Author: editor.udayarashmi@gmail.com

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಮ್ಮ ವಿಜಯಪುರವು ಐತಿಹಾಸಿಕ ಸ್ಮಾರಕಗಳ ನಗರಿ ಬಿಜಾಪುರ ಅದಿಲ್ ಶಾಹಿಗಳ ಕುರುಹುಗಳ, ಸ್ಮಾರಕಗಳು, ಗುಮ್ಮಟಗಳ ಐತಿಹಾಸಿಕ ಪರಪಂಪರೆಯ ನೆಲೆ ಬೀಡಾಗಿದೆ ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಸಹಯೋಗದಲ್ಲಿ ಸೋಮವಾರ ಜುರುಗಿದ ಬಿಜಾಪುರ ಆದಿಲ್ ಶಾಹಿಗಳ ಕಲೆ,ವಾಸ್ತುಶಿಲ್ಪ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಲಾ ಇತಿಹಾಸ ವಿಷಯಕ್ಕೆ ಪಠ್ಯಕ್ಕೆ ಅಳಡಿಸಿರುವ ಹಾಗೆ ಆದಿಲ್ ಶಾಹಿಗಳ ಕಲೆ, ವಾಸ್ತುಶಿಲ್ಪ ಮತ್ತು ಪರಂಪರೆಯನ್ನು ಇಂದಿನ ವಿದ್ಯಾರ್ಥಿಗಳು ಅರಿತುಕೊಳ್ಳವುದು ಅವಶ್ಯವಾಗಿದೆ ಎಂದು ಹೇಳಿದರು.ಈ ವೇಳೆಯಲ್ಲಿ ಸಂಪನ್ಮೂಲಗ ವ್ಯಕ್ತಿಯಾಗಿ ಚಡಚಣದ ಎಸ್ ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾದ್ಯಾಪಕ ಪ್ರೊ.ಅಪ್ಪು ಜಾಧವ ಮಾತನಾಡಿ, ವಿಜಯಪುರ…

Read More

ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ನೇತೃತ್ವದ ನಿಯೋಗದಿಂದ ಜಿಲ್ಲಾಧಿಕಾರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಮರುಕಳಿಸುತ್ತಿರುವ ಭೂಕಂಪನದ ಸಂಶೋಧನೆ ನಡೆಸಿ ಜನರ ಆತಂಕ ನಿವಾರಣೆ ಮಾಡುವುದು, ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವುದು ಹಾಗೂ ಕೋನೋ ಕಾರ್ಪಸ್ ಗಿಡಗಳನ್ನು ನಿಷೇಧಿಸುವುದು ಸೇರಿದಂತೆ ವಿಜಯಪುರ ಜನತೆ ಎದುರಿಸುತ್ತಿರುವ ವಿವಿಧ ಮಹತ್ವದ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.ವಿಜಯಪುರ ಜನತೆಯ ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಿದ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ, ವಿಜಯಪುರ ನಗರದಲ್ಲಿ ಭೂಕಂಪನಗಳು ಮರುಕಳಿಸುತ್ತಲೇ ಇವೆ, ೨೦೨೧ರಿಂದ ೨೦೨೫ ನವೆಂಬರ್ ೪ರ ವರೆಗೆ ೫೪ ಸಲ ಲಘು ಭೂಕಂಪನ ಸಂಭವಿಸಿದೆ. ೨೦೨೫ರಲ್ಲಿ ೬ ಭಾರಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕನಿಷ್ಠ ೧.೨ ರಿಂದ ಗರಿಷ್ಠ ೪.೪ ವರೆಗೂ ತೀವ್ರತೆ ದಾಖಲಾಗಿದೆ. ಇದರಿಂದ ಜನತೆ ಆತಂಕಗೊAಡಿದ್ದಾರೆ, ಕೂಡಲೇ ಸಾರ್ವಜನಿಕರ ಆತಂಕ ದೂರ…

Read More

ವಿಜಯಪುರದಲ್ಲಿ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಆರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿವಿಧ ಗ್ರಾಮೀಣ ಭಾಗಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಸಚಿವ ಸಂಪುಟ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ, ಗ್ರಾಮಸಭೆ ನಡೆಸದೇ, ಆಕ್ಷೇಪಣೆಗೆ ಆಹ್ವಾನಿಸದೇ ಕೇವಲ ರಿಯಲ್ ಎಸ್ಟೇಟ್ ಧಂಧೆಗೆ ಅನುಕೂಲ ಕಲ್ಪಿಸಲು ಪಾಲಿಕೆ ವ್ಯಾಪ್ತಿ ವಿಸ್ತರಣೆ ಮಾಡಲಾಗುತ್ತಿದೆಯೇ ಎಂಬ ಆತಂಕ ಕಾಡುತ್ತಿದೆ, ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಮಹಾನಗರ ಪಾಲಿಕೆ ನೇತೃತ್ವದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಕಾರ್ಯ ನಡೆದಿಲ್ಲ, ಅನುದಾನದ ಕೊರತೆ ಸೇರಿದಂತೆ ಅನೇಕ ಸಮಸ್ಯೆ ತಾಂಡವವಾಡುತ್ತಿವೆ, ಇಂತಹ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಣೆ ಮಾಡುವುದು ಅವೈಜ್ಞಾನಿಕವೇ ಸರಿ ಎನ್ನುವುದು ನನ್ನ ಭಾವನೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರು ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದುಕೊಂಡಿರುವ ಜಾಹೀರಾತು ಮಾದರಿಯ…

Read More

ಆರುಬಾ ದ್ವೀಪ ರಾಷ್ಟ್ರದ ಅರಿಯಸ್ ವೈದ್ಯಕೀಯ ವಿಶ್ವವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನವರಾದ ಡಾ ಶಶಿಕಾಂತ ಪಟ್ಟಣ ಮತ್ತು ಡಾ ಜಯಶ್ರೀ ಪಟ್ಟಣ ದಂಪತಿಗಳುಆರುಬಾ ದ್ವೀಪ ರಾಷ್ಟ್ರದ ಅರಿಯಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಸಂಪರ್ಕಾಧಿಕಾರಿಯಾಗಿ ಡಾ ಪಟ್ಟಣ ದಂಪತಿಗಳ ನೇಮಕಗೊಂಡಿದ್ದಾರೆ.ಸ್ವಾತಂತ್ರ್ಯ ಹೋರಾಟಗಾರರ ಮನೆತನದ ಡಾ ಶಶಿಕಾಂತ ಪಟ್ಟಣ ಮತ್ತು ಡಾ ಜಯಶ್ರೀ ಪಟ್ಟಣ ಇವರು ತಮ್ಮ ಔಷಧೀಯ ವಿಜ್ಞಾನ ಮತ್ತು ಮಿಣಿ ಜೀವಶಾಸ್ತ್ರದ ಸಂಶೋಧನೆ ಮತ್ತು ಅಧ್ಯಯನ ಶೀಲತೆ ಕಂಡು ಆರುಬಾ ದ್ವೀಪ ರಾಷ್ಟ್ರದ ಅರಿಯಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಮುಖ್ಯ ಕಾರ್ಯ ನಿರ್ವಾಹಕ ಮತ್ತು ಡೀನ್ ಡಾ ಅಜಿತ್ ಮಹದೇವಪ್ಪ ರಾಮಪುರೆ ಕೆನಡಾ ಅರುಬಾ ಇವರ ಆದೇಶವನ್ನುಡಾ ರೀಟಾ ಅವರು ಡಾ ಶಶಿಕಾಂತ ಪಟ್ಟಣ ಮತ್ತು ಡಾ ಜಯಶ್ರೀ ಪಟ್ಟಣ ಇವರಿಬ್ಬರಿಗೂ ಕಳುಹಿಸಿ ಕೊಟ್ಟಿದ್ದಾರೆ.ಅರುಬಾ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆಯುವ ವೈದ್ಯಕೀಯ ಶಿಕ್ಷಣ ಫಾರ್ಮಸಿ ಶಿಕ್ಷಣ ನರ್ಸಿಂಗ್ ಶಿಕ್ಷಣಗಳ ಪದವಿ ಕೋರ್ಸ್ ಗಳಿಗಾಗಿ ಭಾರತದಲ್ಲಿ ಯಾವುದೇ ಶಿಕ್ಷಣ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಮ್ಮ ಹರಿತ ಸಾಹಿತ್ಯದ ಮೂಲಕ ಸಮಾಜಮುಖಿ ಚಿಂತನೆಗಳನ್ನು ಬಿತ್ತರಿಸಿ ಇತಿಹಾಸದಲ್ಲಿ ಅಜರಾಮರರಾಗಿರುವ ಭಕ್ತ ಕನಕದಾಸರು ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ರವೀಂದ್ರನಾಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಉಮಾ ಭೋಸಲೆ ಹೇಳಿದರು.ಶನಿವಾರ ನಗರದ ಗುರುದೇವ ಇಂಟರನ್ಯಾಶನಲ್ ಪಬ್ಲಿಕ್ ಪ್ರೌಡಶಾಲೆಯಲ್ಲಿ ಹಮ್ಮಿಕೊಂಡ ಭಕ್ತ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ಜಗತ್ತಿಗೆ ದಾಸ ಸಾಹಿತ್ಯ ಪ್ರಚುರಪಡಿಸಿ ಮನುಜಕುಲ ಒಂದೆ ಎಂದು ಸಾರಿ ಹೇಳಿದ ಕನಕದಾಸರು ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗಿಸುವಲ್ಲಿ ಶ್ರಮಿಸಿದ್ದಾರೆ. ಹಲವಾರು ಕೃತಿಗಳನ್ನು ರಚಿಸುವ ಮೂಲಕ ಕನಕದಾಸರು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಿಕ್ಷಕ ಕಬೂಲ್ ಕೊಕಟನೂರ, ದಾರ್ಶನಿಕರಲ್ಲಿ ಅಗ್ರಜರಾಗಿರುವ ಕನಕದಾಸರು ಭಕ್ತಿಯಲ್ಲೆ ದೇವರನ್ನು ಕಂಡವರಾಗಿದ್ದಾರೆ. ಸರ್ವಸ್ವ ಇದ್ದರೂ, ಲೌಕಿಕ ಜಗತ್ತಿಗೆ ತಿಲಾಂಜಲಿ ನೀಡಿ ದಾಸರಾದರು. ಕನಕದಾಸರ ಕಾವ್ಯದಲ್ಲಿ ತತ್ವ, ತಾರ್ಕಿಕತೆ ಮತ್ತು ಮನಸ್ಸಿನ ನಿಜವಾದ ಚಿಂತನೆಗಳಿವೆ ಇವರ ಕೃತಿಗಳಲ್ಲಿ ಕೇವಲ ಧಾರ್ಮಿಕ ವಿಚಾರಗಳಲ್ಲದೆ ಮಾಣವ ಜೀವನದ ದಾರಿದೀಪಗಳಾಗಿವೆ. ಇವುಗಳನ್ನು ನಮ್ಮ ನಿತ್ಯ ಜೀವನದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ:15-16ನೇ ಶತಮಾನದಲ್ಲೇ ಜಾತಿ ತಾರತಮ್ಯವನ್ನು ಧಿಕ್ಕರಿಸಿದ ಭಕ್ತ ಕನಕದಾಸರ ಜೀವನಾದರ್ಶ ಇಂದಿನ ಕಾಲಘಟ್ಟದಲ್ಲೂ ಪಾಲನೆಗೆ ಅರ್ಹವಾಗಿದೆ ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ನಂ. 2), ಮರಡಿ ಶಾಲೆಯಲ್ಲಿ ಶನಿವಾರ ಭಕ್ತ ಕನಕದಾಸರ ಜಯಂತಿ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಮಾನತೆಯ ತಳಹದಿಯಲ್ಲಿನ ಕನಕದಾಸರ ಮಾರ್ಗದರ್ಶನ ಅತ್ಯಂತ ಪ್ರಸ್ತುತವಾಗಿದೆ. ಅವರು ಕೇವಲ ಸಾಹಿತ್ಯ ರಚನೆಕಾರರಷ್ಟೇ ಅಲ್ಲ, ವಿಶ್ವಕ್ಕೆ ಆದರ್ಶ ನೀಡಿದ ಮಹಾನ್ ಮಾನವತಾವಾದಿ” ಎಂದರು.ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ, “ಅಸಮಾನತೆ ವಿರುದ್ಧ ಹೋರಾಡಿದ ಕನಕದಾಸರು ದೇಶ ಕಂಡ ಪ್ರಮುಖ ಹರಿಭಕ್ತರಲ್ಲಿ ಒಬ್ಬರು. ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಜಾತಿ ವೈಷಮ್ಯತೆಗೆ ಅವರ ಕೀರ್ತನೆಗಳೇ ಶಸ್ತ್ರವಾಗಬಹುದು” ಎಂದು ಹೇಳಿದರು.ಶಿಕ್ಷಕ ಎಚ್.ಜೆ. ಲೋಣಿ ಜಯಂತಿಯ ಮಹತ್ವ ಕುರಿತು ಮಾತನಾಡಿದರು.ಶಾಲೆಯ ವಿದ್ಯಾರ್ಥಿಗಳಾದ ಅಭಿಜಿತ್ ಇರಸೂರ, ಪ್ರಾಚಿ ರಾವುತ್, ಸಾನ್ವಿ ಝಂಡೆ, ರಾಣಿ ವಾಘಮೋರೆ, ಶ್ರಾವಣಿ ಕೋಳಿ, ಶ್ರದ್ಧಾ ಬುರುಡ, ಅಂಕುಶ ಕ್ಷತ್ರಿ, ಜಕರಾಯ ಕೋಳಿ, ವಿದ್ಯಾ ಕ್ಷತ್ರಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ‌ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಇಂದು‌ ಶನಿವಾರ ನಾಡಿನ ಶ್ರೇಷ್ಠ ಸಂತ ಶ್ರೀ ಭಕ್ತ ಕನಕದಾಸ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಡೀಮ್ಡ್ ವಿವಿ ಹಂಗಾಮಿ ಕುಲಪತಿ ಡಾ. ಅರುಣ ಚಂ. ಇನಾಮದಾರ, ಡೀನ ಅಲೈಡ ಹೆಲ್ತ್ ಸೈನ್ಸ, ಡಾ. ಎಸ್. ವಿ. ಪಾಟೀಲ, ಆರ್ ಆ್ಯಂಡ್ ಡಿ ನಿರ್ದೇಶಕ ಡಾ. ಎಂ. ಎಂ. ಪಾಟೀಲ, ವೈದ್ಯಕೀಯ ಉಪಅಧೀಕ್ಷಕ, ಡಾ. ರವಿಕುಮಾರ ಬಿರಾದಾರ, ಉಸಿರಾಟ ಚಿಕಿತ್ಸೆ ವಿಬಾಗದ ಮುಖ್ಯಸ್ಥ, ಡಾ. ಕೀರ್ತಿವರ್ಧನ್ ಕುಲಕರ್ಣಿ, ಡಾ. ಸಂಜಯ ವಾವರೆ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ, ಡಾ. ರಘುವೀರ, ಜಿ. ಕುಲಕರ್ಣಿ, ಉಪಕುಲಸಚಿವ ಸತೀಶ ಪಾಟೀಲ, ಸಹಾಯಕ ಕುಲಸಚಿವ, ಡಾ. ಶ್ರೀಧರ ಬಗಲಿ, ಸಹಾಯಕ ಪ್ರಾಧ್ಯಾಪಕ ಶೇಷಾದ್ರಿ ಕೆ., ಸಹಾಯಕ ಕಾನೂನು ಅಧಿಕಾರಿ, ಐ. ಬಿ. ಮಠಪತಿ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಭಕ್ತ ಕನಕದಾಸರ ಜಯಂತೋತ್ಸವವನ್ನು ಆಚರಿಸಲಾಯಿತು.ಬಿಜೆಪಿ ಕಾರ್ಯಾಲಯದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಪೂಜೆ ಸಲ್ಲಿಸಲಾಯಿತು. ನಂತರ ಕನಕದಾಸರ ವೃತ್ತಕ್ಕೆ ತೆರಳಿದ ಕಾರ್ಯಕರ್ತರು ಕನಕದಾಸರ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಗೌರವಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಕನಕದಾಸರು ಶ್ರೇಷ್ಠ ದೈವಭಕ್ತರು, ಅವರಲ್ಲಿರುವ ಅದಮ್ಯ ದೈವ ಭಕ್ತಿ ಪ್ರತಿಯೊಬ್ಬರಿಗೂ ಸ್ಪೂರ್ತಿ, ಕನಕದಾಸರ ಶ್ರೇಷ್ಠ ಭಕ್ತಿಗೆ ಕೇಶವ ಮೆಚ್ಚಿಕೊಂಡಿದ್ದ, ಅವರು ರಚಿಸಿದ ಕೀರ್ತನೆಗಳು ಉದಾತ್ತ ಜೀವನ ನಡೆಸಲು ದಾರಿದೀಪವಾಗಿವೆ ಎಂದರು.ಕೀರ್ತನೆ ಅಂದ್ರೆ ಪರಮಾತ್ಮನ ಕೀರ್ತಿಯನ್ನ ಆರಾಧಿಸುವಂತಹ ಭಜನೆಗಳು. ಈ ಕೀರ್ತನೆಗಳ ಮೂಲಕ ಕನಕದಾಸರು ಉದಾತ್ತ ಸಮಾಜ ನಿರ್ಮಾಣಕ್ಕಾಗಿ ಮಾರ್ಗದರ್ಶಿಯಾಗಿದ್ದಾರೆ, ಕನಕದಾಸರ ಚಿಂತನೆಯನ್ನು ನಾವು ಅಳವಡಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದರು.ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಮೇಯರ್ ಎಂ.ಎಸ್. ಕರಡಿ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಭೀಮಾಶಂಕರ ಮುಳುಗೌಡ…

Read More

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಸಮಾಜದಲ್ಲಿದ್ದ ಅಸಮಾನತೆ, ಅನಿಷ್ಠ ಪದ್ಧತಿಗಳ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಸಮರ ಸಾರಿದ ದಾಸಶ್ರೇಷ್ಠರು ಕನಕದಾಸರು. ಅವರ ಚಿಂತನೆಗಳು, ವಿಚಾರಗಳು ಮತ್ತು ಸಮಾಜ ಸುಧಾರಣೆಯ ದೃಷ್ಟಿಕೋನಗಳು ಇಂದಿಗೂ ಪ್ರಸ್ತುತ” ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿಜಯಾ ಬಿ ಕೋರಿಶೆಟ್ಟಿ ಹೇಳಿದರು.ಅವರು ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಸಮಾರಂಭದಲ್ಲಿ ಮಾತನಾಡಿದ ಕುಲಸಚಿವ ಶಂಕರಗೌಡ ಸೋಮನಾಳ, “ಕನಕದಾಸರು ೧೫-೧೬ ನೇ ಶತಮಾನದಲ್ಲಿ ಸಮಾಜಿಕ ಸಮಾನತೆಗಾಗಿ ಹೋರಾಡಿದವರು. ಸಮಾಜದ ಢಾಂಬಿಕತೆ, ವರ್ಗ ಸಂಘರ್ಷದ ವಿರುದ್ಧ ಧ್ವನಿ ಎತ್ತಿದವರು. ಅವರು ಸಾಹಿತ್ಯ ಮೂಲಕ ಮಹಿಳಾ ಸಬಲೀಕರಣ ಹಾಗೂ ಸ್ತ್ರೀ ಸ್ವಾತಂತ್ರ್ಯದ ಅಗತ್ಯತೆಯ ಕುರಿತಾಗಿಯೂ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ದಾಸ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆಗಳನ್ನು ತಂದಿದ್ದಾರೆ” ಎಂದರು.ಕಾರ್ಯಕ್ರಮದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಳೆದ ನೂರು ವರ್ಷಗಳಿಂದ ರಾಷ್ಟ್ರ ಪುನರ್ ನಿರ್ಮಾಣದ ಈ ಮಹಾನ್ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಡೀ ಸಮಾಜವನ್ನು ಸಂಘಟಿಸುವ ಕಾರ್ಯ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿದೆ ಎಂದು ಅಶೋಕ ಅಲ್ಲಾಪುರ ಹೇಳಿದರು.ಸಿಂದಗಿ ಪಟ್ಟಣದ ಜ್ಯೋತಿ ನಗರದ ಲಕ್ಷ್ಮಿ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಟನೆ ಮತ್ತು ಸೇವೆಗಳ ೧೦೦ ವರ್ಷಗಳ ಯಾತ್ರೆಯ ಗೃಹ ಸಂಪರ್ಕ ಅಭಿಯಾನದ ಕರಪತ್ರಗಳನ್ನು ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ೧೯೨೫ರ ವಿಜಯದಶಮಿಯಂದು ಪ್ರಾರಂಭವಾದ ಆರ್‌ಎಸ್‌ಎಸ್ ಸಂಘಕ್ಕೆ ಇದೀಗ ನೂರರ ಸಂಭ್ರಮ. ಸಂಘ ಇಂದು ಪ್ರಪಂಚಕ್ಕೆ ಅತಿದೊಡ್ಡ ಸಾಮಾಜಿಕ ಸಂಘಟನೆಯಾಗಿ ಬೆಳೆದಿದೆ. ಲಕ್ಷಾಂತರ ಜನರನ್ನು ಸೇವಾಕಾರ್ಯ ಮತ್ತು ಸಮಾಜದ ಚಟುವಟಿಗಳಲ್ಲಿ ತೊಡಗಿಸಿದೆ. ಹಾಗಾಗಿ ಸಂಘದ ಕುರಿತಾಗಿ ಇನ್ನಷ್ಟು ಜನರಲ್ಲಿ ತಿಳುವಳಿಕೆ ಮತ್ತು ಸಂಘ ನಡೆದುಕೊಂಡು ಬಂದ ದಾರಿಯ ಬಗ್ಗೆ ಗೃಹ ಸಂಪರ್ಕ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ದಿಸೆಯಲ್ಲಿ ಈ ಆಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ನಗರದ ಮನೆ-ಮನೆಗಳಿಗೆ ತೆರಳಿ ಸಂಘದ ಸೇವೆಗಳ…

Read More