ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಇದೇ ಮೊದಲ ಬಾರಿಗೆ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದ ಹಿರೇಮಠದಲ್ಲಿ ನಡೆಯಲಿರುವ ಪವಾಡ ಪುರುಷ ಶ್ರೀ ಸದ್ಗುರು ಗುರುಪಾದೇಶ್ವರ ಮಹಾಸ್ವಾಮಿಗಳ ಮಹಾರಥೋತ್ಸವಕ್ಕೆ ನೂತನವಾಗಿ ತಯಾರಿಸಲಾದ ರಥವನ್ನು, ಭಕ್ತರು ಶ್ರದ್ಧಾ ಭಕ್ತಿಯಿಂದ ಮುದ್ದೇಬಿಹಾಳ ಪಟ್ಟಣದಿಂದ ತಮ್ಮೂರಿಗೆ ಕರೆದೊಯ್ದರು.
ನೂತನ ರಥಕ್ಕೆ ಪೂಜೆ ಸಲ್ಲಿಸಿ ಮಠದ ಆಡಳಿತಾಧಿಕಾರಿ ಸೋಮಶೇಖರಯ್ಯ ಹಿರೇಮಠ ಅವರು ಮಾತನಾಡಿ, ಗುರುಪಾದೇಶ್ವರ ಮಹಾಸ್ವಾಮಿಗಳು ಮಹಾನ್ ತಪಸ್ವಿಗಳು. ನಂಬಿದ ಭಕ್ತರನ್ನು ಎಂದಿಗೂ ಕೈಬಿಡದವರು. ಇವರು ಕೇವಲ ಒಂದು ಸಮಾಜದ ಗುರುಗಳಾಗದೇ ಎಲ್ಲ ಸಮಾಜಗಳ ಗುರುಗಳಾಗಿ, ಅನೇಕ ಪವಾಡಗಳನ್ನು ಮಾಡಿದವರು. ತಮ್ಮ ಮಠ, ಐಕ್ಯ ಮಂಟಪ ಮತ್ತು ಗುಹೆಯನ್ನು ತಾವೇ ಸ್ಥಾಪಿಸಿಕೊಂಡು ದೀಪಾವಳಿ ಹಬ್ಬದ ನೀರು ತುಂಬುವ ದಿನದಂದು ಲಿಂಗೈಕ್ಯರಾದವರು. ಇವರ ೫೮ನೇ ಪುಣ್ಯ ಸ್ಮರಣೆಯ ನಿಮಿತ್ಯವಾಗಿ ನೂತನ ರಥವನ್ನು ಗ್ರಾಮದ ಎಲ್ಲ ಸಮಾಜಗಳ ಗುರು ಹಿರಿಯರು, ಮುಖಂಡರು, ದೈವದವರ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ರಥಶಿಲ್ಪಿ ಪರಶುರಾಮ ಪವಾರ ಅವರು ರಥವನ್ನು ಅದ್ಭುತವಾಗಿ ನಿರ್ಮಿಸಿದ್ದಾರೆ. ಇಂದು ರಥದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಹರಗುರು ಚರಮೂರ್ತಿಗಳು ಮತ್ತು ಮಿಣಜಗಿ ಗ್ರಾಮದ ಸಮಸ್ತ ಗುರು ಹಿರಿಯರ ಸಮ್ಮುಖದಲ್ಲಿ ಪೂಜಾ ವಿಧಾನಗಳನ್ನು ನೆರವೇರಿಸಲಾಗಿದೆ. ರಥದ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲ ಮಹನೀಯರಿಗೆ ಅಭಿನಂದಿಸುವದಾಗಿ ತಿಳಿಸಿ, ಬರುವ ದೀಪಾವಳಿ ಹಬ್ಬದ ನೀರು ತುಂಬುವ ದಿನದಂದು ಮಹಾರಥೋತ್ಸವ ಜರುಗಲಿದ್ದು, ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ವಿನಂತಿಸಿದರು.
ಈ ವೇಳೆ ಗಜೇಂದ್ರಗಡ ಹಿರೇಮಠದ ಅಮರಯ್ಯ ಶಾಸ್ತ್ರಿಗಳು ಮಾತನಾಡಿ, ದುಃಖಮಯವಾದ ಪ್ರಪಂಚದಲ್ಲಿ, ರೋಗಮಯವಾದ ಶರೀರಗಳೇ ತುಂಬಿರುವಾಗ ಮಿಣಜಗಿಯ ಸದ್ಭಕ್ತರ ಒಳಿತಿಗಾಗಿ ಅನೇಕ ಪವಾಡಗಳನ್ನು ಮಾಡಿದ ಗುರುಪಾದೇಶ್ವರರ ರಥ ಅತ್ಯಂತ ಅದ್ಭುತವಾಗಿ ತಯಾರಾಗಿದೆ. ಈ ರಥ ಸಂಪೂರ್ಣವಾಗಿ ಕಬ್ಬಿಣದಿಂದ ತಯಾರಾಗಿದ್ದು ಪರಿಸರನ್ನು ಉಳಿಸಲಾಗಿದೆ ಎಂದರು.
ಡಾ.ಚಂದ್ರಶೇಖರ ಶಿವಯೋಗಿಮಠ ಮಾತನಾಡಿ, ಕಳೆದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಠದ ಆಡಳಿತಾಧಿಕಾರಿ ಸೋಮಶೇಖರಯ್ಯ ಹಿರೇಮಠ ಅವರು, ಮುಂದಿನ ಜಾತ್ರಾ ಮಹೋತ್ಸವದಲ್ಲಿ ರಥವನ್ನು ಎಳೆಯುವ ಸಂಕಲ್ಪ ಮಾಡಿದ್ದರು. ತಮ್ಮ ಸಂಕಲ್ಪ ಈಡೇರುವವರೆಗೆ ಪಾದರಕ್ಷೆಗಳನ್ನು ತ್ಯಜಿಸಿದ್ದರು. ಅವರ ಸಂಕಲ್ಪದಂತೆ ಈ ಬಾರಿ ರಥೋತ್ಸವ ಜರುಗಲಿದ್ದು ಇದೂ ಕೂಡ ಗುರುಪಾದೇಶ್ವರರ ಪವಾಡವೇ ಎಂದರು.
ಪ್ರಚನಕಾರ ಐ.ಬಿ.ಹಿರೇಮಠ ಅವರು ಮಾತನಾಡಿ, ರಾಜ್ಯದಲ್ಲಿಯೇ ಕಲ್ಲು, ಪರಸಿಯ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದ ಗ್ರಾಮ ಮಿಣಜಗಿ. ಈ ಗ್ರಾಮದ ಕೀರ್ತಿಗೆ ಕಳಶಪ್ರಾಯ ಎನಿಸುವಂತೆ, ನಿರ್ವಿಕಲ್ಪ ಸಮಾಧಿಸ್ತರಾಗಿ ಗದ್ದುಗೆಗೊಂಡಿರುವ ಗುರುಪಾದೇಶ್ವರ ಮಹಾಸ್ವಾಮಿಗಳು ಇಂದಿಗೂ ನಂಬಿದ ಭಕ್ತರ ಸಂಕಷ್ಟಗಳನ್ನು ದೂರಮಾಡುತ್ತಿದ್ದಾರೆ. ದೀಪಾವಳಿ ವೇಳೆ ನಡೆಯುವ ಈ ಮಹಾಸ್ವಾಮಿಗಳ ಜಾತ್ರೆಯಲ್ಲಿ ಈ ಬಾರಿ ನೂತನ ರಥ ಸಂಚರಿಸಲಿದ್ದು ಭಕ್ತರ ಮನೋಕಾಮನೆಗಳು ಆದಷ್ಟು ಬೇಗ ಈಡೇರಲಿವೆ ಎಂದರು.
ಗ್ರಾಮದ ಮುಖಂಡ ಜಿ.ಎಂ.ಪಾಟೀಲ, ರಥಶಿಲ್ಪಿ ಪರಶುರಾಮ ಪವಾರ ಮಾತನಾಡಿದರು.
ತಮದಡ್ಡಿಯ ಚನ್ನಬಸಯ್ಯ ಮಹಾಸ್ವಾಮಿಗಳು, ಬಾಗೇವಾಡಿಯ ಅಮರಪ್ಪ ಶರಣರು, ಗ್ರಾಮದ ಪ್ರಮುಖರಾದ ಜೆ.ಡಿ.ಪಾಟೀಲ, ಜಿ.ಎಸ್.ಯರನಾಳ, ಎಂ.ಬಿ.ಅಕ್ಕಿ, ರಮೇಶ ಜಂಬಗಿ, ಬೀರಪ್ಪ ಪೂಜಾರಿ, ಪರಶುರಾಮ ಕೊಳೂರ, ಆಲಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಈರಯ್ಯ ಹಿರೇಮಠ, ಕಾಸಯ್ಯ ಹಿರೇಮಠ, ಎಂ.ಬಿ.ಅಕ್ಕಿ, ಎಚ್.ಎಂ.ಬಾವೂರ, ಮಂಜುನಾಥ ಹಡಪದ, ಕಾಶಿನಾಥ ಬಡಿಗೇರ, ಎಂ.ಎನ್.ಬಿರಾದಾರ, ಸಿದ್ರಾಮಯ್ಯ ಹಿರೇಮಠ, ಶರಣಯ್ಯ ಹಿರೇಮಠ, ಪ್ರಕಾಶ ಬಶೆಟ್ಟಿ, ಶರಣು ಬಾಗೇವಾಡಿ, ಬಸವರಾಜ ಅಂಗಡಿ, ದಯಾನಂದ ಹಿರೇಮಠ, ಈರಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ, ಕಾಶೀನಾಥ ಕಂಬಾರ, ಶ್ರೀಶೈಲ ಹಿರೇಮಠ, ಬಸಯ್ಯ ನಂದಿಕೆಶ್ವರಮಠ, ದಾನಯ್ಯ ಹಿರೇಮಠ, ಈರಯ್ಯ ಹಿರೇಮಠ, ವಿಜಯಲಕ್ಷ್ಮಿ ಮಾಂತೇಶ ಬೂದಿಹಾಳಮಠ, ಕಾಂತು ಹಿರೇಮಠ, ಶಾಂತಯ್ಯ ಶಿವಯೋಗಿಮಠ, ಕೆ.ಪಿ.ಹಿರೇಮಠ, ನಾಗರತ್ನ ಶಿವಯೋಗಿಮಠ, ಮಂಜುಳಾ ಶಿವಯೋಗಿಮಠ, ಸುವರ್ಣ ನಂದಕೇಶ್ವರಮಠ. ಈರಮ್ಮ ಯರಝರಿಮಠ ಸೇರಿದಂತೆ ಹಲವರು ಭಾಗಿಯಾಗಿದ್ದರು.

