ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣಕ್ಕೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಆಗಮಿಸಿದ ಸಚಿವ ಶಿವಾನಂದ್ ಪಾಟೀಲ್ ಅವರಿಗೆ ಕೊಲ್ಹಾರ ಪಟ್ಟಣ ಅಭಿವೃದ್ಧಿ ಚಿಂತಕರ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಕೊಲ್ಹಾರ ಪಟ್ಟಣ ಅಭಿವೃದ್ಧಿ ಚಿಂತಕರ ವೇದಿಕೆಯ ರಾಮಣ್ಣ ಉಪ್ಪಲದಿನ್ನಿ ಹಾಗೂ ಸಿ.ಎಂ. ಗಣಕುಮಾರ ಪಟ್ಟಣದ ಮಹಾತ್ಮ ಗಾಂಧಿ ಸರ್ಕಲ್ ಪಕ್ಕದಲ್ಲಿ ಇರುವ ಎಪಿಎಂಸಿ ಜಾಗೆಯಲ್ಲಿ ರೈತರ ಅನುಕೂಲಕ್ಕೆ ರೈತ ಭವನ ನಿರ್ಮಾಣ ಮಾಡಲು ಮತ್ತು ಪಟ್ಟಣದ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದು. ಹಿಂದೂ ರುದ್ರ ಭೂಮಿಗೆ ಅನುದಾನ ನೀಡಿ ಶವ ಸಂಸ್ಕಾರಕ್ಕೆ ಸುಸಜ್ಜಿತವಾದ ಚಿತಾಗಾರ ನಿರ್ಮಾಣ, ರಸ್ತೆ ಡಾಂಬರೀಕರಣ, ಶೌಚಾಲಯ, ಕಾಂಪೌಂಡ್ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಿ ಮಾದರಿ ರುದ್ರಭೂಮಿಯನ್ನಾಗಿ ಮಾಡುವಂತೆ ಹಾಗೂ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಮತ್ತು ಮುಂದಿನ ದಿನಗಳಲ್ಲಿ ಆಗುವ ಸರ್ಕಾರಿ ಕಚೇರಿಗಳು ಮತ್ತು ವಿವಿಧ ಕಾಮಗಾರಿಗಳು ಮುಂದಿನ ಬೆಳವಣಿಗೆ ದೃಷ್ಟಿಯಿಂದ ವೈಜ್ಞಾನಿಕವಾಗಿ ಮಾಡಲು ಸೂಚಿಸುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಕಲ್ಲು ದೇಸಾಯಿ, ಪಟ್ಟಣ ಪಂಚಾಯತ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ, ಈರಯ್ಯ ಗಣಕುಮಾರ, ಲಕ್ಷ್ಮೀಬಾಯಿ ಹೆರಕಲ, ಪರಸಪ್ಪ ಚಿಮ್ಮಲಿಗಿ, ಮಲ್ಲು ಹೆರಕಲ್ಲ ಸೇರಿದಂತೆ ಇತರರು ಇದ್ದರು.

