Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ವಿದ್ಯುತ್ ಶಾರ್ಟ ಸರ್ಕ್ಯೂಟನಿಂದ ಕೊಯ್ಲಿಗೆ ಬಂದ ಬೆಲೆ ಬಾಳುವ ಕಬ್ಬು ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಲಚ್ಯಾಣ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದಿದೆ.ಈ ಅಗ್ನಿ ಅವಘಡದಲ್ಲಿ ಇಲ್ಲಿನ ಮಲ್ಲಿಕಾರ್ಜುನ ಮುಜಗೊಂಡ ಇವರ ೪ ಎಕರೆ ಕಬ್ಬು ಸುಟ್ಟು ಕರಕಲಾಗಿಸುಮಾರು ಮೂರು ಲಕ್ಷ ರೂ ದಷ್ಟು ಬೆಳೆ ನಷ್ಟವಾಗಿದೆ.ಬೆಳಿಗ್ಗೆ ೧೦ ಗಂಟೆಯ ವೇಳೆಯಲ್ಲಿ ಆಕಸ್ಮಿಕವಾಗಿ ಕಬ್ಬಿನ ಪಡದ ಮಧ್ಯೆ ಹಾದುಹೋದ ಎಲ್.ಟಿ ವಿದ್ಯುತ್ ಲೈನ ತಂತಿ ಗಾಳಿಯಲ್ಲಿ ಜೋಡಣೆಯಾಗಿ ವಿದ್ಯುತ್ ಶಾರ್ಟ ಸರ್ಕ್ಯೂಟದಿಂದ ಉತ್ಪತ್ತಿಯಾದ ಬೆಂಕಿಯ ಕಿಡಿಯು ತಂತಿಯ ಕೆಳಭಾಗದ ಒಣಗಿದ ರವದಿ ತುಂಬಿದ ಕಬ್ಬಿನ ಗದ್ದೆಯಲ್ಲಿ ಬಿದ್ದಿದೆ.ಇಂಡಿಯ ಅಗ್ನಿಶಾಮಕ ದಳದವರಿಗೆ ಮಾಲಿಕರು ಫೋನು ಮಾಡಿದ್ದಾರೆ. ಪಕ್ಕದ ಜಮೀನ ಬೋರವೆಲ್ ನೀರನ್ನು ಬಳಸಿ ಮತ್ತು ಅಗ್ನಿ ಶಾಮಕ ದಳದವರೂ ಸ್ಥಳಕ್ಕೆ ಧಾವಿಸಿ ೨ ಎಕರೆ ಕಬ್ಬನ್ನು ಉಳಿಸಿದ್ದಾರೆ.. ಗ್ರಾಮ ಲೆಕ್ಕಾಧಿಕಾರಿ ಅವಜಿ, ವಿದ್ಯುತ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬೇಟಿ ನಡೆಸಿದ್ದಾರೆ.ಇಂಡಿಯ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಮೃತ ವ್ಯಕ್ತಿ ಹುಚ್ಚಪ್ಪ ಡೋಣೂರ | ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಕ್ರಮಕ್ಕೆ ಒತ್ತಾಯ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ವೈಷ್ಣವಿ ವ್ಯಸನ ಮುಕ್ತ ಕೇಂದ್ರದಲ್ಲಿ ಚಿಕೆತ್ಸೆಗೆಂದು ಬಂದಿರುವ ಹುಚ್ಚಪ್ಪ ಡೋಣುರ (೪೯) ಎಂಬ ವ್ಯಕ್ತಿಯನ್ನು ಚಿಕಿತ್ಸೆ ನೀಡುವುದಾಗಿ ಹೇಳಿ ಆಸ್ಪತ್ರೆಯ ಸಿಬ್ಬಂದಿ ಅಮಾನವೀಯವಾಗಿ ಥಳಿಸಿದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಘಟನೆ ನಡೆದಿದೆ.ಸಿಂದಗಿ: ಪಟ್ಟಣದ ವೈಷ್ಣವಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹುಚ್ಚಪ್ಪ ಡೋಣೂರ ಸಾವು ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರವಾಗಿರೋ ವೈಷ್ಣವಿ ಆಸ್ಪತ್ರೆಯಲ್ಲಿ ಡಿಸೆಂಬರ್‌ನಲ್ಲಿ ದಾಖಲಾಗಿದ್ದ ಹುಚ್ಚಪ್ಪನ ಮೇಲೆ ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರದಲ್ಲಿ ತೀವ್ರ ಹಲ್ಲೆ ಮಾಡಿ ಹೊಡೆದಿದ್ದಾರೆಂದು ಆರೋಪ ಕಳೆದ ನಾಲ್ಕು ದಿನಗಳ ಹಿಂದೆಯೇ ಕೇಂದ್ರದ ವಿರುದ್ದ ಹುಚ್ಚಪ್ಪನ ಕುಟುಂದವರು ಆರೋಪಿಸಿದ್ದರು ಎನ್ನಲಾಗಿದೆ.ಈ ಹಿನ್ನಲೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಕಾನ್ಸಸ್ಟೇಬಲ್ ಆಗಿರುವ ಸಿದ್ದು ಮುರುಡಿ ಪತ್ನಿ ಒಡೆತನದಲ್ಲಿರೋ ಕೇಂದ್ರ ವ್ಯಸನ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕಳೆದ ಐದು ವರ್ಷಗಳಕಾಲ ನಡೆದ ಸಿಹಿ ಕಹಿ ಘಟಣೆಗಳನ್ನು ಗ್ರಾಮ ಪಂಚಾಯತಿ ಸದಸ್ಯರು ಅವಧಿಯ ಕೊಣೆಯ ಸಾಮಾನ್ಯ ಸಭೆಯಲ್ಲಿ ನೆನಪು ಮಾಡಿಕೊಂಡು ಪುಳಕಿತರಾದರು.ಗುರುವಾರ ಸ್ಥಳಿಯ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಶ್ರೀಮತಿ ಬಂಗಾರೆವ್ವ ಜಾಲಿಕಟ್ಟಿಯವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಹಿರಿಯ ಸದಸ್ಯ ಗುರಲಿಂಗಪ್ಪ ಪೂಜಾರಿ ಮಾತನಾಡಿ ಗ್ರಾಮದ ಅಭಿವೃದ್ದಿಯಲ್ಲಿ ಪಕ್ಷಬೇಧ ಮರೆತು ಎಲ್ಲ ಸದಸ್ಯರು ನೀಡಿದ ಸಹಕಾರವನ್ನು ನೆನೆದರು,ಸದಸ್ಯ ಆನಂದ ಕವಟಿ, ಮಹಾಲಿಂಗ ಮಾಯಣ್ಣವರ, ಮನೋಜ ಹಟ್ಟಿ ಮಾತನಾಡಿ ಪರರ ಪಾಲಾಗಿದ್ದ ಗ್ರಾಮದ ೨೦ ಎಕರೆ ಸರಕಾರಿ ಗೋಮಾಳ ಜಾಗೆಯನ್ನು ಮರಳಿ ಪಡೆಯಲು ಗ್ರಾಮದ ಪ್ರತಿಯೊಬ್ಬರು ಶ್ರಮ ವಹಿಸಿದ್ದು ಹಾಗೂ ಗ್ರಾ.ಪಂ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಒಂದು ತಿಂಗಳ ಕಾಲ ಬಯಲು ಶೌಚ ಮುಕ್ತಗೊಳಿಸಲು ಶ್ರಮಿಸಿದ ಘಟಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.ಸದಸ್ಯರಾದ ಕೇಶವ ವಂದಾಲ, ಶ್ರೀಮತಿ ಮೇಘಾ ಗಾಣಿಗೇರ, ಶ್ರೀಮತಿ ಪರವ್ವ ಮಲ್ಲಯ್ಯ ಮಠಪತಿ ಮಾತನಾಡಿ ಐದು ವರ್ಷಗಳ ಅವಧಿಯಲ್ಲಿಯೂ ತಮ್ಮ ವಾರ್ಡಿನಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯಾವುದೇ ಕೆಲಸಕ್ಕೆ ಮುಂದಾದಾಗ ಸೋಲು ಎದುರಾಗುವುದು ಸಹಜ. ಸೋಲಿಗೆ ಎದೆಗುಂದದೆ ಸಾಧನೆಯತ್ತ ಮುನ್ನುಗ್ಗಬೇಕು. ಜೀವನದಲ್ಲಿ ಪ್ರಾಮಾಣಿಕತೆ, ಸಮಯಪಾಲನೆ, ವಿಶ್ವಾಸಾರ್ಹತೆ, ಸತತ ಪರಿಶ್ರಮ, ಶ್ರದ್ಧೆ ಮುಖ್ಯ. ಇವುಗಳಿದ್ದರೆ ಯಶಸ್ಸು, ಹಣ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ಬಂಜಾರಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಎಸ್.ಬಿ.ಪವಾರರವರು ಹೇಳಿದರು.ಶುಕ್ರವಾರದಂದು ನಗರದ ಬಂಜಾರಾ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಶ್ರೀದೇವಿ ಕಡಿತೋಟ ಹಾಗೂ ಸಮರ್ಥ ಗವಂಡಿಯವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಮಾತನಾಡುತ್ತ. ನಮ್ಮ ಸಂಸ್ಥೆಯಲ್ಲಿ ಕಲಿತ ಅದೇಷ್ಟೋ ವಿದ್ಯಾರ್ಥಿಗಳು ಮೇಡಿಕಲ್, ಇಂಜೀನಿಯರಿಂಗ್ ವಿಭಾಗ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪ್ರತಿಭಾ ಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗದಲ್ಲಿ ಉಚಿತ ಪ್ರವೇಶ ನೀಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಇ.ಡಿ.ಲಮಾಣಿಯವರು ಮಾತನಾಡುತ್ತ. ಪೋಷಕರು ತಮ್ಮ ಆಸಕ್ತಿಗಳನ್ನು ಮಕ್ಕಳ ಮೇಲೆ ಹೇರಬೇಡಿ. ಮಕ್ಕಳ ಅಭಿರುಚಿ, ಆಸಕ್ತಿ,…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಇತ್ತೀಚಿಗಿನ ದಿನಗಳಲ್ಲಿ ಪಾಲಕರಲ್ಲಿ ಒಂದು ಹೊಸ ರೀತಿಯ ಭ್ರಾಂತಿ ಆರಂಭವಾಗಿದೆ. ತಮ್ಮ ಮಕ್ಕಳು ಯಾವುದೇ ವಿಷಯದಲ್ಲಿ ಸೋಲಬಾರದು ಅವರು ಬಯಸುವ ಪ್ರತಿಯೊಂದು ವಸ್ತು ಅವರಿಗೆ ದೊರೆಯಲೇಬೇಕು , ಇನ್ನೂ ಮುಂದೆ ಹೋಗಿ ಈ ಹಿಂದೆ ನಮಗೆ ದೊರೆಯದ್ದು ನಮ್ಮ ಮಕ್ಕಳಿಗೆ ದೊರೆಯಲಿ ಎಂಬ ಆಶಯ. ಆದರೆ ಇದು ಶುದ್ಧ ತಪ್ಪು.ಬೀಳುವವನು ಏಳುತ್ತಾನೆ. ಸೋತವನು ಗೆಲ್ಲುವ ಕುರಿತು ಯೋಚಿಸುತ್ತಾನೆ.. ಸೋಲೇ ಗೆಲುವಿನ ಮೆಟ್ಟಿಲು ಪ್ರತಿಯೊಂದು ಸೋಲು ಕೂಡ ಮನುಷ್ಯನಿಗೆ ಒಂದು ಹೊಸ ಪಾಠವನ್ನು ಕಲಿಸುತ್ತದೆ.ಮಕ್ಕಳ ಸೋಲು ತಮ್ಮ ಅಹಮಿಕೆಗೆ ನೀಡುವ ಪೆಟ್ಟು ಎಂಬಂತೆ ಭಾವಿಸುವ ಪಾಲಕರು ನಮ್ಮಲ್ಲಿ ಇದ್ದಾರೆ. ಆದರೆ ನಿಜವಾಗಿಯೂ ಸೋಲನ್ನು ಒಪ್ಪಿಕೊಳ್ಳುವ ಮಗು ಆ ಸೋಲಿನಿಂದ ಉಂಟಾಗುವ ಧಕ್ಕೆಯನ್ನು ತಾಳಿಕೊಳ್ಳುವ ಸೈರಣ ಶಕ್ತಿಯನ್ನು ಪಡೆಯುತ್ತದೆ. ಸೋಲು ಗೆಲುವುಗಳು ಆಟದ ಅವಿಭಾಜ್ಯ ಅಂಗ ಇಂದಿನ ಸೋಲು ನಾಳೆಯ ಗೆಲುವಿಗೆ ಕಾರಣವಾಗುತ್ತದೆ ಎಂಬುದನ್ನು ನಾವು ಮಕ್ಕಳಿಗೆ ಕಲಿಸಬೇಕು.ಚಿಕ್ಕಂದಿನಿಂದಲೂ ಮಕ್ಕಳಿಗೆ ಬಿದ್ದುಗಿದ್ದೀಯಾ, ಕೈ ಕಾಲು…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಚಿಮ್ಮಲಗಿ ಭಾಗ-೧ ಎ ಗ್ರಾಮದ ಭಾವಸಾರ ಕ್ಷತ್ರೀಯ ಸಮಾಜದ ಅಂಬಾಭವಾನಿ ದೇವಸ್ಥಾನದ ಜಾತ್ರೆ ಶುಕ್ರವಾರ ಅದ್ಧೂರಿಯಿಂದ ಜರುಗಿತು.ಬೆಳಿಗ್ಗೆಯಿಂದಲೇ ಅಂಬಾಭವಾನಿಗೆ ವಿಶೇಷ ಪೂಜೆ, ಅಭಿಷೇಕ ಜರುಗಿದವು.ಬೆಳಿಗ್ಗೆ ೯ ಕ್ಕೆ ಆರಂಭಗೊಂಡ ದೇವಿಯ ಪಲ್ಲಕ್ಕಿ ಉತ್ಸವ ಕೃಷ್ಣಾ ನದಿಗೆ ತೆರಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸುಮಾರು ನಾಲ್ಕು ಗಂಟೆಗಳ ಕಾಲ ಜರುಗಿದ ಮೆರವಣಿಗೆಯಲ್ಲಿ ಕುಂಭ ಹೊತ್ತ ೧೦೧ ಮಹಿಳೆಯರು ಮೆರವಣಿಗೆಗೆ ಮೆರಗು ತಂದರು. ಗದಗ ಜಿಲ್ಲೆ ಕೊಣ್ಣೂರಿನ ಚಂದ್ರಮುಖಿ ಮಹಿಳಾ ಡೊಳ್ಳು ಕುಣಿತದ ನಿನಾದ ಗಮನಸೆಳೆಯಿತು. ಆ ಹಲಗೆ, ಡೊಳ್ಳು ಕಂಪಿನ ರಾಗತಾಳಕ್ಕೆ ಹೆಜ್ಜೆ ಗೆಜ್ಜೆ ಬಳೆಗಳ ಗಲ್ಲಗಲ್ಲ ಸಪ್ಪಳದ ಕಂಪನವೂ ಪರಿಮಳಿಸಿತ್ತು. ತಲೆ ಮೇಲೆ ಕುಂಭ ಹೊತ್ತು ಜಯಘೋಷದ ಸದ್ದು ಮೊಳಗಿಸಿ ಭಕ್ತಿಯ ಉನ್ಮಾದದ ಸೆಲೆಯಲ್ಲಿ ಲೀನರಾಗಿದ್ದರು.ಜಯಪ್ರಕಾಶಾಚಾರ್ಯ ಚಿಮ್ಮಲಗಿ ಅವರ ನೇತೃತ್ವದಲ್ಲಿ ಬೆಳಿಗ್ಗೆ ೮ ಗಂಟೆಯಿAದ ಮಧ್ಯಾಹ್ನ ೧೨ ಗಂಟೆಯವರೆಗೆ ನಿರಂತರ “ಮಹಾಲಕ್ಷ್ಮಿ ಯಾಗ” ದೇವಸ್ಥಾನದ ಆವರಣದಲ್ಲಿ ಜರುಗಿತು.ಕಾರ್ಯಕ್ರಮ:ನಂತರ ನಡೆದ ಸನ್ಮಾನ, ಧಾರ್ಮಿಕ ಕಾರ್ಯಕ್ರಮದಲ್ಲಿ ವಿಜಯಪುರ ಮಹಾನಗರ…

Read More

೯ ವರ್ಷಗಳಿಂದ ಬಂದಾಗಿದ್ದ: ರಾಕ್ ಉದ್ಯಾನದ ಸಿಲ್ವರ್ ಲೇಕ್ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಪ್ರವಾಸಿ ತಾಣ ಆಲಮಟ್ಟಿಯ ರಾಕ್ ಉದ್ಯಾನದಲ್ಲಿರುವ ಸಿಲ್ವರ್ ಲೇಕ್ ನಲ್ಲಿ ಕಳೆದ ೯ ವರ್ಷಗಳಿಂದ ಸ್ಥಗಿತಗೊಂಡಿದ್ದ ದೋಣಿ ವಿಹಾರಕ್ಕೆ ಜ.೨೪ ಶನಿವಾರ ಮಧ್ಯಾಹ್ನ ೩ ಕ್ಕೆ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಲಿದ್ದಾರೆ.ಮಾಜಿ ಸಚಿವ ಎಸ್.ಆರ್. ಪಾಟೀಲ, ಮುಖ್ಯ ಎಂಜಿನಿಯರ್ ಡಿ. ಬಸವರಾಜ ಇರಲಿದ್ದಾರೆ.ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ವತಿಯಿಂದ ೨೦೦೬ ಏಪ್ರಿಲ್ ೨೧ ರಿಂದಲೇ ಪ್ರವಾಸಿಗರಿಗಾಗಿ ಪ್ಯಾಡೆಲ್ ಬೋಟಿಂಗ್ ಕಾರ್ಯಾಚರಣೆ ಆರಂಭಗೊಂಡಿತ್ತು. ಆಗ ಇಡೀ ಜಿಲ್ಲೆಯಲ್ಲಿಯೇ ಪ್ರವಾಸಿಗರಿಗಾಗಿ ಇದ್ದ ಏಕೈಕ ಬೋಟಿಂಗ್ ತಾಣ ಇದಾಗಿತ್ತು. ಇದು ಬಹಳಷ್ಟು ಪ್ರವಾಸಿಗರನ್ನು ಆಕರ್ಷಿಸಿತ್ತು.ಆದರೆ ೨೦೧೬ ರಲ್ಲಿ ಬೋಟಿಂಗ್ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಸಿಲ್ವರ್ ಲೇಕ್ ನಡಿ (೯ ಅಡಿ ಆಳ ಇರುವ) ಬಿದ್ದು ಮೃತಪಟ್ಟಿದ್ದ.ಈ ಘಟನೆಯಾದಾಗಿನಿಂದ ಬೋಟಿಂಗ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ನಾನಾ ತಾಂತ್ರಿಕ, ಕಾನೂನು ಸಮಸ್ಯೆಯ ಕಾರಣ ಬೋಟಿಂಗ್ ಆರಂಭಗೊಳ್ಳಲೇ ಇಲ್ಲ. ಆಲಮಟ್ಟಿಗೆ ನಿತ್ಯ ಬರುತ್ತಿದ್ದ ಸಹಸ್ರಾರು ಪ್ರವಾಸಿಗರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಅಲೋಪಥಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಾಳೆ ಜನೇವರಿ 24 ರಂದು ಶನಿವಾರ ನಡೆಯಲಿದೆ.ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಅಲೋಪಥಿ ಚಿಕಿತ್ಸೆಗಳಾದ ವೈದ್ಯಕೀಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸೆ, ಚಿಕ್ಕಮಕ್ಕಳ ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ ಮತ್ತು ಬೆಂಬಲಿತ ಸೇವೆಗಳಾದ ಎಲ್ಲಾ ಬಗೆಯ ರಕ್ತಪರೀಕ್ಷೆಗಳು, ಔಷಧಾಲಯ, ತುರ್ತು ಸೇವೆಗಳು, ಆ್ಯಂಬ್ಯೂಲನ್ಸ್ ಸೇವೆಗಳು ಲಭ್ಯವಿರಲಿವೆ.ಅಲ್ಲದೇ, ಶಿಬಿರಾರ್ಥಿಗಳಿಗೆ ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ಔಷಧಿ ವಿತರಿಸಲಾಗುವುದು. ಅಷ್ಟೇ ಅಲ್ಲ, ಪ್ರಾಥಮಿಕ ರಕ್ತ ಮತ್ತು ಮೂತ್ರ ತಪಾಸಣೆಗಳನ್ನು ಮಾಡಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ಶಿಫಾರಸು ಮಾಡಲಾಗುವುದು. ಹೀಗೆ ಶಿಫಾರಸು ಮಾಡಲಾದ ರೋಗಗಳಿಗೆ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಹೊಸ ಉಮರಾಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುಜರಾತದ ತಾಪಿದಾಸ ವಜ್ರದಾಸ ತುಲಸಿದಾಸ ಚಾರಿಟೇಬಲ್ ಟ್ರಸ್ಟ್ ನ ಮುಂಬೈ ಶಾಖೆಯ ವತಿಯಿಂದ ಸುಮಾರು 1.80 ಸಾವಿರ ರೂಪಾಯಿ ಮೌಲ್ಯದ ಪ್ರೊಜೆಕ್ಟರ್ ಹಾಗೂ ಸ್ಮಾರ್ಟ್ ಬೋರ್ಡ್ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಟ್ರಸ್ಟ್ ನ ಕೋ ಆರ್ಡಿನೇಟರ್ ವಿ.ಎಂ. ಸಿಂಧಗಿ ಮಾತನಾಡಿ, ಟ್ರಸ್ಟ್ ನಡೆಸುತ್ತಿರುವ ಸಮಾಜಮುಖಿ ಕೆಲಸಗಳಲ್ಲಿ ಒಂದಾದ ದಾನ ಚಟುವಟಿಕೆಗಳ ಕುರಿತು ವಿವರಿಸಿದರು.ಉಚಿತ ಪುಸ್ತಕ ವಿತರಣೆ, ಸೌಂಡ್ ಸಿಸ್ಟಮ್, ಶಾಲಾ ಫರ್ನಿಚರ್ ಹಾಗೂ ಡಿಜಿಟಲ್ ಸ್ಮಾರ್ಟ್ ಬೋರ್ಡ್ ವಿತರಣೆಗಳ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಟ್ರಸ್ಟ್ ನೀಡುತ್ತಿರುವ ಕೊಡುಗೆಗಳ ಬಗ್ಗೆ ಸವಿವರವಾಗಿ ವಿವರಿಸಿದ ಅವರು,“ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕನು ತನ್ನಲ್ಲಿರುವ ಪ್ರಮಾಣಿಕತೆ, ವಿಶ್ವಾಸ ಮತ್ತು ಮೌಲ್ಯಗಳನ್ನು ಬಲಪಡಿಸಬೇಕು. ಸಮಾಜಕ್ಕೆ ಬೇಕಾದ ಸ್ಥಳಗಳಲ್ಲಿ ಸಾಧ್ಯವಾದ ಮಟ್ಟಿಗೆ ದಾನ ಮಾಡುವುದೇ ನಿಜವಾದ ಸೇವೆ,” ಎಂದು ಹೇಳಿದರು.ರೈತ ಸಂಘ ಚಡಚಣ ತಾಲೂಕಾಧ್ಯಕ್ಷ ವಸಂತ ಭೈರಾಮಡಿ ಮಾತನಾಡಿ, ಗುಜರಾತದ ತಾಪಿದಾಸ ವಜ್ರದಾಸ ತುಲಸಿದಾಸ…

Read More

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ (ಅಭಿವೃದ್ಧಿ) ಉಮಾದೇವಿ ಸೊನ್ನದ ಸೂಚನೆ ಉದಯರಶ್ಮಿ ದಿನಪತ್ರಿಕೆ ಚಡಚಣ: ‘ಕಲಿಕೆಯಲ್ಲಿ ಹಿಂದುಳಿದ ಪ್ರತಿ ಮಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಶಾಲಾ ಶಿಕ್ಷಣ ಇಲಾಖೆ ಸಿದ್ಧಪಡಿಸಿ ಹೊರಡಿಸಲಾದ 40 + ಅಂಕ ಪಡೆಯುವ ಕ್ರಿಯಾ ಯೋಜನೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿ-ರ್ದೇಶಕಿ (ಅಭಿವೃದ್ಧಿ) ಉಮಾದೇವಿ ಸೊನ್ನದ ಹೇಳಿದರು.ಸಂಗಮೇಶ್ವರ ಮಾಧ್ಯಮಿಕ ಶಾಲೆಯಲ್ಲಿ ಬುಧವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.3 ಸರಣಿ ಪರೀಕ್ಷೆಯನ್ನು ಇಲಾಖೆ ಅನುಷ್ಠಾನಗೊಳಿಸಿದೆ. ಪ್ರತಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆಯುವ ಅಂಕದ ಮೇಲೆ ಗಮನಹರಿಸಬೇಕು. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉತ್ತೀರ್ಣ-ರಾಗುವಂತೆ ಮಾಡುವುದು ಶಿಕ್ಷಕರಜವಾಬ್ದಾರಿ ಎಂದರು.ವಿಷಯ ಪರಿವೀಕ್ಷಕಿ ಶೈಲಾ ಹಳೆಮನಿ ಮಾತನಾಡಿ, ನಿಧಾನಗತಿ ಕಲಿಕಾಮಟ್ಟವುಳ್ಳ ವಿದ್ಯಾರ್ಥಿಗಳನ್ನು ಉತ್ತೀರ್ಣ ಗೊಳಿಸುವದು ನಮ್ಮ ಮೊದಲ ಗುರಿ. ವಿವಿಧ ಕಲಿಕಾ ತಂತ್ರಗಳನ್ನು ಅಳವಡಿಸಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಶಿಕ್ಷಕರು ಪ್ರಯತ್ನಿಸಬೇಕು ಎಂದರು.ಚಡಚಣದ ಸಂಗಮೇಶ್ವರ ಮಾಧ್ಯಮಿಕ ಶಾಲೆಯಲ್ಲಿ…

Read More