ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ನವರಾತ್ರಿ ಅಂಗವಾಗಿ ಕಳೆದ ೯ ದಿನಗಳಿಂದ ಆಚರಿಸಿದ ಬನ್ನಿ ಮಹಾಕಾಳಿ ವೃಕ್ಷ ಪೂಜಾ ವೃತವನ್ನು ಮಹಿಳೆಯರು ವಿಜಯದಶಮಿಯಂದು ಪೂಜೆ ಸಲ್ಲಿಸಿ ಸಂಪನ್ನಗೊಳಿಸಿದರು.
ದಸರಾ ವಿಶೇಷಗಳಲ್ಲಿ ಮಹಿಳೆಯರ ಬನ್ನಿ ಮಹಾಕಾಳಿ (ಶಮಿ ವೃಕ್ಷ) ಪೂಜೆ ವಿಶಿಷ್ಟವಾದುದಾಗಿದೆ. ಮಹಾನವಮಿ ಅಮವಾಸ್ಯೆಯ ಮರುದಿನದಿಂದ ಆರಂಭವಾದ ಈ ವೃತದಲ್ಲಿ ಮುತೈದೆ ಮಹಿಳೆಯರು ಸೂರ್ಯೋದಯಕ್ಕೆ ಮುನ್ನ ಎದ್ದು, ಸ್ನಾನಾದಿ ಕರ್ಮಗಳನ್ನು ಮುಗಿಸಿ, ಮಡಿಯಿಂದ ಮಾತನಾಡದೇ ಬನ್ನಿ ಮಹಾಕಾಳಿ ವೃಕ್ಷಕ್ಕೆ ತೆರಳಿ ಪೂಜೆ ಸಲ್ಲಿಸಿ, ನಿಂಬೆ ಹಣ್ಣಿನ ಚಿಪ್ಪಿನಲ್ಲಿ ತುಪ್ಪದದೀಪ ಬೆಳಗಿ, ನೈವಿಧ್ಯ ಅರ್ಪಿಸಿ, ಮನೆಗೆ ಮರಳುತ್ತಾರೆ. ಪೂಜಾ ಸಮಯದಲ್ಲಿ ಸಾಕಷ್ಟು ಮಹಿಳೆಯರು ಕೂಡಿದ್ದರು ಸಹ ಯಾರೊಬ್ಬರು ಮಾತನಾಡದೇ, ಮನೆ ತಲುಪಿದ ನಂತರವೇ ಮಾತನಾಡುವುದು ವಿಶೇಷ. ಹೀಗೆ ಸತತ ೯ ದಿನಗಳ ಕಾಲ ಪೂಜೆ ಸಲ್ಲಿಸಿ ಕೊನೆಯ ದಿನವಾದ ಗುರುವಾರ ವಿಜಯದಶಮಿ ದಿನದಂದು ವೃಕ್ಷಕ್ಕೆ ಸೀರೆ ಉಡಿಸಿ ವಿಶೇಷಪೂಜೆ, ನೈವಿಧ್ಯ ಸಲ್ಲಿಸಿದರು. ನಂತರ ವೃತ ಕೈಗೊಂಡ ಎಲ್ಲ ಮಹಿಳೆಯರಿಗೆ ಉಡಿ ತುಂಬುವುದರ ಮೂಲಕ ವೃತ ಸಂಪನ್ನಗೊಳಿಸಿದರು.
ಉಡಿ ತುಂಬುವ ಕಾರ್ಯಕ್ರಮದಲ್ಲಿ ಶ್ರೀದೇವಿ ಪರದೇಶಿಮಠ, ಜ್ಯೋತಿ ಬಡಿಗೇರ, ಈಶ್ವರಿ ಪರದೇಶಿಮಠ, ಗಂಗಾಂಬಿಕಾ ಹಿರೇಮಠ, ಗಾಯತ್ರಿ ವಡ್ಡೋಡಗಿ, ಅನುಪಮಾ ಪರದೇಶಿಮಠ, ಶೋಭಾ ಜಡಿಮಠ, ಲಕ್ಷ್ಮಿ ಪಾಟೀಲ, ರೇಖಾ ಪಾಟೀಲ, ನೀಲಾ ಹಿರೇಮಠ, ಅಶ್ವಿನಿ ಅವುಟಿ, ಜಯಶ್ರೀ ಬಿರಾದಾರ, ಮೀನಾಕ್ಷಿ ಮಸಬಿನಾಳ, ಕವಿತಾ ವಾಡೇದಮನಿ, ಭುವನೇಶ್ವರಿ ಸಣ್ಣಕ್ಕಿ, ಕಸ್ತೂರಿ ವಡ್ಡೋಡಗಿ, ನೀಲಮ್ಮಾ ಯಾಳಗಿ, ಸುರೇಖಾ ಪಾಟೀಲ, ಗೀತಾ ಹರವಾಳ, ಪ್ರೀತಿ ಯಾಳಗಿ, ಗೀತಾ ಇಂಡಿ, ಶಂಕ್ರೇಮ್ಮ ಯಾಳಗಿ, ಗಂಗೂ ಇಂಡಿ, ಭೋರಮ್ಮ ಹಳ್ಳಿ, ಸಂಗೀತಾ ಬಿರಾದಾರ, ರೇಣುಕಾ ಪ್ಯಾಟಿ, ಮಂಜುಳಾ ಮಶಾನವರ, ಭಾಗ್ಯ ಅವುಟಿ, ಜ್ಯೋತಿ ಕುಂಬಾರ, ಕಲ್ಪನಾ ಮೇತ್ರಿ, ಅಮೃತಾ ಗೌಳಿ ಪಾಲ್ಗೊಂಡಿದ್ದರು.

