ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಖಿಲ ಭಾರತೀಯ ಝಮ್ ಝಮ್ ಅಸೋಶಿಯೇಶನ ವಾಹನ ಚಾಲಕರು ಹಾಗೂ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಅವಾಸ ಯೋಜನೆಯಡಿ ನಿರ್ಮಿಸಲಾದ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡದೆ ವಿದ್ಯುತ್ ಸಂಪರ್ಕವಿಲ್ಲದೆ ಬಿಟ್ಟು ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಿರುವದನ್ನು ಖಂಡಿಸಿ ತಲೆಮೇಲೆ ಕಲ್ಲು ಹೊತ್ತು ವಿಭಿನ್ನ ರೀತಿ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿ ಡಾ. ಆನಂದವರಿಗೆ ಮನವಿ ಸಲ್ಲಿಸಿದರು.
ಅಖಿಲ ಭಾರತೀಯ ಝಮ್ ಝಮ್ ಅಸೋಶಿಯೇಶನ ರಾಜ್ಯಾಧ್ಯಕ್ಷರಾದ ಮಹಮ್ಮದಯುಸೂಫ ಮಾತನಾಡಿ, ನಗರದ ಬಸವೇಶ್ವರನಗರ ಪ್ರದೇಶದಲ್ಲಿ ಸರ್ಕಾರದ ಅವಾಸ್ ಯೋಜನೆ (ಊousiಟಿg Sಛಿheme) ಅಡಿಯಲ್ಲಿ ಸುಮಾರು ಎರಡು ಮೂರು ವರ್ಷಗಳ ಹಿಂದೆ ಮನೆಗಳನ್ನು ನಿರ್ಮಿಸಿ ಪೂರ್ಣಗೊಳಿಸಲಾಯಿತು. ಆದರೆ ಇಂದಿನವರೆಗೂ ಈ ಮನೆಗಳಿಗೆ ವಿದ್ಯುತ್ ಸಂಪರ್ಕ, ರಸ್ತೆ ವ್ಯವಸ್ಥೆ, ಮತ್ತು ಮೂಲಭೂತ ಸೌಲಭ್ಯಗಳು ಒದಗಿಸಲಾಗಿಲ್ಲ. ಅದೇ ರೀತಿ ಫಲಾನುಭವಿಗಳಿಗೆ ಮನೆ ಹಂಚಿಕೆ ಕೂಡ ಆಗಿಲ್ಲ.
ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮರುಮರು ಮನವಿ ನೀಡಿದಾಗ ಅವರು “ಅಲೋಟ್ ಮಾಡ್ತೀವಿ, ವಿಚಾರಣೆ ನಡೆಯುತ್ತಿದೆ” ಎಂದು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಹಲವು ಲೇಖ ಪತ್ರಗಳು ಹಾಗೂ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ, ಇದು ಸ್ಪಷ್ಟವಾದ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಹಣದ ದುರುಪಯೋಗವಾಗಿದೆ. ಈ ಮನೆಗಳು ವರ್ಷಗಳಿಂದ ಖಾಲಿ ಬಿಟ್ಟು ಹಾನಿಗೊಳಗಾಗುತ್ತಿವೆ, ಬಡ ಕುಟುಂಬಗಳು ಇನ್ನೂ ಬೀದಿಯಲ್ಲೇ ಬದುಕಬೇಕಾದ ಪರಿಸ್ಥಿತಿನಿರ್ಮಾಣವಾಗಿದೆ. ಹಿಂದಿನ ದಿನಗಳಲ್ಲಿ ಬಾಗಲಕೋಟೆ, ಕಲಬುರ್ಗಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಇದೇ ರೀತಿಯಾಗಿ ಅವಾಸ್ ಯೋಜನೆಯಡಿ ನಿರ್ಮಿತ ಮನೆಗಳನ್ನು ಹಂಚಿಕೆ ಮಾಡದೇ ಖಾಲಿ ಬಿಟ್ಟ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ತನಿಖೆ ನಡೆಸಿ, ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿತ್ತು.ಇಂತಹ ಕ್ರಮವನ್ನು ವಿಜಯಪುರದಲ್ಲಿಯೂ ಕೈಗೊಳ್ಳುವುದು ಅಗತ್ಯವಾಗಿದೆ.
ಈ ವಿಷಯದಲ್ಲಿ ಜಿಲ್ಲಾ ಆಡಳಿತ ತ್ವರಿತ ಕ್ರಮ ಕೈಗೊಳ್ಳದಿದ್ದರೆ, ನಾಗರಿಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಫಲಾನುಭವಿಗಳು ಒಟ್ಟಾಗಿ ಶಾಂತಿಪೂರ್ಣ ಪ್ರತಿಭಟನೆನಾವು ಕಾನೂನುಬದ್ಧ ಮತ್ತು ಪ್ರಜಾಪ್ರಭುತ್ವ ಮಾರ್ಗದಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಿವಗಂಗಾ ಕಟ್ಟಿಮನಿ, ಸವಿತಾ ಜಾಧವ, ಶೋಭಾ ರಾಠೋಡ, ದಾನಮ್ಮ ಕುಚನೂರ, ವೈಶಾಲಿ ಬಾಗೇವಾಡಿ, ವರ್ಷಾ, ಪಾರ್ವತಿ ಹಾವಿನಾಳ, ಯಾಸ್ಮೀನ ಕಲ್ಲೂರ, ಮಶಾಕ ಕವಲಗಿ, ಶಿವಮ್ಮಾ, ರೇಷ್ಮಾ ಖಾಜಿ, ಶ್ರೀದೇವಿ ಹಿರೇಮಠ, ರುಕ್ಸನಾ ಮುಲ್ಲಾ, ಉಪಸ್ಥಿತರಿದ್ದರು.