ಉದಯರಶ್ಮಿ ದಿನಪತ್ರಿಕೆ
ಇಂಡಿ: ಯುವ ಪೀಳಿಗೆ ಮತ್ತೆ ಕೃಷಿಯತ್ತ ಆಕರ್ಷಿಸಲು ಕೃಷಿ ಕ್ಷೇತ್ರದಲ್ಲಿ ಹಲವಾರು ಅವಿಷ್ಕಾರಗಳು ಯಂತ್ರೋಪಕರಣಗಳ ಬಳಕೆಯಾಗುತ್ತಿವೆ. ಕೃಷಿಯೂ ಲಾಭದಾಯಕ ಎಂಬುದನ್ನು ಸಾಬಿತುಪಡಿಸಲಾಗುತ್ತಿದೆ ಎಂದು ವಿಜಯಪುರದ ಕೃಷಿ ವಿವಿ ಕೀಟ ಶಾಸ್ತ್ರ ಉಪನ್ಯಾಸಕರಾದ ಎ.ಪಿ.ಬಿರಾದಾರ ಹೇಳಿದರು.
ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ವಿಜಯಪುರದ ಕೃಷಿ ವಿಶ್ವ ವಿದ್ಯಾಲಯದಿಂದ ೯೦ ದಿನಗಳ ಕಾಲ ರೈತರಿಗೆ ಕೃಷಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಮತ್ತು ರೈತರಿಂದ ಕೃಷಿ ಮಾಹಿತಿ ಪಡೆಯುವ ವಿದ್ಯಾರ್ಥಿಗಳು ಹಮ್ಮಿಕೊಂಡ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ರೈತ ದೇಶದ ಬೆನ್ನಲಬು, ಇದು ಹಳ್ಳಿಗಳ ದೇಶ. ದೇಶದಲ್ಲಿಯೇ ಶೇ ೬೬ ರಷ್ಟು ರೈತರಿದ್ದು ಈ ಪೈಕಿ ಶೇ. ೮೦ ರಷ್ಟು ಸಣ್ಣ ಮತ್ತು ಅತಿಸಣ್ಣ ರೈತರಿದ್ದಾರೆ, ಶೇ ೨೦ ರಷ್ಟು ದೊಡ್ಡ ರೈತರಿದ್ದಾರೆ, ಕೃಷಿ ಶೇ ೫೨ ರಷ್ಟು ಉದ್ಯೋಗ ಸೃಷ್ಠಿಸುವ ಕ್ಷೇತ್ರವಾಗಿದ್ದು ಪ್ರತಿ ಹಂತದಲ್ಲೂ ಕೃಷಿ ಕ್ಷೇತ್ರವನ್ನು ಉತ್ಪಾದಕ ಕ್ಷೇತ್ರವನ್ನಾಗಿ ಮಾರ್ಪಡಿಸಲು ಸರಕಾರ ಜನ ಪ್ರತಿನಿಧಿಗಳು ಯೋಜನೆ ರೂಪಿಸುತ್ತಿದ್ದಾರೆ. ವಿದ್ಯಾವಂತ ಕೃಷಿ ಯುವಕರು ಕೃಷಿಯ ಕಡೆಗೆ ಗಮನ ಹರಿಸಲು ಕೇಳಿಕೊಂಡರು.
ಡೀನ್ ಕೃಷಿ ವಿ ವಿ ವಿಜಯಪುರ ಡಾ. ಎಸ್.ಬಿ.ಜಗ್ಗಿ ಮಾತನಾಡಿ ದೇಶದ ಬೆನ್ನಲಬಾಗಿರುವ ರೈತರು ನಾನಾ ಕೃಷಿ ಬೆಳೆಗಳನ್ನು ಲಾಭದಾಯಕವಾಗಿ ಮತ್ತು ವೈಜ್ಞಾನಿಕವಾಗಿ ಬೆಳೆಸಲು ಸರಕಾರ ಹಲವಾರು ಯೋಜನೆ ರೂಪಿಸಿದೆ. ಕೇಂದ್ರ ರಾಜ್ಯ ಸರಕಾರದ ಯೋಜನೆಗಳನ್ನು ಕೃಷಿ ಇಲಾಖೆ ಅನುಷ್ಠಾನ ಮಾಡುತ್ತಿದ್ದು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೃಷಿಕರಿಗೆ ತಲುಪಿಸುತ್ತಿದ್ದಾರೆ ಎಂದರು.
ಸಹ ಸಂಶೋಧನಾ ನಿರ್ದೇಶಕರು ಡಾ. ಜೆ.ಎಂ.ಸಜ್ಜನವರ, ಸಹ ವಿಸ್ತರಣಾ ನಿರ್ದೇಶಕರು, ಡಾ.ಎಮ್.ಎಮ್. ಜಮಾದಾರ, ಕಿಶೋರ ಹೆಗ್ಗಡೆ, ಎಂ.ವೈ. ತೆಗ್ಗಿ ಡಾ. ಪ್ರಕಾಶ ತಮಗೊಂಡ ಮಾತನಾಡಿದರು.
ಗ್ರಾಮದ ಪುಂಡಲಿಕ ಅಲಬಗೊಂಡ ಮತ್ತು ೮೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

