ಉದಯರಶ್ಮಿ ದಿನಪತ್ರಿಕೆ
ಚಡಚಣ:15-16ನೇ ಶತಮಾನದಲ್ಲೇ ಜಾತಿ ತಾರತಮ್ಯವನ್ನು ಧಿಕ್ಕರಿಸಿದ ಭಕ್ತ ಕನಕದಾಸರ ಜೀವನಾದರ್ಶ ಇಂದಿನ ಕಾಲಘಟ್ಟದಲ್ಲೂ ಪಾಲನೆಗೆ ಅರ್ಹವಾಗಿದೆ ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ನಂ. 2), ಮರಡಿ ಶಾಲೆಯಲ್ಲಿ ಶನಿವಾರ ಭಕ್ತ ಕನಕದಾಸರ ಜಯಂತಿ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಮಾನತೆಯ ತಳಹದಿಯಲ್ಲಿನ ಕನಕದಾಸರ ಮಾರ್ಗದರ್ಶನ ಅತ್ಯಂತ ಪ್ರಸ್ತುತವಾಗಿದೆ. ಅವರು ಕೇವಲ ಸಾಹಿತ್ಯ ರಚನೆಕಾರರಷ್ಟೇ ಅಲ್ಲ, ವಿಶ್ವಕ್ಕೆ ಆದರ್ಶ ನೀಡಿದ ಮಹಾನ್ ಮಾನವತಾವಾದಿ” ಎಂದರು.
ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ, “ಅಸಮಾನತೆ ವಿರುದ್ಧ ಹೋರಾಡಿದ ಕನಕದಾಸರು ದೇಶ ಕಂಡ ಪ್ರಮುಖ ಹರಿಭಕ್ತರಲ್ಲಿ ಒಬ್ಬರು. ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಜಾತಿ ವೈಷಮ್ಯತೆಗೆ ಅವರ ಕೀರ್ತನೆಗಳೇ ಶಸ್ತ್ರವಾಗಬಹುದು” ಎಂದು ಹೇಳಿದರು.
ಶಿಕ್ಷಕ ಎಚ್.ಜೆ. ಲೋಣಿ ಜಯಂತಿಯ ಮಹತ್ವ ಕುರಿತು ಮಾತನಾಡಿದರು.
ಶಾಲೆಯ ವಿದ್ಯಾರ್ಥಿಗಳಾದ ಅಭಿಜಿತ್ ಇರಸೂರ, ಪ್ರಾಚಿ ರಾವುತ್, ಸಾನ್ವಿ ಝಂಡೆ, ರಾಣಿ ವಾಘಮೋರೆ, ಶ್ರಾವಣಿ ಕೋಳಿ, ಶ್ರದ್ಧಾ ಬುರುಡ, ಅಂಕುಶ ಕ್ಷತ್ರಿ, ಜಕರಾಯ ಕೋಳಿ, ವಿದ್ಯಾ ಕ್ಷತ್ರಿ, ಯಶೋದಾ ಸಾವಳೆ, ಭೌರಮ್ಮ ಕೋಳಿ, ಅಕ್ಷತಾ ಕೋಳಿ, ಶೃತಿ ಕ್ಷತ್ರಿ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ವಹಿಸಿದ್ದರು.
ಶಿಕ್ಷಕ ಡಿ.ಎಸ್. ಬಗಲಿ ಸ್ವಾಗತಿಸಿ ನಿರೂಪಣೆ ನಡೆಸಿದರು. ಶಿಕ್ಷಕಿ ಕಮಲಾ ಬುಕ್ಕಾ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಾಲಾಜಿ ಗಾಡಿವಡ್ಡರ, ಉಪಾಧ್ಯಕ್ಷೆ ಮಹಾದೇವಿ ಕೇಶೆಟ್ಟಿ, ಸದಸ್ಯ ಶಿವರಾಜ ಪಾತ್ರೋಟ, ಶಿಕ್ಷಕರಾದ ಮಹಾದೇವ ಆದಿಗೊಂಡೆ, ವಿ.ಎಸ್. ಪತ್ತಾರ, ಅಪೇಕ್ಷಾ ಕರಜಗಿ, ಪ್ರೇಮಾ ಧೋತ್ರೆ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

