ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಶಾಲೆ ಬಿಟ್ಟಿದ್ದ ಕಾರಣ ತನ್ನ ತಾಯಿ ಬೈದಳು ಎಂದು ೧೩ ವರ್ಷದ ಬಾಲಕಿ ನೇಣಿಗೆ ಶರಣಾದ ಘಟನೆ ಪಟ್ಟಣದ ಸಂಗಮೇಶ್ವರ ನಗರದಲ್ಲಿ ನಡೆದಿದೆ.
ನಿಖಿತಾ ಚಲವಾದಿ(೧೩) ನೇಣಿಗೆ ಶರಣಾದ ದುರ್ದೈವಿ. ಪಟ್ಟಣದ ಎಂಜಿಎಂಕೆ ಶಾಲೆಯಲ್ಲಿ ೬ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಎರಡು ದಿನಗಳಿಂದ ಶಾಲೆ ಬಿಟ್ಟಿದ್ದಳು, ಶಾಲೆ ಬಿಡದಂತೆ ತಾಯಿ ಬೈದು ಬುದ್ದಿಮಾತು ಹೇಳಿದ್ದಕ್ಕಾಗಿ, ಮನನೊಂದು ತನ್ನ ಮಹಡಿ ಮನೆಯಲ್ಲಿ ಆರ್.ಸಿ.ಸಿ ಗೆ ಇರುವ ಕಬ್ಬಿಣದ ಹುಕ್ಕಿಗೆ ಸೀರೆಯಿಂದ ನೇಣಿಗೆ ಶರಣಾಗಿದ್ದಾಳೆ.