Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರೌಡಿ ಶೀಟರ್ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ.ಯುನಸ್ ಇಕ್ಲಾಸ್ ಪಟೇಲ್ (35) ಗುಂಡಿಗೆ ಬಲಿಯಾದ ರೌಡಿ ಶೀಟರ್. ನಟೋರಿಯಸ್ ಹಂತಕನಾಗಿದ್ದ ಯುನಸ್ ಪಟೇಲ್ನಿನ್ನೆ ಓರ್ವನಿಗೆ ಚಾಕೂ ತೋರಿಸಿ 25 ಸಾವಿರ ಹಣ ದರೋಡೆ ಮಾಡಿದ್ದನು. ಯುನಸ್ನಂತರ ಆತನ ಸ್ಕೂಟಿ ಸಹ ದರೋಡೆ ಮಾಡಿ ಪರಾರಿಯಾಗಿದ್ದ. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಯುನಸ್ ಆತನ ಸ್ವಗ್ರಾಮ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದತ್ತ ತೆರಳುತ್ತಿರುವ ಮಾಹಿತಿ ಅರಿತ ಪೊಲೀಸರು ಸಿಂದಗಿ ತಾಲೂಕಿನ ರಾಂಪುರ್ ಬಳಿ ಆರೋಪಿ ಯೂನಿಸ್ ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಚಾಕೂನಿಂದ ಹಲ್ಲೆ ಮಾಡಲು ಯುನಸ್ ಯತ್ನಿಸಿದ್ದಾನೆ. ಇಬ್ಬರು ಪೊಲೀಸ್ ಕಾನ್ಸಸ್ಟೇಬಲ್ ಹಾಗೂ ಇನ್ಸಪೆಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿ ಬಿದ್ದ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ, ಈ ವೇಳೆ ಎಚ್ಚರಿಕೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಸ್ವಉದ್ಯೋಗದ ವಿಪುಲ ಅವಕಾಶಗಳಿದ್ದು, ಅದಕ್ಕೆ ಪೂರಕವಾಗಿ ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯಕವಾಗಿದೆ ಎಂದು ರೂಸಾ ಘಟಕದ ಹಿರಿಯ ನೋಡ್‌ಲ್ ಅಧಿಕಾರಿ ಪ್ರೊ. ಗಂಗಾಧರ ಸೋನಾರ ಹೇಳಿದರು.ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗದಲ್ಲಿ ಪ್ರಧಾನಮಂತ್ರಿ ಉಚ್ಛ ಶಿಕ್ಷಾ ಅಭಿಯಾನದ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಗುರುವಾರ ಹಮ್ಮಿಕೊಂಡಿದ್ದ “ಆಹಾರ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮೂಲಕ ಮಹಿಳಾ ಉದ್ಯಮಿಗಳ ಸಬಲೀಕರಣ” ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಭಾರತದಲ್ಲಿ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ವಿವಿಧ ಬೆಳೆಗಳು ಬೆಳೆಯುತ್ತವೆ. ಅವುಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದಾಗಿದ್ದು, ಮಹಿಳೆಯರು ಸ್ವಾವಲಂಬಿ ಜೀವನಕ್ಕಾಗಿ ಆಹಾರ ಸಂಸ್ಕರಣಾ ಕ್ಷೇತ್ರವನ್ನು ಆಯ್ದುಕೊಳ್ಳಬಹುದಾಗಿದೆ ಎಂದರು.ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಬಸವರಾಜ ಮೇಟಿ ಮಾತನಾಡಿ, ಆಹಾರೋದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ವೃತ್ತಿ ಕೌಶಲ್ಯಗಳ ಕುರಿತು ಮಾಹಿತಿ ನೀಡಿದರು. ಜೊತೆಗೆ ಸೀತಾಫಲ ಮತ್ತು ಪೇರು ಹಣ್ಣಿನ ಮೌಲ್ಯವರ್ಧನೆ ಕುರಿತು…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಶಾಲೆ ಬಿಟ್ಟಿದ್ದ ಕಾರಣ ತನ್ನ ತಾಯಿ ಬೈದಳು ಎಂದು ೧೩ ವರ್ಷದ ಬಾಲಕಿ ನೇಣಿಗೆ ಶರಣಾದ ಘಟನೆ ಪಟ್ಟಣದ ಸಂಗಮೇಶ್ವರ ನಗರದಲ್ಲಿ ನಡೆದಿದೆ.ನಿಖಿತಾ ಚಲವಾದಿ(೧೩) ನೇಣಿಗೆ ಶರಣಾದ ದುರ್ದೈವಿ. ಪಟ್ಟಣದ ಎಂಜಿಎಂಕೆ ಶಾಲೆಯಲ್ಲಿ ೬ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಎರಡು ದಿನಗಳಿಂದ ಶಾಲೆ ಬಿಟ್ಟಿದ್ದಳು, ಶಾಲೆ ಬಿಡದಂತೆ ತಾಯಿ ಬೈದು ಬುದ್ದಿಮಾತು ಹೇಳಿದ್ದಕ್ಕಾಗಿ, ಮನನೊಂದು ತನ್ನ ಮಹಡಿ ಮನೆಯಲ್ಲಿ ಆರ್.ಸಿ.ಸಿ ಗೆ ಇರುವ ಕಬ್ಬಿಣದ ಹುಕ್ಕಿಗೆ ಸೀರೆಯಿಂದ ನೇಣಿಗೆ ಶರಣಾಗಿದ್ದಾಳೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಜಿಲ್ಲಾ ಪಂಚಾಯತ್ ಜಿಲ್ಲಾ ಸಂಪನ್ಮೂಲ ತರಬೇತಿ ಕೇಂದ್ರ (ಡಿಪಿಆರ್‌ಸಿ) ವಿಜಯಪುರದಲ್ಲಿ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿಗೆ ಒಳಪಡುವ ಕೆರೆಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಯೋಜನೆ ಅಡಿ ರಚಿಸಲಾದ ಒಕ್ಕೂಟಗಳ ಸ್ವಸಹಾಯ ಸಂಘದ ಮಹಿಳೆಯರಿಗೆ ಸಮಗ್ರ ಮೀನು ಸಾಕಾಣಿಕೆ ವಿಷಯದ ಕುರಿತು ೨ ದಿನಗಳ ಕಾಲ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಪ್ರಕಾಶ ವಡ್ಡರ ಮಾತನಾಡಿದರು.“ಗ್ರಾಮೀಣ ಪ್ರದೇಶದ ಸ್ವಸಹಾಯ ಸಂಘದ ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಎನ್‌ಆರ್‌ಎಲ್‌ಎಂ ಯೋಜನೆ ಅಡಿ ಕೈಗೊಳ್ಳಲಾಗುತ್ತಿದ್ದು ಮತ್ಸ್ಯ ಸಂಜೀವಿನಿ ಯೋಜನೆ ಅಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೆರೆಗಳಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಮೀನು ಸಾಕಾಣಿಕೆ ಮಾಡಲು ಆಸಕ್ತಿ ಮಹಿಳೆಯರಿಗೆ ತರಬೇತಿ ಆಯೋಜಿಸಲಾಗಿದ್ದು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಹಾಗೂ ಮೀನು ಸಾಕಾಣಿಕೆ ಮಾಡಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಲು ತಿಳಿಸಿದರು.ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಎಮ್.ಎಚ್. ಬಾಂಗಿ ಮಾತನಾಡಿ “ “ಮೀನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚೆಗೆ ವಿಜಯಪುರ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತ ಮಹಿಳೆಯರೊಂದಿಗೆ ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ರೈತಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿ-ಸಿಬ್ಬಂದಿಗಳು, ರೈತ ಮಹಿಳೆಯರಿಂದ ಹಣ್ಣಿನ ಸಸಿ ನೆಡಲಾಯಿತು.ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ವಿಜಯಲಕ್ಷ್ಮಿ ಎಸ್.ಚವ್ಹಾಣ ಹಾಗೂ ಶ್ರೀಮತಿ ಪಾರ್ವತಿ ಪಾಟೀಲ ಅವರು ಮಾತನಾಡಿ, ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಮತ್ತು ಮಹಿಳೆಯರ ಸಾಧನೆಗಳ ಬಗ್ಗೆ ಮಾತನಾಡಿ, ೨೦೧೬ರಲ್ಲಿ ಭಾರತ ಸರ್ಕಾರವು ಅಕ್ಟೋಬರ್ ೧೫ನ್ನು ರಾಷ್ಟ್ರೀಯ ಮಹಿಳಾ ಕಿಸಾನ್ ದಿವಸ್ ಎಂದು ಆಚರಿಸಲು ನಿರ್ಧರಿಸಿತು ಎಂದು ಹೇಳಿದರು.ಕೃಷಿ ಅಧಿಕಾರಿಗಳಾದ ಶ್ರೀಮತಿ ಲಕ್ಷ್ಮಿ ಕಾಮಗೊಂಡ, ಶ್ರೀಮತಿ ಫಾತಿಮಾಬನು ಸುತಾರ ಹಾಗೂ ಶ್ರೀಮತಿ ಗೀತಾ ಭಜಂತ್ರಿ ಉಪಸ್ಥಿತರಿದ್ದರು.
ಉದ್ಘಾಟನೆ ದಿನಪತ್ರಿಕೆ ವಿಜಯಪುರ: ಇತ್ತೀಚೆಗೆ ಸುರಿದ ಮಳೆಯಿಂದ (ಅತಿವೃಷ್ಟಿಯಿಂದ) ಬಬಲೇಶ್ವರ ತಾಲೂಕಿನಲ್ಲಿ ಹಾನಿಗೊಳಗಾದ ಕೃಷಿ-ತೋಟಗಾರಿಕೆ ಬೆಳೆಗಳಿಗೆ ಕೈಗೊಂಡ ಜಂಟಿ ಸಮೀಕ್ಷೆಯ ಅಂತಿಮ ಪಟ್ಟಿಯನ್ನು ಗ್ರಾಮ ಪಂಚಾಯತ್ ಹಾಗೂ ಚಾವಡಿಗಳಲ್ಲಿ ಪ್ರಕಟಿಸಲಾಗಿದ್ದು, ಪ್ರಕಟಿತ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಅ.೨೩ರೊಳಗೆ ಲಿಖಿತ ರೂಪದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿ-ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸುವಂತೆ ಬಬಲೇಶ್ವರ ತಹಶೀಲ್ದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಶಿಕಾರಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ನಗರದ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿರುವ ಡಿಡಿಪಿಐ ಕಚೇರಿ ಹತ್ತಿರದ ಉಪ ಕೃಷಿ ನಿರ್ದೇಶಕ-೧ ಕಚೇರಿ ಕಟ್ಟಡಕ್ಕೆ ದಿನಾಂಕ : ೦೩-೧೦-೨೦೨೫ ರಿಂದ ಸ್ಥಳಾಂತರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಕರ್ನಾಟಕ ರಾಜ್ಯದ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವತಿಯಿಂದ ಬೆಂಗಳೂರಿನ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕನಲ್ಲಿ ನಡೆದ ನಾನು ವಿಜ್ಞಾನಿ-2025 ಟೆಲಿಸ್ಕೋಪ್ ತಯಾರಿಕೆ ಕಾರ್ಯಾಗಾರದಲ್ಲಿ ಪ್ರಥಮ ಫೌಂಡೇಶನ್ ವಿಜ್ಞಾನ ಆವಿಷ್ಕಾರ ಮತ್ತು ಸಂಶೋಧನಾ ಕೇಂದ್ರದಲ್ಲಿ ತಾಲ್ಲೂಕಿನ ಹೊನವಾಡದ ಸರ್ಕಾರಿ ಶಾಲೆಯ ಎಂಟನೇ ತರಗತಿ ಮತ್ತು ಪಿಯುಸಿ ತರಗತಿಯ ಗ್ರಾಮದ ಏಳು ವಿದ್ಯಾರ್ಥಿಗಳು ಕೇವಲ 45 ನಿಮಿಷದಲ್ಲಿ ಟೆಲಿಸ್ಕೋಪ್ ತಯಾರಿಸಿ ವಿಶ್ವ ದಾಖಲೆ ( ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್) ನಿರ್ಮಿಸಿದ್ದಾರೆ.ವಿಧ್ಯಾರ್ಥಿಗಳಾದ ವಿಠ್ಠಲ ನರಳೆ, ಚಂದ್ರಕಾಂತ್ ತುಪ್ಪದ, ಪ್ರಥಮ ಖಂಡೆಕರ, ಶಾಂತಾ ತುಪ್ಪದ, ಪ್ರತಿಕ್ಷಾ ಜನಗೊಂಡ, ಪ್ರತಿಜ್ಞಾ ಜನಗೊಂಡ ಅಶ್ವಿನಿ ರಾಮತೀರ್ಥ ಪ್ರಶಸ್ತಿ ಪತ್ರ ಸ್ವೀಕರಿಸಿದರು.ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಂಗಳವಾರ ತಮ್ಮ ಕಛೇರಿಗೆ ಬರಮಾಡಿಕೊಂಡು ಮಕ್ಕಳಿಗೆ ಸನ್ಮಾನಿಸಿ ಹಲವಾರು ವೈಜ್ಞಾನಿಕ ಪ್ರಶ್ನೆಗಳನ್ನು ಕೇಳಿ ಪ್ರಶಂಸೆ ವ್ಯಕ್ತಪಡಿಸಿದರು. ಮಕ್ಕಳು ತಯಾರಿಸಿದ ಅತ್ಯಾಧುನಿಕ ನ್ಯೂಟಾನಿಯನ ದೂರದರ್ಶಕ ಕಂಡು ಎಲ್ಲರನ್ನು…
ಲೇಖನ- ಡಾ.ಶಶಿಕಾಂತ.ಪಟ್ಟಣಪುಣೆ – ರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದ ನೆಲದಲ್ಲಿ ಬಸವಣ್ಣ ಮತ್ತು ಅನೇಕ ಶರಣರ ನೇತೃತ್ವದಲ್ಲಿ ನಡೆದ ಅಭೂತಪೂರ್ವವಾದ ಸಮತೆಯ ಕ್ರಾಂತಿಯ ಫಲವಾಗಿ ಸಾರ್ವಕಾಲಿಕ ಸಮಾನತೆಯ ಆಂದೋಲನ ಆರಂಭವಾಯಿತು. ಇದು ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಶ್ರೇಣೀಕೃತವಲ್ಲದ ಶ್ರೇಷ್ಠ ಚಳುವಳಿಯಾಗಿದೆ. ಯಾವುದೇ ಹಂತದಲ್ಲೂ ಜೇಷ್ಠತೆ ಶ್ರೇಷ್ಠತೆ ಅಲ್ಲಗಳೆದು ಎಲ್ಲ ಕಾಲಕ್ಕೂ ಅರ್ಥಪೂರ್ಣ ಸಾಮಾಜಿಕ ಧಾರ್ಮಿಕ ಆಧ್ಯಾತ್ಮಿಕ ಸಾಹಿತಿಕ ಸೈದ್ಧಾಂತಿಕ ನಿಲುವನ್ನು ಗಟ್ಟಿಗೊಳಿಸಿದ ಜಗವು ಕಂಡ ಶ್ರೇಷ್ಠ ಸಿದ್ಧಾಂತವಾಗಿದೆ. “ಲಾಂಛನಕ್ಕೆ ಶರಣೆಂಬೆಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದೊಡೆನಿನ್ನ ಸಾಕ್ಷಿಯಾಗಿ ಚಿ ಎಂಬೆಕೂಡಲ ಸಂಗಮದೇವ” ಅಂದು ಮಠಗಳನ್ನು ಕಾವಿಧಾರಿಗಳನ್ನು ಅಕ್ಕ ಮಾತೆ ಸ್ವಾಮಿ ಎಂಬ ದುಡಿಯದ ಜನರನ್ನು ಬಸವಣ್ಣ ಮತ್ತು ಶರಣರು ತಿರಸ್ಕರಿಸಿ ಅವರು ಕಾವಿ ಕಾವಿ ಹೊದ್ದು ತಿರುಗುವ ಜೀವಗಳ್ಳರು ಎಂದು ಕರೆದದ್ದುಂಟು. ಅಂದು ಬಸವಣ್ಣನವರು ಅಸ್ಪ್ರಶ್ಯರನ್ನು ದಲಿತರನ್ನು ಅಪ್ಪಿಕೊಂಡು ಮುಖ್ಯ ವಾಹಿನಿಗೆ ತಂದರು. ಇಂದು ಲಿಂಗಾಯತರೆನಿಸಿದ ನಾವು ಅವರನ್ನು ಮತ್ತೆ ಸಮಾಜದಿಂದ ದೂರ ಇಟ್ಟಿದ್ದೇವೆ.…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನಾನು ನೀನು ಜೊತೆಯಲ್ಲಿರಬೇಕು ಅಂತ ಆ ಬ್ರಹ್ಮ ಬರೆದಿರುವನೋ ಇಲ್ವೋ ಗೊತ್ತಿಲ್ಲ. ಅದೇನಾದರೂ ಆಗಲಿ ನನ್ನೆದೆಯಲ್ಲಿ ನಿನಗಾಗಿಯೇ ಅಂತ ಬಚ್ಚಿಟ್ಟಿರುವ ಬೆಚ್ಚನೆಯ ಪ್ರೀತಿಯನ್ನು ಜೀವವಿರುವವರೆಗೂ ಹಂಚಿಕೊಳ್ಳಬೇಕೆಂದು ಬಯಸುತಿದೆ ಈ ಜೀವ. ನೀ ಸನಿಹವಿದ್ದರೆ ಅದೇ ಸ್ವರ್ಗ. ನನ್ನ ಉಸಿರಿಗಿಂತ ಹೆಚ್ಚು ನಿನ್ನ ಪ್ರೀತಿಸ್ತಿನಿ ಕಣೆ. ನನ್ನ ನಿನ್ನ ಹೆಸರು ಇತಿಹಾಸದಲ್ಲಿ ದಾಖಲಾಗಲಿ ಹಾಗೆ ನಿನ್ನೊಲವಿನಲಿ ಮುಳುಗಿ ಬಿಡುವೆ. ಮೆತ್ತನೆಯ ನಿನ್ನೆದೆಯ ಮೇಲೊರಗಿ ಕರಗಿ ಬಿಡುವೆ. ನಿನ್ನದೇ ಕನಸು ಕಂಗಳಲ್ಲಿ ತುಂಬಿ ದಿನ ರಾತ್ರಿ ನವಿರಾಗಿ ಕಾಡುತಿರುವೆ. ನನ್ನ ಹೃದಯದಲ್ಲಿಯೇ ಅವಿತುಕೊಂಡಿದ್ದರೂ ಎದುರಿಗೆ ಬರದೇ ಕಾಡುತಿರುವೆ. ಪ್ರೀತ್ಸೋಕೆ ಇಂಥದೇ ಋತುಮಾನ ಬೇಕಿಲ್ಲ ಗೆಳತಿ. ನನ್ನೀ ಮೈ ಮನ ಪ್ರೀತಿಗೆ ಸದಾ ಸಿದ್ಧವಾಗಿಯೇ ಇದೆ. ನಿನ್ನ ಬರುವಿಕೆಗಾಗಿ ಚೆಲುವಾದ ತಯಾರಿ ನಡೆಸಿದೆ. ಸಮ್ಮಿಲನದ ಕ್ಷಣ ನೆನೆದು ಮನಸ್ಸು ಒಳಗೊಳಗೆ ಖುಷಿ ಪಡುತಿದೆ. ನಗು ನಗುತ ನನ್ನೆಡೆ ನೋಡುತ ಒಂದೇ ಒಂದು ಮಾತು ಆಡಿದ ಆ…
