ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಧೈರ್ಯ, ಸಾಹಸ, ಮಾನವೀಯತೆಗೆ ಪರ್ಯಾಯ ಹೆಸರೇ ಚೆನ್ನಮ್ಮ. ಇಂತಹ ಮಹಾಮಾತೆಯ ವೃತ್ತವು ಮುಗಿಯುವ ಹಂತದಲ್ಲಿದ್ದು, ಆದಷ್ಟು ಬೇಗನೆ ರಾಜ್ಯದ ಮುಖ್ಯಮಂತ್ರಿಗಳನ್ನು ಕರೆಯಿಸಿ ಅನಾವರಣಗೊಳಿಸಲಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡ ಕಿತ್ತೂರರಾಣಿ ಚೆನ್ನಮ್ಮಳ ೨೪೭ನೆಯ ಜಯಂತೋತ್ಸವ ಹಾಗೂ ೨೦೧ನೆಯ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾಪುರುಷರು ಸರ್ವ ಜನಾಂಗಕ್ಕೆ ಒಳಿತನ್ನೇ ಬಯಸಿದವರು. ಅವರ ತತ್ವಾದರ್ಶಗಳನ್ನು ಯುವ ಪೀಳಿಗೆ ಅಳವಡಿಕೊಳ್ಳುವ ಮೂಲಕ ಜಯಂತಿಯ ಆಚರಣೆ ಸಾರ್ಥಕಗೊಳಿಸಬೇಕು. ಹಾಗೆಯೇ ಸಮಾಜದ ವಿದ್ಯಾರ್ಥಿ ವಸತಿ ನಿಲಯಕ್ಕೆ ರೂ.೫೦ಲಕ್ಷ ಮಂಜೂರಾಗಿದ್ದು, ಆ ಕಾಮಗಾರಿಯನ್ನು ಸಹ ಶೀಘ್ರವಾಗಿ ಪೂರ್ಣಗೊಳಿಸಿ ವಿದ್ಯಾರ್ಥಿಗಳ ವಸತಿಗೆ ಅನುಕೂಲ ಮಾಡಿಕೊಡುವದಲ್ಲದೇ ಸಮಾಜದ ಅಭಿವೃದ್ಧಿಗೆ ಸದಾ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಕಸಾಪ ಅಧ್ಯಕ್ಷ ವಾಯ್.ಸಿ.ಮಯೂರ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ ಮಾತನಾಡಿ, ಜಯಂತಿಗಳು ಆಯಾ ಸಮುದಾಯದ ಜನರಿಗಷ್ಟೆ ಸೀಮಿತವಾಗಿರದೆ ಸರ್ವ ಸಮಾಜದ ಜನರು ಜಯಂತಿಗಳಲ್ಲಿ ಪಾಲ್ಗೊಂಡು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಅವರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಬಿಇಒ ಎಂ.ಬಿ.ಯಡ್ರಾಮಿ, ರಮೇಶ ಬಿರಾದಾರ, ಸಮಾಜದ ಹಿರಿಯರಾದ ಸೋಮನಗೌಡ ಬಿರಾದಾರ, ವಿ.ಬಿ.ಕುರುಡೆ, ಸಿದ್ದನಗೌಡ ಪಾಟೀಲ ಹೂವಿನಹಳ್ಳಿ, ಸಾಹೇಬಗೌಡ ಬಿರಾದಾರ, ಅಶೋಕ ಅಲ್ಲಾಪುರ, ಆನಂದ ಶಾಬಾದಿ, ಅಶೋಕ ತೆಲ್ಲೂರ, ಎಸ್.ಬಿ.ಪಾಟೀಲ ಗುಂದಗಿ, ರವಿ ಬಿರಾದಾರ, ಆರ್.ಡಿ.ದೇಸಾಯಿ, ಶಿವಾನಂದ ಬಡಾನೂರ, ಚಂದ್ರಶೇಖರ ನಾರಗಬೆಟ್ಟ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಸಂಗನಗೌಡ ಪಾಟೀಲ ಅಗಸಬಾಳ, ಶಿವರಾಜ ಭಾಸಗಿ, ದಾನಪ್ಪ ಜೋಗುರ, ಶಿವಾನಂದ ಕಲಬುರ್ಗಿ, ಬಸವರಾಜ ಗುಗ್ಗರಿ, ಶಾಂತೂ ರಾಣಾಗೋಳ, ಮಲ್ಲಿಕಾರ್ಜುನ ಅಲ್ಲಾಪೂರ, ಉಮೇಶ ನಂದಶೆಟ್ಟಿ, ಮಹಾಂತೇಶ ಅಂಗಡಿ, ಬಸವರಾಜ ಐರೋಡಗಿ, ಕುಪೀಂದ್ರ ಬಿರಾದಾರ, ವಕೀಲ ಮಲ್ಲನಗೌಡ ಪಾಟೀಲ, ಪಂಡಿತ ಯಂಪುರೆ, ಗುರಣ್ಣ ಬಸರಕೋಡ, ಸುರೇಶ ಮಲಗೊಂಡ, ಬಿ.ಜಿ.ನೆಲ್ಲಗಿ, ಯಾತನೂರ ವಕೀಲರು ಸೇರಿದಂತೆ ಅನೇಕರು ಇದ್ದರು.

