ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆಯ ಎಸ್. ಸಿ ಮೋರ್ಚಾ ವತಿಯಿಂದ ನವಂಬರ್ 26 ಸಂವಿಧಾನ ಸಮರ್ಪಣ ದಿವಸ್ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಕಾರ್ಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸಂವಿಧಾನ ಸಮರ್ಪಣ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ್ ಮೀಸೆ ಮಾತನಾಡಿ, ಭಾರತದ ಸಂವಿಧಾನ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ. 1949 ನವೆಂಬರ್ 26ರಂದು ಭಾರತದ ಸಂವಿಧಾನವು ಲೋಕಸಭೆಯಲ್ಲಿ ಅನುಮೋದನೆಗೊಂಡ ಶುಭದಿನವಾಗಿದೆ. ಭಾರತ ಜಗತ್ತಿನ ಅತ್ಯಂತ ನಾಲ್ಕನೇ ಬಲಿಷ್ಠ ರಾಷ್ಟ್ರವಾಗಲು ಕಾರಣ ಭಾರತದ ಸಂವಿಧಾನ. ಸಂವಿಧಾನ ಸಮರ್ಪಣ ದಿನಕ್ಕೆ ಸಾರ್ವತ್ರಿಕವಾಗಿ ಮಹತ್ವ ಕೊಟ್ಟವರು ಭಾರತದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಅವರು ಪ್ರಧಾನ ಮಂತ್ರಿ ಆದ ನಂತರ ರಾಷ್ಟ್ರೀಯ ಕಾನೂನು ದಿನ ಬದಲಾಗಿ ಸಂವಿಧಾನ ಸಮರ್ಪಣ ದಿವಸ ಎಂದು ಅಭಿಯಾನವನ್ನು ಮಾಡಿದರು ಎಂದು ಹೇಳಿದರು.
ಇನ್ನೋರ್ವ ಮುಖಂಡ ಚಿದಾನಂದ ಚಲವಾದಿ, ಇವತ್ತು ನರೇಂದ್ರ ಮೋದಿಯವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನಂತೆ ಸ್ತ್ರೀಯರ ಸ್ಥಾನಮಾನವನ್ನು ಸುಧಾರಿಸಲು ಇವತ್ತು 33% ಸ್ತ್ರೀ ಮೀಸಲಾತಿ ಜಾರಿಗೆ ತಂದರು ಎಂದು ಹೇಳಿದರು.
ಬಿಜೆಪಿ ಮುಖಂಡ ವಿಜಯಕುಮಾರ್ ಕೂಡಿಗನೂರು ಮಾತನಾಡಿ, ಇಡೀ ದೇಶಕ್ಕೆ ಅನ್ವಯವಾಗುವಂತ ಒಂದೇ ಸಂವಿಧಾನ ಇರಬೇಕು ಎಂದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಈ ವಿಚಾರದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರಕಿದ್ದಂತಹ 370 ನೇ ವಿಧಿಯನ ರದ್ದು ಮಾಡುವುದರ ಮೂಲಕ ಇಡೀ ದೇಶಕ್ಕೆ ಒಂದೇ ಸಂವಿಧಾನವನ್ನ ಜಾರಿಗೆ ತಂದಂತ ಕೀರ್ತಿ ಭಾರತೀಯ ಜನತಾ ಪಾರ್ಟಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.
ಮಳಗೌಡ ಪಾಟೀಲ್ ಮಾತನಾಡಿ, ಪಂಚತೀರ್ಥ ಕ್ಷೇತ್ರವನ್ನು ಅಂದರೆ ಅಂಬೇಡ್ಕರ್ ಅವರು ಹುಟ್ಟಿದಂತಹ ಮನೆ, ಅವರು ಕಲೆತಂತ ಶಾಲೆ, ದೀಕ್ಷಾಭೂಮಿ, ಲಂಡನ್ ನಲ್ಲಿ ಓದಿದಂತ ಗ್ರಂಥಾಲಯ, ಮುಂತಾದವು ಮುಂತಾದವುಗಳನ್ನು ಅಭಿವೃದ್ಧಿ ಮಾಡಿದವರು ಮಾನ್ಯ ಪ್ರಧಾನ ಮಂತ್ರಿಗಳು. ಕಾಂಗ್ರೆಸ್ ಕೇವಲ ಇವತ್ತು ದಲಿತರನ್ನು ವೋಟ್ ಬ್ಯಾಂಕಿಗಾಗಿ ಮಾತ್ರ ಬಳಸುತ್ತಿದೆ. ಇದು ವಿಷಾದನೀಯ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್. ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ರಾಜ್ಯ ಉಪಾಧ್ಯಕ್ಷ ಗೋಪಾಲ್ ಘಟಕಂಬಳೆ, ಈರಣ್ಣ ರಾವೂರ, ಮಳುಗೌಡ ಪಾಟೀಲ್ ಸುರೇಶ್ ಬಿರಾದರ್ ಬಸವರಾಜ್ ಬೈಚಬಾಳ್, ಸಂಜು ಐಹೊಳೆ, ಮಹೇಂದ್ರ ಕುಮಾರ್ ನಾಯಕ್, ಭೀಮಶಂಕರ್ ಹದನೂರ್, ಕೃಷ್ಣ ಗುನಾಳಕರ, ಸಂದೀಪ್ ಕುಮಾರ್ ಪಾಟೀಲ್, ಭರತ್ ಕೋಳಿ, ಸದಾಶಿವ ಚಲವಾದಿ, ಎಸ್.ಎ ಪಾಟೀಲ್, ಶಾಂತಾಬಾಯಿ ಉಟ್ಲಾಸ್ಕರ್, ದಿಶಾ ಚಿಕ್ನಾಥ್, ರಾಜಕುಮಾರ್ ಸಗಾಯಿ, ಛಾಯಾ ಮಷಿ, ಪ್ರದೀಪ್ ಚಲವಾದಿ, ಸಾಗರ್ ಶೇರ್ಖಾನೆ, ಸಂತೋಷ ದೊಡ್ಡಮನಿ, ಉಮೇಶ್ ವೀರಕರ, ಆನಂದ್ ಮುಚ್ಚುಂಡಿ ಮತ್ತು ಮಹೇಶ್ ವಡಿಯರ್ ಇದ್ದರು.

