಯ ಕಡೆ ಗಮನಹರಿಸುವ ಹಾಗೆ ತಾವು ಪ್ರತಿನಿದಿಸುವ ವಾರ್ಡಗಳಲ್ಲಿ ಬರುವ ಗಟಾರ, ರಸ್ತೆಗಳು ಸ್ವಚ್ಛತೆಯಿಂದ ಇರುವ ಬಗ್ಗೆ ಮತ್ತು ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿದೆ ಎನ್ನುವದರ ಕುರಿತು ಗಮನ ಹರಿಸಿ ಸುಂದರ ಸ್ವಚ್ಛಂದ ಪ್ರದೇಶವಾಗಿ ರೂಪಿಸುವುದು ಜನಪ್ರತಿನಿಧಿಗಳಾದ ನಮ್ಮಗಳ ಕರ್ತವ್ಯವಾಗಿದೆ ಎಂದು ತಿಳಿದು ನಡೆಯಬೇಕೆಂದು ಸಚಿವ ಶಿವಾನಂದ ಪಾಟೀಲ ಸದಸ್ಯರಿಗೆ ಕಿವಿಮಾತು ಹೇಳಿದರು.ಪಟ್ಟಣದಲ್ಲಿ ವಿವಿಧ ಇಲಾಖೆ ಅಡಿಯಲ್ಲಿ ಮತ್ತು ಪಟ್ಟಣ ಪಂಚಾಯತ ವತಿಯಿಂದ ಮಂಜೂರಾದ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಪಟ್ಟಣದಲ್ಲಿ ಸರಕಾರಕ್ಕೆ ಸೇರಿದ ವಾಣೀಜ್ಯ ಮಳಿಗೆಗಳಿಂದ ಇನ್ನಿತರ ಮೂಲಗಳಿಂದ ತಮ್ಮ ಸ್ವಂತ ಆದಾಯವನ್ನು ಹೆಚ್ಚಿಸಿಕೊಂಡು ಪಟ್ಟಣ ಪಂಚಾಯತಗಳು, ನಗರಸಭೆಗಳು, ಅಭಿವೃದ್ದಿ ಪಥದತ್ತ ಸಾಗಬೇಕು ಆಸ್ತೀಗಳನ್ನು ಮಾರಾಟ ಮಾಡಿ ಪ್ರಗತಿ ಕಾಣುವ ದುಸ್ಥಿತಿಗೆ ಬರುವಂತಾಗಬಾರದು ಎಂದರು.ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ಕಳೆದ ಹತ್ತು ವರುಷಗಳ ಅವಧಿಯಲ್ಲಿ ಕೊಲ್ಹಾರ ಪಟ್ಟಣ ಸಕಲ ರೀತಿ ಮೂಲಭೂತ ಸೌಲಭ್ಯ ಪಡೆದು ಅಭಿವ್ರದ್ದಿಯಾಗುತ್ತಿರುವದನ್ನು ಗಮನಿಸಿದರೆ ರಾಜ್ಯದಲ್ಲಿಯೇ ಮಾದರಿ ಪಟ್ಟಣ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಬಿಹಾರ ರಾಜ್ಯದ ಪಾಟ್ನಾ ಹೈಕೋರ್ಟನ ಮುಖ್ಯನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ ಕನ್ನಡಿಗ ಪವನಕುಮಾರ ಭಜಂತ್ರಿ ಅವರು ಆಯುಧ ಪೂಜಾ ದಿನವಾದ ಬುಧವಾರ ದಿವಸ ಕೊಲ್ಹಾರ ಪಟ್ಟಣಕ್ಕೆ ಆಗಮಿಸಿದ್ದರು.ಅವರ ಮನೆ ಕುಲದೇವರಾದ ಪಟ್ಟಣದ ಆಂಜನೆಯ ಮಂದಿರಕ್ಕೆ ಆಗಮಿಸಿ ದೇವರಿಗೆ ಪೂಜೆಯನ್ನು ಸಲ್ಲಿಸಿ ಮಂಗಳಾರತಿಯನ್ನು ಮಾಡಿ ಭಕ್ತಿಪೂರ್ವಕವಾದ ನಮನವನ್ನು ಸಲ್ಲಿಸಿದರು.ಮುಖ್ಯ ನ್ಯಾಯಮೂರ್ತಿಗಳಾದ ಪವನಕುಮಾರ ಭಜಂತ್ರಿಯವರು ಪಟ್ಟಣಕ್ಕೆ ಆಗಮಿಸುತ್ತಾರೆ ಎನ್ನುವ ಸುದ್ದಿ ತಿಳಿದ ದೇವಸ್ಥಾನ ಆಡಳಿತ ಮಂಡಳಿಯವರು ನ್ಯಾಯಮೂರ್ತಿಯವರನ್ನು ತುಂಬುಹೃದಯದಿಂದ ಬರಮಾಡಿಕೊಂಡು ಉನ್ನತ ಹುದ್ದೆಯನ್ನು ಪಡೆದು ಪ್ರಥಮ ಬಾರಿಗೆ ದೇವಾಲಯಕ್ಕೆ ಆಗಮಿಸಿದ್ದಕ್ಕಾಗಿ ಗೌರವಪೂರ್ವಕವಾಗಿ ಸನ್ಮಾನಿಸಿದರು.ನಮ್ಮ ಮನೆ ಕುಲ ದೇವರಾದ ಕೊಲ್ಹಾರ ಹನುಮಾನ್ ದೇವರ ದರುಶನ ಪಡೆಯಲು ನಾನು ಮತ್ತು ನಮ್ಮ ಕುಟುಂಬದವರು ವರುಷದಲ್ಲಿ ಒಮ್ಮೆಯಾದರೂ ತಪ್ಪದೆ ಬಂದು ಪೂಜೆಯನ್ನು ಸಲ್ಲಿಸುವ ಪದ್ದತಿಯನ್ನು ನಮ್ಮ ಹಿರಿಯರು ಹಾಕಿಕೊಟ್ಟಿದ್ದು ಅದರಂತೆ ನಾವು ನಡೆದುಕೊಂಡು ಬರುತ್ತಿದ್ದೇವೆ ದೇವಸ್ಥಾನದ ಜೀರ್ಣೋದ್ದಾರಕ್ಕೆ ನಮ್ಮ ಕುಟುಂಬ ಸದಸ್ಯರು ಸೇವೆ ಸಲ್ಲಿಸಲು ಸಿದ್ದರಿದ್ದೇವೆ ಎಂದು ಆಡಳಿತ ಮಂಡಳಿಯವರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಪಟ್ಟಣದ ಆರಾಧ್ಯ…

Read More

೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಬೇಸರ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪ್ರತಿನಿತ್ಯ ಬಳಸುವ ಅಹಾರ ಪದಾರ್ಥಗಳಲ್ಲಿಯೇ ಸಾಕಷ್ಟು ಜೌಷಧೀಯ ಗುಣಗಳಿರುತ್ತವೆ. ಸುಲಭವಾಗಿ, ಕೈಗೆಟುವ ಬೆಲೆಯಲ್ಲಿ ಸಿಗುವ ಆರೋಗ್ಯಕರ ಪದಾರ್ಥಗಳನ್ನು ಬಿಟ್ಟು, ಕಲುಷಿತ ಪದಾರ್ಥಗಳನ್ನು ಸೇವಿಸಿ ಜನತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಇಲ್ಲಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅವರು ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ತಾಲೂಕು ಕಾನೂನು ಸೇವಾ ಸಮತಿ, ನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಆರೋಗ್ಯ ಇಲಾಖೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಇತರೆ ಎಲ್ಲ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪೌಷ್ಟಿಕಾಂಶ ದಿನಾಚರಣೆ, ರಾಷ್ಟ್ರೀಯ ಪೋಷಣಾ ಮಾಸಾಚರಣೆ ಮತ್ತು ಅಂತರಾಷ್ಟಿçÃಯ ಹೆಣ್ಣುಮಗುವಿನ ದಿನಾಚರಣೆ ಸಂಯುಕ್ತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅನಾರೋಗ್ಯಕ್ಕೆ ಕಾರಣವಾಗುತ್ತಿರುವುದು ಆಹಾರದ ಕೊರತೆಯಲ್ಲ, ಅಜಾಗರೂಕ ಆಹಾರ ಪದ್ಧತಿ ಎಂಬುದನ್ನ ಪ್ರತಿಯೊಬ್ಬರೂ ಅರಿಯಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸುಲಭವಾಗಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ರೈತರ ಪಾಲಿನ ಜೀವನದಿ ಕೃಷ್ಣೆಯ ಮಹತ್ವದ ಅಣೆಕಟ್ಟು ಆಗಿರುವ ಆಲಮಟ್ಟಿ ಜಲಾಶಯದ ನಿರ್ಮಾಣಕ್ಕೆ ೧೯೬೪ ರಲ್ಲಿಯೇ ಅಡಿಗಲ್ಲು ನೆರವೇರಿಸಿದ ಆಗಿನ ಕೇಂದ್ರ ಸಚಿವ ಲಾಲ್ ಬಹದ್ದೂರ ಶಾಸ್ತ್ರಿ ಕಂಡ ರೈತರ ಏಳಿಗೆಯ ಕನಸು ಇಂದು ನನಸಾಗಿದೆ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ.ಬಸವರಾಜು ಹೇಳಿದರು.ಆಲಮಟ್ಟಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಕಂಚಿನ ಪುತ್ಥಳಿಗೆ ಪುಷ್ಪಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು.ಅಣೆಕಟ್ಟುಗಳಿಂದಲೇ ರೈತರ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದ , ಅವರ ಸ್ಮರಣೆಗಾಗಿ ಆಲಮಟ್ಟಿ ಜಲಾಶಯಕ್ಕೆ ಶಾಸ್ತ್ರಿಯವರ ಹೆಸರನ್ನಿಡಲಾಗಿದೆ. ರೈತರ ಬಗ್ಗೆ ಕಾಳಜಿಯ ಕಾರಣ ಜೈ ಜವಾನ್ , ಜೈಕಿಸಾನ್ ಘೋಷಣೆ ಮಾಡಿದರು.ಸೂಪರಿಂಟೆಂಡಿಂಗ್ ಎಂಜಿನಿಯರ್ ಗೋವಿಂದ ರಾಠೋಡ, ಡಿಎಫ್ ಓ ಎನ್.ಕೆ.ಬಾಗಾಯತ್, ರವಿ ಚಂದ್ರಗಿರಿಯವರ, ಅಮರೇಗೌಡ, ಎಂ.ಆರ್. ಬಾಗವಾನ, ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ವೀರಣ್ಣ ಕೋನ, ಯಲಗೂರದಪ್ಪ ಪಟ್ಟಣಶೆಟ್ಟಿ, ಪರಮಾನಂದ ಸುನಗದ, ರಕ್ಷಿತಾ, ವೈ.ಎಂ. ಪಾತ್ರೋಟ ಮತ್ತಿತರರು ಇದ್ದರು.ಗಾಂಧಿ…

Read More

ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ನವರಾತ್ರಿ ಅಂಗವಾಗಿ ಕಳೆದ ೯ ದಿನಗಳಿಂದ ಆಚರಿಸಿದ ಬನ್ನಿ ಮಹಾಕಾಳಿ ವೃಕ್ಷ ಪೂಜಾ ವೃತವನ್ನು ಮಹಿಳೆಯರು ವಿಜಯದಶಮಿಯಂದು ಪೂಜೆ ಸಲ್ಲಿಸಿ ಸಂಪನ್ನಗೊಳಿಸಿದರು.ದಸರಾ ವಿಶೇಷಗಳಲ್ಲಿ ಮಹಿಳೆಯರ ಬನ್ನಿ ಮಹಾಕಾಳಿ (ಶಮಿ ವೃಕ್ಷ) ಪೂಜೆ ವಿಶಿಷ್ಟವಾದುದಾಗಿದೆ. ಮಹಾನವಮಿ ಅಮವಾಸ್ಯೆಯ ಮರುದಿನದಿಂದ ಆರಂಭವಾದ ಈ ವೃತದಲ್ಲಿ ಮುತೈದೆ ಮಹಿಳೆಯರು ಸೂರ್ಯೋದಯಕ್ಕೆ ಮುನ್ನ ಎದ್ದು, ಸ್ನಾನಾದಿ ಕರ್ಮಗಳನ್ನು ಮುಗಿಸಿ, ಮಡಿಯಿಂದ ಮಾತನಾಡದೇ ಬನ್ನಿ ಮಹಾಕಾಳಿ ವೃಕ್ಷಕ್ಕೆ ತೆರಳಿ ಪೂಜೆ ಸಲ್ಲಿಸಿ, ನಿಂಬೆ ಹಣ್ಣಿನ ಚಿಪ್ಪಿನಲ್ಲಿ ತುಪ್ಪದದೀಪ ಬೆಳಗಿ, ನೈವಿಧ್ಯ ಅರ್ಪಿಸಿ, ಮನೆಗೆ ಮರಳುತ್ತಾರೆ. ಪೂಜಾ ಸಮಯದಲ್ಲಿ ಸಾಕಷ್ಟು ಮಹಿಳೆಯರು ಕೂಡಿದ್ದರು ಸಹ ಯಾರೊಬ್ಬರು ಮಾತನಾಡದೇ, ಮನೆ ತಲುಪಿದ ನಂತರವೇ ಮಾತನಾಡುವುದು ವಿಶೇಷ. ಹೀಗೆ ಸತತ ೯ ದಿನಗಳ ಕಾಲ ಪೂಜೆ ಸಲ್ಲಿಸಿ ಕೊನೆಯ ದಿನವಾದ ಗುರುವಾರ ವಿಜಯದಶಮಿ ದಿನದಂದು ವೃಕ್ಷಕ್ಕೆ ಸೀರೆ ಉಡಿಸಿ ವಿಶೇಷಪೂಜೆ, ನೈವಿಧ್ಯ ಸಲ್ಲಿಸಿದರು. ನಂತರ ವೃತ ಕೈಗೊಂಡ ಎಲ್ಲ ಮಹಿಳೆಯರಿಗೆ ಉಡಿ ತುಂಬುವುದರ ಮೂಲಕ ವೃತ ಸಂಪನ್ನಗೊಳಿಸಿದರು.ಉಡಿ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಇದೇ ಮೊದಲ ಬಾರಿಗೆ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದ ಹಿರೇಮಠದಲ್ಲಿ ನಡೆಯಲಿರುವ ಪವಾಡ ಪುರುಷ ಶ್ರೀ ಸದ್ಗುರು ಗುರುಪಾದೇಶ್ವರ ಮಹಾಸ್ವಾಮಿಗಳ ಮಹಾರಥೋತ್ಸವಕ್ಕೆ ನೂತನವಾಗಿ ತಯಾರಿಸಲಾದ ರಥವನ್ನು, ಭಕ್ತರು ಶ್ರದ್ಧಾ ಭಕ್ತಿಯಿಂದ ಮುದ್ದೇಬಿಹಾಳ ಪಟ್ಟಣದಿಂದ ತಮ್ಮೂರಿಗೆ ಕರೆದೊಯ್ದರು.ನೂತನ ರಥಕ್ಕೆ ಪೂಜೆ ಸಲ್ಲಿಸಿ ಮಠದ ಆಡಳಿತಾಧಿಕಾರಿ ಸೋಮಶೇಖರಯ್ಯ ಹಿರೇಮಠ ಅವರು ಮಾತನಾಡಿ, ಗುರುಪಾದೇಶ್ವರ ಮಹಾಸ್ವಾಮಿಗಳು ಮಹಾನ್ ತಪಸ್ವಿಗಳು. ನಂಬಿದ ಭಕ್ತರನ್ನು ಎಂದಿಗೂ ಕೈಬಿಡದವರು. ಇವರು ಕೇವಲ ಒಂದು ಸಮಾಜದ ಗುರುಗಳಾಗದೇ ಎಲ್ಲ ಸಮಾಜಗಳ ಗುರುಗಳಾಗಿ, ಅನೇಕ ಪವಾಡಗಳನ್ನು ಮಾಡಿದವರು. ತಮ್ಮ ಮಠ, ಐಕ್ಯ ಮಂಟಪ ಮತ್ತು ಗುಹೆಯನ್ನು ತಾವೇ ಸ್ಥಾಪಿಸಿಕೊಂಡು ದೀಪಾವಳಿ ಹಬ್ಬದ ನೀರು ತುಂಬುವ ದಿನದಂದು ಲಿಂಗೈಕ್ಯರಾದವರು. ಇವರ ೫೮ನೇ ಪುಣ್ಯ ಸ್ಮರಣೆಯ ನಿಮಿತ್ಯವಾಗಿ ನೂತನ ರಥವನ್ನು ಗ್ರಾಮದ ಎಲ್ಲ ಸಮಾಜಗಳ ಗುರು ಹಿರಿಯರು, ಮುಖಂಡರು, ದೈವದವರ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ರಥಶಿಲ್ಪಿ ಪರಶುರಾಮ ಪವಾರ ಅವರು ರಥವನ್ನು ಅದ್ಭುತವಾಗಿ ನಿರ್ಮಿಸಿದ್ದಾರೆ. ಇಂದು ರಥದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಹರಗುರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಜಗದ್ಗುರು ಮಧ್ವಾಚಾರ್ಯರ, ಮಹಾತ್ಮಾ ಗಾಂದಿಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರಿರವರ ಜಯಂತಿಯನ್ನು ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತ್ರೀಜಿರವರ ಜೀವನ, ಎದುರಾದ ಸವಾಲುಗಳು, ಅವರ ವ್ಯಕ್ತಿತ್ವದ ಬಗ್ಗೆ ವಿವರವಾಗಿ ಮಾತನಾಡಿದರು. ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ನಮಗೆ ಕಲಿಸಿಕೊಟ್ಟ ಪಾಠಗಳು ಹಲವು. ಸತ್ಯ, ಸರಳತೆ, ಪ್ರಾಮಾಣಿಕತೆ ಮತ್ತು ದೇಶಕ್ಕಾಗಿ ತ್ಯಾಗದ ಮಹತ್ವ. ಕೇವಲ ಐದೂವರೆ ಅಡಿ ಎತ್ತರದ ಈ ಪುಟ್ಟ ಮನುಷ್ಯ, ತನ್ನ ವ್ಯಕ್ತಿತ್ವ ಮತ್ತು ನಾಯಕತ್ವದಿಂದ ಹಿಮಾಲಯದಷ್ಟು ಎತ್ತರಕ್ಕೆ ಏರಿ ನಿಂತರು. ಅವರ ಆದರ್ಶಗಳನ್ನು ಅನುಸರಿಸುವ ಮೂಲಕ, ನಾವೆಲ್ಲರೂ ಒಂದು ಬಲಿಷ್ಠ, ಸ್ವಾಭಿಮಾನಿ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸುವಲ್ಲಿ ನಮ್ಮ ಪಾಲನ್ನು ನಿರ್ವಹಿಸೋಣ ಎಂದರು.ಜಿಲ್ಲಾ ಕಾರ್ಯದರ್ಶಿ ಕೃಷ್ಣಾ ಗುನ್ನಾಳಕರ ಮಾತನಾಡಿ ಜಗದ್ಗುರು ಮಧ್ವಾಚಾರ್ಯರ 787 ನೇ ಜಯಂತಿ ಆಚರಿಸಲಾಗುತ್ತಿದೆ. ದೈತ ವೇದಾಂತ ತತ್ವಶಾಸ್ತ್ರದ ಪ್ರಮುಖ ಪ್ರತಿಪಾದಕರು. ಹಿಂದೂ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ:‌ ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುವಾರ ಮಹಾತ್ಮಾ ಗಾಂಧಿಯವರ 156ನೇ ಮತ್ತು ಲಾಲ ಬಹಾದ್ದೂರ ಶಾಸ್ತ್ರಿಯವರ 121ನೇ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಡೀಮ್ಡ್ ವಿವಿ ಹಂಗಾಮಿ ಕುಲಪತಿ, ಡಾ.ಅರುಣ ಚಂ.‌ಇನಾಮದಾರ ಅವರು ಗಾಂಧಿ ಮತ್ತು ಶಾಸ್ತ್ರಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಗಾಂಧಿಯವರು ಸತ್ಯ ಮತ್ತು ಅಹಿಂಸೆ ತತ್ವಗಳ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರ ಸತ್ಯ ಮತ್ತು ಅಹಿಂಸೆ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಲಾಲ ಬಹಾದ್ದೂರ ಶಾಸ್ತ್ರಿ ಅವರ ಜೈ ಜವಾನ್ ಜೈ ಕಿಸಾನ್ ಘೋಷವಾಕ್ಯ ದೇಶದ ಸೈನಿಕರು ಮತ್ತು ರೈತರ ಮಹತ್ವವನ್ನು ನೆನಪಿಸುವ ಶಾಶ್ವತ ಸಂದೇಶವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ವೈದ್ಯಕೀಯ ವಿಭಾಗದ ಡೀನ್ ಹಾಗೂ ಹಂಗಾಮಿ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ವೈದ್ಯಕೀಯ ಅಧೀಕ್ಷಕ, ಡಾ. ಆರ್.…

Read More