Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಕಲಚೇತನರ ಜಿಲ್ಲಾ ಮಟ್ಟದ ಕುಂದು ಕೊರತೆ ಸಭೆಯನ್ನು ಜಿಲ್ಲಾಧಿಕಾರಿ ಅವರ ಅರ್ದಯಕ್ಷತೆಯಲ್ಲಿ ನವೆಂಬರ್ ೨೮ರ ಬೆಳಿಗ್ಗೆ ೧೧ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿಕಲಚೇತನರು ಸಭೆಗೆ ಹಾಜನಾಗುವಂತೆ ಕೋರಲಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕನಕದಾಸ ಬಡಾವಣೆ ಜಿಲ್ಲಾ ಪಂಚಾಯತಿ ಆವರಣ ವಿಜಯಪುರ ೦೮೩೫೨-೭೯೬೦೬೦ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಂವಿಧಾನ ದಿನಾಚರಣೆ | ಮೆರವಣಿಗೆಗೆ ಚಾಲನೆ | ಸಿಂದಗಿ ಶಾಸಕ ಅಶೋಕ ಮನಗೂಳಿ ಕರೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಂಬೇಡ್ಕರ್ ಎಂದರೆ ಶಕ್ತಿ, ಬೆಳಕು, ಧೈರ್ಯ, ಜ್ಞಾನ, ಶ್ರೇಷ್ಠ, ಸಮಾನತೆ ಪ್ರತಿಯೊಬ್ಬರೂ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಂವಿಧಾನ ದಿನಾಚರಣೆ ನಿಮಿತ್ಯ ತಾಲೂಕು ಆಡಳಿತ ಹಮ್ಮಿಕೊಂಡ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ್ದಾರೆ. ಎಲ್ಲರಿಗೂ ಸಮಾನತೆ ಮುಖ್ಯ ಎಂದು ಸಂದೇಶ ಸಾರಿ ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂದರು.ಈ ವೇಳೆ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಸಂವಿಧಾನ ವಿಶ್ವದ ಎಲ್ಲ ಸಂವಿಧಾನಕ್ಕಿಂತ ಶ್ರೇಷ್ಠ. ಯಾವುದೇ ಜಾತಿ ಧರ್ಮಕ್ಕೆ ಮೀಸಲಾದ ಗ್ರಂಥ ಇದಲ್ಲ. ಇದೊಂದು ರಾಷ್ಟ್ರೀಯ ಗ್ರಂಥ. ಕಾರಣ ಸಂವಿಧಾನ ಸಮರ್ಪಣಾ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಣೆ ಮಾಡುವಂತೆ ಘೋಷಣೆ ಮಾಡಿದ ಸರಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸುವುದಕ್ಕೆ ಸಂವಿಧಾನವು ರಾಷ್ಟ್ರಕ್ಕೆ ಅರ್ಪಣೆಗೊಂಡಿರುತ್ತದೆ ಎಂದು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹೇಳಿದರು.ಪಟ್ಟಣದ ಬಸವ ಮಂಟಪದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದ ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ‍್ಯ, ಸ್ಥಾನ-ಮಾನ ಮತ್ತು ಅವಕಾಶಗಳ ಸಮಾನತೆಯ ಅವಕಾಶ ಲಭಿಸಿದೆ. ಯುವ ಸಮುದಾಯ ಭಾರತದ ಸಂವಿಧಾನ ಪೀಠಿಕೆಯನ್ನು ಓದಿ ಅರ್ಥಮಾಡಿಕೊಳ್ಳಬೇಕು. ಎಲ್ಲರೂ ಗೌರವ, ಘನತೆ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು ಎಂದರು.ಈ ವೇಳೆ ಆರ್.ಡಿ.ಪಾಟೀಲ ಪಪೂ ಕಾಲೇಜಿನ ಉಪನ್ಯಾಸಕ ಎನ್.ಬಿ.ಪೂಜಾರಿ ಉಪನ್ಯಾಸ ನೀಡಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿ ವರ್ಷ ನ.೨೬ರಂದು ಸಂವಿಧಾನ ದಿನ ಆಚರಿಸಲಾಗುತ್ತದೆ. ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದ್ದು, ಎಲ್ಲ ವರ್ಗದವರಿಗೂ ಸಂವಿಧಾನದಲ್ಲಿ ಸಮಾನವಕಾಶ ಕಲ್ಪಿಸಲಾಗಿದೆ.…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇತ್ತೀಚೆಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ೧೪ನೆಯ ವಾರ್ಷಿಕ ಘಟಿಕೋತ್ಸವದಲ್ಲಿ ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ವಿಜಯಪುರ ನಗರ ಡಿವೈಎಸ್‌ಪಿ ಬಸವರಾಜ ಯಲಿಗಾರ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಯಲಿಗಾರ ಅವರಿಗೆ ವಿಪ ಮಾಜಿ ಸದಸ್ಯ ಅರುಣ ಶಹಾಪೂರ, ವಿಜಯಪುರ ಜಿಲ್ಲೆ ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ, ಸಿಂದಗಿ ತಾಲೂಕು ಅಧ್ಯಕ್ಷ ಆನಂದ ಶಾಬಾದಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಅಲ್ಲಾಪೂರ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ, ನಿವೃತ್ತ ಎಎಸ್‌ಐ ಎಂ.ಎಂ.ಹಂಗರಗಿ, ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಮುಂಡೇವಾಡಗಿ, ತಾಶಿಪ್ರ ಮಂಡಳಿ ನಿರ್ದೇಶಕ ವಿ.ಬಿ.ಕುರುಡೆ, ಚಂದ್ರಶೇಖರ ನಾಗರಬೆಟ್ಟಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಸಂಗನಗೌಡ ಪಾಟೀಲ, ಶಿವಾನಂದ ಬಡಾನೂರ, ಶಿವಾನಂದ ರೋಡಗಿ, ಭೀಮಾಶಂಕರ ತಾರಾಪೂರ, ದಾನೇಶ ಬಮ್ಮಣ್ಣಿ, ಪಂಡಿತ ಯಂಪುರೆ, ಮಹಾಂತೇಶ ನೂಲಾನವರ ಸೇರಿದಂತೆ ಅವರ ಸ್ನೇಹಿತರ ಬಳಗ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುಪಿಎಸ್‌ಇ ಪರೀಕ್ಷೆ ತರಬೇತಿ ಪಡೆಯಲು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.ಉತ್ತರ ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಮತ್ತು ಬದ್ಧವಾಗಿರುವ ಬಿ..ಎಲ್.ಡಿ.ಇ ಸಂಸ್ಥೆ ಮತ್ತು ರಾಜ್ಯದಲ್ಲಿ ನಾಗರಿಕ ಸೇವಾ ತರಬೇತಿ ನೀಡುವಲ್ಲಿ ಹೆಸರಾಗಿರುವ ಸಾಧನಾ ಕೊಂಚಿಂಗ್ ಸೆಂಟರ್ ಈ ಭಾಗದ ಯುವಕರ ಕನಸು ನನಸು ಮಾಡಲು ಮಹತ್ವದ ಒಪ್ಪಂದಕ್ಕೆ ಇಂದು ಸಹಿ ಹಾಕಿವೆ. ಬಿ.ಎಲ್.ಡಿ.ಇ ಸಂಸ್ಥೆಯ ಪರವಾಗಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹಾಗೂ ಸಾಧನಾ ಕೋಚಿಂಗ್ ಸೆಂಟರ್ ಪರವಾಗಿ ನಿರ್ದೇಶಕಿ ಜ್ಯೋತಿ ಒಡಂಬಡಿಕೆಗೆ ಸಹಿ ಹಾಕಿದರು.ಈ ಕುರಿತು ಮಾತನಾಡಿದ ಸುನೀಲಗೌಡ ಪಾಟೀಲ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು 1910ರಲ್ಲಿ ಸ್ಥಾಪಿಸಿದ ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಳೆದ 115 ವರ್ಷಗಳಲ್ಲಿ ಬಂಥನಾಳ ಶ್ರೀ ಸಂಗನಬಸವ ಶಿವಯೋಗಿಗಳು, ಶಿಕ್ಷಣ ತಜ್ಞ ಶ್ರೀ ಬಿ. ಎಂ. ಪಾಟೀಲ ಅವರ ಕೊಡುಗೆ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳ ಹುಟ್ಟು ಹಬ್ಬದ ಪ್ರಯುಕ್ತ ಚಡಚಣ ತಾಲೂಕಿನ ಲೋಣಿ ಬಿ.ಕೆ ಗ್ರಾಮದಲ್ಲಿರುವ ಮಾಹೇರ ವೃದ್ದಾಶ್ರಮದಲ್ಲಿ ಕೇಕ್ ಕತ್ತರಿಸುವ ಮತ್ತು ಅನ್ನ ಸಂತರ್ಪಣೆ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಲಾಯಿತುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪೂರ ಜಿಲ್ಲಾ ನಿರ್ದೇಶಕರಾದ ಸಂತೋಷಕುಮಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ 21ನೆ ವಯಸ್ಸಿನಲ್ಲಿ ಪಟ್ಟಾಧಿಕಾರಿಯಾಗಿ ಜವಾಬ್ದಾರಿ ಹೊತ್ತುಕೊಂಡು ಶ್ರೀ ಕ್ಷೇತ್ರದಿಂದ ಚತುರ್ದಾನಗಳಾದ ಅಭಯದಾನ, ಅನ್ನದಾನ, ವಿದ್ಯಾದಾನ,ಔಷಧಿದಾನ ನಿಡುತ್ತಾ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ ಎಷ್ಟೋ ಕುಟುಂಬಗಳು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ದು ಲಕ್ಷಾಂತರ ಜನರಿಗೆ ದಾರಿದೀಪ ಆಗಿದ್ದಾರೆ ಎಂದರು.ತಾಲೂಕಿನ ಯೋಜನಾಧಿಕಾರಿಗಳಾದ ನಟರಾಜ. ಎಲ್ .ಎಮ್ . ಪ್ರಾಸ್ತವಿಕವಾಗಿ ಮಾತನಾಡಿದರು.ಲೋಣಿ ಬಿ.ಕೆ. ವಲಯದ ಮೇಲ್ವಿಚಾರಕರಾದ ಮಹಾಂತೇಶ ವಿ.ಎ. ಸ್ವಾಗತಿಸಿದರು, ಹುಸೇನಿ ನಿರೂಪಿಸಿ ವಂದಿಸಿದರು.ಈ ಸಂದರ್ಭದಲ್ಲಿ ಆಶ್ರಮದ ಸಿಸ್ಟರ್ ಸಿನಾ, ಪಟ್ಟಣದ ಶ್ರೀನಿವಾಸರಾವ, ಯೋಜನೆಯ ಸಿಬ್ಬಂದಿಗಳಾದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆಯ ಎಸ್. ಸಿ ಮೋರ್ಚಾ ವತಿಯಿಂದ ನವಂಬರ್ 26 ಸಂವಿಧಾನ ಸಮರ್ಪಣ ದಿವಸ್ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಕಾರ್ಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸಂವಿಧಾನ ಸಮರ್ಪಣ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ್ ಮೀಸೆ ಮಾತನಾಡಿ, ಭಾರತದ ಸಂವಿಧಾನ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ. 1949 ನವೆಂಬರ್ 26ರಂದು ಭಾರತದ ಸಂವಿಧಾನವು ಲೋಕಸಭೆಯಲ್ಲಿ ಅನುಮೋದನೆಗೊಂಡ ಶುಭದಿನವಾಗಿದೆ. ಭಾರತ ಜಗತ್ತಿನ ಅತ್ಯಂತ ನಾಲ್ಕನೇ ಬಲಿಷ್ಠ ರಾಷ್ಟ್ರವಾಗಲು ಕಾರಣ ಭಾರತದ ಸಂವಿಧಾನ. ಸಂವಿಧಾನ ಸಮರ್ಪಣ ದಿನಕ್ಕೆ ಸಾರ್ವತ್ರಿಕವಾಗಿ ಮಹತ್ವ ಕೊಟ್ಟವರು ಭಾರತದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಅವರು ಪ್ರಧಾನ ಮಂತ್ರಿ ಆದ ನಂತರ ರಾಷ್ಟ್ರೀಯ ಕಾನೂನು ದಿನ ಬದಲಾಗಿ ಸಂವಿಧಾನ ಸಮರ್ಪಣ ದಿವಸ ಎಂದು ಅಭಿಯಾನವನ್ನು ಮಾಡಿದರು ಎಂದು ಹೇಳಿದರು.ಇನ್ನೋರ್ವ…

Read More

ಲೇಖನ – ಜಯಶ್ರೀ.ಜೆ.ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಮಾತು ಮನು಼ಷ್ಯನಿಗೆ ಮಾತ್ರ ದೊರೆತ ಪ್ರಕೃತಿ ಕೊಡುಗೆ. ಕಡಿಮೆ ಮಾತನಾಡುವವರಿಗೆ ಅವರ ಮಾತು ತುಂಬಾ ತುಟ್ಟಿ ಎಂದು ಛೇಡಿಸುತ್ತಾರೆ. ಮೌನ ಪ್ರಿಯರಿಗೆ ಮಾತನಾಡಲು ಹಣ ಕೊಡಬೇಕಾ? ಎಂದು ಅಪಹಾಸ್ಯ ಮಾಡುವ ಕಾಲವೊಂದಿತ್ತು. ಆದರೆ ಅದೀಗ ನಿಜವಾಗಿದೆ. ನಾವು ಮಾತನಾಡುವ ಮಾತಿಗೆ ನಿಜವಾಗಲೂ ಬೆಲೆ ತೆರಬೇಕಾಗಿದೆ.ಅತ್ಯಾಧುನಿಕ ಸಂಪರ್ಕ ಮಾಧ್ಯಮವಾದ ಮೊಬೈಲ್ ದೊಡ್ಡ ಜಗತ್ತನ್ನು ಚಿಕ್ಕದಾಗಿಸಿದೆ. ದೂರವಿದ್ದವರನ್ನು ಸನಿಹವಾಗಿಸಿದೆ. ಆತ್ಮೀಯರಿಗೆ, ಗೆಳೆಯರಿಗೆ, ಬಂಧುಗಳಿಗೆ ಖುದ್ದಾಗಿ ಭೇಟಿಯಾಗಿ ತಿಳಿಸುವ ವಿಷಯವನ್ನು ಮೊಬೈಲಿನಲ್ಲಿ ತಿಳಿಸಿ ಸಮಯ ಉಳಿಸಿಕೊಳ್ಳುವದರ ಜೊತೆಗೆ ಕೆಲಸ ಕಾರ್ಯ ನೇರವೇರಿಸಿಕೊಳ್ಳಬಹುದು. ದ್ವೇಷ ಅಸೂಯೆ ಕೋಪ ತಾಪಗಳಂಥ ನೆಗೆಟಿವ್ ಫೀಲಿಂಗ್ಸಳನ್ನು ಇದರಲ್ಲಿ ಅಭಿವ್ಯಕ್ತಿಸಿದರೆ ವೈರಿಗಳನ್ನಾಗಿಸಿಕೊಳ್ಳುವುದು ಗ್ಯಾರಂಟಿ. ಅನೇಕರಿಗೆ ಈ ಫೋನಿನಲ್ಲಿ ಹೇಗೆ ಮಾತನಾಡಬೇಕೆಂಬುದು ಗೊತ್ತಿರುವದಿಲ್ಲ. ಒತ್ತಡದ ವೇಗದ ದುನಿಯಾದಲ್ಲಿ ಬೇಗ ಬೇಗ ಸಾಗುವದು ಅನಿವಾರ್ಯ. ಹೀಗಾಗಿ ಮೊಬೈಲಿನಲ್ಲಿ ಮಾತನಾಡುವ ಕಲೆಯನ್ನು ಕಲಿಯುವದು ಅಗತ್ಯವಾಗಿದೆ.ಮೊಬೈಲನ್ನು ಉತ್ತಮ ಗೆಳೆಯನ್ನಾಗಿಸಿಕೊಳ್ಳಲು ಈ ಸಲಹೆ ಪಾಲಿಸಿ*ಮಾತನಾಡುವ ಮುನ್ನ ಯಾರೊಂದಿಗೆ ಮತ್ತು ಯಾವ ವಿಷಯವನ್ನು ಮಾತನಾಡುತ್ತಿದ್ದೇನೆ…

Read More

ಬಂಜಾರಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಸೈಕ್ಲಿಂಗ್ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೈಕಲ್ ತುಳಿಯುವುದರಿಂದ ದೇಹದ ಹಲವಾರು ಭಾಗಗಳಿಗೆ ವ್ಯಾಯಾಮ ಸಿಗುವುದು ಮತ್ತು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸೈಕ್ಲಿಂಗ್ ನಡೆಸಿದರೆ ಅದರಿಂದ ಒತ್ತಡ, ಅತಿಯಾದ ತೂಕ, ಅಧಿಕ ಕೊಲೆಸ್ಟ್ರಾಲ್ ಅಥವಾ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸಬಹುದು ಎಂದು ಶಾಲಾ ಶಿಕ್ಷಣ ಪದವಿ ಪೂರ್ವ ಉಪನಿರ್ದೇಶಕರು ಡಾ.ಚಂದ್ರಶೇಖರ ಹೊಸಮನಿಯವರು ಹೇಳಿದರು.ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಶುಭ ಹಾರೈಯಿಸುತ್ತ ಮಾತನಾಡಿದ ಅವರು, ಸೈಕಲ್ ತುಳಿಯುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.ಮುದೋಳ ನಗರದಲ್ಲಿ ನಡೆದ ರಾಜ್ಯ ಮಟ್ಟದ ಸೈಕ್ಲಿಂಗ್ ಬಾಲಕಿಯರ ವಿಭಾಗದ ೧೫ ಕಿ.ಮೀ ಸ್ಪರ್ಧೆಯಲ್ಲಿ ಜ್ಯೋತಿ ರಾಠೋಡ ಪ್ರಥಮ ಸ್ಥಾನ ಹಾಗೂ ಪಲ್ಲವಿ ಹಂಚನಾಳ ೩ ಕಿ.ಮೀ ಸೈಕ್ಲಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳ…

Read More

ಕಲಕೇರಿಯಲ್ಲಿ ನೂತನ ರೇಹಮತಬಿ ಎ ಸಿರಸಗಿ ಮೆಮೋರಿಯಲ್ ಕಾನೂನು ಮಹಾವಿದ್ಯಾಲಯದ ಉದ್ಘಾಟನೆ ನೆರವೇರಿಸಿದ ಹಿರಿಯ ಸಿವ್ಹಿಲ್ ನ್ಯಾಯಾದೀಶ ನಾಗೇಶ ಮೊಗೇರ ಅಭಿಮತ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ದೇಹದ ಕಾಯಿಲೆಗೆ ವೈಧ್ಯರು ಮದ್ದು ನಿಡಿದರೆ,ಸಮಾಜದ ಸಂಕಟಗಳಿಗೆ, ಬಿಕ್ಕಟ್ಟುಗಳಿಗೆ ವಕೀಲರು ಮಿಡಿಯಬೇಕು ಸಾಮಾಜೀಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ವಕೀಲರ ಪಾತ್ರ ಸದಾ ದೊಡ್ಡದಾಗಿರುತ್ತದೆ ಎಂದು ಸಿಂದಗಿಯ ಹಿರಿಯ ಸಿವ್ಹಿಲ್ ನ್ಯಾಯಾದೀಶ ನಾಗೇಶ ಮೊಗೇರ ಹೇಳಿದರು.ಕಲಕೇರಿ ಗ್ರಾಮದ ಸಿರಸಗಿ ಆದರ್ಶ ಗ್ರೂಪ್ ಆಪ್ ಟ್ರಸ್ಟ್ ಮತ್ತು ಕಾನೂನು ಸೇವಾ ಸಮಿತಿ ಸಿಂದಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ರೇಹಮತಬಿ ಎ ಸಿರಸಗಿ ಮೇಮೋರಿಯಲ್ ಕಾನೂನು ಮಹಾವಿಧ್ಯಾಲಯದ ಉದ್ಘಾಟನೆ ಹಾಗೂ ವಿಧ್ಯಾರ್ಥಿ ಓಕ್ಕೂಟ ಜಿಮಖಾನ್ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಎಲ್‌ಎಲ್‌ಬಿ ವಿಧ್ಯಾರ್ಥಿಗಳ ಸ್ವಾಗತ,ಮಕ್ಕಳ ದಿನಾಚರಣೆ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ಅಭಿವೃದ್ದಿಗೆ ಶಿಕ್ಷಣ ಮತ್ತು ಉತ್ತಮ ಆರೋಗ್ಯದ ಅವಶ್ಯಕತೆ ಇದೆ ಈ ಹಿನ್ನೆಲೆಯಲ್ಲಿ ಕಲಕೇರಿಯಲ್ಲಿ ಕಾನೂನು ಮಹಾ ವಿಧ್ಯಾಲಯನ್ನು ಪ್ರಾರಂಬಿಸಿರುವದು…

Read More