ಅನುದಾನ ಮಂಜೂರಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶಿಫಾರಸ್ಸು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸನ್ 2021-22ನೇ ಸಾಲಿನ ಕೇಂದ್ರ ಪುರಷ್ಕೃತ ಅಮೃತ 2.0 ಯೋಜನೆಯಡಿ ವಿಜಯಪುರ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಲೊನಿ/ಬಡಾವಣೆಗಳ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ರೂ.4.10 ಕೋಟಿ ಅನುದಾನ ಬಿಡುಗಡೆಯಾಗಿದೆ.
2022 ರ ಜುಲೈ 17 ರಂದು ಉದ್ಯಾನಗಳ ಅಭಿವೃದ್ಧಿಗಾಗಿ ಅನುದಾನ ಮಂಜೂರಿಸಲು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಶಿಫಾರಸ್ಸು ಮಾಡಿದ್ದರು. ಅದರಂತೆ ಈಗ ನಗರದ ವಾರ್ಡ್ ನಂ.6ರ ಅಲಕುಂಟೆ ನಗರದ ಸಿದ್ದಿವಿನಾಯಕ ಗುಡಿ ಹತ್ತಿರದ ಉದ್ಯಾನವನ ಅಭಿವೃದ್ಧಿಗೆ ರೂ.30 ಲಕ್ಷ, ವಾರ್ಡ್ ನಂ.35ರ ಗಿರಿಮಲ್ಲೇಶ್ವರ ಕಾಲೊನಿಯಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.50 ಲಕ್ಷ ಹಾಗೂ ಭವಾನಿ ನಗರದಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.50 ಲಕ್ಷ, ವಾರ್ಡ್ ನಂ.29ರ ವಜ್ರಹನುಮಾನ ನಗರದಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.40 ಲಕ್ಷ, ವಾರ್ಡ್ ನಂ.21ರ ನಂದಿನಿ ಬಡಾವಣೆಯ ಗುರುಪಾದೇಶ್ವರ ನಗರದ ಉದ್ಯಾನವನ ಅಭಿವೃದ್ಧಿಗೆ ರೂ.60 ಲಕ್ಷ, ವಜ್ರಹನುಮಾನ ಉದ್ಯಾನವನ (2) ಅಭಿವೃದ್ಧಿಗೆ ರೂ.75 ಲಕ್ಷ, ಸಾಯಿಪಾರ್ಕ್ (ಸ.ನಂ.954/6ಬಿ) ದಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.55 ಲಕ್ಷ, ಸಾಯಿಪಾರ್ಕ್ (ಸ.ನಂ.954/6ಡಿ) ದಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.50 ಲಕ್ಷ ಸೇರಿ ಒಟ್ಟು ರೂ.4.10 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದು ನಗರ ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

