ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ದೇವರ ಹುಲಗಬಾಳ ಗ್ರಾಮದಲ್ಲಿನ ರಿಸನಂ.೯೯ರಲ್ಲಿನ ೪ ಎಕರೆ ಸರಕಾರಿ ಜಮೀನನ್ನು ಜಮ್ಮಲದಿನ್ನಿ ಗ್ರಾಮದಲ್ಲಿ ೧೧೦ ಕೆ.ವಿ. ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ್ ಅವರಿಗೆ ಮಂಜೂರಿಸಲು ಉದ್ದೇಶಿಸಲಾಗಿದೆ.
ಆಕ್ಷೇಪಣೆ ಆಹ್ವಾನ: ಮಸೂತಿ ಗ್ರಾಮದ ರಿಸನಂ.೪೪೭ರ ಪೈಕಿ ೪ ಎಕರೆ ಜಮೀನು
ಕೋಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿನ ರಿಸನಂ.೪೪೭ರ ಪೈಕಿ ೪ ಎಕರೆ ಗಾಯರಾಣ ಜಮೀನು ಮಸೂತಿ ಗ್ರಾಮದಲ್ಲಿ ೧೧೦ ಕೆ.ವಿ. ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ್ ಅವರಿಗೆ ಮಂಜೂರಿಸಲು ಉದ್ದೇಶಿಸಲಾಗಿದೆ.
ಆಕ್ಷೇಪಣೆ ಆಹ್ವಾನ: ವಡವಡಗಿ ಗ್ರಾಮದ ರಿಸನಂ.೩೬೯ರ ೫ ಎಕರೆ ಜಮೀನು
ಬಸವನ ಬಾಗೇವಾಡಿ ತಾಲ್ಲೂಕಿನ ವಡವಡಗಿ ಗ್ರಾಮದಲ್ಲಿನ ರಿಸನಂ.೩೬೯ರ ೫ ಎಕರೆ ಹುಲ್ಲುಗಾವಲು ಜಮೀನನ್ನು ೧೧೦ ಕೆ.ವಿ. ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ ಅವರಿಗೆ ಮಂಜೂರಿಸಲು ಉದ್ದೇಶಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ, ಈ ಅಧಿಸೂಚನೆಯ ೩೦ ದಿನಗಳೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
