ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಮ್ಮ ವಿಜಯಪುರವು ಐತಿಹಾಸಿಕ ಸ್ಮಾರಕಗಳ ನಗರಿ ಬಿಜಾಪುರ ಅದಿಲ್ ಶಾಹಿಗಳ ಕುರುಹುಗಳ, ಸ್ಮಾರಕಗಳು, ಗುಮ್ಮಟಗಳ ಐತಿಹಾಸಿಕ ಪರಪಂಪರೆಯ ನೆಲೆ ಬೀಡಾಗಿದೆ ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಸಹಯೋಗದಲ್ಲಿ ಸೋಮವಾರ ಜುರುಗಿದ ಬಿಜಾಪುರ ಆದಿಲ್ ಶಾಹಿಗಳ ಕಲೆ,ವಾಸ್ತುಶಿಲ್ಪ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಲಾ ಇತಿಹಾಸ ವಿಷಯಕ್ಕೆ ಪಠ್ಯಕ್ಕೆ ಅಳಡಿಸಿರುವ ಹಾಗೆ ಆದಿಲ್ ಶಾಹಿಗಳ ಕಲೆ, ವಾಸ್ತುಶಿಲ್ಪ ಮತ್ತು ಪರಂಪರೆಯನ್ನು ಇಂದಿನ ವಿದ್ಯಾರ್ಥಿಗಳು ಅರಿತುಕೊಳ್ಳವುದು ಅವಶ್ಯವಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಸಂಪನ್ಮೂಲಗ ವ್ಯಕ್ತಿಯಾಗಿ ಚಡಚಣದ ಎಸ್ ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾದ್ಯಾಪಕ ಪ್ರೊ.ಅಪ್ಪು ಜಾಧವ ಮಾತನಾಡಿ, ವಿಜಯಪುರ ಜಿಲ್ಲೆಯು ಐತಿಹಾಸಿಕ ಸ್ಥಳವಾಗಿದ್ದು ನಗರದ ಸುತ್ತೆಲ್ಲ ಬಿಜಾಪುರ ಆದಿಲ್ ಶಾಹಿಗಳ ಭವ್ಯ ಸ್ಮಾರಕಗಳು,ಕೋಟೆ ಗೋಡೆಗಳು ಇಲ್ಲಿವೆ.ಇಂತಹ ಐತಿಹಾಸಿಕ ಪರಂಪರೆಯ ಜಿಲ್ಲೆಯವರೆಂಬುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಇಸ್ಲಾಮಿಕ್ ಶೈಲಿಯ ಅದೇಷ್ಟೋ ಸ್ಮಾರಕಗಳಿವೆ. ಅದರಲ್ಲಿ ಎನಿದೆ, ಎನಿಲ್ಲ ಅದರ ವಿಶೇಷತೆಯನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದರು. ನಗರದ ವಿವಿಧೆಡೆ, ಗುಮ್ಮಟಗಳು, ಬಾಗಿದ ಮಿನಾರುಗಳು, ಕಮಾನುಗಳು, ಬೃಹತ್ ಇಬ್ರಾಹಿಂ ರೋಜಾ, ಗೋಲ್ ಗುಮ್ಮಟ, ಜುಮ್ಮಾ ಮಸೀದಿ ಇಂತಹ ಹಲವಾರು ಕಟ್ಟಡಗಳ ಮೂಲಕ ಬಿಜಾಪುರ ಆದಿಲ್ ಶಾಹಿಗಳ ಕಲೆ ಮತ್ತು ವಾಸ್ತುಶಿಲ್ಪವನ್ನು ನಾವು ಗಮನಿಸಬಹುದಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಐ.ಎಸ್.ಹೂಗಾರ ಬಿಜಾಪುರ ಆದಿಲ್ ಶಾಹಿಗಳ ಕಲೆ ಮತ್ತು ವಾಸ್ತುಶಿಲ್ಪದ ಬಗ್ಗೆ ಮಾತನಾಡಿದರು. ಡಾ.ಗಿರೀಶ ಹಣಮರೆಡ್ಡಿ ಪರಿಚಯಿಸಿದರು. ಕುಮಾರ ಕಾಡೇಶ ಅಡಹಳ್ಳಿ ನಿರೂಪಿಸಿದರು,ಕುಮಾರ ಶ್ರೀಧರ ಚಲವಾದಿ ಸ್ವಾಗತಿಸಿದರು ಕುಮಾರಿ ಸೌಜನ್ಯ ಕೊಗಟನೂರ ವಂದಿಸಿದರು.
ಈ ಸಂದರ್ಭಲ್ಲಿ ಭೀಮಶಿ ಮದರಖಂಡಿ, ಅಮೋಘಿ ಯಂಕವಗೋಳ, ಭಾರತಿ ಕಾರಕಲ್, ಮಲಿಕ್ ಜಮಾದಾರ್, ಡಾ. ಆರ್ ಜಿ ಕಮತರ್, ಶರಣಗೌಡ ಪಾಟೀಲ್ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

