ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣ ಪಂಚಾಯತ ಸದಸ್ಯರು ಊರಿನ ಅಭಿವೃದ್ದಿಯ ಕಡೆ ಗಮನಹರಿಸುವ ಹಾಗೆ ತಾವು ಪ್ರತಿನಿದಿಸುವ ವಾರ್ಡಗಳಲ್ಲಿ ಬರುವ ಗಟಾರ, ರಸ್ತೆಗಳು ಸ್ವಚ್ಛತೆಯಿಂದ ಇರುವ ಬಗ್ಗೆ ಮತ್ತು ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿದೆ ಎನ್ನುವದರ ಕುರಿತು ಗಮನ ಹರಿಸಿ ಸುಂದರ ಸ್ವಚ್ಛಂದ ಪ್ರದೇಶವಾಗಿ ರೂಪಿಸುವುದು ಜನಪ್ರತಿನಿಧಿಗಳಾದ ನಮ್ಮಗಳ ಕರ್ತವ್ಯವಾಗಿದೆ ಎಂದು ತಿಳಿದು ನಡೆಯಬೇಕೆಂದು ಸಚಿವ ಶಿವಾನಂದ ಪಾಟೀಲ ಸದಸ್ಯರಿಗೆ ಕಿವಿಮಾತು ಹೇಳಿದರು.
ಪಟ್ಟಣದಲ್ಲಿ ವಿವಿಧ ಇಲಾಖೆ ಅಡಿಯಲ್ಲಿ ಮತ್ತು ಪಟ್ಟಣ ಪಂಚಾಯತ ವತಿಯಿಂದ ಮಂಜೂರಾದ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಪಟ್ಟಣದಲ್ಲಿ ಸರಕಾರಕ್ಕೆ ಸೇರಿದ ವಾಣೀಜ್ಯ ಮಳಿಗೆಗಳಿಂದ ಇನ್ನಿತರ ಮೂಲಗಳಿಂದ ತಮ್ಮ ಸ್ವಂತ ಆದಾಯವನ್ನು ಹೆಚ್ಚಿಸಿಕೊಂಡು ಪಟ್ಟಣ ಪಂಚಾಯತಗಳು, ನಗರಸಭೆಗಳು, ಅಭಿವೃದ್ದಿ ಪಥದತ್ತ ಸಾಗಬೇಕು ಆಸ್ತೀಗಳನ್ನು ಮಾರಾಟ ಮಾಡಿ ಪ್ರಗತಿ ಕಾಣುವ ದುಸ್ಥಿತಿಗೆ ಬರುವಂತಾಗಬಾರದು ಎಂದರು.
ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ಕಳೆದ ಹತ್ತು ವರುಷಗಳ ಅವಧಿಯಲ್ಲಿ ಕೊಲ್ಹಾರ ಪಟ್ಟಣ ಸಕಲ ರೀತಿ ಮೂಲಭೂತ ಸೌಲಭ್ಯ ಪಡೆದು ಅಭಿವ್ರದ್ದಿಯಾಗುತ್ತಿರುವದನ್ನು ಗಮನಿಸಿದರೆ ರಾಜ್ಯದಲ್ಲಿಯೇ ಮಾದರಿ ಪಟ್ಟಣ ಪಂಚಾಯತಿಯಾಗಿ ಗುರುತಿಸಿಕೊಳ್ಳುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಕೆಬಿಜೆಎನ್ಎಲ್ ಅರಣ್ಯ ಇಲಾಖೆ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆ ಮತ್ತು ಪಟ್ಟಣ ಪಂಚಾಯತ ಅನುದಾನದಲ್ಲಿ 50 ಲಕ್ಷ ವೆಚ್ಚದ ನವಿನ ಮಾದರಿ ಅಗಸಿ ಕಟ್ಟಡ ನಿರ್ಮಾಣ 11.63 ಲಕ್ಷ ವೆಚ್ಚದಲ್ಲಿ ಪಟ್ಟಣದ ಪ್ರಮುಖ ವ್ರತ್ತಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸುವದು 235 ಲಕ್ಷದಲ್ಲಿ ಸಸಿ ನೆಡುವ ಕಾಮಗಾರಿ ಗ್ರಹ ಬಾಗ್ಯ ಯೋಜನೆ ಅಡಿ ಎಂಟು ಜನ ಪೌರ ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು ಕಾರ್ಯಾದೇಶ ಪತ್ರ ಮತ್ತು ತಲಾ 7.5 ಲಕ್ಷ ಅನುದಾನದಂತೆ ಸುಮಾರು 60 ಲಕ್ಷ ಹಣ ಬಿಡುಗಡೆ ಮತ್ತು ಹದಿನೈದನೇಯ ಹಣಕಾಸು ಯೋಜನೆಯ 30 ಲಕ್ಷ ವೆಚ್ಚದಲ್ಲಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಚಿವರು ಗಣ್ಯರು ನೇರವೇರಿಸಿದರು.
ಪೌರಕಾರ್ಮಿಕರ ಸೇವೆ ಅದರಲ್ಲೂ ಒಳಚರಂಡಿ ಕೆಲಸ ಮಾಡುವವರ ಕಾಯಕ ಜೀವದ ಜೊತೆ ಆಟವಾಡಿದಂತಾಗಿರುವದನ್ನು ಮನಗಂಡು ಅವರಿಗೆ ಅತ್ಯಂತ ಸುಸಜ್ಜಿತವಾದ ಕಿಟ್ಟ್ ಗಳನ್ನು ಒದಗಿಸುತ್ತಿದೆ ಅವರು ಜೀವನದಲ್ಲಿ ಒಳ್ಳೆಯ ಬದುಕನ್ನು ಸಾಗಿಸುವಂತಾಗಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಪಟ್ಟಣ ಪಂಚಾಯತ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರಾಜಮಾ ನಧಾಪ್ ಪಟ್ಟಣ ಪಂಚಾಯತನ ಎಲ್ಲ ಸದಸ್ಯರು ಅಧಿಕಾರಿಗಳಾದ ವಿರೇಶ ಹಟ್ಟಿ, ಸಂತೋಷ ಮ್ಯಾಗೇರಿ, ಬಿ.ಎ. ಸೌಧಾಘರ ಸುನೀಲ ಮದ್ದೀನ, ಎಮ್.ಎಸ್. ಪೂಜಾರಿ ಎಸ್.ಕೆ. ಬಾಗಾಯತ್, ಸಂತೋಷ ಗಣಾಚಾರಿ, ಈರಣಗೌಡ ಕೋಮಾರ, ರಪೀಕ್ ಪಕಾಲಿ, ಶ್ರೀಶೈಲ ಪತಂಗಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಈ ಬಾಗದ ಕಾಂಗ್ರೇಸ್ ಪಕ್ಷದ ಮುಖಂಡ ಜಿ.ಪಂ.ಮಾಜಿ ಸದಸ್ಯ ಕಲ್ಲು ದೇಸಾಯಿ ಹೆಸರನ್ನು ನಿರೂಪಕರು ಕರೆದರೂ ವೇದಿಕೆಗೆ ದೇಸಾಯಿ ಬರದೆ ಇರುವದಕ್ಕೆ ಸ್ವತಃ ಸಚಿವರಿಗೆ ಅಚ್ಚರಿಯಾಗಿದ್ದು ಸಚಿವರ ಜೋತೆ ಬಳೂತಿ ಗ್ರಾಮದಲ್ಲಿ ಪಟ್ಟಣದಲ್ಲಿ ನಡೆದ ಭೂಮಿ ಪೂಜೆ ಇನ್ನಿತರ ಕಡೆ ಬಾಗವಹಿಸಿದ್ದ ಕಲ್ಲು ದೇಸಾಯಿ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಸಮಾರಂಭದ ವೇದಿಕೆತನಕ ಬಂದು ಸಭೆಯಲ್ಲಿ ಬಾಗವಹಿಸದೇ ಇರುವದಕ್ಕೆ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವಂತಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.

