ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೈನಂದಿನ ಚಟುವಟಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಶ್ರಮದಾನ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ ಸಿದ್ದಲಿಂಗ ರಾಠೋಡ್, ಕಾಲೇಜಿನ ಸ್ವಚ್ಛತೆಗೆ ಮೊದಲ ಆದ್ಯತೆ ನೀಡೋಣ, ನಮ್ಮ ಕಾಲೇಜು ನಮ್ಮ ಹೆಮ್ಮೆಯ, ಹಾಗಾಗಿ ಕಾಲೇಜಿನ ಆವರಣದಲ್ಲಿ ಬೆಳೆದಿರುವ ಮುಳ್ಳು, ಕಂಟಿಗಳನ್ನು, ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವ ಕಾರ್ಯದಲ್ಲಿ ಸ್ವಯಂ ಸೇವಕರು ಸ್ವಯಂಪ್ರೇರಿತವಾಗಿ ನಾ ಮುಂದು ತಾ ಮುಂದು ಎಂದು ಪಾಲ್ಗೊಂಡಿದ್ದು, ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಾಂಶುಪಾಲರಾದ ಪ್ರೊ ನಾಗಪ್ಪ ಚಾವಲ್ಕರ್, ಡಾ ಪೂಜಾ ಹೊನ್ನುಟಗಿ, ನಸ್ರೀನ್ ತಾಜ್, ಮಲ್ಲಿಕಾರ್ಜುನ ಮರಡ್ಡಿ, ಶಶಿಕುಮಾರ ಎತ್ತಿನಮನಿ, ಡಾ ಯಂಕನಗೌಡ ಪಾಟೀಲ್, ಡಾ ಮಲ್ಲಣ್ಣ ಬಿಳೆಬಾವಿ, ಡಾ ಸುರೇಶ ಪಾಟೀಲ, ಬೋಧಕೇತರ ಸಿಬ್ಬಂದಿ ಸಂಗಮೇಶ ಪಟ್ಟಣಕರ್, ಮಾಸುಮ ಅಲಿ ನಾಶಿ, ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.