ಕಲಕೇರಿಯಲ್ಲಿ ನೂತನ ರೇಹಮತಬಿ ಎ ಸಿರಸಗಿ ಮೆಮೋರಿಯಲ್ ಕಾನೂನು ಮಹಾವಿದ್ಯಾಲಯದ ಉದ್ಘಾಟನೆ ನೆರವೇರಿಸಿದ ಹಿರಿಯ ಸಿವ್ಹಿಲ್ ನ್ಯಾಯಾದೀಶ ನಾಗೇಶ ಮೊಗೇರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ದೇಹದ ಕಾಯಿಲೆಗೆ ವೈಧ್ಯರು ಮದ್ದು ನಿಡಿದರೆ,ಸಮಾಜದ ಸಂಕಟಗಳಿಗೆ, ಬಿಕ್ಕಟ್ಟುಗಳಿಗೆ ವಕೀಲರು ಮಿಡಿಯಬೇಕು ಸಾಮಾಜೀಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ವಕೀಲರ ಪಾತ್ರ ಸದಾ ದೊಡ್ಡದಾಗಿರುತ್ತದೆ ಎಂದು ಸಿಂದಗಿಯ ಹಿರಿಯ ಸಿವ್ಹಿಲ್ ನ್ಯಾಯಾದೀಶ ನಾಗೇಶ ಮೊಗೇರ ಹೇಳಿದರು.
ಕಲಕೇರಿ ಗ್ರಾಮದ ಸಿರಸಗಿ ಆದರ್ಶ ಗ್ರೂಪ್ ಆಪ್ ಟ್ರಸ್ಟ್ ಮತ್ತು ಕಾನೂನು ಸೇವಾ ಸಮಿತಿ ಸಿಂದಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ರೇಹಮತಬಿ ಎ ಸಿರಸಗಿ ಮೇಮೋರಿಯಲ್ ಕಾನೂನು ಮಹಾವಿಧ್ಯಾಲಯದ ಉದ್ಘಾಟನೆ ಹಾಗೂ ವಿಧ್ಯಾರ್ಥಿ ಓಕ್ಕೂಟ ಜಿಮಖಾನ್ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಎಲ್‌ಎಲ್‌ಬಿ ವಿಧ್ಯಾರ್ಥಿಗಳ ಸ್ವಾಗತ,ಮಕ್ಕಳ ದಿನಾಚರಣೆ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ದಿಗೆ ಶಿಕ್ಷಣ ಮತ್ತು ಉತ್ತಮ ಆರೋಗ್ಯದ ಅವಶ್ಯಕತೆ ಇದೆ ಈ ಹಿನ್ನೆಲೆಯಲ್ಲಿ ಕಲಕೇರಿಯಲ್ಲಿ ಕಾನೂನು ಮಹಾ ವಿಧ್ಯಾಲಯನ್ನು ಪ್ರಾರಂಬಿಸಿರುವದು ಸಂತೋಷದ ವಿಷಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯಾದೀಶರು ಸುಮಾರು ೫೦೦ ಕ್ಕೂ ಹೆಚ್ಚು ಶಾಲಾ ಕಾಲೇಜಿನ ಮಕ್ಕಳೊಂದಿಗೆ ಸಂವಾದ ನಡೆಸಿದರು ವಿಧ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಿಂದಗಿಯ ಹಿರಿಯ ಸಿವ್ಹಿಲ್ ನ್ಯಾಯಾದೀಶ ನಾಗೇಶ ಮೊಗೇರ ಮತ್ತು ಇನ್ನೋರ್ವ ಸಿವ್ಹಿಲ್ ನ್ಯಾಯಾದೀಶೆ ಶ್ರೀಮತಿ ಪಂಕಜಾ ಕೊಣ್ಣುರ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಹೆಚ್ಚುವರಿ ಸಿವ್ಹಿಲ್ ನ್ಯಾಯಾದೀಶ ಎ ಆರ್ ಮುಲ್ಲಾ, ತಾಲೂಕು ಶಿಕ್ಷಣ ಪ್ರಸಾರ ಮಂಡಳಿಯ ಅರವಿಂದ ಮನಗೂಳಿ, ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯದ ವಿಶೇಷ ಅಧಿಕಾರಿ ಐ ಬಿ ಬಿರಾದಾರ ಕಲಕೇರಿ, ದೇವರಹಿಪ್ಪರಗಿ ತಹಿಶಿಲದಾರ ಪ್ರಕಾಶ ಸಿಂದಗಿ, ಅಪರ ಸರಕಾರಿ ವಕೀಲರಾದ ಬಿ ಜಿ ನೆಲ್ಲಗಿ ಮಾತನಾಡಿದರು.
ಸಿರಸಗಿ ಆದರ್ಶ ಗ್ರೂಪ್ ಆಪ್ ಟ್ರಸ್ಟನ ಕಾರ್ಯದರ್ಶಿ ಜಾಹಾಂಗೀಬಾಷಾ ಸಿರಸಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಿಂದಗಿಯ ವಕೀಲರ ಸಂಘದ ಅಧ್ಯಕ್ಷ ಎಸ್ ಬಿ ಪಾಟೀಲ, ಆನಂದ ರಾಠೋಡ, ಪಾತಿಮಾಜುಹಾರಾ ಖತೀಬ, ಕಲಕೇರಿ ಗ್ರಾಪಂ ಅಧ್ಯಕ್ಷ ರಾಜಹ್ಮದ ಸಿರಸಗಿ,ಜೆ ಎ ಸಿರಸಗಿ, ಕಾನೂನು ಮಹಾವಿಧ್ಯಾಲಯದ ಪ್ರಾಚಾರ್ಯ ಸನಾ ತೇವರಮನಿ, ಕಲಕೇರಿ ಪಿಎಸ್‌ಐ ಸುರೇಶ ಮಂಟೂರ, ಎ ಎ ಖತಿಬ್, ಮಷಾಖ ಚೌದ್ರಿ,ಮುನ್ನಾ ಸಿರಸಗಿ, ಸೇರಿದಂತೆ ಇತರರು ಇದ್ದರು.

