Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮತದಾನ ನಮ್ಮೆಲ್ಲರ ಹಕ್ಕು :ಡಾ.ಶಿವಾನಂದ ಜಮಾದಾರ

ಮೇ.೧ ರಂದು ಸಚಿವ ಎಂ.ಬಿ.ಪಾಟೀಲರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಗಡಿಯಾರ ನೋಡದೇ ದುಡಿವವ ಮಾಲೀಕನಾಗಿ ಬೆಳೆಯುತ್ತಾನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನಿಗದಿತ ಕಾಲಾವಧಿಯಲ್ಲಿ ಜನನ-ಮರಣ ನೋಂದಣಿ ಮಾಡಿ
(ರಾಜ್ಯ ) ಜಿಲ್ಲೆ

ನಿಗದಿತ ಕಾಲಾವಧಿಯಲ್ಲಿ ಜನನ-ಮರಣ ನೋಂದಣಿ ಮಾಡಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅಧಿಕಾರಿಗಳಿಗೆ ಸೂಚನೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಜನನ-ಮರಣ ಘಟನೆಗಳನ್ನು ನಿಗದಿತ ಕಾಲಾವಧಿಯೊಳಗಾಗಿ ನೋಂದಣಿಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಸೂಚನೆ ನೀಡಿದರು.
ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜನನ-ಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಗದಿತ ೨೧ ದಿನಗಳೊಳಗಾಗಿ ಜನನ-ಮರಣ ನೋಂದಣಿಗೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ತಾಲೂಕಾ ಮಟ್ಟದಲ್ಲಿ ತರಬೇತಿಯನ್ನು ಆಯೋಜಿಸಿ,ನೋಂದಣಿ ಸಂದರ್ಭದಲ್ಲಿ ಉಂಟಾಗುವ ತೊಡಕುಗಳ ನಿವಾರಿಸಿಕೊಂಡು ನಿರ್ವಹಿಸುವ ಕುರಿತು ಸೂಕ್ತ ತಿಳುವಳಿಕೆ ಮೂಡಿಸಿ, ನಿಗದಿತ ಕಾಲಾವಧಿಯಲ್ಲಿ ಜನನ-ಮರಣ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ಗ್ರಾಮೀಣ ಮಟ್ಟದ ಜನನ ಮರಣ ಘಟನೆಗಳನ್ನು ಎಲ್ಲಾ ಗ್ರಾಮ ಪಂಚಾಯತಿಯಲ್ಲೂ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು.
ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಯಲ್ಲಾದರೆ ಗ್ರಾಮ ಪಂಚಾಯತಿಯವರು ಪ್ರಮಾಣ ಪತ್ರ ನೀಡಬೇಕು. ದಾಖಲಿಸುವ ಅಧಿಕಾರಿ, ಸಿಬ್ಬಂದಿಗೆ ತರಬೇತಿ ಒದಗಿಸುವತ್ತ ಕ್ರಮವಹಿಸುವಂತೆ ಸೂಚಿಸಿದರು.
ಮಾಹಿತಿದಾರರ ಕಾಲಂನಲ್ಲಿ ಜನನ ಹಾಗೂ ಮರಣ ಸಂಬಂಧಿಸಿದಂತೆ ಅವರ ಸಂಬಂಧಿಕರಿಂದ ಹಾಗೂ ಹಾಗೂ ಘಟನೆ ನೋಂದಣಿ ಮಾಡುವವರು ಸಹಿ ಕಡ್ಡಾಯವಾಗಿ ಮಾಡಿರಬೇಕು.
ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಾಗುವ ಜನನ-ಮರಣ ಹಾಗೂ ನಿರ್ಜೀವ ಜನನ ಘಟನೆಗಳನ್ನು ನಿಗದಿತ ಅವಧಿಯಲ್ಲಿಯೇ ದಾಖಲಿಸಿ, ಅನುಮೋದಿಸಬೇಕು. ಜನನ ಮರಣ ಘಟನೆ ಸಂಭವಿಸಿದ ೩೦ ದಿನಗಳ ನಂತರ ೩೬೫ ದಿನಗಳ ಒಳಗಾಗಿ ದಾಖಲಿಸಬೇಕಾದರೆ ಗ್ರಾಮಾಂತರ ಪ್ರದೇಶಕ್ಕೆ ಸಂಬಂಧಿಸಿದಂತೆ ತಹಶೀಲದಾರರು ಹಾಗೂ ನಗರ-ಪಟ್ಟಣ ಪ್ರದೇಶಕ್ಕೆ ಸಂಬಂಧಪಟ್ಟಲ್ಲಿ ಮಹಾನಗರ ಪಾಲಿಕೆಯ ಆಯುಕ್ತರ, ಪುರಸಭೆ-ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯವರ ಲಿಖಿತ ಅನುಮತಿ ಪಡೆದು ದಾಖಲಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.ನಗರ ಸ್ಥಳೀಯ ಸಂಸ್ಥೆಗಳಲ್ಲಿ, ತಾಲ್ಲೂಕುಗಳಲ್ಲಿ ಹಾಗೂ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ನೋಂದಣಿಯಾದ ಜನನ, ಮರಣ ವಿಳಂಬ ನೋಂದಣಿಯಾಗದಂತೆ ನಿಗಾ ವಹಿಸುವಂತೆ ಸೂಚಿಸಿದರು.
ಜನನ-ಮರಣ, ನಿರ್ಜೀವ ಜನನ ಘಟನೆಗಳ ನೋಂದಣಿ ನಮೂನೆಗಳಾದ ೧, ೨ ಹಾಗೂ ೩ರ ಕಾನೂನು ಭಾಗ ಹಾಗೂ ಸಾಂಖ್ಯಿಕ ಭಾಗದ ಎಲ್ಲ ಕಾಲಂಗಳನ್ನು ಸ್ಪಷ್ಟವಾಗಿ ಹಾಗೂ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಬೇಕು. ಗ್ರಾಮಾಂತರ ಪ್ರದೇಶದ ಎಲ್ಲಾ ನೋಂದಣಿ ಹಾಗೂ ಉಪ ನೋಂದಣಾಧಿಕಾರಿಗಳಿಂದ ಆರೋಗ್ಯ ಸಂಸ್ಥೆಗಳು, ಸಂಬಂಧಿಸಿದ ತಹಶೀಲದಾರರು ಹಾಗೂ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ತಿಂಗಳ ೫ರೊಳಗಾಗಿ ಸಾಂಖ್ಯಿಕ ಭಾಗದ ಮಾಹಿತಿಯನ್ನು ಸ್ವೀಕರಿಸಿ, ಆ ಮಾಹೆಯ ೧೦ರೊಳಗಾಗಿ ಸಂಬಂಧಿಸಿದವರಿಗೆ ಸಲ್ಲಿಸಬೇಕು.
ಪಟ್ಟಣ ಪ್ರದೇಶದ ನೋಂದಣಿದಾರರು ೧೦ನೇ ದಿನಾಂಕದೊಳಗಾಗಿ ಸಲ್ಲಿಸಬೇಕು.ಜಿಲ್ಲೆಯ ನೋಂದಣಾಧಿಕಾರಿಗಳು ಹಾಗೂ ಉಪನೋಂದಣಾಧಿಕಾರಿಗಳಿಗೆ ನಿಗದಿತ ಸಮಯದಲ್ಲಿ ಸಾಂಖ್ಯಿಕ ಭಾಗದ ಮಾಹಿತಿಯನ್ನು ಒದಗಿಸುವಂತೆಯೂ, ತಾಲೂಕಾ ಮಟ್ಟದ ಸಮನ್ವಯ ಸಮಿತಿಯನ್ನು ಕಾಲ-ಕಾಲಕ್ಕೆ ನಡೆಸುವಂತೆ ಸೂಚಿಸಿದರು.
೨೦೨೩ನೇ ಸಾಲಿನ ಅವಧಿ ಮುಕ್ತಾಯಗೊಂಡ ಗ್ರಾಮಾಂತರ ಪ್ರದೇಶದ ಜನನ-ಮರಣ ಹಾಗೂ ನಿರ್ಜೀವ ಜನನ ಘಟನೆಗಳ ಕಾನೂನು ಭಾಗಗಳನ್ನು ಗ್ರಾಮ ಆಡಳಿತಾಧಿಕಾರಿಯವರು ಮತ್ತು ಸರ್ಕಾರಿ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಯವರು ತಹಶೀಲ್ದಾರ ಅವರಿಗೆ ಹಾಗೂ ಪಟ್ಟಣ-ನಗರ ಪ್ರದೇಶದ ಆರೋಗ್ಯ ಸಂಸ್ಥೆಯವರು ಕಾನೂನು ಭಾಗಗಳನ್ನು ಸಂಬಂಧಿಸಿದ ಮಹಾನಗರ ಪಾಲಿಕೆಯ ಆಯುಕ್ತರಿಗೆ, ಮುಖ್ಯಾಧಿಕಾರಿ ಪುರಸಭೆ-ಪಟ್ಟಣ ಪಂಚಾಯತ ಅವರಿಗೆ ಕಡ್ಡಾಯವಾಗಿ ಹಸ್ತಾಂತರಿಸುವ ಕುರಿತು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕೆ.ಕೆ.ಚವ್ಹಾಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಂಪತಕುಮಾರ ಗುಣಾರಿ,ಜಿಲ್ಲಾಸ್ಪತ್ರೆಯ ಉಪಮುಖ್ಯ ವೈದಾಧಿಕಾರಿಗಳಾದ ಎ.ಜೆ ಬಿರಾದಾರ, ಜಿಲ್ಲಾ ಸಂಖ್ಯಾ ಸಂಗ್ರಹಾಣಾಧಿಕಾರಿಗಳಾದ ಜ್ಯೋತಿ ದೇಶಪಾಂಡೆ, ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕರಾದ ಅಲ್ತಾಫ ಅಹ್ಮದ ಬಾಶಾಲಾಲ ಮಣಿಯಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮತದಾನ ನಮ್ಮೆಲ್ಲರ ಹಕ್ಕು :ಡಾ.ಶಿವಾನಂದ ಜಮಾದಾರ

ಮೇ.೧ ರಂದು ಸಚಿವ ಎಂ.ಬಿ.ಪಾಟೀಲರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಗಡಿಯಾರ ನೋಡದೇ ದುಡಿವವ ಮಾಲೀಕನಾಗಿ ಬೆಳೆಯುತ್ತಾನೆ

ಉತ್ತಮ ಸಿದ್ಧತೆಯೇ ಯಶಸ್ಸಿನ ಮೂಲ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮತದಾನ ನಮ್ಮೆಲ್ಲರ ಹಕ್ಕು :ಡಾ.ಶಿವಾನಂದ ಜಮಾದಾರ
    In (ರಾಜ್ಯ ) ಜಿಲ್ಲೆ
  • ಮೇ.೧ ರಂದು ಸಚಿವ ಎಂ.ಬಿ.ಪಾಟೀಲರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಗಡಿಯಾರ ನೋಡದೇ ದುಡಿವವ ಮಾಲೀಕನಾಗಿ ಬೆಳೆಯುತ್ತಾನೆ
    In ವಿಶೇಷ ಲೇಖನ
  • ಉತ್ತಮ ಸಿದ್ಧತೆಯೇ ಯಶಸ್ಸಿನ ಮೂಲ
    In ವಿಶೇಷ ಲೇಖನ
  • ಪ.ಜಾತಿ-ವರ್ಗ ಜನರ ಸಮಸ್ಯೆಗಳ ಪರಿಹಾರಕ್ಕೆ ಕಟ್ಟುನಿಟ್ಟಿನ ಕ್ರಮ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 29, 2026
    In ದಿನಪತ್ರಿಕೆ
  • ನೃತ್ಯ ಆತ್ಮದ ಗುಪ್ತ ಭಾಷೆ..
    In ವಿಶೇಷ ಲೇಖನ
  • ಅಕ್ರಮ ಅಕ್ಕಿ ಸಾಗಣೆ: ಆರೋಪಿಗಳಿಂದ 32,850 ಕೆಜಿ ಅಕ್ಕಿ‌ ವಶ
    In (ರಾಜ್ಯ ) ಜಿಲ್ಲೆ
  • ವಸತಿ ಶಾಲೆ, ನಿಲಯ ವ್ಯವಸ್ಥೆ ಜಂಟಿ ಸಮಿತಿ ರಚನೆ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಸರ್ಕಾರದಿಂದ ಒಳ ಮೀಸಲಾತಿ ವೈಜ್ಞಾನಿಕವಾಗಿ ಅನುಷ್ಠಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.