ಯೋಜನೆಯಲ್ಲಿ ಅಕ್ರಮವೆಸಗಿದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾಂಟ್ರ್ಯಾಕ್ಟರ್ | ರೈತರೊಂದಿಗೆ ಸೇರಿ ದೊಡ್ಡ ಮಟ್ಟದ ಹೋರಾಟದ ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಈ ಭಾಗದ ೭ ಹಳ್ಳಿಗಳ ರೈತರ ಆಶಾ ಕೀರಣವಾಗಿದ್ದ ಚಡಚಣ ಏತ ನೀರಾವರಿ ಯೋಜನೆ ಕಾರ್ಯರೂಪಕ್ಕೆ ಬರದಿದ್ದರೆ ಚಡಚಣ ಭಾಗದಲ್ಲಿ ರೈತರೊಂದಿಗೆ ಹೋರಾಟ ಪ್ರಾರಂಭಿಸುವದಾಗಿ ಸಂಸದ ರಮೇಶ ಜಿಗಜಣಗಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಚಡಚಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು ೫೦೦ ಕೋಟಿ ವೆಚ್ಚದ ಯೋಜನೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸಲಾಗಿದೆ.. ರೈತರ ಜಮೀನುಗಳಿಗೆ ಒಂದು ಹನಿ ನೀರು ಹರೆದಿಲ್ಲ. ಆದರೆ ಈ ಯೋಜನೆ ಪೂರ್ಣಗೊಂಡಿದೆ ಎಂದು ಸರಕಾರದ ಮಟ್ಟದಲ್ಲಿ ಮಾಹಿತಿ ನೀಡಲಾಗಿದೆ. ಸುಮಾರು ೨೨೭೫೧ ಎಕರೆ ಜಮೀನುಗಳಿಗೆ ನೀರು ನೀಡುವ ಬೃಹತ ಯೋಜನೆ ಇದಾಗಿತ್ತು. ಆದರೆ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾಂಟ್ರ್ಯಾಕ್ಟರ ಸೇರಿ ಯೋಜನೆಯನ್ನು ಪೇಪರನಲ್ಲಿ ಪೂರ್ಣಗೊಳಿಸಿ ಹಣ ಲೂಟಿ ಮಾಡಿದ್ದಾರೆ. ಈ ಹಣ ಯಾರಪ್ಪನದು, ಸಾರ್ವಜನಿಕರ ದುಡ್ಡನ್ನು ಗುಳುಂ ಮಾಡಿರುವವರಿಗೆ ಇದು ಎಚ್ಚರಿಕೆ. ಈ ಯೋಜನೆ ಚಡಚಣ ಭಾಗದ ರೈತರ ಕನಸಾಗಿದೆ. ಚಡಚಣ ಏತ ನೀರಾವರಿ ಪೂರ್ಣಗೊಂಡಿದೆ ಎಂದು ಘೋಷಣೆ ಮಾಡಿರುವದರಿಂದ ರೇವಣಸಿದ್ದೇಶ್ವರ ಏತ ನೀರಾವರಿಯಲ್ಲಿ ಚಡಚಣ ಮತ್ತು ಸುತ್ತಮುತ್ತಲಿನ ಹಳ್ಳಿಗಳನ್ನು ಸೇರಿಸಿಲ್ಲ.
ಆದ್ದರಿಂದ ಈ ಭಾಗದ ರೈತರು ಯಾವುದೆ ನೀರಾವರಿ ಯೋಜನೆಗಳಿಲ್ಲದೆ ಅಕ್ಷರಶ ಅನಾಥರಾಗಿದ್ದಾರೆ. ಇಗಾಗಲೆ ಈ ವಿಷಯವಾಗಿ ಮುಖ್ಯ ಮಂತ್ರಿಗಳಿಗೆ, ಉಪ ಮುಖ್ಯ ಮಂತ್ರಿಗಳಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದೆನೆ. ಸುಮಾರು ಕೋಟಿ ವೆಚ್ಚದ ಈ ರೀತಿಯ ಯೋಜನೆ ದಕ್ಷಿಣ ಕರ್ನಾಟದಲ್ಲಿ ಹಳಿತಪ್ಪಿದ್ದರೆ ನಮ್ಮ ರಾಜಕಾರಣಿಗಳು ಸುಮ್ಮನಿರುತ್ತಿದ್ದರೆ. ಉತ್ತರ ಕರ್ನಾಟಕದ ಯೋಜನೆಗಳೆಂದರೆ ಅಧಿಕಾರಿಗಳಿಗೆ ತಾತ್ಸಾರ. ರೈತರ ಜಮೀನುಗಳಿಗೆ ಸರಿಯಾಗಿ ಪೈಪ ಅಳವಡಿಸಿಲ್ಲ, ಕೆಲವಡೆ ಪೈಪಗಳು ಒಡೆದು ಹೋಗಿವೆ. ರೈತರ ಜಮೀನುಗಳಿಗೆ ಸರಿಯಾಗಿ ನೀರು ಹರಿದರೆ ಈ ಭಾಗದ ರೈತರ ಬದುಕು ಹಸನಾಗುತ್ತದೆ.
ನೀರಾವರಿ ಖಾತೆ ಹೊಂದಿದ ಉಪ ಮುಖ್ಯ ಮಂತ್ರಿಗಳಿಗೆ ವಿನಂತಿಸಿದ ಅವರು ತಕ್ಷಣವೆ ಈ ಯೋಜನೆಯ ಮಾಹಿತಿಯನ್ನು ತರಿಸಿಕೊಂಡು ಸಮಸ್ಯೆ ಬಗೆಹರಿಸಬೇಕು. ಒಂದು ವೇಳೆ ಸರಕಾರ ಸ್ಪಂದಿಸದಿದ್ದರೆ ಏಳು ಹಳ್ಳಿಗಳ ರೈತರನ್ನು ಚಡಚಣ ತಹಶೀಲದಾರ ಕಚೇರಿಯ ಮುಂಬಾಗದಲ್ಲಿ ಟೆಂಟ ಹೋಡೆದು ದೊಡ್ಡ ಮಟ್ಟದ ಹೋರಾಟ ಮಾಡುತ್ತೆನೆ ಎಂದು ಸರಕಾರಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಜಿಪಂ ಸದಸ್ಯ ಭೀಮು ಬಿರಾದಾರ, ಮಂಡಲ ಅಧ್ಯಕ್ಷ ಸಿ.ಎಸ್ ಪಾಟೀಲ, ಸಂಜೀವ ಐಹೊಳ್ಳಿ, ಶಿವಾನಂದ ಮಖಣಾಪೂರ,ಎ.ಆರ್ ಕುಲಕರ್ಣಿ, ಸೋಮು ಅವಜಿ, ಮಹಾದೇವ ಯಂಕಂಚಿ, ರಾಜು ಕೋಳಿ, ಶ್ರೀಶೈಲ ಅಂಜುಟಗಿ ಸೇರಿದಂತೆ ಚಡಚಣ ಭಾಗದ ರೈತರು ಮತ್ತು ಸಾರ್ವಜನಿಕರು ಹಾಜರಿದ್ದರು.

