Author: editor.udayarashmi@gmail.com

ಅಕ್ಟೋಬರ್ ೦೬ ರಿಂದ ೦೮ ರವರೆಗೆ ಸಿಂದಗಿಯ ಭೀಮಾಶಂಕರ ಮಠದಲ್ಲಿ ನಡೆಯುವ ’ಬಿಂದಿಗೆ ಪೂಜೆ” ಯ ಕುರಿತು ವಿಶೇಷ ಲೇಖನ ಲೇಖನ- ಪ್ರಶಾಂತ ಕುಲಕರ್ಣಿಉಪನ್ಯಾಸಕರುಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯಸಿಂದಗಿವಿಜಯಪುರ ಜಿಲ್ಲೆಮೊ: 9745442237 ಉದಯರಶ್ಮಿ ದಿನಪತ್ರಿಕೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಜೀವಂತ ಪ್ರತಿರೂಪವಾಗಿದೆ. ಈ ನಾಡು ನಂಬಿಕೆಯ ಶಕ್ತಿಗೆ ಜೀವ ತುಂಬಿದ ನೆಲ. ಇಲ್ಲಿನ ಶ್ರೀಮಠವು ಶತಮಾನಗಳಿಂದ ಭಕ್ತರ ಭಾವನೆ, ಭಕ್ತಿ ಮತ್ತು ಶ್ರದ್ಧೆಯ ಕೇಂದ್ರವಾಗಿ ಉಳಿದಿದೆ. ಈ ಪವಿತ್ರ ತಾಣದಲ್ಲಿ ಪ್ರತಿ ವರ್ಷ ನಡೆಯುವ “ಬಿಂದಗಿಯ ಮಹಾತ್ಮೆ” ಎಂಬ ದಿವ್ಯ ಘಟನೆಯು, ಇಂದಿನ ವಿಜ್ಞಾನಯುಗದಲ್ಲಿಯೂ ಮಾನವನ ತರ್ಕವನ್ನು ಮೀರಿ ನಂಬಿಕೆಯ ಶಕ್ತಿಯನ್ನು ಎತ್ತಿ ತೋರಿಸುತ್ತದೆಸಿಂದಗಿಯ ಶ್ರೀಮಠವನ್ನು ಸ್ಥಾಪಿಸಿದವರು ಮಹಾನ್ ಯೋಗಿ ಶ್ರೀ ಸದ್ಗುರು ಭೀಮಾಶಂಕರ ಸ್ವಾಮಿಗಳು. ಕುಲಕರ್ಣಿಯವರ ವಂಶದಲ್ಲಿ ಜನಿಸಿದ ಅವರು ಬಾಲ್ಯದಲ್ಲೇ ಲೌಕಿಕ ಆಸೆಗಳನ್ನು ತ್ಯಜಿಸಿ ಭಕ್ತಿ ಮತ್ತು ತಪಸ್ಸಿನ ಮಾರ್ಗವನ್ನು ಆರಿಸಿಕೊಂಡರು. ಅವರ ಜೀವನದಲ್ಲಿ ತಿರುವು ತಂದದ್ದು ಅಫಜಲಪೂರ ರ…

Read More

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಸ್ಥಿರತೆಯ ಭಾವನೆ ಕಾಡುತ್ತಿದ್ದು, ಹೀಗಾಗಿಯೇ ಇನ್ನೂ ಎರಡು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಪದೇ ಪದೇ ಹೇಳುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಶುಕ್ರವಾರ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸ್ಥಿರತೆಯ ಕಾರಣದಿಂದ ಸಿದ್ದರಾಮಯ್ಯ ನಾನೇ ಸಿಎಂ ಎಂದು ಪದೇ ಪದೇ ಹೇಳುತ್ತಿದ್ದಾರೆ. ನಾನೇ ಸಿಎಂ ಇರುತ್ತೇನೆಂದು ಹೇಳುವುದು ಅಸ್ಥಿರತೆಯ ಮೊದಲ ಲಕ್ಷಣ ಎಂದಿದ್ದಾರೆ. ಯಾಕೆ ಅವರಿಗೆ ವಿಶ್ವಾಸವಿಲ್ಲವಾ? ಬದುಕಿದ್ದವನು, ನಾನು ಬದುಕಿದ್ದೇನೆ ಬದುಕಿದ್ದೇನೆ ಎಂದು ಯಾಕೆ ಹೇಳುತ್ತಾನೆ. ನಾನು ಸತ್ತಿಲ್ಲ, ಬದುಕಿದ್ದೇನೆ ಅಂತ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.ಜಾತಿ ಗಣತಿ ಕುರಿತು ಮಾತನಾಡಿ, ಕ್ರಾಂತಿ ಸ್ವಲ್ಪ ಆ ಕಡೆ, ಈ ಕಡೆ ಆಗಬಹುದು. ಕ್ರಾಂತಿ ಬಗ್ಗೆ ಕಾಂಗ್ರೆಸ್‌ನವರೇ ಹೇಳಿದ್ದಾರೆ. ಅದನ್ನು ತಪ್ಪಿಸಲು ಜಾತಿ ಗಣತಿ ಆರಂಭಿಸಿದ್ದಾರೆ. ಮುಜಾವರ್ ಮುಸ್ಲಿಂ ಬ್ರಾಹ್ಮಣ ಎಂದು ಸೇರಿಸಿದ್ದಾರೆ. ಅದನ್ನು ಎಲ್ಲಿಂದ ತಂದಿದ್ದಾರೆಂದು ಪ್ರಶ್ನಿಸಿದರು.ಇದೇ ವೇಳೆ ಜಿಎಸ್‌ಟಿ ಹಂಚಿಕೆಯಲ್ಲಿ ಕರ್ನಾಟಕಕ್ಕೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣಕ್ಕೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಆಗಮಿಸಿದ ಸಚಿವ ಶಿವಾನಂದ್ ಪಾಟೀಲ್ ಅವರಿಗೆ ಕೊಲ್ಹಾರ ಪಟ್ಟಣ ಅಭಿವೃದ್ಧಿ ಚಿಂತಕರ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಕೊಲ್ಹಾರ ಪಟ್ಟಣ ಅಭಿವೃದ್ಧಿ ಚಿಂತಕರ ವೇದಿಕೆಯ ರಾಮಣ್ಣ ಉಪ್ಪಲದಿನ್ನಿ ಹಾಗೂ ಸಿ.ಎಂ. ಗಣಕುಮಾರ ಪಟ್ಟಣದ ಮಹಾತ್ಮ ಗಾಂಧಿ ಸರ್ಕಲ್ ಪಕ್ಕದಲ್ಲಿ ಇರುವ ಎಪಿಎಂಸಿ ಜಾಗೆಯಲ್ಲಿ ರೈತರ ಅನುಕೂಲಕ್ಕೆ ರೈತ ಭವನ ನಿರ್ಮಾಣ ಮಾಡಲು ಮತ್ತು ಪಟ್ಟಣದ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದು. ಹಿಂದೂ ರುದ್ರ ಭೂಮಿಗೆ ಅನುದಾನ ನೀಡಿ ಶವ ಸಂಸ್ಕಾರಕ್ಕೆ ಸುಸಜ್ಜಿತವಾದ ಚಿತಾಗಾರ ನಿರ್ಮಾಣ, ರಸ್ತೆ ಡಾಂಬರೀಕರಣ, ಶೌಚಾಲಯ, ಕಾಂಪೌಂಡ್ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಿ ಮಾದರಿ ರುದ್ರಭೂಮಿಯನ್ನಾಗಿ ಮಾಡುವಂತೆ ಹಾಗೂ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಮತ್ತು ಮುಂದಿನ ದಿನಗಳಲ್ಲಿ ಆಗುವ ಸರ್ಕಾರಿ ಕಚೇರಿಗಳು ಮತ್ತು ವಿವಿಧ ಕಾಮಗಾರಿಗಳು ಮುಂದಿನ ಬೆಳವಣಿಗೆ ದೃಷ್ಟಿಯಿಂದ ವೈಜ್ಞಾನಿಕವಾಗಿ ಮಾಡಲು ಸೂಚಿಸುವಂತೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ದಿಗಂಬರೇಶ್ವರ…

Read More

ಯೋಜನೆಯಲ್ಲಿ ಅಕ್ರಮವೆಸಗಿದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾಂಟ್ರ್ಯಾಕ್ಟರ್ | ರೈತರೊಂದಿಗೆ ಸೇರಿ ದೊಡ್ಡ ಮಟ್ಟದ ಹೋರಾಟದ ನಿರ್ಧಾರ ಉದಯರಶ್ಮಿ ದಿನಪತ್ರಿಕೆ ಚಡಚಣ: ಈ ಭಾಗದ ೭ ಹಳ್ಳಿಗಳ ರೈತರ ಆಶಾ ಕೀರಣವಾಗಿದ್ದ ಚಡಚಣ ಏತ ನೀರಾವರಿ ಯೋಜನೆ ಕಾರ್ಯರೂಪಕ್ಕೆ ಬರದಿದ್ದರೆ ಚಡಚಣ ಭಾಗದಲ್ಲಿ ರೈತರೊಂದಿಗೆ ಹೋರಾಟ ಪ್ರಾರಂಭಿಸುವದಾಗಿ ಸಂಸದ ರಮೇಶ ಜಿಗಜಣಗಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.ಚಡಚಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು ೫೦೦ ಕೋಟಿ ವೆಚ್ಚದ ಯೋಜನೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸಲಾಗಿದೆ.. ರೈತರ ಜಮೀನುಗಳಿಗೆ ಒಂದು ಹನಿ ನೀರು ಹರೆದಿಲ್ಲ. ಆದರೆ ಈ ಯೋಜನೆ ಪೂರ್ಣಗೊಂಡಿದೆ ಎಂದು ಸರಕಾರದ ಮಟ್ಟದಲ್ಲಿ ಮಾಹಿತಿ ನೀಡಲಾಗಿದೆ. ಸುಮಾರು ೨೨೭೫೧ ಎಕರೆ ಜಮೀನುಗಳಿಗೆ ನೀರು ನೀಡುವ ಬೃಹತ ಯೋಜನೆ ಇದಾಗಿತ್ತು. ಆದರೆ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾಂಟ್ರ್ಯಾಕ್ಟರ ಸೇರಿ ಯೋಜನೆಯನ್ನು ಪೇಪರನಲ್ಲಿ ಪೂರ್ಣಗೊಳಿಸಿ ಹಣ ಲೂಟಿ ಮಾಡಿದ್ದಾರೆ. ಈ ಹಣ ಯಾರಪ್ಪನದು, ಸಾರ್ವಜನಿಕರ ದುಡ್ಡನ್ನು ಗುಳುಂ ಮಾಡಿರುವವರಿಗೆ ಇದು ಎಚ್ಚರಿಕೆ. ಈ ಯೋಜನೆ ಚಡಚಣ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪವಿತ್ರ ಪುಷ್ಪಗಳಿಂದ ರೂಪಿಸಲಾದ ಬೃಹತ್ ಗಾತ್ರದ ಪಂಚ ಝೇಲಾಗಳು (ವೃತ್ತಾಕಾರದ ಪುಷ್ಪಾಲಂಕಾರ).. ಮುಗಿಲು ಮುಟ್ಟಿದ ನಾರಾಯೇ ತಕ್ಬೀರ್ ಅಲ್ಲಾಹು ಅಕ್ಬರ್ ಎಂಬ ಪವಿತ್ರ ಉದ್ಘೋಷ.. ಮಾನವೀಯತೆಯ ತತ್ವಗಳನ್ನು ಸಾರಿದ ಹಜರತ್ ಗೌಸ್ ಏ ಅಜಂ ಅವರ ಸ್ಮರಣೆ ಹಾಗೂ ಸರ್ವಧರ್ಮ ಸಮನ್ವಯತೆಯ ಕೇಂದ್ರವಾಗಿರುವ ಹಜರತ್ ಅರ್ಕಾಟ್ ದರ್ಗಾದ ಉರುಸು ಪ್ರಯುಕ್ತ ಶನಿವಾರ ಭವ್ಯ ಭಕ್ತಿ-ಸದ್ಭಾವ ಯಾತ್ರೆಯಲ್ಲಿ ಕಂಡು ಬಂದ ದೃಶ್ಯಗಳಿವು.ಅರ್ಕಾಟ್ ದರ್ಗಾದ ಸಜ್ಜಾದೆ ನಶೀನ್ ಸೈಯ್ಯದ್ ಇಕ್ಬಾಲ್ ಪೀರಾ ಹಾಗೂ ಡಾ.ತಖೀಪೀರಾ ಹುಸೈನಿ ಅವರ ನೇತೃತ್ವದಲ್ಲಿ ನಡೆದ ಈ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ಯುವಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು `ನಾರಾಯೇ ತಕ್ಬೀರ್ ಅಲ್ಲಾಹು ಅಕ್ಬರ್’ ಎಂದು ಭಕ್ತಿಭಾವದಿಂದ ಘೋಷಣೆ ಮೊಳಗಿಸುತ್ತಾ, ಪವಿತ್ರ ಧ್ವಜಗಳನ್ನು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು.ಜಾಮೀಯಾ ಮಸಜೀದ, ಶಹಾಪೇಟಿ, ಶಹಾಪೂರ ದರ್ವಾಜಾ, ಮದೀನಾ ನಗರ, ಬಡಿಕಮಾನ್ ಹೀಗೆ ನಾನಾ ಭಾಗಗಳಿಂದ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.ವಿಜಯಪುರ ಅಷ್ಟೇ ಅಲ್ಲದೇ ಬಾಗಲಕೋಟ, ಬೆಳಗಾವಿ, ಕಲಬುರ್ಗಿ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಅತಿವೃಷ್ಟಿ, ಅನಾವೃಷ್ಟಿ ಹಾಗೂ ಬೆಳೆ ಹಾನಿ ಪ್ರದೇಶಗಳ ಭೇಟಿಯ ಸಲುವಾಗಿ, ಇಂಡಿ ತಾಲ್ಲೂಕಿನ ಮಿರಗಿ ಗ್ರಾಮಕ್ಕೆ ಭೇಟಿ ನೀಡಿದಾಗ ಪ್ರವಾಹದ ಪರಿಣಾಮವಾಗಿ ಜಲಾವೃತವಾಗಿ ಹಾನಿಯಾದ ಸೂರ್ಯಕಾಂತಿ ಬೆಳೆಯನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ, ಸಂಸದ ಪಿ.ಸಿ ಗದ್ದಿಗೌಡರ್, ರಮೇಶ ಜಿಗಜಿಣಗಿ, ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಎನ್.ರವಿಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸೇರಿದಂತೆ ಬಿಜೆಪಿ ಜಿಲ್ಲಾ ಮುಖಂಡರು ಹಾನಿಯಾದ ಬೆಳೆ ವೀಕ್ಷಿಸಿದರು.

Read More

ಅನುದಾನ ಮಂಜೂರಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶಿಫಾರಸ್ಸು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸನ್ 2021-22ನೇ ಸಾಲಿನ ಕೇಂದ್ರ ಪುರಷ್ಕೃತ ಅಮೃತ 2.0 ಯೋಜನೆಯಡಿ ವಿಜಯಪುರ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಲೊನಿ/ಬಡಾವಣೆಗಳ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ರೂ.4.10 ಕೋಟಿ ಅನುದಾನ ಬಿಡುಗಡೆಯಾಗಿದೆ.2022 ರ ಜುಲೈ 17 ರಂದು ಉದ್ಯಾನಗಳ ಅಭಿವೃದ್ಧಿಗಾಗಿ ಅನುದಾನ ಮಂಜೂರಿಸಲು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಶಿಫಾರಸ್ಸು ಮಾಡಿದ್ದರು. ಅದರಂತೆ ಈಗ ನಗರದ ವಾರ್ಡ್ ನಂ.6ರ ಅಲಕುಂಟೆ ನಗರದ ಸಿದ್ದಿವಿನಾಯಕ ಗುಡಿ ಹತ್ತಿರದ ಉದ್ಯಾನವನ ಅಭಿವೃದ್ಧಿಗೆ ರೂ.30 ಲಕ್ಷ, ವಾರ್ಡ್ ನಂ.35ರ ಗಿರಿಮಲ್ಲೇಶ್ವರ ಕಾಲೊನಿಯಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.50 ಲಕ್ಷ ಹಾಗೂ ಭವಾನಿ ನಗರದಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.50 ಲಕ್ಷ, ವಾರ್ಡ್ ನಂ.29ರ ವಜ್ರಹನುಮಾನ ನಗರದಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.40 ಲಕ್ಷ, ವಾರ್ಡ್ ನಂ.21ರ ನಂದಿನಿ ಬಡಾವಣೆಯ ಗುರುಪಾದೇಶ್ವರ ನಗರದ ಉದ್ಯಾನವನ ಅಭಿವೃದ್ಧಿಗೆ ರೂ.60 ಲಕ್ಷ, ವಜ್ರಹನುಮಾನ ಉದ್ಯಾನವನ (2) ಅಭಿವೃದ್ಧಿಗೆ…

Read More

ವಿಜಯಪುರ ಜಿಲ್ಲೆಯಲ್ಲಿ ನ.೦೧ ರಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸಲು ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಪಕ್ವವಾಗಿರುವ ಕಬ್ಬನ್ನು ಆದ್ಯತೆಯ ಮೇಲೆ ಕಟಾವು ಮಾಡಿ ನವೆಂಬರ್ ೦೧ ರಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸಿ ಕಬ್ಬು ಪೂರೈಸಿದ ರೈತರಿಗೆ ೧೪ ದಿನಗಳೊಳಗಾಗಿ ಕಬ್ಬಿನ ಹಣ ಪಾವತಿಸಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದ್ದಾರೆ.ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯ ಚಡಚನ ತಾಲೂಕಿನಆಯುಕ್ತರು ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಪ್ರಸಕ್ತ ೨೦೨೪-೨೫ನೇ ಸಾಲಿನಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ನುರಿಸಿ ಉತ್ಪಾದಿಸಲಾಗುವ ಸಕ್ಕರೆ ಪ್ರಮಾಣಕ್ಕನುಗುಣವಾಗಿ ಕಬ್ಬು ನುರಿಸುವ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಸಾಗಾಣಿಕೆ ಮತ್ತು ಕಟಾವು ಮಾಡುವ ದರ ಸೇರಿದಂತೆ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆವಾರು ಎಫ್‌ಆರ್‌ಪಿ ದರವನ್ನು ನಿಗದಿಪಡಿಸಲಾಗಿದ್ದು,ಆಯುಕ್ತರು ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶನಾಲಯ ಬೆಂಗಳೂರು ಅವರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಕ್ಟೋಬರ್ ೬ ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳಿಂದ ಫಲಾನುಭವಿಗಳ ಸೌಲಭ್ಯ ವಿತರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತದ ಮನವಿ ಮೇರೆಗೆ, ವಿಜಯಪುರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗದಿಂದ ಎರಡು ನೂರು ಬಸ್ ಗಳನ್ನು ಒಪ್ಪಂದದ ಮೇರೆಗೆ ಒದಗಿಸಲಾಗುತ್ತಿದೆ.ಅ.೬ರಂದು ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ದೇವರ ಹುಲಗಬಾಳ ಗ್ರಾಮದಲ್ಲಿನ ರಿಸನಂ.೯೯ರಲ್ಲಿನ ೪ ಎಕರೆ ಸರಕಾರಿ ಜಮೀನನ್ನು ಜಮ್ಮಲದಿನ್ನಿ ಗ್ರಾಮದಲ್ಲಿ ೧೧೦ ಕೆ.ವಿ. ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ್ ಅವರಿಗೆ ಮಂಜೂರಿಸಲು ಉದ್ದೇಶಿಸಲಾಗಿದೆ.ಆಕ್ಷೇಪಣೆ ಆಹ್ವಾನ: ಮಸೂತಿ ಗ್ರಾಮದ ರಿಸನಂ.೪೪೭ರ ಪೈಕಿ ೪ ಎಕರೆ ಜಮೀನುಕೋಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿನ ರಿಸನಂ.೪೪೭ರ ಪೈಕಿ ೪ ಎಕರೆ ಗಾಯರಾಣ ಜಮೀನು ಮಸೂತಿ ಗ್ರಾಮದಲ್ಲಿ ೧೧೦ ಕೆ.ವಿ. ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ್ ಅವರಿಗೆ ಮಂಜೂರಿಸಲು ಉದ್ದೇಶಿಸಲಾಗಿದೆ.ಆಕ್ಷೇಪಣೆ ಆಹ್ವಾನ: ವಡವಡಗಿ ಗ್ರಾಮದ ರಿಸನಂ.೩೬೯ರ ೫ ಎಕರೆ ಜಮೀನುಬಸವನ ಬಾಗೇವಾಡಿ ತಾಲ್ಲೂಕಿನ ವಡವಡಗಿ ಗ್ರಾಮದಲ್ಲಿನ ರಿಸನಂ.೩೬೯ರ ೫ ಎಕರೆ ಹುಲ್ಲುಗಾವಲು ಜಮೀನನ್ನು ೧೧೦ ಕೆ.ವಿ. ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಹಾಗೂ ವಸತಿ…

Read More