ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಮ್ಮ ಹರಿತ ಸಾಹಿತ್ಯದ ಮೂಲಕ ಸಮಾಜಮುಖಿ ಚಿಂತನೆಗಳನ್ನು ಬಿತ್ತರಿಸಿ ಇತಿಹಾಸದಲ್ಲಿ ಅಜರಾಮರರಾಗಿರುವ ಭಕ್ತ ಕನಕದಾಸರು ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ರವೀಂದ್ರನಾಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಉಮಾ ಭೋಸಲೆ ಹೇಳಿದರು.
ಶನಿವಾರ ನಗರದ ಗುರುದೇವ ಇಂಟರನ್ಯಾಶನಲ್ ಪಬ್ಲಿಕ್ ಪ್ರೌಡಶಾಲೆಯಲ್ಲಿ ಹಮ್ಮಿಕೊಂಡ ಭಕ್ತ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ಜಗತ್ತಿಗೆ ದಾಸ ಸಾಹಿತ್ಯ ಪ್ರಚುರಪಡಿಸಿ ಮನುಜಕುಲ ಒಂದೆ ಎಂದು ಸಾರಿ ಹೇಳಿದ ಕನಕದಾಸರು ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗಿಸುವಲ್ಲಿ ಶ್ರಮಿಸಿದ್ದಾರೆ. ಹಲವಾರು ಕೃತಿಗಳನ್ನು ರಚಿಸುವ ಮೂಲಕ ಕನಕದಾಸರು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.
ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಿಕ್ಷಕ ಕಬೂಲ್ ಕೊಕಟನೂರ, ದಾರ್ಶನಿಕರಲ್ಲಿ ಅಗ್ರಜರಾಗಿರುವ ಕನಕದಾಸರು ಭಕ್ತಿಯಲ್ಲೆ ದೇವರನ್ನು ಕಂಡವರಾಗಿದ್ದಾರೆ. ಸರ್ವಸ್ವ ಇದ್ದರೂ, ಲೌಕಿಕ ಜಗತ್ತಿಗೆ ತಿಲಾಂಜಲಿ ನೀಡಿ ದಾಸರಾದರು. ಕನಕದಾಸರ ಕಾವ್ಯದಲ್ಲಿ ತತ್ವ, ತಾರ್ಕಿಕತೆ ಮತ್ತು ಮನಸ್ಸಿನ ನಿಜವಾದ ಚಿಂತನೆಗಳಿವೆ ಇವರ ಕೃತಿಗಳಲ್ಲಿ ಕೇವಲ ಧಾರ್ಮಿಕ ವಿಚಾರಗಳಲ್ಲದೆ ಮಾಣವ ಜೀವನದ ದಾರಿದೀಪಗಳಾಗಿವೆ. ಇವುಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಪಾವನಗೊಳಿಸಿಕೊಳ್ಳೊಣ ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ರವೀಂದ್ರ ಭೋಸಲೆ, ಮುಖ್ಯೋಪಾಧ್ಯಾಯ ದತ್ತಾತ್ರೆಯ ಹಾದಿಮನಿ, ಶಿಕ್ಷಕರಾದ ಲಕ್ಷ್ಮಿ ಯರನಾಳ, ತಹಸೀನ್ ದಫೇದಾರ, ಸಾಧಿಕಾ ಮುಶ್ರೀಫ, ವಕೀಲಹಮ್ಮದ ಬಾಗವಾನ, ಸುಹಾಸಿನಿ ಕನ್ನೊಳ್ಳಿ, ಪ್ರಿಯಾಂಕಾ ಶಿರಮಗೊಂಡ, ಸ್ವಾತಿ ಜಾಧವ, ನಾಜಮೀನ ಇನಾಮದಾರ, ಸಾಹಿಲ್, ಸರೋಜನಿ, ಹನೀಪಾ, ಸಾಬೇರಾ, ವಿದ್ಯಾ, ಶಿವಕುಮಾರ, ಸಂತೋಷ ನೇತ್ರಾವತಿ, ಸೇರಿದಂತೆ ಶಿಕ್ಷಕರು, ಸಿಬ್ಬಂಧಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

