Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಚನ್ನಬಸವಣ್ಣನವರು ಸಾಮಾಜಿಕ ಬದಲಾವಣೆಯ ಹರಿಕಾರರಾಗಿ “ಚಿನ್ಮಯಜ್ಞಾನಿ’ ಎನಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಜಿ.ಪಿ.ಬಿರಾದಾರ ಹೇಳಿದರು.ಪಟ್ಟಣದ ರಾವುತರಾಯ ದೇವಸ್ಥಾನದ ಆವರಣದಲ್ಲಿ ಬುಧವಾರ ಚನ್ನಬಸವಣ್ಣನವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಅನುಭವ ಮಂಟಪದ ಎರಡನೆಯ ಶೂನ್ಯ ಪೀಠಾಧೀಶರಾಗಿದ್ದ ಚನ್ನಬಸವಣ್ಣ ಪ್ರತಿಯೊಂದು ವಚನಗಳಿಗೆ ಅಂತಿಮವಾಗಿ ಒಪ್ಪಿಗೆಯನ್ನು ಕೊಡುವ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಅಂತೆಯೇ ತಮ್ಮ ೨೧ನೇ ವರ್ಷದಲ್ಲಿ ಖಡ್ಗ ಹಿಡಿದು ಕನ್ನಡ ಶರಣರ ವಚನ ಸಾಹಿತ್ಯವನ್ನು ರಕ್ಷಣೆ ಮಾಡುವುದರ ಮೂಲಕ ಷಟಸ್ಥಲಜ್ಞಾನಿ ಎನಿಸಿದ್ದರು. ಇವರ ಜೀವಿತ ಕಾಲಾವಧಿ ತೀರಾ ಕಡಿಮೆ. ಬದುಕಿದ್ದು ಕೇವಲ ಇಪ್ಪತ್ತನಾಲ್ಕು ವರ್ಷಗಳು ಮಾತ್ರ. ಕೊನೆಗೆ ಉಳವಿಯಲ್ಲಿಯೇ ಲಿಂಗೈಕ್ಯರಾದರು ಎಂದು ೧೨ನೇ ಶತಮಾನದ ಅಸಂಖ್ಯಾತ ಶರಣರಲ್ಲಿ ಪ್ರಮುಖರಾದ ಚನ್ನಬಸವಣ್ಣನವರ ಹಿರಿಮೆಯ ಕುರಿತು ಮಾಹಿತಿ ನೀಡಿದರು.ಶರಣಸಂಗಮ ಸೇವಾಸಮೀತಿ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಪ್ಪ ತಡವಲ್, ಜೆ.ಆರ್.ಬಿರಾದಾರ, ಮಲ್ಲು ಭಂಡಾರಿ, ಗೊಲ್ಲಾಳ ಬಿರಾದಾರ(ಹಿಟ್ನಳ್ಳಿ), ಬಸವರಾಜ ಕುಂಬಾರ, ಅನುಮೇಶ ನಂದ್ಯಾಳ, ಆರ್.ಜಿ.ಕೋಟೀನ್ ಕೆ.ಎಮ್.ನಂದಿ, ನಿಂಗು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಿಜಯಪುರ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಉದ್ದೇಶಿತ ಪಿಪಿಪಿ ಮಾದರಿ ಕೈಬಿಟ್ಟು, ಸಂಪೂರ್ಣ ಸರ್ಕಾರಿ ಕಾಲೇಜಾಗಿ ಆರಂಭಿಸಲು ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಉಳಿಸುವಂತೆ ಆಗ್ರಹಿಸಿ ದೇವರಹಿಪ್ಪರಗಿ ತಾಲ್ಲೂಕಿನ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ಕೈಗೊಂಡು ನಂತರ ತಹಶೀಲ್ದಾರ ಕಾರ್ಯಾಲಯದ ಮುಂದೆ ಧರಣಿ ಕುಳಿತು ಪ್ರತಿಭಟಿಸಿ, ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಗುರುವಾರ ಸಭೆ ಸೇರಿದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ, ಸ್ಪಂದನಾ ತಾಲ್ಲೂಕು ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ, ಜನವೇದಿಕೆ, ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳು ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಉದ್ದೇಶಿತ ಪಿಪಿಪಿ ಮಾದರಿ ಕೈಬಿಡಲು ಒತ್ತಾಯಿಸಿ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಂಬೇಡ್ಕರ್ ವೃತ್ತದ ಮೂಲಕ ಇಂಡಿ ರಸ್ತೆಯಲ್ಲಿನ ತಹಶೀಲ್ದಾರ ಕಾರ್ಯಾಲಯ ತಲುಪಿ ಧರಣಿ ಕುಳಿತರು.ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಕಾಶ ಗುಡಿಮನಿ ಮಾತನಾಡಿ, ಸರ್ಕಾರ ಪಿಪಿಪಿ ಮಾದರಿಯ ವೈದ್ಯಕೀಯ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಧೈರ್ಯ, ಸಾಹಸ, ಮಾನವೀಯತೆಗೆ ಪರ್ಯಾಯ ಹೆಸರೇ ಚೆನ್ನಮ್ಮ. ಇಂತಹ ಮಹಾಮಾತೆಯ ವೃತ್ತವು ಮುಗಿಯುವ ಹಂತದಲ್ಲಿದ್ದು, ಆದಷ್ಟು ಬೇಗನೆ ರಾಜ್ಯದ ಮುಖ್ಯಮಂತ್ರಿಗಳನ್ನು ಕರೆಯಿಸಿ ಅನಾವರಣಗೊಳಿಸಲಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡ ಕಿತ್ತೂರರಾಣಿ ಚೆನ್ನಮ್ಮಳ ೨೪೭ನೆಯ ಜಯಂತೋತ್ಸವ ಹಾಗೂ ೨೦೧ನೆಯ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾಪುರುಷರು ಸರ್ವ ಜನಾಂಗಕ್ಕೆ ಒಳಿತನ್ನೇ ಬಯಸಿದವರು. ಅವರ ತತ್ವಾದರ್ಶಗಳನ್ನು ಯುವ ಪೀಳಿಗೆ ಅಳವಡಿಕೊಳ್ಳುವ ಮೂಲಕ ಜಯಂತಿಯ ಆಚರಣೆ ಸಾರ್ಥಕಗೊಳಿಸಬೇಕು. ಹಾಗೆಯೇ ಸಮಾಜದ ವಿದ್ಯಾರ್ಥಿ ವಸತಿ ನಿಲಯಕ್ಕೆ ರೂ.೫೦ಲಕ್ಷ ಮಂಜೂರಾಗಿದ್ದು, ಆ ಕಾಮಗಾರಿಯನ್ನು ಸಹ ಶೀಘ್ರವಾಗಿ ಪೂರ್ಣಗೊಳಿಸಿ ವಿದ್ಯಾರ್ಥಿಗಳ ವಸತಿಗೆ ಅನುಕೂಲ ಮಾಡಿಕೊಡುವದಲ್ಲದೇ ಸಮಾಜದ ಅಭಿವೃದ್ಧಿಗೆ ಸದಾ ಕೈಜೋಡಿಸುವುದಾಗಿ ಭರವಸೆ ನೀಡಿದರು.ಈ ವೇಳೆ ಕಸಾಪ ಅಧ್ಯಕ್ಷ ವಾಯ್.ಸಿ.ಮಯೂರ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ ಮಾತನಾಡಿ, ಜಯಂತಿಗಳು ಆಯಾ ಸಮುದಾಯದ ಜನರಿಗಷ್ಟೆ ಸೀಮಿತವಾಗಿರದೆ ಸರ್ವ ಸಮಾಜದ ಜನರು ಜಯಂತಿಗಳಲ್ಲಿ ಪಾಲ್ಗೊಂಡು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಅವರನ್ನು ಗೌರವಿಸುವ…
ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾವಳಿಗೆ ಚಾಲನೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕುಸ್ತಿಗೆ ವಿಶೇಷ ಸ್ಥಾನಮಾನವಿದ್ದು, ಶತಮಾನಗಳ ಇತಿಹಾಸವಿದೆ. ಸಿಂದಗಿ ನಗರದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಿದ್ದು ಸಂತಸ ತಂದಿದೆ. ಮುಂದಿನ ಯುವ ಪೀಳಿಗೆಗೆ ಇಂತಹ ಕ್ರೀಡೆಗಳ ಬಗ್ಗೆ ತಿಳಿಯಬೇಕಾದರೆ ಮೇಲಿಂದ ಮೇಲೆ ಕ್ರೀಡೆಗಳು ಜರುಗಬೇಕು. ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಎಚ್.ಜಿ.ಕಾಲೇಜಿನ ಆವರಣದಲ್ಲಿ ಬೆಂಗಳೂರು ನಿರ್ದೇಶಕರ ಶಾಲಾ ಶಿಕ್ಷಣ ಇಲಾಖೆ, ವಿಜಯಪುರ ಉಪನಿರ್ದೇಶಕರ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಎಚ್.ಜಿ.ಪಪೂ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡ ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾವಳಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಿಂದಗಿ ತಾಲೂಕೆಂದರೆ ಕುಸತಿಪಟುಗಳ ತವರು ಮನೆ. ಏಕೆಂದರೆ ಸಿಂದಗಿ ನಗರದಲ್ಲಿ ಕಳೆದ ೪೦ವರ್ಷಗಳ ಹಿಂದೆ ಗರಡಿ ಮನೆಯನ್ನು ಸ್ಥಾಪಿಸಿದ ಕೀರ್ತಿ ದಿ.ಆರ.ಬಿ.ಬೂದಿಹಾಳ ಗುರುಗಳಿಗೆ ಸಲ್ಲುತ್ತದೆ. ಅವರ ಇಡೀ ಜೀವನವನ್ನು ಕುಸ್ತಿಗಾಗಿ ಮೀಸಲಿಟ್ಟಿದ್ದರು. ಕುಸ್ತಿ ಪಂದ್ಯಾವಳಿಯಲ್ಲಿ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ದೀಪಾವಳಿಯ ಬಲಿಪಾಡ್ಯಮಿ ನಿಮಿತ್ತ ಎತ್ತುಗಳಿಗೆ ಕೆಂಡ ಹಾಯಿಸುವ ಸಂಪ್ರದಾಯ ತಾಲ್ಲೂಕಿನಾದ್ಯಂತ ನಾನಾ ಹಳ್ಳಿಗಳಲ್ಲಿ ಜರುಗಿತು.ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಬುಧವಾರ ಬೆಳಿಗ್ಗೆಯೇ ರೈತರು ತಮ್ಮ ತಮ್ಮ ಎತ್ತುಗಳನ್ನು ತೊಳೆದು ಸಿಂಗರಿಸಿದರು. ನಂತರ ಕೆಲ ರೈತರು ಮನೆಯ ಹೊಸ್ತಿಲು ಬಳಿ, ಇನ್ನೂ ಕೆಲವರು ಮನೆಯ ಹೊರಗಡೆ ನಾನಾ ವೈದ್ಯಕೀಯ ಗುಣಗಳು ಹೊಂದಿರುವ ತೊಗರಿ ಕಟ್ಟಿಗೆ, ಕಳ್ಳಿ, ತಂಗಟೆ ಹೂವು ಮತ್ತೀತರ ಗಿಡಗಳ ತಪ್ಪಲುಗಳಿಗೆ ಬೆಂಕಿ ಹಚ್ಚಿ, ಅದರ ಮೇಲೆ ಎತ್ತುಗಳನ್ನು ದಾಟಿಸಲಾಗುತ್ತದೆ.ಮಳೆಗಾಲ ಪೂರ್ಣಗೊಂಡು ಚಳಿಗಾಲ ಆರಂಭಗೊಳ್ಳುವ ಮುನ್ನ ರಾಸುಗಳಿಗೆ ಕಾಲುಬೇನೆ, ಬಾಯಿಬೇನೆ, ರಾಸುಗಳಿಗೆ ಅಂಟಿರುವ ಕ್ರಿಮಿ ಕೀಟಗಳ ನಾಶವಾಗಲು ಈ ಬೆಂಕಿ ದಾಟಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ಬೇನಾಳ ಗ್ರಾಮದ ರೈತರಾದ ಮಹಾದೇವಪ್ಪ ಬಿರಾದಾರ, ಶರಣಪ್ಪ ಇಂಗಳೇಶ್ವರ, ಕಾಶೀಮಸಾಬ್ ಗಂಜ್ಯಾಳ, ಹನುಮಂತ ಗಾಳಪ್ಪಗೋಳ, ಪರಸಪ್ಪ ತಳವಾರ ಅಭಿಪ್ರಾಯ ಪಟ್ಟರು.ಅಮವಾಸ್ಯೆಯ ತನಕ ನಮ್ಮ ದೀಪಾವಳಿ, ಮರುದಿನ ಎತ್ತುಗಳ ದೀಪಾವಳಿ ಎಂದು ಅವರು ಹೇಳಿದರು.ಬೆಂಕಿ ಹಾಯಿಸುವಾಗಲೂ ಕೆಲ ಕಡೆ ಹಾಡು ಹಾಡುವ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿ ಜಲಾಶಯದ ಒಳಹರಿವು ಕಳೆದ ನಾಲ್ಕೈದು ದಿನಗಳಿಂದ ಕ್ಷೀಣಗೊಂಡಿದ್ದು, ಶುಕ್ರವಾರ ಸ್ಥಗಿತಗೊಂಡಿದೆ.ಜುಲೈ ೮ ರಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ವಾರಾಬಂಧಿ ಇಲ್ಲದೇ ಮುಂಗಾರು ಬೆಳೆಗೆ ನಿರಂತರವಾಗಿ ಹರಿಯುತ್ತಿದ್ದ ನೀರು ಇದೇ ಅ.೨೬ ರಿಂದ ಸ್ಥಗಿತಗೊಳ್ಳಲಿದೆ.ಯುಕೆಪಿಯ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನ.೪ ರವರೆಗೆ ೧೪ ದಿನ ಚಾಲು ಹಾಗೂ ೧೦ ದಿನ ಬಂದ್ ಪದ್ಧತಿಗೆ ಅನುಸಾರ ನೀರು ಹರಿಸುವುದು, ಆದರೆ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಇರುವವರೆಗೂ ರೈತರ ಬೇಡಿಕೆಗೆ ತಕ್ಕಂತೆ ನಿರಂತರ ನೀರು ಹರಿಸಲು ನಿರ್ಧರಿಸಲಾಗಿತ್ತು. ಸದ್ಯ ಆಲಮಟ್ಟಿ ಜಲಾಶಯದ ಒಳಹರಿವು ಸ್ಥಗಿತಗೊಂಡಿದ್ದು ವಾರಾಬಂಧಿ ಅಳವಡಿಸಬೇಕಿದೆ. ವಾರಾಬಂಧಿ ಪ್ರಕಾರ ಅ.೨೬ ರಿಂದ ನ.೪ ರವರೆಗೆ ಬಂದ್ ಅವಧಿಯಿದ್ದು, ಇದು ಮುಂಗಾರು ಹಂಗಾಮಿನ ಕೊನೆಯ ಕಂತಾಗಿದೆ. ಇಲ್ಲಿಯವರೆಗೆ ನಿರಂತರ ನೀರು ಹರಿಸಲಾಗಿದ್ದು ಅ.೨೫ ರವರೆಗೆ ನೀರು ಹರಿಸಿ, ಅ.೨೬ ರಿಂದ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗುವುದು ಎಂದು ಅಣೆಕಟ್ಟು ವೃತ್ತ ವಲಯದ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ತಾಂಬಾ ಗ್ರಾಮದ ಪಿಕೆಪಿಎಸ್ ಗೆ ಅಧ್ಯಕ್ಷರಾಗಿ ಲಕ್ಷ್ಮಣ ಹಿರೇಕುರಬರ, ಉಪಾದ್ಯಕ್ಷರಾಗಿ ಶಂಕರೆಪ್ಪ ಶಿರಗೂರ ಅವಿರೋಧ ಆಯ್ಕೆಯಾದರು.ಅ. ೨೪ ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿ ಇವರು ಇಬ್ಬರು ನಾಮಪತ್ರ ಸಲ್ಲಿಸಿದರು.ಹೀಗಾಗಿ ಲಕ್ಷ್ಮಣ ಹಿರೇಕುರಬರ ಅಧ್ಯಕ್ಷರಾಗಿ ಮತ್ತು ಶಂಕರೆಪ್ಪ ಶಿರಗೂರ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.ಒಟ್ಟು ೧೨ ಸದಸ್ಯರು ಆಯ್ಕೆಯಾಗಿದ್ದರು.ಚುನಾವಣೆ ಅಧಿಕಾರಿ ಕೆ.ಬಿ.ಪಾಟೀಲ ಇವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು.ಅಪ್ಪಣ್ಣ ಕಲ್ಲೂರ, ರಾಚಪ್ಪ ಗಳೇದ, ರವಿಕುಮಾರ ಚವ್ಹಾಣ , ಕಾಮೇಸ ಉಕ್ಕಲಿ, ನಾಗಪ್ಪ ಕುರಬತಹಳ್ಳಿ, ಎಸ್.ಎಸ್.ಕನಾಳ, ಸಿದಗೊಂಡ ಹಿರೇಕುರಬರ, ಜಿ.ಎಸ್.ಹತ್ತಳ್ಳಿ, ಮಹಾದೇವ ಮೂಲಿಮನಿ, ಮಹಮ್ಮದ ವಾಲಿಕಾರ, ಸಿದ್ದು ಹತ್ತಳ್ಳಿ, ಆರ್.ಎಂ.ನಾಟಿಕಾರ ಪರಶು ಬಿಸನಾಳ ಮತ್ತಿತರಿದ್ದರು.
ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮೀಜಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಬಿ.ಎಲ್.ಡಿ.ಇ ಸಂಸ್ಥೆ ಅಪಾರ ಕೊಡುಗೆ ನೀಡುತ್ತಿದೆ ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಹೇಳಿದ್ದಾರೆ.ಗುರುವಾರ ನಗರದಲ್ಲಿ ನಡೆದ ಬಿ.ಎಲ್.ಡಿ.ಇ ಸಂಸ್ಥೆಯ ಸಂಸ್ಥಾಪನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜ್ಯೋತಿಬಾ ಫುಲೆ ಅವರಂತೆ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ಬಿ.ಎಲ್.ಡಿ.ಇ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಈ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದರು. ನಂತರ ಬಂಥನಾಳ ಶ್ರೀಗಳು ಪ್ರವಚನಗಳ ಮೂಲಕ ಸಂಸ್ಥೆ ಆರ್ಥಿಕವಾಗಿ ಬೆಳೆಯಲು ಕೊಡುಗೆ ನೀಡಿದರು. ಶ್ರೀಮತಿ ಬಂಗಾರಮ್ಮ ಸಜ್ಜನ 54 ಎಕರೆ ಭೂಮಿ ನೀಡಿದರು. ಶ್ರೀ ಬಿ. ಎಂ. ಪಾಟೀಲರು ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಪ್ರಾರಂಭಿಸಿ ವೃತ್ತಿಪರ ಕೋರ್ಸುಗಳಿಗೆ ಆದ್ಯತೆ ನೀಡಿದರು. ಅವರು ಹಾಕಿದ ಭದ್ರ ಬುನಾದಿಯ ಪರಿಣಾಮ ಈಗ ಸಂಸ್ಥೆಯ ಅಡಿಯಲ್ಲಿ 100ಕ್ಕಿಂತಲೂ ಹೆಚ್ಚು ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಸಂಸ್ಥೆಯ ಅಧ್ಯಕ್ಷ ಎಂ.…
ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕದ ಚುನಾವಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರ್ಯನಿರತ ಪತ್ರಕರ್ತರ ಸಂಘ (ರಿ) ವಿಜಯಪುರ ಜಿಲ್ಲಾ ಘಟಕದ ಚುನಾವಣೆಯಲ್ಲಿ ಜಿಲ್ಲಾ ಖಜಾಂಚಿ ಸ್ಥಾನಕ್ಕಾಗಿ ಸ್ಪರ್ಧಿಸಲು ನಾಡೋಜ ಪತ್ರಿಕೆಯ ಜಿಲ್ಲಾ ವರದಿಗಾರ ರಾಹುಲ್ ಆಪ್ಟೆ ಅವರು ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಇಂದುಶೇಖರ ಮಣೂರ, ಅಶೋಕ ಯಡಳ್ಳಿ ಮಹೇಶ ಶೆಟಗಾರ, ಶರಣು ಮಸಳಿ, ಪ್ರಕಾಶ ಬೆಣ್ಣೂರ, ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ, ಸಂಗನಗೌಡ ಪಾಟೀಲ, ಗುರು ಗದ್ದನಕೇರಿ, ಶಶಿ ಮೆಂಡೆಗಾರ, ರಾಹುಲ್ ಆಪ್ಟೆ, ಡಿ.ಬಿ.ವಡವಡಗಿ, ಬಸವರಾಜ ಉಳ್ಳಾಗಡ್ಡಿ, ಗೋಪಾಲ ಕನಿಮಣಿ, ಚಿದಂಬರ (ಪುಟ್ಟು) ಕುಲಕರ್ಣಿ, ಶ್ರೀನಿವಾಸ ಸೂರಗೊಂಡ, ಸುನೀಲ ಭಾಸ್ಕರ, ಪವನ ಕುಲಕರ್ಣಿ, ರಾಜೇಂದ್ರಕುಮಾರ ಹಜೇರಿ, ಸುಧೀಂದ್ರ ಕುಲಕರ್ಣಿ ಸೇರಿದಂತೆ ಹಲವರಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕದ ಚುನಾವಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರ್ಯನಿರತ ಪತ್ರಕರ್ತರ ಸಂಘ (ರಿ) ವಿಜಯಪುರ ಜಿಲ್ಲಾ ಘಟಕದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಹಿರಿಯ ಪತ್ರಕರ್ತ ಹಾಗೂ ಟಿವಿ 9 ಜಿಲ್ಲಾ ವರದಿಗಾರ ಅಶೋಕ ಯಡಳ್ಳಿ ಅವರು ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.ಈ ವೇಳೆ ಹಿರಿಯ ಪತ್ರಕರ್ತರಾದ ಇಂದುಶೇಖರ ಮಣೂರ, ಮಹೇಶ ಶೆಟಗಾರ, ಶರಣು ಮಸಳಿ, ಪ್ರಕಾಶ ಬೆಣ್ಣೂರ, ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ, ಸಂಗನಗೌಡ ಪಾಟೀಲ, ಗುರು ಗದ್ದನಕೇರಿ, ಶಶಿ ಮೆಂಡೆಗಾರ, ರಾಹುಲ್ ಆಪ್ಟೆ, ಡಿ.ಬಿ.ವಡವಡಗಿ, ಬಸವರಾಜ ಉಳ್ಳಾಗಡ್ಡಿ, ಗೋಪಾಲ ಕನಿಮಣಿ, ಚಿದಂಬರ (ಪುಟ್ಟು) ಕುಲಕರ್ಣಿ, ಶ್ರೀನಿವಾಸ ಸೂರಗೊಂಡ, ಸುನೀಲ ಭಾಸ್ಕರ, ಪವನ ಕುಲಕರ್ಣಿ, ರಾಜೇಂದ್ರಕುಮಾರ ಹಜೇರಿ, ಸುಧೀಂದ್ರ ಕುಲಕರ್ಣಿ ಸೇರಿದಂತೆ ಹಲವರಿದ್ದರು.
