Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಒಂದು ದಟ್ಟವಾದ ಕಾಡಿನಲ್ಲಿ ಒಂದು ಸಿಂಹ ಇತ್ತು. ಅದು ತುಂಬಾ ಅಹಂಕಾರದಿಂದ ವರ್ತಿಸುತ್ತಿತ್ತು. ಕಾಡಿನ ಬೇರೆಲ್ಲ ಪ್ರಾಣಿಗಳನ್ನು ಕೀಳಾಗಿ ನೋಡುತ್ತಿತ್ತು. ಒಂದು ದಿನ ಕಾಡಿನಲ್ಲಿ ಸುತ್ತಾಡುತ್ತಿರುವಾಗ ಸಿಂಹದ ಪಂಜಕ್ಕೆ ಚೂಪಾದ ಮುಳ್ಳೊಂದು ಚುಚ್ಚಿತು. ಸಿಂಹಕ್ಕೆ ಮುಳ್ಳು ಚುಚ್ಚಿದ ನೋವಿನಿಂದಾಗಿ ನಡೆಯಲು ಸಾಧ್ಯವಾಗಲಿಲ್ಲ. ಇಲಿಯೊಂದು ಸಿಂಹದ ಸ್ಥಿತಿ ಕಂಡು ಸಹಾಯ ಮಾಡಲು ಬಂದಿತು. ಆದರೆ ಸಿಂಹವು ‘ನಾನು ಕಾಡಿನ ರಾಜ ನಿನ್ನಂಥ ಸಣ್ಣ ಪ್ರಾಣಿಯಿಂದ ಸಹಾಯ ಪಡೆಯುವುದೇ?’ ಎಂದು ಸೊಕ್ಕಿನಿಂದ ಇಲಿಯ ಸಹಾಯವನ್ನು ನಿರಾಕರಿಸಿತು. ಕ್ರಮೇಣ ಅದಕ್ಕೆ ನಡೆಯಲು ಆಗದಂತಾಯಿತು. ಕಾಡಿನಲ್ಲಿ ನರಳುತ್ತಾ ಮೆಲ್ಲನೇ ಅಲೆದಾಡುತ್ತ ಸಹಾಯ ಮಾಡಲು ಯಾರಾದರೂ ಸಿಗುವರೇನೋ ಎಂದು ನೋಡುತ್ತಿತ್ತು. ಆದರೂ ಒಣ ಜಂಭ ಕಡಿಮೆ ಆಗಿರಲಿಲ್ಲ. ಆದರೆ ನೋವು ಹೆಚ್ಚಾದಂತೆ ತಡೆದುಕೊಳ್ಳಲಾರದೇ ತನ್ನ ಅಹಂಕಾರವನ್ನು ಬಿಟ್ಟು ಇಲಿಯನ್ನು ಸಹಾಯ ಮಾಡಲು ಕೇಳಿಕೊಂಡಿತು. ಇಲಿ ತನ್ನ ಚೂಪಾದ ಹಲ್ಲುಗಳಿಂದ ಸಿಂಹದ ಪಂಜದಲ್ಲಿ ಸಿಕ್ಕಿದ್ದ ಮುಳ್ಳನ್ನು ಸುಲಭವಾಗಿ ತೆಗೆದು…
ಉದಯರಶ್ಮಿ ದಿನಪತ್ರಿಕೆ ಚಡಚಣ: ಡಾ.ಸಮೃದ್ಧಿ ಗಡ್ಡದ ಅವರು 2025 ನೇ ಸಾಲಿನ ಸೆಪ್ಟೆಂಬರ್ – ಅಕ್ಟೋಬರ್ ತಿಂಗಳಿನಲ್ಲಿ ನಡೆದ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯ ಎಂ ಎಸ್. ಜನರಲ್ ಸರ್ಜರಿ ಯಲ್ಲಿ ಶೇ.81ರಷ್ಟು ಅಂಕ ಪಡೆದು ರಾಜ್ಯದ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ರವರು ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕ ಪಡೆದಿದ್ದಾರೆ.ಡಾ||ಸಮೃದ್ಧಿಯವರು ದಾವಣಗೆರೆಯ ಜಗದ್ಗುರು ಜಯದೇವ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರು ಪ್ರಾಥಮಿಕ ಶಿಕ್ಷಣದಿಂದ ಇಲ್ಲಿಯವರೆಗೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಪ್ರತಿ ಹಂತದಲ್ಲಿಯೂ ಪ್ರಥಮ ಸ್ಥಾನವನ್ನು ಪಡೆಯುತ್ತಾ ಬಂದಿದ್ದಾರೆ. ಇವರು ವಿಜಯಪುರ ಜಿಲ್ಲೆಯ ಹೊರ್ತಿ ಗ್ರಾಮದವರಾಗಿದ್ದು, ರೇವಪ್ಪ ಹಾಗೂ ಮಹಾದೇವಿ ಗಡ್ಡದ ದಂಪತಿಯ ಏಕೈಕ ಸುಪುತ್ರಿಯಾಗಿದ್ದಾರೆ.ಇವರು ದಾವಣಗೆರೆಯ ವೈದ್ಯಕೀಯ ಕಾಲೇಜಿನ ಬಾಪೂಜಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ವೈದ್ಯಕೀಯ ಸೇವೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಇನ್ನೂ ಹೆಚ್ಚಿನ ವ್ಯಾಸಂಗ ಮಾಡಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲವನ್ನು ಹೊಂದಿದ್ದಾರೆ. ಇವರ ಈ ಸಾಧನೆಗೆ ಪಾಲಕರು, ಸಂಬಂಧಿಕರು ಬಂಧುಗಳು ಹಾಗೂ ಹಿತೈಷಿಗಳು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕಾಭಿವೃದ್ಧಿ ಆಯುಕ್ತರು, ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ನಿರ್ದೇಶಕರೂ ಆದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀಮತಿ ಗುಂಜನ್ ಕೃಷ್ಣ ಅವರು ಮಾ.೨೦ರಂದು ಜಿಲ್ಲೆಗೆ ಆಗಮಿಸಿ,ಅಂದು ಮಧ್ಯಾಹ್ನ ೧೨ ಗಂಟೆಗೆ ಜಿಲ್ಲೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಸಭೆ ನಡೆಸುವರು.ಕ್ಷೇತ್ರ ಪರಿಶೀಲನೆ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಅವರು, ಅದೇ ದಿನ ಮಧ್ಯಾಹ್ನ ೩ ಗಂಟೆಗೆ ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಾಡಿಗೆ ರಶೀದಿಗಳು ಹಣದ ರಶೀದಿಗಳು ಮತ್ತು ಇತರ ಕಾನೂನು ಬದ್ದ ದಾಖಲೆಗಳಗೆ ಅಗತ್ಯವಿರುವ ಒಂದು ರೂಪಾಯಿ ಮೌಲ್ಯದ ಕಂದಾಯ ಚೀಟಿಗಳು (ಖeveಟಿue Sಣmಠಿ) ಜಿಲ್ಲೆಯ ಮುಖ್ಯ ಅಂಚೆ ಕಚೇರಿ ಹಾಗೂ ಉಪ ಅಂಚೆ ಕಚೇರಿಗಳಲ್ಲಿ ಲಭ್ಯವಿವೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಜಯಪುರ ವಿಭಾಗದ ಅಂಚೆ ಕಚೇರಿಗಳ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನಲೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧಿನಾಧಿಕಾರಿಗಳ ಕಾರ್ಯಾಲಯ ಹಾಗೂ ಪುನರ್ವಸತಿ ಅಧಿಕಾರಿಗಳ ಕಚೇರಿಗಳ ಮೇಲೆ ವಿಜಯಪುರ ಲೋಕಾಯುಕ್ತ ಪೊಲೀಸರ ತಂಡ ಸೋಮವಾರ ದಾಳಿ ನಡೆಸಿದರು.ಈ ಎರಡೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಸುಮಾರು ೨೫ ಜನ ಲೋಕಾಯುಕ್ತ ಪೊಲೀಸ್ ರ ತಂಡ ದಾಖಲೆ ಪರಿಶೀಲನೆ ನಡೆಸುತ್ತಿದೆ.ಬೆಳಿಗ್ಗೆಯಿಂದಲೇ ಆರಂಭಗೊಂಡ ತಪಾಸಣೆ ಸಂಜೆಯವರೆಗೂ ಮುಂದುವರೆದಿದೆ.ಇದು ಮುಂದಿನ ಎರಡು ಮೂರು ದಿನಗಳ ಕಾಲ ದಾಖಲೆ ಪರಿಶೀಲನೆ ನಡೆಯುವ ಸಾಧ್ಯತೆ ಇದೆ.ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಛೇರಿ ಹಾಗೂ ಪುನರ್‌ವಸತಿ ಅಧಿಕಾರಿಗಳು ಕಛೇರಿಗಳಲ್ಲಿ ಸಂತ್ರಸ್ತರಿಗೆ ನೀಡುವ ಪರಿಹಾರ ವಿತರಣೆ, ಸಾರ್ವಜನಿಕ ಉದ್ದೇಶಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಕೊಳ್ಳಬೇಕಾದ ಸಂದರ್ಭದಲ್ಲಿ, ಮುಳುಗಡೆಯಾಗಿರುವ ಹಳ್ಳಿಗಳ ಜನರಿಗೆ ಪುನರ್ವಸತಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಸಿಗಬೇಕಾದ ಮೂಲ ಪರಿಹಾರಕ್ಕಿಂತ ನ್ಯಾಯಾಲಯದ ಮೂಲಕ ಹೆಚ್ಚಿನ ಹಣ ಕೊಡಿಸುವುದಾಗಿ ಸಂತ್ರಸ್ತರಿಗೆ ನಂಬಿಸಿ ಮಧ್ಯವರ್ತಿಗಳ ಮೂಲಕ ಲಂಚದ ಹಣದ ಬೇಡಿಕೆ, ಭೂಮಿಯನ್ನು ಕಳೆದುಕೊಂಡ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯದಲ್ಲಿ ಸರಕಾರಿ ಹುದ್ದೆಗಳ ನೇಮಕಾತಿ ಮಾಡುವಂತೆ ಆಗ್ರಹಿಸಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ನಗರದಲ್ಲಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.ಮನವಿ ಸ್ವೀಕರಿಸಲು ತಡವಾಗಿ ಬಂದ ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಲು ಯತ್ನಿಸಿದ ವಿದ್ಯಾರ್ಥಿಗಳು, ನಂತರ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಎಬಿವಿಪಿಯ ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ ಕುಳಗೇರಿ ಮಾತನಾಡಿ, ರಾಜ್ಯದಲ್ಲಿ ಕಳೆದ ೫-೬ ವರ್ಷಗಳಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯವಾಗಿದೆ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ವಿದ್ಯಾರ್ಥಿಗಳ ಜೊತೆಗೆ ನಿಲ್ಲಬೇಕಾದ ಸರ್ಕಾರ ಕುಂಭನಿದ್ರೆಗೆ ಜಾರಿದೆ. ಸರಕಾರದ ಹತ್ತಿರ ಯಾವುದೇ ದೂರದೃಷ್ಟಿಯ ಯೋಜನೆಗಳು ಇಲ್ಲದೆ ಸಮಸ್ಯೆಗಳು ಬಂದಾಗ ಅವುಗಳಿಗೆ ತೇಪೆ ಹಚ್ಚುವ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಯನ್ನ ಮಾಡಿಕೊಳ್ಳುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಕಳೆದ ಮೂರು ವರ್ಷಗಳಿಂದ ಯಾವುದೇ ನೇಮಕಾತಿಗಳನ್ನು ಮಾಡದೆ ವಿದ್ಯಾರ್ಥಿಗಳಿಗೆ ಮೋಸ ಮಾಡಿದೆ, ರಾಜ್ಯದಲ್ಲಿ ಒಟ್ಟು ೪೩ ಇಲಾಖೆಗಳಲ್ಲಿ ೨ ೮೪,೮೮೧ ಹುದ್ದೆಗಳು…
ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಅಭಿಮತ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಹಿಳಾ ಸಬಲೀಕರಣಕ್ಕೆ ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಸಶಕ್ತಳಾಗಬೇಕು ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಹೇಳಿದರು.ಪಟ್ಟಣದ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ನೈರ್ಮಲ್ಯ ನಿರ್ವಹಣೆಯಲ್ಲಿ ತೊಡಗಿರುವ ಸ್ವಸಹಾಯ ಗುಂಪುಗಳ ಸಾಮಾರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.ಮಹಿಳೆ ಇಂದು ಎಲ್ಲ ರಂಗಗಳಲ್ಲಿ ಸುಶಿಕ್ಷಿತಳಾಗಿ, ಸಮರ್ಥಳಾಗುವುದರ ಮೂಲಕ ಅತ್ಯಂತ ಮುಂಚೂಣಿ ಪಾತ್ರ ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಜೆಎಮ್‌ಜೆ ಸ್ವಯಂಸೇವಾ ಸಂಸ್ಥೆಯ ಶಾಂತಾ ದೇಗಿನಾಳ ಹಾಗೂ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಈಳಗೇರ ಮಾತನಾಡಿ, ಬದಲಾದ ಜಗತ್ತಿನಲ್ಲಿ ದೇಶದ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವದು ಹೆಮ್ಮೆಯ ವಿಷಯ. ಅದರಲ್ಲೂ ಶಿಕ್ಷಣ, ವೈದ್ಯಕೀಯ, ವಿಜ್ಞಾನ ತಂತ್ರಜ್ಞಾನದಲ್ಲಿ ಮಹಿಳೆಯರ ಸಾಧನೆ ಅಮೋಘವಾಗಿದೆ ಎಂದರು.ಪಟ್ಟಣ ಪಂಚಾಯಿತಿ ಸಿಬ್ಬಂದಿ ಎಸ್.ಸಿ.ಹಿರೇಮಠ, ರೇಣುಕಾ ಬಿರಾದಾರ, ಎಸ್.ಎಸ್.ಪೂಜಾರಿ, ಶಿಕ್ಷಕಿ ಇಂದುಮತಿ ಕೋಟಿನ್, ಅಂಗನವಾಡಿ ಕಾರ್ಯಕರ್ತೆ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗ್ರಾಮದ ಮೂರು ದಿನಗಳ ಚಿರಾಕಿ ನಸ್ರೂದ್ದೀನ್ ಉರುಸ್‌ನ್ನು ಶಾಂತಿ, ಸಹನೆ, ಸಹಕಾರದಿಂದ ಆಚರಿಸಬೇಕು ಎಂದು ಪಿಎಸೈ ಸಚೀನ ಆಲಮೇಲಕರ ಹೇಳಿದರು.ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದಲ್ಲಿ ಸೋಮವಾರ ಜರುಗಿದ ಶಾಂತಿಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರಾಮ ಶಾಂತಿ ಸೌಹಾರ್ದತೆಗೆ ಹೆಸರಾಗಿದೆ. ಇಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ. ಎಲ್ಲರೂ ಶಾಂತಿ, ಸಹನೆ ಯಿಂದ ಉರುಸ್ ಆಚರಣೆಗೆ ಸಹಕಾರ ನೀಡಬೇಕು ಅಹಿತಕರ ಘಟನೆಗಳು ಜರುಗದಂತೆ ಪ್ರತಿಯೊಬ್ಬರು ನಡೆದುಕೊಳ್ಳಬೇಕು ಎಂದರು.ಗ್ರಾಮಸ್ಥರ ಪರವಾಗಿ ಕಾಂಗ್ರೆಸ್ ಧುರೀಣ ಸಾಯಿಕುಮಾರ ಬಿಸನಾಳ ಮಾತನಾಡಿದರು.ಸಭೆಯಲ್ಲಿ ಸಂಗನಗೌಡ ಪಾಟೀಲ, ವಿಠ್ಠಲ ದೇಗಿನಾಳ, ಸೋಮನಗೌಡ ಪಾಟೀಲ ಸಿದ್ಧನಗೌಡ ಬಿರಾದಾರ, ಕಾಂತು ಕನ್ನೋಳ್ಳಿ, ಹಣಮಂತ ಗಣಜಲಿ, ಸಾಯಬಣ್ಣ ಮಸಳಿ, ಕಮಲ್‌ಸಾಬ್ ಚಿಕ್ಕರೂಗಿ, ನಬಿಸಾಬ್ ಮುಲ್ಲಾ, ಕಲ್ಲಪ್ಪ ಚೌಧರಿ, ಸಿದ್ದು ಗಂಗನಳ್ಳಿ, ರಮೇಶ ಕುಂಬಾರ ಇದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಐತಿಹಾಸಿಕ ದೇವರಾದ ಶ್ರೀ ರಾವುತರಾಯನು ತನ್ನ ಅಲಂಕಾರ ಅಂಗವಾಗಿ ದಿ:೨೦ ರಂದು ಬಂಡಿ ಉತ್ಸವದೊಂದಿಗೆ ಮಲ್ಲಯ್ಯನ ದೇವಸ್ಥಾನ ಪ್ರವೇಶಿಸಲಿದ್ದಾನೆ.ಪಟ್ಟಣದ ಸರ್ವಜನ ಪೂಜಿತ ರಾವುತರಾಯ ಬಹುದಿನಗಳ ನಂತರ ಅಲಂಕಾರಕ್ಕೆ ಸಿದ್ಧನಾಗಿದ್ದು ಇದನ್ನು ಗ್ರಾಮೀಣ ಭಾಷೆಯಲ್ಲಿ ಬಣ್ಣ ಕಾರ್ಯ ಎಂದೇ ಕರೆಯಲ್ಪಡುತ್ತಿದೆ. ಈ ಕಾರ್ಯದ ಅಂಗವಾಗಿ ದಿ: ೧೯ ರಂದು ಬಂಡಿ ತುಂಬುವದು ಹಾಗೂ ೨೦ ರಂದು ಬಂಡಿ ಉತ್ಸವ ಆರಂಭಗೊಳ್ಳಲಿದೆ.ಶ್ರೀರಾವುತರಾಯ ಅಲಂಕಾರಕ್ಕೆ ೩ ರಿಂದ ೪ ತಿಂಗಳು ಕಾಲ ತಗುಲಲಿದೆ. ಇದನ್ನು ಗೋಕಾಕ ಪಟ್ಟಣದ ಚಿತಾರಿ ಕುಟುಂಬದವರು ನೆರವೇರಿಸುತ್ತಿದ್ದಾರೆ. ಈ ಸಮಯದಲ್ಲಿ ಮಲ್ಲಯ್ಯನ ದೇವಸ್ಥಾನದಲ್ಲಿಯೇ ಅಲಂಕಾರ ಪೂರ್ಣಗೊಳ್ಳುವವರೆಗೆ ಆಸೀನನಾಗಿದ್ದು, ಭಕ್ತರಿಗೆ ಯಾವುದೇ ರೀತಿಯಾದ ದರ್ಶನ ಭಾಗ್ಯ ಇರುವುದಿಲ್ಲ. ಭಕ್ತಾಧಿಗಳು ಅಲಂಕಾರ ಕಾರ್ಯದಲ್ಲಿ ತನು,ಮನ,ಧನದಿಂದ ಸೇವೆ ಸಲ್ಲಿಸಿ ಪುನೀತರಾಗಬೇಕೆಂದು ಶ್ರೀಮಲ್ಲಯ್ಯ ರಾವುತರಾಯ ದೇವಸ್ಥಾನ ಕಮಿಟಿ ಪ್ರಕಟಣೆ ಮೂಲಕ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ಮಕ್ಕಳಿಗೆ ಶಿಕ್ಷಣ ಒಂದು ಅಮೂಲ್ಯ ರತ್ನ ಇದ್ದಂತೆ. ಶೈಕ್ಷಣಿಕ ಅಭಿವೃದ್ದಿಯಿಂದ ಏನೆಲ್ಲಾ ಬದಲಾವಣೆ ಮಾಡುವಂತ ಶಕ್ತಿ ಇದೆ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜೊತೆ ಮಾನವೀಯ ಮೌಲ್ಯಗಳನ್ನು ನೀಡಿ ಭಾವಿ ಭವಿಷ್ಯತ್ತಿನ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಕೆ. ಬಿರಾದಾರ ಹೇಳಿದರು.ಮಂಗಳವಾರ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ಸಕರ್ಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಸ್.ಡಿ.ಎಮ್.ಸಿ ಅಧ್ಯಕ್ಷ ಸಿದ್ದು ಹತ್ತಳ್ಳಿ ಅಧ್ಯಕ್ಷತೆ ವಹಿಸಿದರು, ಮುಖ್ಯ ಅತಿಥಿಗಳಾಗಿ ಜಿ.ಎ.ದುದಗಿ, ಜಿ.ಎಸ್.ಬಂದಿ, ಎಸ್.ಆರ್. ಭೋಸಲೆ, ಎಸ್.ವ್ಹಿ.ಮುಂಜಿ, ಸದಾಶಿವ ಅಂಬಾರೆ, ಎಸ್.ಜಿ.ಬಾಣಿಕೊಲ, ಜೋತಿ ಕನ್ನೂರ, ಎಸ್.ಎಸ್. ಖೇಡದ, ಎ.ಎಸ್.ಹರವಾಳ, ಉಪಾಧ್ಯಕ್ಷ ವಿಠ್ಠಲ ಹೋತರ್ಿ, ಮತ್ತು ಎಸ್.ಡಿ.ಎಮ್.ಸಿ. ಸದಸ್ಯರು ಸೇರಿದಂತೆ ಶಿಕ್ಷಕ ಸಿಬ್ಬಂದಿ ವೇದಿಕೆಯಲ್ಲಿದ್ದರು.ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
