ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಟಕ ಕ್ಷೇತ್ರದಲ್ಲಿ ತಮ್ಮ ಅಪರೂಪದ ಅಭಿನಯದ ಮೂಲಕ ನಾಡಿನ ಜನರ ಹೃದಯ ಗೆದ್ದಿದ್ದ ಖ್ಯಾತ ಹಾಸ್ಯ ನಟ ಹಾಗೂ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆಯವರ ಕೊಡುಗೆ ನಾಡಿನ ಕಲಾಕ್ಷೇತ್ರಕ್ಕೆ ಅನನ್ಯವಾದದ್ದು. ಅವರಿಗೆ ಅವರೇ ಸರಿಸಾಟಿ. ಅವರ ಅಕಾಲಿನ ನಿಧನದಿಂದ ಸರ್ವಶ್ರೇಷ್ಠ ಹಾಸ್ಯ ನಟನನ್ನು ಕಳೆದುಕೊಂಡು ನಾಡಿನ ಸಾಂಸ್ಕೃತಿಕ ಕ್ಷೇತ್ರ ಬಡವಾಗಿದೆಯೆಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹೇಳಿದರು.
ಬುಧವಾರ ಕರ್ನಾಟಕ ಬಾಲವಿಕಾಸ ಅಕಾಡೆಮಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ದಿ.ರಾಜು ತಾಳಿಕೋಟಿಯವರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಕಾಡೆಮಿಯ ಅಧಿಕಾರಿಗಳಾದ ಅನ್ನಪೂರ್ಣ ಸಂಗಳದ ಪುಷ್ಪಾ ಹಂಜಗಿ, ಸುಭಾಸ ಚಂದ್ರಗಿರಿ, ಸವರ್ಣಲತಾ ಮಠದ, ಪದ್ಮಶ್ರೀ ಮೇಟಿ, ಅರ್ಪಿತಾ, ಶಿವಕುಮಾರ, ಸ್ಟ್ಯಾನ್ಲಿಲೂಥರ, ಅಶೋಕ ಮೊದಲಾದವರು ಉಪಸ್ಥಿತರಿದ್ದರು