ಉದಯರಶ್ಮಿ ದಿನಪತ್ರಿಕೆ
ವಿಜಯಪುರ. ಭಾರತದ ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿಗಳಾದ ಸಿಜೆಐ ಬಿ. ಆರ್. ಗವಾಯಿ ಅವರ ಮೇಲೆ ರಾಕೇಶ ಕಿಶೋರ್ ಎಂಬ ಹಿರಿಯ ವಕೀಲ ನ್ಯಾಯಾಲಯ ಸಭಾಂಗಣದಲ್ಲಿ ಶೂ ಎಸೆದು ಭಾರತದ ಉಚ್ಛ ನ್ಯಾಯಾಲಯಕ್ಕೆ ಹಾಗೂ ಭಾರತದ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರರವರಿಗೆ ತೀವ್ರ ಅವಮಾನ ಮಾಡಿದ್ದು, ಈ ನ್ಯಾಯವಾದಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿಗಳು ಕಾನೂನಿನ ಪ್ರಕಾರ ತೀರ್ಮಾನ ನೀಡಿದ್ದಾರೆ, ಸನಾತನ ಧರ್ಮದ ಹೆಸರಿನಲ್ಲಿ ನ್ಯಾಯಾಲಯಕ್ಕೆ ಅವಮಾನ ಎಸೆದ ಈ ನ್ಯಾಯವಾದಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮುಖ್ಯ ನ್ಯಾಯಾಧೀಶರು ದಲಿತ ಎನ್ನುವ ಭಾವದಿಂದ ನ್ಯಾಯವಾದಿ ಶೂ ಎಸೆದಿರುವದು ತೀವ್ರ ಖಂಡನೀಯ ಎಂದು ಜಿಲ್ಲಾ ಶಿವಶರಣ ಸಮಗಾರ ಹರಳಯ್ಯ ಸಮಾಜದ ಮುಖಂಡ ವಸಂತ ಎಸ್ ಹೊನಮೊಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

