Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವ ಸಂಸ್ಕೃತಿ ಅಭಿಯಾನ, ಲಿಂಗಾಯತ ಮಠಾಧೀಶರ ಒಕ್ಕೂಟದ ವಿರುದ್ಧ ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನಕಾರಿಯಾಗಿ ಮಾತನಾಡಿರುವ ಹಿನ್ನೆಲೆ ಕನ್ಹೇರಿ ಸ್ವಾಮೀಜಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.ಗುರುವಾರ ಮಠಾಧೀಶರ ನೇತೃತ್ವದಲ್ಲಿ ವಿವಿಧ ಬಸವ ಪರ ಸಂಘಟನೆಗಳಿಂದ ಹೋರಾಟ ನಡೆಸಿ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರಹಾಕಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಜೀವ ವೈವಿದ್ಯತೆ ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಈ ಪ್ರಪಂಚವೇ ಒಂದು ಅದ್ಭುತಗಳ ತವರೂರು ಈ ಭೂಮಿಯಲ್ಲಿ ಹಲವಾರು ವೈವಿಧ್ಯಮಯ ಪ್ರಾಣಿ ಪಕ್ಷಿಗಳು ಸ್ವಚ್ಛಂದವಾಗಿ ಜೀವಿಸುತ್ತಿವೆ. ಕೆಲವೊಂದು ಹೊರ ಜಗತ್ತಿನ ಪರಿಚಯಕ್ಕೆ ಬಂದರೆ ಕೆಲವೊಂದು ಪ್ರಾಣಿ ಪಕ್ಷಿಗಳು ಹಾಗೂ ಅವುಗಳ ವೈಶಿಷ್ಟ್ಯತೆಗಳು ಹೊರ ಪ್ರಪಂಚಕ್ಕೆ ಗೋಚರಿಸುವುದೇ ಇಲ್ಲ. ಅಂತಹ ಪಕ್ಷಿಗಳ ಪೈಕಿ ‘ಅನ್ನಾಸ್ ಹಮ್ಮಿಂಗ್ ಬರ್ಡ್’ ಪಕ್ಷಿಯೂ ಒಂದು. ಹಮ್ಮಿಂಗ್ ಬರ್ಡ್ ಪಕ್ಷಿಗಳ ಮೂಲ ಉತ್ತರ ಅಮೆರಿಕದ ಪಶ್ಚಿಮ ಕರಾವಳಿ ತೀರಗಳು. ಈ ಪಕ್ಷಿಗಳು ತಮ್ಮ ಸಂತಾನಾಭಿವೃದ್ಧಿಯನ್ನು ಕೇವಲ ಉತ್ತರ ಬಾಜಾ ಕ್ಯಾಲಿಫೋರ್ನಿಯಾ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಗಳಲ್ಲಷ್ಟೇ ಮಾಡುತ್ತವೆ. ‘ಅನ್ನಾಸ್ ಹಮ್ಮಿಂಗ್ ಬರ್ಡ್’ (‘ಕ್ಯಾಲಿಪ್ಟೆ ಅನ್ನಾ’) ಉತ್ತರ ಅಮೆರಿಕಾದ ಹಮ್ಮಿಂಗ್ ಬರ್ಡ್ ಜಾತಿಯಾಗಿದ್ದು, ‘ರಿವೋಲಿಯ ಡಚೆಸ್ ಅನ್ನಾ ಮಸೆನಾ’ ಅವರ ಹೆಸರನ್ನು ಈ ಪಕ್ಷಿಗೆ ಇಡಲಾಗಿದೆ. ಜೀವಿವರ್ಗೀಕರಣಅನ್ನಾ ಹಮ್ಮಿಂಗ್ ಬರ್ಡ್ ಬಗ್ಗೆ ಔಪಚಾರಿಕವಾಗಿ ೧೮೨೯ರಲ್ಲಿ ಫ್ರೆಂಚ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಒಂದೇ ಸೂರಿನಡಿ ಅಲೊಪಥಿ ಮತ್ತು ಆಯುರ್ವೇದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಗರದ ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜಿನ ಆವರಣದಲ್ಲಿರುವ ನಗರ ಆರೋಗ್ಯ ಕೇಂದ್ರ ಮತ್ತು ಬಿ.ಎಲ್.ಡಿ.ಇ ಹೈಟೆಕ್ ಆಯುರ್ವೇದ ಆಸ್ಪತ್ರೆಯಲ್ಲಿ ಅಕ್ಟೋಬರ್ 17 ರಂದು ಶುಕ್ರವಾರ ನಡೆಯಲಿದೆ.ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಗೆ ಈ ಶಿಬಿರ ನಡೆಯಲಿದ್ದು, ಅಲೋಪಥಿ ಚಿಕಿತ್ಸೆಗಳು, ಬೆಂಬಲಿತ ಸೇವೆಗಳು, ಆಯುರ್ವೇದ ಚಿಕಿತ್ಸೆಗಳು ಲಭ್ಯವಿರಲಿವೆ. ಈ ಶಿಬಿರದಲ್ಲಿ ಅಲೋಪತಿ ಚಿಕಿತ್ಸೆಗಳಾದ ವೈದ್ಯಕೀಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀ ರೋಗ ಚಿಕಿತ್ಸೆ, ಚಿಕ್ಕಮಕ್ಕಳ ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ಇದಕ್ಕೆ ಬೆಂಬಲಿತ ಸೇವೆಗಳಾದ ಎಲ್ಲಾ ಬಗೆಯ ರಕ್ತ ಪರೀಕ್ಷೆಗಳು, ಔಷಧಾಲಯ, ತುರ್ತು ಸೇವೆಗಳು ಮತ್ತು 24×7 ಆಂಬೂಲನ್ಸ್ ಸೇವೆಗಳು ಸಿಗಲಿವೆ. ಅಲ್ಲದೇ, ಆಯುರ್ವೇದ ಚಿಕಿತ್ಸೆಗಳಾದ ಪಂಚಕರ್ಮ, ಕಾಯಚಿಕಿತ್ಸೆ, ಶಲ್ಯತಂತ್ರ, ಕಣ್ಣು, ಕಿವಿ, ಮೂಗುಗ, ಗಂಟಲು, ತಪಾಸಣೆ, ಪ್ರಸೂತಿ ಮತ್ತು ಸ್ತ್ರೀ ರೋಗ ತಪಾಸಣೆ, ಬಾಲ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ ಕಾಲೇಜಿನಲ್ಲಿ ಅಕ್ಟೋಬರ್ 13 ಮತ್ತು 14 ರಂದು ದಕ್ಷಿಣ ಕೋರಿಯಾದ ಪ್ರತಿಷ್ಠಿತ ಸಿ.ಎನ್.ಸಿ ಯಂತ್ರಗಳ ಉತ್ಪಾದಕ ಸಂಸ್ಥೆ ಡಿ. ಎನ್. ಸೊಲೂಶನ್ಸ್ ಆಯೋಜಿಸಿದ್ದ ಎರಡು ದಿನಗಳ ಉದ್ಯೋಗ ಮೇಳದಲ್ಲಿ 32 ಜನ ಆಯ್ಕೆಯಾಗಿದ್ದಾರೆ.ಬೆಂಗಳೂರಿನ ಡಿ. ಎನ್. ಸೊಲೂಶನ್ಸ್ ಸಂಸ್ಥೆಯ ಉಪಾಧ್ಯಕ್ಷ ಸುರೇಶ ನಾರಾಯಣ ಮತ್ತು ಮಾನವ ಸಂಪನ್ಮೂಲ ಅಧಿಕಾರಿ ಸ್ಮೀತಾ ಆರ್. ಅವರು ಈ ಉದ್ಯೋಗ ಮೇಳದಲ್ಲಿ ನಡೆಸಿದ ಸಂದರ್ಶನದಲ್ಲಿ ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಡಿಪ್ಲೋಮಾ ಮೆಕ್ಯಾನಿಕಲ್ ಎಂಜಿಜಿನೀಯರಿಂಗ್, ಎಲೆಕ್ಟ್ರಿಕಲ್ ಎಂಜಿನೀಯರಿಂಗ್ ವಿಭಾಗದ 140ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪಿ. ಬಿ. ಕಳಸಗೊಂಡ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಎಂ. ಸಿ. ಬಿರಾದಾರ, ಪ್ಲೇಸಮೆಂಟ್ ಅಧಿಕಾರಿ ಸುಧನ್ವ ವಿ. ಕುಲಕರ್ಣಿ, ಸಂತೋಷ ಹಿರೇಮಠ, ಪಾಂಡುರಂಗ ಅಸ್ಲಂಕರ, ಎಲ್ಲ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು.ಈ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾ, ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಮುಖ್ಯ ಅತಿಥಿ, ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ ಹೇಳಿದರು.ಪಟ್ಟಣದ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಮಾರು ಹದಿನೈದು ವರ್ಷಗಳ ನಂತರ ಶಾಲೆಯ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ಅರ್ಥಪೂರ್ಣ ಕಾರ್ಯಕ್ರಮ ಏರ್ಪಡಿಸಿದ್ದು ಶ್ಲಾಘನೀಯವಾದುದು. ಹದಿನೈದು ವರ್ಷಗಳ ನಂತರ ಗುರು ಶಿಷ್ಯರು ಸಮಾಗಮ ಸಂತಸ ಇವತ್ತಿನ ದಿನಮಾನದಲ್ಲಿ ಗುರುವೇನೂ ಮಹಾ ಅನ್ನುವ ಕಾಲದಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳು ಗುರುಗಳ ಮೇಲೆ ಇಟ್ಟಿರುವ ಭಕ್ತಿಯೇ ಮುಕ್ತಿ ಇವತ್ತು ಅದೆಷ್ಟು ವಿದ್ಯಾರ್ಥಿಗಳು ಡಾಕ್ಟರ್ಸ್, ಇಂಜಿನಿಯರ್ಸ್, ಪೊಲೀಸ್, ಪಿಎಸ್ಐ, ಶಿಕ್ಷಕರು, ದೊಡ್ಡ ದೊಡ್ಡ ಉದ್ಯಮಿದರರಾಗಿದ್ದು, ನೋಡಿದರೆ ಗುರುವಿಗೆ ತುಂಬಾ ಸಂತೋಷವಾಗುತ್ತದೆ. ಗುರುಗಳ ಮಾತನ್ನು ಕೇಳದ ವಿದ್ಯಾರ್ಥಿಗಳು ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಎನಿಸುತ್ತಿದೆ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೈನಂದಿನ ಚಟುವಟಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಶ್ರಮದಾನ ಮಾಡಲಾಯಿತು.ಇದೇ ವೇಳೆ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ ಸಿದ್ದಲಿಂಗ ರಾಠೋಡ್, ಕಾಲೇಜಿನ ಸ್ವಚ್ಛತೆಗೆ ಮೊದಲ ಆದ್ಯತೆ ನೀಡೋಣ, ನಮ್ಮ ಕಾಲೇಜು ನಮ್ಮ ಹೆಮ್ಮೆಯ, ಹಾಗಾಗಿ ಕಾಲೇಜಿನ ಆವರಣದಲ್ಲಿ ಬೆಳೆದಿರುವ ಮುಳ್ಳು, ಕಂಟಿಗಳನ್ನು, ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವ ಕಾರ್ಯದಲ್ಲಿ ಸ್ವಯಂ ಸೇವಕರು ಸ್ವಯಂಪ್ರೇರಿತವಾಗಿ ನಾ ಮುಂದು ತಾ ಮುಂದು ಎಂದು ಪಾಲ್ಗೊಂಡಿದ್ದು, ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಪ್ರಾಂಶುಪಾಲರಾದ ಪ್ರೊ ನಾಗಪ್ಪ ಚಾವಲ್ಕರ್, ಡಾ ಪೂಜಾ ಹೊನ್ನುಟಗಿ, ನಸ್ರೀನ್ ತಾಜ್, ಮಲ್ಲಿಕಾರ್ಜುನ ಮರಡ್ಡಿ, ಶಶಿಕುಮಾರ ಎತ್ತಿನಮನಿ, ಡಾ ಯಂಕನಗೌಡ ಪಾಟೀಲ್, ಡಾ ಮಲ್ಲಣ್ಣ ಬಿಳೆಬಾವಿ, ಡಾ ಸುರೇಶ ಪಾಟೀಲ, ಬೋಧಕೇತರ ಸಿಬ್ಬಂದಿ ಸಂಗಮೇಶ ಪಟ್ಟಣಕರ್, ಮಾಸುಮ ಅಲಿ ನಾಶಿ, ಸೇರಿದಂತೆ ವಿದ್ಯಾರ್ಥಿಗಳು…
ಉದಯರಶ್ಮಿ ದಿನಪತ್ರಿಕೆ ಚಡಚಣ: ಲೋಣಿ ಬಿ.ಕೆ. ವಲಯದ ಬರಡೋಲ ಗ್ರಾಮದಲ್ಲಿ ಬುಧವಾರ ನಡೆದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಗಾರದಲ್ಲಿ ತಾಲೂಕಿನ ಯೋಜನಾಧಿಕಾರಿ ನಟರಾಜ ಎಲ್.ಎಂ. ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಟರಾಜ. ಎಲ್.ಎಮ್ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಆರ್ಥಿಕ ಸ್ಥಿರತೆ ಅಗತ್ಯ. ಒಕ್ಕೂಟಗಳ ಬಲಪಡಿಸುವಿಕೆ ಮತ್ತು ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಗ್ರಾಮೀಣ ಸಮಾಜದ ಅಭಿವೃದ್ಧಿಗೆ ವೇಗ ಸಿಗುತ್ತದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿನ್ನೆಲೆ, ಉದ್ದೇಶ ಮತ್ತು ಕಾರ್ಯಪದ್ಧತಿ, ಜೊತೆಗೆಒಕ್ಕೂಟ ರಚನೆ, ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಸಭೆಗಳ ಪರಿಣಾಮಕಾರಿ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಿದರು.ಬ್ಯಾಂಕಿಂಗ್ ಮತ್ತು ಸಾಲ ಸೌಲಭ್ಯಗಳ ಕುರಿತು ಮಾರ್ಗದರ್ಶನ ನೀಡಿ ಜಿಲ್ಲಾ ವಿಚಕ್ಷಣಾಧಿಕಾರಿ ಯಮನೂರಪ್ಪನವರು ಮಾತನಾಡಿ, ಬ್ಯಾಂಕ್‌ಗಳ ಮೂಲಕ ಸಾಲ ಮತ್ತು ಪ್ರಗತಿ ನಿಧಿ ವಿತರಣೆ, ಸಾಲದ ಸದ್ವಿನಿಯೋಗ ಮತ್ತು ಸಂಘದ ಕಾರ್ಯಪದ್ಧತಿ, ಪ್ರಗತಿ ರಕ್ಷಾ ಕವಚ ಕಾರ್ಯಕ್ರಮ, ಸಿ.ಸಿ. ಖಾತೆ ನಿರ್ವಹಣೆ ಮತ್ತು ಲಾಭಾಂಶ ವಿತರಣೆ ಕುರಿತಾಗಿ ಮಾಹಿತಿ ನೀಡಿದರು.ಲೋಣಿ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಕಾಂಗ್ರೆಸ್ ಪಕ್ಷದ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ವಿಭಾಗದ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರನ್ನಾಗಿ ಮುಖಂಡ ತೌಫಿಕ ಪಾರ್ಥನಳ್ಳಿ ಅವರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ, ಕಾನೂನು ಮಾನವ ಹಾಗೂ ಮಾಹಿತಿ ಹಕ್ಕುಗಳ ವಿಭಾಗದ ಉಪಾಧ್ಯಕ್ಷ ಡಾ.ಎ.ಜೆ.ಅಕ್ರಂ ಪಾಶಾ ಅವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ಭಾರತ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ.ಟಿ.ವೈ.ಕುಮಾರ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾಟಕ ಕ್ಷೇತ್ರದಲ್ಲಿ ತಮ್ಮ ಅಪರೂಪದ ಅಭಿನಯದ ಮೂಲಕ ನಾಡಿನ ಜನರ ಹೃದಯ ಗೆದ್ದಿದ್ದ ಖ್ಯಾತ ಹಾಸ್ಯ ನಟ ಹಾಗೂ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆಯವರ ಕೊಡುಗೆ ನಾಡಿನ ಕಲಾಕ್ಷೇತ್ರಕ್ಕೆ ಅನನ್ಯವಾದದ್ದು. ಅವರಿಗೆ ಅವರೇ ಸರಿಸಾಟಿ. ಅವರ ಅಕಾಲಿನ ನಿಧನದಿಂದ ಸರ್ವಶ್ರೇಷ್ಠ ಹಾಸ್ಯ ನಟನನ್ನು ಕಳೆದುಕೊಂಡು ನಾಡಿನ ಸಾಂಸ್ಕೃತಿಕ ಕ್ಷೇತ್ರ ಬಡವಾಗಿದೆಯೆಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹೇಳಿದರು.ಬುಧವಾರ ಕರ್ನಾಟಕ ಬಾಲವಿಕಾಸ ಅಕಾಡೆಮಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ದಿ.ರಾಜು ತಾಳಿಕೋಟಿಯವರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಅಕಾಡೆಮಿಯ ಅಧಿಕಾರಿಗಳಾದ ಅನ್ನಪೂರ್ಣ ಸಂಗಳದ ಪುಷ್ಪಾ ಹಂಜಗಿ, ಸುಭಾಸ ಚಂದ್ರಗಿರಿ, ಸವರ್ಣಲತಾ ಮಠದ, ಪದ್ಮಶ್ರೀ ಮೇಟಿ, ಅರ್ಪಿತಾ, ಶಿವಕುಮಾರ, ಸ್ಟ್ಯಾನ್ಲಿಲೂಥರ, ಅಶೋಕ ಮೊದಲಾದವರು ಉಪಸ್ಥಿತರಿದ್ದರು
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಾಗದು. ನಮ್ಮ ಬದುಕಿಗೆ ಬಣ್ಣ ಮತ್ತು ಜ್ಞಾನ ನೀಡಿದ ಶಿಕ್ಷಕರು ಜೀವನಕ್ಕೆ ದಾರಿ ತೋರುವ ಜ್ಯೊತಿ ಇದ್ದಹಾಗೆ ಎಂದು ಓಲೇಮಠದ ಆನಂದ ದೇವರು ಹೇಳಿದರು.ಇಲ್ಲಿನ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ 2006-07ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಅಪೂರ್ವ ಸ್ನೇಹ ಸಂಗಮ ಹಾಗೂ ಗುರುಸ್ಮೃತಿ ಕಾರ್ಯಕ್ರಮದ ಸಾನ್ನಿದ್ಯವಹಿಸಿ ಮಾತನಾಡಿದರು.ಶಿಕ್ಷಕರು ಅಕ್ಷರ ಜ್ಞಾನದೊಂದಿಗೆ ಶಿಸ್ತು, ಸಂಯಮ ಮತ್ತು ಜೀವನ ಮೌಲ್ಯಗಳನ್ನು ಕಲಿಸಿ ನಮ್ಮನ್ನು ಉತ್ತಮ ಪ್ರಜೆಗಳಾಗಿ ರೂಪಿಸುವ ಶಕ್ತಿ ಹೊಂದಿದ್ದಾರೆ. ಯಾರ ಜೀವನದಲ್ಲಿ ಮುಳ್ಳಾಗದೆ ಇನ್ನೊಬ್ಬರ ಜೀವನಕ್ಕೆ ಮಾದರಿಯಾಗಬೇಕು ಎಂದರು. ಮುತ್ತೂರ ರಾಚೋಟೇಶ್ವರ ವಿರಕ್ತಮಠದ ಗುರುಸಿದ್ದೇಶ್ವರ ಸ್ವಾಮಿಗಳು ಮಾತನಾಡಿ, ಮಕ್ಕಳ ಜೀವನ ಉಜ್ವಲಗೊಳಿಸುವ ಕಾರ್ಯ ಶಿಕ್ಷಕರಿಗೆದೆ. ಒಬ್ಬ ಶ್ರೇಷ್ಠ ಗುರು ವ್ಯಕ್ತಿ ಅಲ್ಲ ಅದೊಂದು ಶಕ್ತಿ, ಸ್ನೇಹಿತರನ್ನು ಹಣದಿಂದ ಅಳೆಯಲು ಸಾದ್ಯವಿಲ್ಲ ಅವರನ್ನು ಒಳ್ಳೆಯ ಮನಸ್ಸಿನಿಂದ ಅಳೆಯಲು ಸಾದ್ಯ. ಅಪೂರ್ವ ಸ್ನೇಹ ಸಂಗಮ ಹೀಗೆ ಮುಂದುವರೆಯಲಿ ಎಂದರು.ಶಿಕ್ಷಕ ಪ್ರಭು ಹಿಡಕಲ್, ಆರ್.ಎಸ್.…
