ವಿಜಯಪುರದ ತನು ಫೌಂಡೇಶನ್ ಗೆ ಈಗ ದಶಮಾನೋತ್ಸವ ಸಂಭ್ರಮ | ’ಅಂತರಾಗ್ನಿ’ ಕೃತಿ ಲೋಕಾರ್ಪಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಳೆದ ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವ ವಿಜಯಪುರದ “ತನು ಫೌಂಡೇಶನ್” ದಶಮಾನೋತ್ಸವ ಸಂಭ್ರಮದತ್ತ ಹೆಜ್ಜೆಯಿಟ್ಟಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ “ತನು ಕನ್ನಡ ಮನ ಕನ್ನಡ” ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವು ಇದೇ ನವೆಂಬರ್ 23 ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಾಯಂಕಾಲ 5:00 ಗಂಟೆಗೆ ಜರುಗಲಿದೆ.
ಕಾರ್ಯಕ್ರಮವನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಯಶೋಧ ಆಸ್ಪತ್ರೆಯ ಸಿಇಓ ಡಾ|| ರವೀಂದ್ರ ತೋಟದ ವಹಿಸಲಿದ್ದು, ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞರಾದ ಡಾ|| ಪ್ರಭುಗೌಡ ಬಿ ಎಲ್ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ಉಪವಿಭಾಗಾಧಿಕಾರಿ ಬಸವರಾಜ ಯಲಿಗಾರ, ಹೋಟೆಲ್ ಉದ್ಯಮಿ ಶಾಂತೇಶ್ ಕಳಸಗೊಂಡ, ದ್ರೋಣ ಅಕಾಡೆಮಿ ಅಧ್ಯಕ್ಷರಾದ ಕಲ್ಮೇಶ್ ಆಸಂಗಿ, ಹಿರಿಯ ವೈದ್ಯರಾದ ಡಾ|| ಸನ್ಮತಿ ಕುರುಂದವಾಡೆ, ವಕೀಲರಾದ ಬಸವರಾಜ ಯಾದವಾಡ, ಡಾ|| ಸಚೀನ ಕಟ್ಟಿ, ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಜುಗತಿ, ಶ್ರೀಮತಿ ಚಿತ್ರಾ ಅಷ್ಟಪುತ್ರೆ, ತನು ಫೌಂಡೇಶನ್ ನ ಉಪಾಧ್ಯಕ್ಷರಾದ ಶ್ರೀಮತಿ ಬಸಂತಿ ವಿ. ಕಾಳಶೆಟ್ಟಿ ಭಾಗವಹಿಸಲಿದ್ದಾರೆ.
ವಿಜಯಪುರದ ಯುವ ವಾಗ್ಮಿ ಮಂಜುನಾಥ ಜುನಗೊಂಡ ರಚಿಸಿರುವ “ಅಂತರಾಗ್ನಿ” ಕೃತಿಯನ್ನು
ಕನ್ನಡ ಉಪನ್ಯಾಸಕರಾದ ಮುಸ್ತಾಕ್ ಮಲಘಾಣ ಪರಿಚಯಿಸಲಿದ್ದಾರೆ.
ಇನ್ನೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿ ಪುರಸ್ಕತರಾಗಿ, ಡಾ|| ಸುರೇಶ ಕನಮಡಿ- ವೈದ್ಯಕೀಯ ಸೇವೆ, ಅಶೋಕ ಹಂಚಲಿ- ರಾಷ್ಟ್ರ ಜಾಗೃತಿ ಕಾರ್ಯ, ಪ್ರಕಾಶ ಅಂಗಡಿ- ಸಾಮಾಜಿಕ ಸೇವೆ, ಚಿದಾನಂದ ಸಂಗಪ್ಪ ಅವಟಿ- ಶಿಕ್ಷಣ ಸೇವೆ, ಶ್ರೀ ಬುಳ್ಳಪ್ಪ ಡಿ- ಶಿಕ್ಷಣ ಸೇವೆ, ಶ್ರೀಮತಿ ವಿದ್ಯಾ ಪಿ- ಸ್ಪರ್ಧಾತ್ಮಕ ತರಬೇತಿ, ಡಾ|| ಸುನೀಲ ಹೆಬ್ಬಿ- ವೈಧ್ಯಕೀಯ ಸೇವೆ, ಶ್ರೀಮತಿ ಅನಿತಾ ಅಯ್ಯರ- ಸಂಗೀತ, ಶ್ರೀಮತಿ ಭಾರತಿ ದಾವಣಗೇರಿ- ರಂಗಭೂಮಿ, ಆನಂದ ಕಂಬಾರ- ಶಿಕ್ಷಣ ಸೇವೆ, ನನ್ನ ಗಿಡ ನನ್ನ ಭೂಮಿ- ಪರಿಸರ ಸೇವೆಗೆ ಹಾಗೂ ಬಸಪ್ಪ ಕುಂಬಾರ ಶಿಕ್ಷಣ ಕ್ಷೇತ್ರದ ಉಪನ್ಯಾಸಕ ಕ್ಷೇತ್ರ ,
ಭಾಜನರಾಗಿದ್ದು ಈ ಎಲ್ಲ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಜರುಗಲಿದೆ.
ಅದೇ ರೀತಿ, ಕುಮಾರಿ ಶಹೀನ್ ಮೊಕಾಶಿ- ಪತ್ರಿಕೋಧ್ಯಮ, ಅಶೋಕ ಯಡಳ್ಳಿ- ವಿದ್ಯುನ್ಮಾನ ಮಾಧ್ಯಮ, ಸಚಿನ ತಳಕೇರಿ- ಸಾಮಾಜಿಕ ಕಾರ್ಯ, ಶ್ರೀಮತಿ ಸೌಮ್ಯ ಗಲಗಲಿ- ಶಿಕ್ಷಣ ಸೇವೆ, ಧರು ಎಸ್.ಕೆ- ಶಿಕ್ಷಣ ಸೇವೆ ಕ್ಷೇತ್ರದಲ್ಲಿ ಸೇವೆಗೈದಿರುವ ಸಾಧಕರಿಗೆ ಫೌಂಡೇಶನ್ ನ ದಶಮಾನೋತ್ಸವದ ಅಂಗವಾಗಿ ವಿಶೇಷ ಸನ್ಮಾನ ನೆರವೇರಲಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು ಕರುನಾಡ ಕನ್ನಡಿಗರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ತನು ಫೌಂಡೇಶನ್ ನ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಜುನುಗೊಂಡ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

