ಉದಯರಶ್ಮಿ ದಿನಪತ್ರಿಕೆ
ಚಡಚಣ: ಲೋಣಿ ಬಿ.ಕೆ. ವಲಯದ ಬರಡೋಲ ಗ್ರಾಮದಲ್ಲಿ ಬುಧವಾರ ನಡೆದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಗಾರದಲ್ಲಿ ತಾಲೂಕಿನ ಯೋಜನಾಧಿಕಾರಿ ನಟರಾಜ ಎಲ್.ಎಂ. ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಟರಾಜ. ಎಲ್.ಎಮ್ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಆರ್ಥಿಕ ಸ್ಥಿರತೆ ಅಗತ್ಯ. ಒಕ್ಕೂಟಗಳ ಬಲಪಡಿಸುವಿಕೆ ಮತ್ತು ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಗ್ರಾಮೀಣ ಸಮಾಜದ ಅಭಿವೃದ್ಧಿಗೆ ವೇಗ ಸಿಗುತ್ತದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿನ್ನೆಲೆ, ಉದ್ದೇಶ ಮತ್ತು ಕಾರ್ಯಪದ್ಧತಿ, ಜೊತೆಗೆಒಕ್ಕೂಟ ರಚನೆ, ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಸಭೆಗಳ ಪರಿಣಾಮಕಾರಿ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಿದರು.
ಬ್ಯಾಂಕಿಂಗ್ ಮತ್ತು ಸಾಲ ಸೌಲಭ್ಯಗಳ ಕುರಿತು ಮಾರ್ಗದರ್ಶನ ನೀಡಿ ಜಿಲ್ಲಾ ವಿಚಕ್ಷಣಾಧಿಕಾರಿ ಯಮನೂರಪ್ಪನವರು ಮಾತನಾಡಿ, ಬ್ಯಾಂಕ್‌ಗಳ ಮೂಲಕ ಸಾಲ ಮತ್ತು ಪ್ರಗತಿ ನಿಧಿ ವಿತರಣೆ, ಸಾಲದ ಸದ್ವಿನಿಯೋಗ ಮತ್ತು ಸಂಘದ ಕಾರ್ಯಪದ್ಧತಿ, ಪ್ರಗತಿ ರಕ್ಷಾ ಕವಚ ಕಾರ್ಯಕ್ರಮ, ಸಿ.ಸಿ. ಖಾತೆ ನಿರ್ವಹಣೆ ಮತ್ತು ಲಾಭಾಂಶ ವಿತರಣೆ ಕುರಿತಾಗಿ ಮಾಹಿತಿ ನೀಡಿದರು.
ಲೋಣಿ ಬಿ.ಕೆ. ವಲಯದ ಮಹಾಂತೇಶ ನಿರೂಪಣೆ ಮಾಡಿ ಸಿದ್ದಪ್ಪ ಚುಳಕಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸೇವಾಪ್ರತಿನಿಧಿಗಳಾದ ಸಂಗೀತ ಉಟಗಿ, ಶಶಿಕಲಾ ಲೋಣಿ, ಶ್ರೀದೇವಿ ಕಾಳೆ, ವಿಮಲಾ ಗೌಡನೂರ, ಲಕ್ಷ್ಮಿ ಮಠಪತಿ, ಮೋಸಿನ ಹೋನಮೂರಗಿ ಉಪಸ್ಥಿತರಿದ್ದರು.

