Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ ಡಾ. ಎಲ್.ಮೂರ್ತಿ ಸ್ಥಾಪಿತ ಜಿಲ್ಲಾ ಸಮಿತಿ) ವತಿಯಿಂದ ಡಾ. ಅಂಬೇಢ್ಕರ ವೃತ್ತದಿಂದ ಬೃಹತ್ ಪ್ರತಿಭಟನೆ ಮುಖಾಂತರ ೫೯ ಅಲೆಮಾರಿಗಳಿಗೆ ಶೇ. ೧ರಷ್ಟು ಪ್ರತ್ಯೇಕ ಮೀಸಲಾತಿ ನೀಡಲು ಆಗ್ರಹಿಸಿ ಜಿಲ್ಲಾಧಿಕಾರಿಗಳಾದ ಡಾ. ಆನಂದ ಅವರಿಗೆ ಮನವಿ ಸಲ್ಲಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಕರೆಕಲ್ಲ, ಪ್ರಧಾನ ಕಾರ್ಯದರ್ಶಿ ಶರಣು ದೊಡಮನಿ ಮಾತನಾಡಿ, ೧೦೧ ಪರಿಶಿಷ್ಟರ ಮೀಸಲಾತಿ ವರ್ಗೀಕರಿಸಲು ಆಗ್ರಹಿಸಿ ರಾಜ್ಯದಲ್ಲಿ ಕಳೆದ ೩೫ ವರ್ಷಗಳಿಂದ ಹೋರಾಟ ನಡೆಸಲಾಗಿದೆ. ೫೯ ಅಲೆಮಾರಿ ಜಾತಿಗಳಿಗೆ ಕೂಡಲೇ ಶೇ. ೧ ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಆದಿ ಕರ್ನಾಟಕ. ಆದಿ ಆಂಧ್ರ ಮತ್ತು ಆದಿದ್ರಾವಿಡ ಜಾತಿಗಳ ಮೂಲ ಜಾತಿಗಳನ್ನು ಗುರುತಿಸಿ ಆಯಾ ಪ್ರವರ್ಗಕ್ಕೆ ಸೇರಿಸುವ ಮೂಲಕ ಗೊಂದಲ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಕಂದಾಯ ಇಲಾಖೆಯಲ್ಲಿ ೧೦ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ೧೨ ಸಾವಿರ ಗ್ರಾಮ ಸಹಾಯಕರನ್ನು ಖಾಯಂ ಮಾಡಬೇಕು ಎಂದು ಒತ್ತಾಯಿಸಿದರು.ಈ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಖಿಲ ಭಾರತೀಯ ಝಮ್ ಝಮ್ ಅಸೋಶಿಯೇಶನ ವಾಹನ ಚಾಲಕರು ಹಾಗೂ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಅವಾಸ ಯೋಜನೆಯಡಿ ನಿರ್ಮಿಸಲಾದ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡದೆ ವಿದ್ಯುತ್ ಸಂಪರ್ಕವಿಲ್ಲದೆ ಬಿಟ್ಟು ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಿರುವದನ್ನು ಖಂಡಿಸಿ ತಲೆಮೇಲೆ ಕಲ್ಲು ಹೊತ್ತು ವಿಭಿನ್ನ ರೀತಿ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿ ಡಾ. ಆನಂದವರಿಗೆ ಮನವಿ ಸಲ್ಲಿಸಿದರು.ಅಖಿಲ ಭಾರತೀಯ ಝಮ್ ಝಮ್ ಅಸೋಶಿಯೇಶನ ರಾಜ್ಯಾಧ್ಯಕ್ಷರಾದ ಮಹಮ್ಮದಯುಸೂಫ ಮಾತನಾಡಿ, ನಗರದ ಬಸವೇಶ್ವರನಗರ ಪ್ರದೇಶದಲ್ಲಿ ಸರ್ಕಾರದ ಅವಾಸ್ ಯೋಜನೆ (ಊousiಟಿg Sಛಿheme) ಅಡಿಯಲ್ಲಿ ಸುಮಾರು ಎರಡು ಮೂರು ವರ್ಷಗಳ ಹಿಂದೆ ಮನೆಗಳನ್ನು ನಿರ್ಮಿಸಿ ಪೂರ್ಣಗೊಳಿಸಲಾಯಿತು. ಆದರೆ ಇಂದಿನವರೆಗೂ ಈ ಮನೆಗಳಿಗೆ ವಿದ್ಯುತ್ ಸಂಪರ್ಕ, ರಸ್ತೆ ವ್ಯವಸ್ಥೆ, ಮತ್ತು ಮೂಲಭೂತ ಸೌಲಭ್ಯಗಳು ಒದಗಿಸಲಾಗಿಲ್ಲ. ಅದೇ ರೀತಿ ಫಲಾನುಭವಿಗಳಿಗೆ ಮನೆ ಹಂಚಿಕೆ ಕೂಡ ಆಗಿಲ್ಲ.ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮರುಮರು ಮನವಿ ನೀಡಿದಾಗ ಅವರು “ಅಲೋಟ್ ಮಾಡ್ತೀವಿ, ವಿಚಾರಣೆ ನಡೆಯುತ್ತಿದೆ” ಎಂದು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಹಲವು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೀನುಗಾರಿಕೆ ಮಹಿಳೆಯರಿಗೆ ಒಂದು ಆದಾಯ ತರುವ ಉದ್ಯೋಗವಾಗಿದ್ದು, ಮೀನು ಪೌಷ್ಟಿಕಾಂಶಗಳ ಆಹಾರದ ಮೂಲವಾಗಿದೆ ಎಂದು ಇಂಗ್ಲೆಂಡಿನ ಖ್ಯಾತ ಮಿದುಳು ರಕ್ತನಾಳ ತಜ್ಞ ಡಾ. ಶುಜಾ ಪುಣೇಕರ ಅಭಿಪ್ರಾಯ ಪಟ್ಟರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಸಿಕ್ಯಾಬ್ ಎ.ಆರ್.ಎಸ್ ಇನಾಮ್‌ದಾರ ಮಹಿಳಾ ಮಹಾವಿದ್ಯಾಲಯ ವಿಜಯಪುರ ಇವರ ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ‘ಪ್ರಧಾನಮಂತ್ರಿ ಉಚ್ಛಶಿಕ್ಷಾ ಅಭಿಯಾನ ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ‘ಮಹಿಳೆಯರಿಗೆ ಮೀನುಗಾರಿಕೆ ಕೌಶಲ್ಯಗಳು’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.ಮೀನು ಪ್ರೋಟೀನ್ ಘಟಕದ ಮೂಲ ಆಹಾರ ಆಕಾರವಾಗಿದ್ದು, ಶುದ್ಧ ನೀರು ಹಾಗೂ ಸಾಗರೋತ್ಪನ್ನಗಳಲ್ಲಿ ಪ್ರಮುಖವಾಗಿದೆ ಎಂದು ನುಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿಕ್ಯಾಬ್ ಎ.ಆರ್.ಎಸ್.ಆಯ್ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ರಿಯಾಜ್ ಫಾರೂಕ್ ಮಾತನಾಡಿ, ಮೀನುಗಾರಿಕೆ ಒಂದು ಉದ್ಯೋಗದ ಜೊತೆಗೆ ಆದಾಯವನ್ನು ತಂದುಕೊಡುವ ಉತ್ತಮ ವೃತ್ತಿಯಾಗಿದೆ. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಒಳನಾಡು ಮೀನುಗಾರಿಕೆ ಪರಿಣಾಮಕಾರಿಯಾದ ಕ್ರಮವಾಗಿದೆ ಎಂದರು.ಕಾರ್ಯಾಗಾರದಲ್ಲಿ ಡಾ.ವಿಜಯಕುಮಾರ ‘ಗ್ರಾಮ ಪಂಚಾಯತಿ ಹಾಗೂ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಸ್ಮೃತಿ ದಿಲೀಪ್ ದಾಬೋಲೆ ಅವರು “ಎ ಸ್ಟಡಿ ಆನ್ ಫೊರ್ಜರಿ ಇಮೇಜ್ ಎನಲೈಸಿಸ್ ಯುಜಿಂಗ್ ಡಿಜಿಟಲ್ ಇಮೇಜ್ ಪ್ರೊಸೆಸಿಂಗ್ ಟೆಕ್ನಿಕ್ಸ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಸ್ಮೃತಿ ದಿಲೀಪ್ ದಾಬೋಲೆ ಅವರು ಗಣಕ ವಿಜ್ಞಾನ ವಿಭಾಗದ ಪ್ರೊ.ಜಿ.ಜಿ.ರಜಪೂತ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಸ್ಮೃತಿ ದಿಲೀಪ್ ದಾಬೋಲೆ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಅಭಿನಂದಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಾಬ್ದಿ ಮತ್ತು ವಿಜಯ ದಶಮಿಯ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅ.೧೧ ರಂದು ಭವ್ಯ ಪಥಸಂಚಲನ ಹಮ್ಮಿಕೊಳ್ಳಲಾಗಿದೆ.ಅಂದು ಮಧ್ಯಾಹ್ನ ೩ಕ್ಕೆ ಪಟ್ಟಣದ ಹುಡ್ಕೋ ಬಡಾವಣೆಯ ಗವಿಸಿದ್ದೇಶ್ವರ ಮೈದಾನದಿಂದ ಹೇಮರೆಡ್ಡಿ ಮಲ್ಲಮ್ಮ ವೃತ್ತ, ನ್ಯಾಯಾಲಯದ ಹಿಂಭಾಗ, ಈಶ್ವರ ದೇವಸ್ಥಾನ, ಸ್ಟೇಟ್ ಬ್ಯಾಂಕ್ ರಸ್ತೆ, ಬಸ್ ನಿಲ್ದಾಣದ ಮುಂಭಾಗ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂತ ಕನಕದಾಸ ವೃತ್ತ, ವಾಲ್ಮೀಕಿ ವೃತ್ತ, ಶಾರದಾ ದೇವಿ ದೇವಸ್ಥಾನ, ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ಛತ್ರಪತಿ ಶಿವಾಜಿ ವೃತ್ತ, ಸಿದ್ರಾಮೇಶ್ವರ ವೃತ್ತ, ನೇತಾಜಿ ಗಲ್ಲಿ, ಕುಂಬಾರ ಗಲ್ಲಿ, ದ್ಯಾಮವ್ವನ ಗುಡಿ, ಸರಾಫ ಬಜಾರ, ಬಜಾರ ಹನುಮಾನ ದೇವಸ್ಥಾನ, ಬೊಮ್ಮಲಿಂಗೇಶ್ವರ ದೇವಸ್ಥಾನ, ಯಮನೂರಪ್ಪನ ಕಟ್ಟೆ, ದುರ್ಗಾದೇವಿ ಗುಡಿ, ದ್ಯಾಮವ್ವನ ಕಟ್ಟೆ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಮಾರ್ಗವಾಗಿ ವಿ.ಬಿ.ಸಿ ಹೈಸ್ಕೂಲ್ ವರೆಗೆ ಸಾಗಲಿದೆ. ಬಳಿಕ ಸಂಘ ಸಭೆ ಜರುಗಲಿದ್ದು, ಸಭೆಯ ದಿವ್ಯ ಸಾನಿಧ್ಯವನ್ನು ಉಡುಪಿ…
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗವಾಯಿ ಮೇಲೆ ವಕೀಲ ರಾಕೇಶ ಶೂ ಎಸೆಯಲು ಪ್ರಯತ್ನಿಸಿದ ಪ್ರಕರಣ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸರ್ವೋಚ್ಛ ನ್ಯಾಯಾಲಯದಲ್ಲಿ, ಕಲಾಪ ವೇಳೆ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ಹಿರಿಯ ವಕೀಲ ರಾಕೇಶ ಕಿಶೋರ ಅವರು ಶೂ ಎಸೆಯಲು ಪ್ರಯತ್ನಿಸಿರುವದನ್ನು ಇಲ್ಲಿನ ನ್ಯಾಯವಾದಿಗಳ ಸಂಘ ತೀವ್ರವಾಗಿ ಖಂಡಿಸಿ ತಪ್ಪಿತಸ್ಥ ವಕೀಲನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಇಲ್ಲಿನ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ವೇಳೆ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಸಮಾಜ ನ್ಯಾಯಾಲಯದ ಮೇಲೆ, ನ್ಯಾಯಾಧೀಶರ ಮೇಲೆ, ನ್ಯಾಯವಾದಿಗಳ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದು, ಈ ಘಟನೆ ದೇಶದ ನ್ಯಾಯಾಂಗ ವ್ಯವಸ್ಥೆಗೆ ಮತ್ತು ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ಹಿರಿಯ ವಕೀಲರಾದ ಇವರಿಗೆ ತೆರೆದ ನ್ಯಾಯಾಲಯದಲ್ಲಿ ಹೇಗಿರಬೇಕು ಎನ್ನುವ ಕನಿಷ್ಟ ಸೌಜನ್ಯವೂ ಇಲ್ಲದಿರುವದು ವಿಪರ್ಯಾಸ. ಅಲ್ಲದೇ ಈ ಕೃತ್ಯ ವಕೀಲರ ಸಮುದಾಯಕ್ಕೆ ಅಪವಾದ ತಂದಂತಿದೆ. ಕಾರಣ ತಪ್ಪಿತಸ್ಥ ವಕೀಲನನ್ನು ವೃತ್ತಿಯಿಂದ ಸಪೂರ್ಣವಾಗಿ ತೆಗೆದುಹಾಕಬೇಕು ಎಂದರು.ಈ ವೇಳೆ ಹಿರಿಯ ನ್ಯಾಯವಾದಿ…
ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ೨೦೨೫ – ೨೦೨೮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-2028 ನೇ ಸಾಲಿನ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ ಅವರನ್ನು ಅಕ್ಟೋಬರ್ 08/ 2025 ರಂದು ನೇಮಕ ಮಾಡಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್ ರವಿಕುಮಾರ್ ಆದೇಶ ಹೊರಡಿಸಿದ್ದಾರೆ.ಚುನಾವಣೆ ನಿಯಮನಗಳನ್ವಯ ಮತ್ತು ಸಂಘದ ಬೈಲಾ ಪ್ರಕಾರ ಚುನಾವಣೆ ನಡೆಸಿಕೊಡಲು ಸೂಚಿಸಲಾಗಿದೆ. ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಬೈಲಾ ನಿಯಮಗಳ ಸಂಬಂಧ ಹೆಚ್ಚಿನ ಮಾಹಿತಿ ಅಗತ್ಯ ಬಿದ್ದರೆ ರಾಜ್ಯ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಿ ಎಂದು ಆದೇಶ ಪತ್ರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್ ರವಿಕುಮಾರ್ ತಿಳಿಸಿದ್ದಾರೆ.ಹಿರಿಯ ಪತ್ರಿಕೋದ್ಯಮಿ ಟಿ.ಕೆ.ಮಲಗೊಂಡ ಅವರು ಜಿಲ್ಲಾ ಚುನಾವಣಾಧಿಕಾರಿಯಾಗಿ ಸತತ ಮೂರನೇ ಬಾರಿಗೆ ನೇಮಕವಾಗಿದ್ದಾರೆ ಚುನಾವಣೆ ಪಾರದರ್ಶಕತೆಗೆ ಹೆಸರುವಾಸಿಯಾಗಿದ್ದಾರೆ ಎಂಬುದು ಇಲ್ಲಿ ಸ್ಮರಿಸಬಹುದು.
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆಜೀವನವೆಂಬುದು ಆಟವಿದ್ದಂತೆ ಎಂದು ಹೇಳುತ್ತಾರೆ. ಆಟ ಎಲ್ಲರಿಗೂ ಇಷ್ಟ ಆದರೂ ಕೆಲವರು ಮಾತ್ರ ಗೆಲ್ಲುತ್ತಾರೆ ಏಕೆ ಎಂಬ ಪ್ರಶ್ನೆಯು ಕಾಡುತ್ತದೆಯಲ್ಲವೇ? ಹೌದು, ಉನ್ನತ ಸಾಧಕರು ಈ ಆಟದ ರಹಸ್ಯ ನಿಯಮಗಳನ್ನು ತಿಳಿದಿದ್ದಾರೆ. ಹಾಗಾದರೆ ಅವರು ತಿಳಿದ ನಿಯಮಗಳಾವವು ಅಂತ ನೋಡುವುದಾದರೆ ಹೀಗಿವೆ.ಸ್ಪಷ್ಟ ಮತ್ತು ಸಶಕ್ತ ಗುರಿಗುರಿಯೇ ನಿಮ್ಮ ಕಿರು ಹೆಜ್ಜೆ ಆಗಿರಲಿ ಅದುವೇ ದೃಢ ಹೆಜ್ಜೆ. ಕಿರು ಹೆಜ್ಜೆಯಲ್ಲೇ ಯಶಸ್ಸಿನ ಸಾಧ್ಯತೆ ಹೆಚ್ಚು! ಏಕೆಂದರೆ, ಗುರಿಗಳನ್ನು ಹೊಂದಿಸಿದಾಗ ಹೆಚ್ಚು ತುರ್ತು ಮತ್ತು ಉದ್ದೇಶದಿಂದ ಕೆಲಸ ಮಾಡಬಲ್ಲಿರಿ. ನಿಗದಿ ಪಡಿಸಿದ ಆದ್ಯತೆಗಳಿಂದ ನಿಗದಿತ ಗಡುವಿನಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.. ಗುರಿಗಳು ಗೆಲುವಿನ ಬಾಗಿಲಿಗೆ ಕರೆದೊಯ್ಯುತ್ತವೆ ಎಂಬುದನ್ನು ಮರೆಯದಿರಿ.ಮನಸ್ಸನ್ನು ಗುರಿಯ ಕಡೆ ಮಾತ್ರ ಅಂದರೆ ಒಂದೆಡೆ ನಿಲ್ಲಿಸುವುದು ಕಷ್ಟದ್ದು ಅನಿಸುತ್ತದೆ. ಹೀಗಾಗಿ ಗುರಿ ಸಾಧನೆಯನ್ನು ಮುಂದೂಡಲಾಗುತ್ತದೆ. ತನ್ನ ವಿದ್ಯಾರ್ಥಿಗಳ ಗಮನವನ್ನು ಕೇಂದ್ರೀಕರಿಸಲು ಮಹಾ ಜೆನ್ ಗುರು ರಿನಜಯ್ ಆಗಾಗ್ಗೆ ತನ್ನ ಬೆರಳನ್ನು ಮೇಲಕ್ಕೆತ್ತುತ್ತಿದ್ದ ಮತ್ತು ನಿಧಾನವಾಗಿ…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ ೦೭-೧೦-೨೦೨೫ ಮಂಗಳವಾರದಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತುಮೂಲಸೌಕರ್ಯ ಅಭಿವೃದ್ಧಿ ಸಚಿವರು ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರು ಡಾ.ಎಂ.ಬಿ.ಪಾಟೀಲ ಅವರ ಜನ್ಮ ದಿನದ ಹಿನ್ನೆಲೆ ಮಹಾವಿದ್ಯಾಲಯದ ಆವರಣದಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆ ಸಂಕಲ್ಪ ಮಾಡಲಾಯಿತು.ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ,ಉಪಪ್ರಾಚಾರ್ಯ ಡಾ.ಅನೀಲ್ .ಭೀ ನಾಯಕ,ಡಾ.ಮಹೇಶಕುಮಾರ, ಡಾ.ಶ್ರೀನಿವಾಸ ದೊಡ್ಡಮನಿ, ಡಾ.ಉಷಾದೇವಿ ಹಿರೇಮಠ, ಪ್ರೊ.ವಿದ್ಯಾ ಪಾಟೀಲ,ಡಾ.ಕೃಷ್ಣಾ ಮಂಡ್ಲಾ,ಡಾ.ಎಸ್ ಡಿ.ಲಮಾಣಿ,ಡಾ.ಅಮೀತ್ ತೇರದಾಳೆ,ಪ್ರೊ.ಜೆ.ಬಿಬಿರಾದಾರ ಸೇರಿದಂತೆ ಇನ್ನಿತರ ಮಹಾವಿದ್ಯಾಲಯದ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ. ಭಾರತದ ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿಗಳಾದ ಸಿಜೆಐ ಬಿ. ಆರ್. ಗವಾಯಿ ಅವರ ಮೇಲೆ ರಾಕೇಶ ಕಿಶೋರ್ ಎಂಬ ಹಿರಿಯ ವಕೀಲ ನ್ಯಾಯಾಲಯ ಸಭಾಂಗಣದಲ್ಲಿ ಶೂ ಎಸೆದು ಭಾರತದ ಉಚ್ಛ ನ್ಯಾಯಾಲಯಕ್ಕೆ ಹಾಗೂ ಭಾರತದ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರರವರಿಗೆ ತೀವ್ರ ಅವಮಾನ ಮಾಡಿದ್ದು, ಈ ನ್ಯಾಯವಾದಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿಗಳು ಕಾನೂನಿನ ಪ್ರಕಾರ ತೀರ್ಮಾನ ನೀಡಿದ್ದಾರೆ, ಸನಾತನ ಧರ್ಮದ ಹೆಸರಿನಲ್ಲಿ ನ್ಯಾಯಾಲಯಕ್ಕೆ ಅವಮಾನ ಎಸೆದ ಈ ನ್ಯಾಯವಾದಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮುಖ್ಯ ನ್ಯಾಯಾಧೀಶರು ದಲಿತ ಎನ್ನುವ ಭಾವದಿಂದ ನ್ಯಾಯವಾದಿ ಶೂ ಎಸೆದಿರುವದು ತೀವ್ರ ಖಂಡನೀಯ ಎಂದು ಜಿಲ್ಲಾ ಶಿವಶರಣ ಸಮಗಾರ ಹರಳಯ್ಯ ಸಮಾಜದ ಮುಖಂಡ ವಸಂತ ಎಸ್ ಹೊನಮೊಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
