ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾ, ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಮುಖ್ಯ ಅತಿಥಿ, ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಮಾರು ಹದಿನೈದು ವರ್ಷಗಳ ನಂತರ ಶಾಲೆಯ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ಅರ್ಥಪೂರ್ಣ ಕಾರ್ಯಕ್ರಮ ಏರ್ಪಡಿಸಿದ್ದು ಶ್ಲಾಘನೀಯವಾದುದು. ಹದಿನೈದು ವರ್ಷಗಳ ನಂತರ ಗುರು ಶಿಷ್ಯರು ಸಮಾಗಮ ಸಂತಸ ಇವತ್ತಿನ ದಿನಮಾನದಲ್ಲಿ ಗುರುವೇನೂ ಮಹಾ ಅನ್ನುವ ಕಾಲದಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳು ಗುರುಗಳ ಮೇಲೆ ಇಟ್ಟಿರುವ ಭಕ್ತಿಯೇ ಮುಕ್ತಿ ಇವತ್ತು ಅದೆಷ್ಟು ವಿದ್ಯಾರ್ಥಿಗಳು ಡಾಕ್ಟರ್ಸ್, ಇಂಜಿನಿಯರ್ಸ್, ಪೊಲೀಸ್, ಪಿಎಸ್ಐ, ಶಿಕ್ಷಕರು, ದೊಡ್ಡ ದೊಡ್ಡ ಉದ್ಯಮಿದರರಾಗಿದ್ದು, ನೋಡಿದರೆ ಗುರುವಿಗೆ ತುಂಬಾ ಸಂತೋಷವಾಗುತ್ತದೆ. ಗುರುಗಳ ಮಾತನ್ನು ಕೇಳದ ವಿದ್ಯಾರ್ಥಿಗಳು ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಎನಿಸುತ್ತಿದೆ ಎಂದವರು, 25 ವರ್ಷಗಳ ಕಾಲ ಯಾವ ವಿದ್ಯಾರ್ಥಿ ತದೆಕಚಿತ್ತದಿಂದ ಪಾಠ ಪ್ರವಚನ ಕೇಳುತ್ತಾನೋ ಅಂತ ವಿದ್ಯಾರ್ಥಿ 75 ವರ್ಷಗಳ ಕಾಲ ಸುಖಕರ ಜೀವನ ನಡೆಸಬಲ್ಲರು ಎಂದರು.
ಭೀಮರಾಯ ಪಾಟೀಲ್ ಮಾತನಾಡಿ, ನಾನು ಸುಮಾರು ವರ್ಷಗಳ ಕಾಲ ವಸತಿ ಶಾಲೆಯ ಪ್ರಾಂಶುಪಾಲನಾಗಿ ಸೇವೆ ಮಾಡಿದ್ದು ತೃಪ್ತಿ ತಂದಿದೆ, ನನ್ನ ಹೊಳೆಯ ವಿದ್ಯಾರ್ಥಿಗಳು ಸಾಧನೆ ನೋಡಿ ನಾನಂತೂ ತುಂಬಾ ಖುಷಿ ಪಟ್ಟಿದ್ದೇನೆ ಇನ್ನೂ ಶಾಲೆಯ ಕೀರ್ತಿ ಹೆಚ್ಚಿಸುವ ಕೆಲಸವಾಗಲಿ ಎಂದು ಶುಭ ಹಾರೈಸಿದರು. ಶಿಕ್ಷಕಿಯರಾದ ಬಸಮ್ಮ ಪಾಟೀಲ್, ಶ್ವೇತಾ ರಾಖಾ, ಶಿಕ್ಷಕ ವಗ್ಗರ ಸರ್ ಮಾತನಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಅಪ್ಪು ರಾಠೋಡ ವಹಿಸಿದ್ದರು.
ಈ ಸಂದರ್ಭದಲ್ಲಿ ಯಲ್ಲಪ್ಪ ಸರ್, ಶಾಂತಲಿಂಗ ಪಾಟೀಲ್, ಮೈಹಿಬೂಬ ಪಟೇಲ್, ಪ್ರಕಾಶ್, ಭಾಗ್ಯಮ್ಮ ಪಾಟೀಲ್, ಶರಣಯ್ಯ ಸಗರ, ಶಿವಶರಣಪ್ಪ ಬಾಣಂತಿಹಾಳ, ದೇವೇಂದ್ರಪ್ಪ ಕರಡಕಲ್, ದೈಹಿಕ ಶಿಕ್ಷಕರಾದ ಮಡಿವಾಳಪ್ಪ ಹೆಗ್ಗನದೊಡ್ಡಿ, ಗುತ್ತನಗೌಡ, ಪವನ್ ಕುಲಕರ್ಣಿ,ಗುರುಪಾದಪ್ಪ ಗೋಡ್ರಿಹಾಳ, ಬಸವಲಿಂಗಯ್ಯ ಹಿರೇಮಠ, ಶಿವುಕುಮಾರ, ಆಸೀಫ್, ತಿಪ್ಪಣ್ಣ, ಸಂಗೀತಾ, ತೋಟೇಶ್ವರಿ, ಸುವರ್ಣ, ಸರಿತಾ, ಸವಿತಾ, ಶ್ರೀಕಾಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಸಂಗೀತಾ ಸುರಪುರ ನಿರೂಪಿಸಿದರು ಬಸವಲಿಂಗಯ್ಯ ಹಿರೇಮಠ ಸ್ವಾಗತಿಸಿದರು ಶಿವಾನಂದ ವಂದಿಸಿದರು