ಕರ್ನಾಟಕ ಬಾಲ ವಿಕಾಸ ಅಕಾಡೆಮಿ & ಮಕ್ಕಳ ಅಕಾಡೆಮಿಯ “ಮಕ್ಕಳ ರಜತ ರಂಗೋತ್ಸವ” ಉದ್ಘಾಟಿಸಿದ ಮಕ್ಕಳ ತಜ್ಞ ಡಾ.ರಾಜನ್ ದೇಶಪಾಂಡೆ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಧಾರವಾಡ: ಮಕ್ಕಳ ಸೃಜನಶೀಲ ವ್ಯಕ್ತಿತ್ವ ರೂಪಿಸುವಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಪಾತ್ರ ಅನನ್ಯವಾಗಿದ್ದು ಅಕಾಡೆಮಿಯ ಅಧ್ಯಕ್ಷರಾಗಿರುವ ಸಂಗಮೇಶ ಬಬಲೇಶ್ವರ ಅವರು, ವಿಶೇಷ ಮತ್ತು ವಿಭಿನ್ನ ಕಾರ್ಯ ಚಟುವಟಿಕೆಗಳ ಮೂಲಕ ನಾಡಿನ ಮಕ್ಕಳನ್ನು ತಲುಪುತ್ತಿರುವುದು ಅತ್ಯಂತ ಅಭಿಮಾನದ ಸಂಗತಿ ಎಂದು ನಾಡಿನ ಖ್ಯಾತ ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಹೇಳಿದರು.
ಅವರು ನಗರದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಸಭಾಭವನದಲ್ಲಿ ನಡೆದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಹಾಗೂ ಮಕ್ಕಳ ಅಕಾಡೆಮಿ ಸಹಯೋಗದಲ್ಲಿ ನಡೆದ ಮಕ್ಕಳ ರಜತ ರಂಗೋತ್ಸವ 2025 ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಈ ನಾಡಿನ ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ರಾಜನ್ ದೇಶಪಾಂಡೆ ಸರ್ ಅವರ ನೇತೃತ್ವದ ಮಕ್ಕಳ ಅಕಾಡೆಮಿ ರಜತ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ, ಮಕ್ಕಳೇ ಅಭಿನಯಿಸಿರುವ ಇಂದು ಪ್ರದರ್ಶನಗೊಳ್ಳುತ್ತಿರುವ ನಾಲ್ಕು ನಾಟಕಗಳು ಅದ್ಭುತವಾಗಿವೆ. ಮಕ್ಕಳನ್ನು ಬೆಳೆಸುವ ಅವರ ಸೃಜನಶೀಲ ವ್ಯಕ್ತಿತ್ವವನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದು ಬಬಲೇಶ್ವರ ಹೇಳಿದರು.
ಮುಖ್ಯ ಅತಿಥಿಗಳಾಗಿ ಡಾ ಶಶಿಧರ್ ನರೇಂದ್ರ, ಅಕಾಡೆಮಿ ಸದಸ್ಯರಾದ ಗಜಾನನ ಮಣ್ಣಿಕೇರಿ, ಯೋಜನಾಧಿಕಾರಿಗಳಾದ ಶ್ರೀಮತಿ ಅಕ್ಕಮಹಾದೇವಿ ಕೆ ಎಚ್, ಡಾ ಎಮ್ ವಾಯ ಸಾವಂತ್, ಶ್ರೀಮತಿ ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ, ಮಲ್ಲಿಕಾರ್ಜುನ ಚಿಕ್ಕಮಠ, ರಾಮಕೃಷ್ಣ ಸದಲ ಗಿ, ಪ್ರಕಾಶ್ ಬಾಳಿಕಾಯಿ, ಅರವಿಂದ ದೇಶಮುಖ, ಡಾ ಏನ್ ಬಿ ನಾಲತವಾಡ, ಡಾ ಬಾಳಣ್ಣ ಚೀನಗುಡಿ, ಮಂಜುನಾಥ ಹಿರೇಮಠ, ಶ್ರೀಕಾಂತ ದೋಡವಡ, ಶಿಖಂಡರ ದಂಡಿನ, ಆರ್ ಕೆ ಶಿವಕುಮಾರ್, ಶ್ರೀಮತಿ ಶೃತಿ ಹುರಳಿಕೊಪ್ಪ, ಸುನಿಲ್ ಜಿ ಎಚ್ ಹಾಗೂ ಶಿಕ್ಷಕರು, ನಾಟಕಾ ಸಕ್ತರು, ಮುದ್ದುಮಕ್ಕಳು ಉಪಸ್ಥಿತರಿದ್ದರು.
ಪ್ರದರ್ಶನಗೊಂಡ ನಾಲ್ಕೂ ಮಕ್ಕಳ ನಾಟಕಗಳು ನೆರೆದಿದ್ದ ಸರ್ವರ ಹೃದಯವನ್ನು ಗೆದ್ದಿದ್ದು ವಿಶೇಷ ವಾಗಿತ್ತು.

“ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಸರಕಾರ ಮಕ್ಕಳಿಗಾಗಿ ಮಾಡಬೇಕಾದ ಕೆಲಸಗಳನ್ನು ಡಾ. ರಾಜನ್ ದೇಶಪಾಂಡೆ ಅವರ ನೇತೃತ್ವದಲ್ಲಿ ಮಕ್ಕಳ ಅಕಾಡೆಮಿ ಹಾಗೂ ಅದರ ಸದಸ್ಯರು ಮಾಡುತ್ತಾ ಬಂದಿದ್ದಾರೆ. ಅವರನ್ನು ಅಭಿನಂದಿಸುವುದೆಂದರೆ ನಾಡಿನ ಮಕ್ಕಳನ್ನು ಅಭಿನಂದಿಸಿದಂತೆ ಎನ್ನುವ ಸದಾಶಯ ನಮ್ಮದಾಗಿದೆ.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ

