ಉದಯರಶ್ಮಿ ದಿನಪತ್ರಿಕೆ
ಚಡಚಣ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳ ಹುಟ್ಟು ಹಬ್ಬದ ಪ್ರಯುಕ್ತ ಚಡಚಣ ತಾಲೂಕಿನ ಲೋಣಿ ಬಿ.ಕೆ ಗ್ರಾಮದಲ್ಲಿರುವ ಮಾಹೇರ ವೃದ್ದಾಶ್ರಮದಲ್ಲಿ ಕೇಕ್ ಕತ್ತರಿಸುವ ಮತ್ತು ಅನ್ನ ಸಂತರ್ಪಣೆ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಲಾಯಿತು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪೂರ ಜಿಲ್ಲಾ ನಿರ್ದೇಶಕರಾದ ಸಂತೋಷಕುಮಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ 21ನೆ ವಯಸ್ಸಿನಲ್ಲಿ ಪಟ್ಟಾಧಿಕಾರಿಯಾಗಿ ಜವಾಬ್ದಾರಿ ಹೊತ್ತುಕೊಂಡು ಶ್ರೀ ಕ್ಷೇತ್ರದಿಂದ ಚತುರ್ದಾನಗಳಾದ ಅಭಯದಾನ, ಅನ್ನದಾನ, ವಿದ್ಯಾದಾನ,ಔಷಧಿದಾನ ನಿಡುತ್ತಾ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ ಎಷ್ಟೋ ಕುಟುಂಬಗಳು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ದು ಲಕ್ಷಾಂತರ ಜನರಿಗೆ ದಾರಿದೀಪ ಆಗಿದ್ದಾರೆ ಎಂದರು.
ತಾಲೂಕಿನ ಯೋಜನಾಧಿಕಾರಿಗಳಾದ ನಟರಾಜ. ಎಲ್ .ಎಮ್ . ಪ್ರಾಸ್ತವಿಕವಾಗಿ ಮಾತನಾಡಿದರು.
ಲೋಣಿ ಬಿ.ಕೆ. ವಲಯದ ಮೇಲ್ವಿಚಾರಕರಾದ ಮಹಾಂತೇಶ ವಿ.ಎ. ಸ್ವಾಗತಿಸಿದರು, ಹುಸೇನಿ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ಸಿಸ್ಟರ್ ಸಿನಾ, ಪಟ್ಟಣದ ಶ್ರೀನಿವಾಸರಾವ, ಯೋಜನೆಯ ಸಿಬ್ಬಂದಿಗಳಾದ ಅಶ್ವಿನಿ ಸಂಗೊಳ್ಳಿ, ಸರಸ್ವತಿ, ಶಿವಯ್ಯ ಹಿರೇಮಠ, ಎಲ್ಲ ಸಿಬ್ಬಂದಿಗಳು ವೃದ್ಧರು ಮಕ್ಕಳು ಉಪಸ್ಥಿತರಿದ್ದರು.

