ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ರೈತರ ಪಾಲಿನ ಜೀವನದಿ ಕೃಷ್ಣೆಯ ಮಹತ್ವದ ಅಣೆಕಟ್ಟು ಆಗಿರುವ ಆಲಮಟ್ಟಿ ಜಲಾಶಯದ ನಿರ್ಮಾಣಕ್ಕೆ ೧೯೬೪ ರಲ್ಲಿಯೇ ಅಡಿಗಲ್ಲು ನೆರವೇರಿಸಿದ ಆಗಿನ ಕೇಂದ್ರ ಸಚಿವ ಲಾಲ್ ಬಹದ್ದೂರ ಶಾಸ್ತ್ರಿ ಕಂಡ ರೈತರ ಏಳಿಗೆಯ ಕನಸು ಇಂದು ನನಸಾಗಿದೆ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ.ಬಸವರಾಜು ಹೇಳಿದರು.
ಆಲಮಟ್ಟಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಕಂಚಿನ ಪುತ್ಥಳಿಗೆ ಪುಷ್ಪಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು.
ಅಣೆಕಟ್ಟುಗಳಿಂದಲೇ ರೈತರ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದ , ಅವರ ಸ್ಮರಣೆಗಾಗಿ ಆಲಮಟ್ಟಿ ಜಲಾಶಯಕ್ಕೆ ಶಾಸ್ತ್ರಿಯವರ ಹೆಸರನ್ನಿಡಲಾಗಿದೆ. ರೈತರ ಬಗ್ಗೆ ಕಾಳಜಿಯ ಕಾರಣ ಜೈ ಜವಾನ್ , ಜೈಕಿಸಾನ್ ಘೋಷಣೆ ಮಾಡಿದರು.
ಸೂಪರಿಂಟೆಂಡಿಂಗ್ ಎಂಜಿನಿಯರ್ ಗೋವಿಂದ ರಾಠೋಡ, ಡಿಎಫ್ ಓ ಎನ್.ಕೆ.ಬಾಗಾಯತ್, ರವಿ ಚಂದ್ರಗಿರಿಯವರ, ಅಮರೇಗೌಡ, ಎಂ.ಆರ್. ಬಾಗವಾನ, ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ವೀರಣ್ಣ ಕೋನ, ಯಲಗೂರದಪ್ಪ ಪಟ್ಟಣಶೆಟ್ಟಿ, ಪರಮಾನಂದ ಸುನಗದ, ರಕ್ಷಿತಾ, ವೈ.ಎಂ. ಪಾತ್ರೋಟ ಮತ್ತಿತರರು ಇದ್ದರು.
ಗಾಂಧಿ ಸ್ಮರಣೆ: ಆಲಮಟ್ಟಿಯಲ್ಲಿರುವ ಗಾಂಧಿ ದಂಡಿಯಾತ್ರೆಯ ಮೂರ್ತಿಗಳ ಬಳಿಯೂ ಪೂಜೆ ಸಲ್ಲಿಸಿದ ಅಧಿಕಾರಿಗಳು ಗಾಂಧಿ ಸ್ಮರಣೆಮಾಡಿದರು.
ಆಲಮಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಗಾಂಧಿ ಶಾಸ್ತ್ರಿ ಸ್ಮರಣೆಯಲ್ಲಿ ಮುಖ್ಯ ಶಿಕ್ಷಕ ಬಿ.ಎಸ್.ಯರವಿನತೆಲಿಮಠ, ಸಿಆರ್ ಪಿ ಸುರೇಶ ಹುರಕಡ್ಲಿ , ಚಂದ್ರಶೇಖರ ಕೋಳೇಕರ ಭಾಗವಹಿಸಿದ್ದರು.

