ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ತಾಂಬಾ ಗ್ರಾಮದ ಪಿಕೆಪಿಎಸ್ ಗೆ ಅಧ್ಯಕ್ಷರಾಗಿ ಲಕ್ಷ್ಮಣ ಹಿರೇಕುರಬರ, ಉಪಾದ್ಯಕ್ಷರಾಗಿ ಶಂಕರೆಪ್ಪ ಶಿರಗೂರ ಅವಿರೋಧ ಆಯ್ಕೆಯಾದರು.
ಅ. ೨೪ ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿ ಇವರು ಇಬ್ಬರು ನಾಮಪತ್ರ ಸಲ್ಲಿಸಿದರು.
ಹೀಗಾಗಿ ಲಕ್ಷ್ಮಣ ಹಿರೇಕುರಬರ ಅಧ್ಯಕ್ಷರಾಗಿ ಮತ್ತು ಶಂಕರೆಪ್ಪ ಶಿರಗೂರ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಒಟ್ಟು ೧೨ ಸದಸ್ಯರು ಆಯ್ಕೆಯಾಗಿದ್ದರು.
ಚುನಾವಣೆ ಅಧಿಕಾರಿ ಕೆ.ಬಿ.ಪಾಟೀಲ ಇವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ಅಪ್ಪಣ್ಣ ಕಲ್ಲೂರ, ರಾಚಪ್ಪ ಗಳೇದ, ರವಿಕುಮಾರ ಚವ್ಹಾಣ , ಕಾಮೇಸ ಉಕ್ಕಲಿ, ನಾಗಪ್ಪ ಕುರಬತಹಳ್ಳಿ, ಎಸ್.ಎಸ್.ಕನಾಳ, ಸಿದಗೊಂಡ ಹಿರೇಕುರಬರ, ಜಿ.ಎಸ್.ಹತ್ತಳ್ಳಿ, ಮಹಾದೇವ ಮೂಲಿಮನಿ, ಮಹಮ್ಮದ ವಾಲಿಕಾರ, ಸಿದ್ದು ಹತ್ತಳ್ಳಿ, ಆರ್.ಎಂ.ನಾಟಿಕಾರ ಪರಶು ಬಿಸನಾಳ ಮತ್ತಿತರಿದ್ದರು.

