ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಾಗದು. ನಮ್ಮ ಬದುಕಿಗೆ ಬಣ್ಣ ಮತ್ತು ಜ್ಞಾನ ನೀಡಿದ ಶಿಕ್ಷಕರು ಜೀವನಕ್ಕೆ ದಾರಿ ತೋರುವ ಜ್ಯೊತಿ ಇದ್ದಹಾಗೆ ಎಂದು ಓಲೇಮಠದ ಆನಂದ ದೇವರು ಹೇಳಿದರು.
ಇಲ್ಲಿನ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ 2006-07ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಅಪೂರ್ವ ಸ್ನೇಹ ಸಂಗಮ ಹಾಗೂ ಗುರುಸ್ಮೃತಿ ಕಾರ್ಯಕ್ರಮದ ಸಾನ್ನಿದ್ಯವಹಿಸಿ ಮಾತನಾಡಿದರು.
ಶಿಕ್ಷಕರು ಅಕ್ಷರ ಜ್ಞಾನದೊಂದಿಗೆ ಶಿಸ್ತು, ಸಂಯಮ ಮತ್ತು ಜೀವನ ಮೌಲ್ಯಗಳನ್ನು ಕಲಿಸಿ ನಮ್ಮನ್ನು ಉತ್ತಮ ಪ್ರಜೆಗಳಾಗಿ ರೂಪಿಸುವ ಶಕ್ತಿ ಹೊಂದಿದ್ದಾರೆ. ಯಾರ ಜೀವನದಲ್ಲಿ ಮುಳ್ಳಾಗದೆ ಇನ್ನೊಬ್ಬರ ಜೀವನಕ್ಕೆ ಮಾದರಿಯಾಗಬೇಕು ಎಂದರು.
ಮುತ್ತೂರ ರಾಚೋಟೇಶ್ವರ ವಿರಕ್ತಮಠದ ಗುರುಸಿದ್ದೇಶ್ವರ ಸ್ವಾಮಿಗಳು ಮಾತನಾಡಿ, ಮಕ್ಕಳ ಜೀವನ ಉಜ್ವಲಗೊಳಿಸುವ ಕಾರ್ಯ ಶಿಕ್ಷಕರಿಗೆದೆ. ಒಬ್ಬ ಶ್ರೇಷ್ಠ ಗುರು ವ್ಯಕ್ತಿ ಅಲ್ಲ ಅದೊಂದು ಶಕ್ತಿ, ಸ್ನೇಹಿತರನ್ನು ಹಣದಿಂದ ಅಳೆಯಲು ಸಾದ್ಯವಿಲ್ಲ ಅವರನ್ನು ಒಳ್ಳೆಯ ಮನಸ್ಸಿನಿಂದ ಅಳೆಯಲು ಸಾದ್ಯ. ಅಪೂರ್ವ ಸ್ನೇಹ ಸಂಗಮ ಹೀಗೆ ಮುಂದುವರೆಯಲಿ ಎಂದರು.
ಶಿಕ್ಷಕ ಪ್ರಭು ಹಿಡಕಲ್, ಆರ್.ಎಸ್. ತಳ್ಳಿ, ಎಸ್.ಎನ್. ಗಸ್ತಿ, ಮಾತನಾಡಿದರು. ಬಿ.ಕೆ. ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು, ವಿಧ್ಯಾರ್ಥಿಗಳಾದ ಧರೆಪ್ಪ ಮರನೂರ, ವೀಣಾ ಸಂಗಣ್ಣವರ, ಅಮಿತಾ ವಾಜಂತ್ರಿ, ಉತ್ತಮ ಕಾಂಬಳೆ ಅನಿಸಿಕೆ ವ್ಯಕ್ತಪಡಿಸಿ ಹೇಳಿದರು.
ವೇದಿಕೆಯಲ್ಲಿ ರುದ್ರಗೌಡ ಪಾಟೀಲ, ಎಸ್.ಆರ್. ಪಾಟೀಲ, ಎ.ಪಿ. ಮಾಳಿ, ಪಿ.ಜಿ. ಹೋಳಗಿ, ಎಸ್.ಎಂ. ಅಥಣಿ, ಆಯ್.ಎಸ್. ಕೋಲಾರ, ಎಂ.ಎಚ್.ಮರನೂರ, ಯು.ಬಿ.ನಾಯಕ, ಎ.ಡಿ. ಮೇತ್ರಿ, ಆರ್.ವಾಯ್. ಬೀಳಗಿ ಇದ್ದರು.
ವಿರೇಶ ಹಟ್ಟಿ ಸ್ವಾಗತಿಸಿದರು, ಪರಶುರಾಮ ಬಿಸನಾಳ ಪ್ರಾತ್ಸಾವಿಕವಾಗಿ ಮಾತನಾಡಿದರು, ಅರ್ಜುನ ನ್ಯಾಮಗೌಡ ವಂದಿಸಿದರು.